ಶ್ರೀನಗರ ಕಿಟ್ಟಿ (Shreenagara Kitti) ಅವರು ಇದೇ ಮೊದಲ ಬಾರಿಗೆ ಸಿನಿಮಾ ರಂಗದಿಂದ ಬಹಳ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ಕಳೆದ ಮೂರರಿಂದ ನಾಲ್ಕು ವರ್ಷದ ಪ್ರಯತ್ನವನ್ನೆಲ್ಲಾ ಗೌಳಿ (Gowli) ಎನ್ನುವ ಸಿನಿಮಾದಲ್ಲಿ ಹಾಕಿ ಅದನ್ನು ರಿಲೀಸ್ ಹಂತಕ್ಕೆ ತಂದಿದ್ದಾರೆ. ಇದೇ ಫೆಬ್ರವರಿ 24ರಂದು ಕರ್ನಾಟಕದಾದ್ಯಂತ ಗೌಳಿ ಎನ್ನುವ ಚಂದನವನದ ಬಹುನಿರೀಕ್ಷಿತ ಚಿತ್ರ ರಿಲೀಸ್ ಆಗುತ್ತಿದೆ. ಈಗಾಗಲೇ ತಂಡ ಇದರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ,
ಅದರ ಅಂಗವಾಗಿ ಸಂದರ್ಶನಕ್ಕೆ ಬಂದ ಶ್ರೀನಗರ ಕಿಟ್ಟಿ ಅವರು ಸಿನಿಮಾದ ಕಥೆ ಯಾವ ರೀತಿ ಇದೆ ಮತ್ತು ಅದನ್ನು ಚಿತ್ರೀಕರಣ ಮಾಡಲಾದ ಆ ಜಾಗದ ಕುರಿತು ಹಾಗೂ ಅದರ ಹಿಂದಿನ ಸಿನಿಮಾಗಳು ಮತ್ತು ಅವರ ಅನುಭವಗಳ ಕುರಿತು ಒಂದಿಷ್ಟು ಮಾತುಗಳನ್ನು ಯೂಟ್ಯೂಬ್ ಚಾನೆಲ್ ನ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ .
ಮೊದಲಿಗೆ ಗೌಳಿ ಚಿತ್ರದ ಬಗ್ಗೆ ಮಾತನಾಡಿದ ಅವರು ಜೋಡಿ ಕಟ್ಟ ಎನ್ನುವ ಊರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಿದೆವು. ಆ ಊರು ಹೇಗಿದೆ ಎಂದರೆ ಬರೀ 20 ರಿಂದ 30 ಮನೆಗಳು ಇರಬೇಕು ಅಷ್ಟೇ, ಆ ಊರು ಮಾತ್ರವಲ್ಲದೆ ಊರಿನ ಸುತ್ತಮುತ್ತ ಅನೇಕ ಹಳ್ಳಿಗಳು ಇದೇ ರೀತಿ ಇವೆ. ಇನ್ನು ಆ ಹಳ್ಳಿಯಲ್ಲಿ ಯಾರ ಮನೆಯಲ್ಲೂ ಟಿವಿ ಆಗಲಿ ಮೊಬೈಲ್ ಆಗಲಿ ಇಲ್ಲ.
ಅಷ್ಟೂ ಮನೆಗಳಲ್ಲಿ ಯಾವುದೋ ಒಂದು ಮನೆಯಲ್ಲಿ ಹಳೆ ವೈಟ್ ಅಂಡ್ ಬ್ಲಾಕ್ ಟಿವಿ ಸಿಗಬಹುದು ಇನ್ನು ಕೂಡ ಕೇಬಲ್ ಅಲ್ಲ ಆಂಟಿನಾ ಇಟ್ಟುಕೊಂಡು ನೋಡುತ್ತಿದ್ದಾರೆ. ಆದರೆ ಅಲ್ಲಿನ ಜನರೆಲ್ಲರೂ ಬಹಳ ಆರೋಗ್ಯವಾಗಿದ್ದರೆ ಅದೇ ಖುಷಿಯಾಗುತ್ತದೆ. 80, 85 ವರ್ಷದ ವೃದ್ಧರು ಕೂಡ ಹಸುಗಳನ್ನು ಮೇಯಿಸಿಕೊಂಡು ಆನಂದದಿಂದ ಇದ್ದಾರೆ. ಆದರೆ ಒಳ್ಳೆ ರಸ್ತೆ ಸಂಪರ್ಕ ಇತ್ಯಾದಿ ಸೌಲಭ್ಯಗಳನ್ನು ಪಡೆದು ಹಳ್ಳಿ ಬೆಳವಣಿಗೆ ಆಗಿದೆ.
ಆ ಭಾಗದಲ್ಲಿ ಆ ಹಳ್ಳಿಯ ಜನರ ರೀತಿಯಲ್ಲಿ ಇದ್ದ ಒಬ್ಬ ವ್ಯಕ್ತಿಯನ್ನಾಗಿ ಗೌಳಿ ಸಿನಿಮಾದಲ್ಲಿ ನನ್ನನ್ನು ಕಾಣಲಿದ್ದೀರಿ. ಒಂದು ಸುಖೀ ಕುಟುಂಬ ಅಪ್ಪ-ಮಗಳ ಸಂಬಂಧ, ಗಂಡ ಹೆಂಡತಿ ಸಂಬಂಧ, ಹಾಗೂ ಕುಟುಂಬದವರ ಸಂಬಂಧದ ಬೆಲೆಗಳನ್ನು ಮತ್ತು ಸಂಬಂಧಗಳ ನಡುವಿನ ತುಮುಲವನ್ನು ಸಿನಿಮಾದಲ್ಲಿ ಬಿಚ್ಚಿಟ್ಟಿದ್ದೇವೆ. ತನ್ನ ಪ್ರೀತಿಯ ಗೂಡಿಗೆ ಹೊರಗಡೆಯಿಂದ ತೊಂದರೆ ಆಗುತ್ತಿದ್ದಾಗ ಅದರ ವಿರುದ್ಧ ಹೀರೋ ಹೇಗೆ ನಿಲ್ಲುತ್ತಾರೆ ಅದರ ಪರಿಣಾಮ ಏನು ಎನ್ನುವುದೇ ಸಿನಿಮಾದ ಆತ್ಮ.
ಆದರೆ ಈಗಿನ ಕಾಲದ ಟ್ರೆಂಡ್ ಗೆ ತಕ್ಕ ಹಾಗೆ ಅದನ್ನು ವಿಷುವಲ್ ಟ್ರೀಟ್ ಮುಖಾಂತರ ಅದ್ದೂರಿಯಾಗಿ ತೆಗೆದಿದ್ದೇವೆ, ಖಂಡಿತ ಜನರೆಲ್ಲ ಮೆಚ್ಚಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಹೇಗೆ ಇಂತಿ ನಿನ್ನ ಪ್ರೀತಿಯ, ಸವಾರಿ,.ಸಂಜು ಮತ್ತು ಗೀತಾ, ಹುಡುಗರು ಇವೆಲ್ಲ ನನ್ನ ಸಿನಿಮಾ ಜರ್ನಿಯಲ್ಲಿ ಒಂದೊಳ್ಳೆ ಮಾರ್ಕ್ ಹಾಗೆ ಈ ಸಿನಿಮಾ ಕೂಡ ಆಗಲಿದೆ. ಅಷ್ಟೆಂದ ಮಾತ್ರಕ್ಕೆ ಇನ್ನುಳಿದ ಸಿನಿಮಾಗಳು ಸೋಲುತ್ತವೆ ಎಂದು ಅಲ್ಲ , ಯಾವ ಸಿನಿಮಾದಲ್ಲೂ ಕೂಡ ನಿರ್ಮಾಪಕರ ಶ್ರಮಕ್ಕೆ ಬಂಡವಾಳಕ್ಕೆ ಮೋಸ ಆಗಿಲ್ಲ.
ಆದರೆ ನಾವು ಅಂದುಕೊಂಡ ಮಟ್ಟಕ್ಕೆ ರೀಚ್ ಆಗಲಿಲ್ಲ ಎನ್ನುವ ಬೇಸರ ಇದೆ ಮತ್ತೆ ಮುಂಗಾರು (Mathe Mungaru) ಎಂದಿಗೂ ಙನನ್ನ ಫೇವರೆಟ್ ಸಿನಿಮಾ ಅಂತ ಒಳ್ಳೆ ಸಿನಿಮಾಗೆ ಥಿಯೇಟರ್ (theatre problem) ಸಿಗಲಿಲ್ಲ ಎನ್ನುವ ಬೇಸರ ಇಂದಿಗೂ ಕಾಡುತ್ತಿದೆ. ನಮ್ಮವರು ತಮಿಳಿಗರಿಗೆ ಮಣೆ ಹಾಕುತ್ತಾರೆ, ಆದರೆ ನಾವು ಅಲ್ಲಿ ಹೋದರೆ ನಮ್ಮನ್ನು ಅವರು ಆ ರೀತಿ ಟ್ರೀಟ್ ಮಾಡುವುದಿಲ್ಲ ಎಂದು, ಹೇಗೆ ಒಳ್ಳೆ ಸಿನಿಮಾಗಳು ಥಿಯೇಟರ್ ಕೊರತೆಯಿಂದ ತನ್ನ ಗೆಲುವನ್ನು ಕಳೆದುಕೊಳ್ಳುತ್ತವೆ ಎನ್ನುವುದನ್ನು ಈ ಉದಾಹರಣೆಯೊಂದಿಗೆ ಹೇಳಿಕೊಂಡಿದ್ದಾರೆ.