ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಂದ ಅಪ್ಪು ಮಾಲಾಧಾರಣೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ಭೂಮಿಯ ನಂಟನ್ನು ಕಳೆದುಕೊಂಡು ಒಂದೂವರೆ ವರ್ಷ ಕಳೆದರೂ ಅಭಿಮಾನಿಗಳ ಮನಸಿನಲ್ಲಿ ಮಾತ್ರ ಅವರ ಸ್ಥಾನ ಕಿಂಚಿತ್ತು ಕಡಿಮೆ ಆಗಿಲ್ಲ ಪುನೀತ್ ರಾಜಕುಮಾರ್ ಅವರು ಹುಟ್ಟಿದ ಹಬ್ಬದ ದಿನದಂದು, ಅವರ ಪುಣ್ಯ ಸ್ಮರಣೆ ಎಂದು ಮತ್ತು ಅವರಿಗೆ ಸಂಬಂಧಪಟ್ಟ ಸಿನಿಮಾಗಳು ಬಿಡುಗಡೆ ಆದ ದಿನ ಇಡೀ ಕರ್ನಾಟಕಕ್ಕೆ ಹಬ್ಬ.
ಅಕ್ಷರಶಃ ಕರ್ನಾಟಕದ ಜನತೆ ಅಪ್ಪು ಅವರನ್ನು ದೇವರಂತೆ ಕಾಣುತ್ತಿದ್ದಾರೆ. ದೇವಮಾನವನೊಬ್ಬ ಭೂಮಿ ಮೇಲೆ ಹುಟ್ಟಿ ಬದುಕಿದರೆ ಹೀಗೆ ಬದುಕಬೇಕು ಎನ್ನುವುದನ್ನು ಕಲಿಸಿ ಹೋದ ಹಿಂದೆ ನಂಬಿದ್ದಾರೆ. ಇದುವರೆಗೂ ಅಪ್ಪು ದೇವರು ಎಂದು ಕರೆಯುತ್ತಿದ್ದ ಮಂದಿ ಮನೆಯ ದೇವರ ಕೋಣೆಯಲ್ಲಿ ಅಪ್ಪು ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತಿದ್ದರು ಮತ್ತು ಜಾತ್ರಾ ಮಹೋತ್ಸವಗಳಲ್ಲಿ ಅಪ್ಪು ಫೋಟೋ ಮೆರವಣಿಗೆ ಮಾಡುತ್ತಿದ್ದರು. ಇದೀಗ ಅಪ್ಪು ದೇವರ ಮಾಲೆಯನ್ನು ಸಹ ಧರಿಸಲು ಮುಂದಾಗಿದ್ದಾರೆ.
ವಾರದ ಹಿಂದೆಯೇ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 1ರಿಂದ 17ನೇ ತಾರೀಖಿನವರೆಗೆ ಅಪ್ಪು ಮಾಲೆ ಧರಿಸಲಾಗುತ್ತದೆ ಎನ್ನುವ ಕುರಿತಾದ ಒಂದು ವರದಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡಿತ್ತು. ನಂತರ ಇದನ್ನು ಅನೇಕರು ಖಂಡಿಸಿದರೆ, ಕೆಲವರು ಇದು ಗಾಳಿ ಸುದ್ದಿ ಅಷ್ಟೇ ಎಂದು ಸುಮ್ಮನಾಗಿದ್ದರು. ಅಪ್ಪು ದೇವರ ಮಾಲೆ ಧರಿಸುವ ವಿಧಿ ವಿಧಾನಕ್ಕೆ ಸಂಬಂಧಪಟ್ಟ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈಗ ಮಾರ್ಚ್ 1ನೇ ತಾರೀಕಿನಂದು ಹೊಸಪೇಟೆ ಅಪ್ಪು ಅಭಿಮಾನಿಗಳು ನಿಜವಾಗಿಯೂ ಅಪ್ಪು ಮಾಲೆ ಧರಿಸಿದ್ದಾರೆ. ಶ್ರೀ ಸಿದ್ದಲಿಂಗಯ್ಯ ಸ್ವಾಮಿಗಳೇ ಅಪ್ಪು ಅಭಿಮಾನಿಗಳಿಗೆ ಪುನೀತ್ ಮಾಲೆಯನ್ನು ಹಾಕಿದ್ದು ಗಹ್ಯವಾಗಿ ಕಿವಿಯಲ್ಲಿ ಏನೋ ಹೇಳಿದ್ದಾರೆ. ಈ ವಿಡಿಯೋಗಳು ಬಾರಿ ಸಂಚಲನವನ್ನೇ ಸೃಷ್ಟಿಸುತ್ತಿವೆ. ಕೇಸರಿ ಬಣ್ಣದ ಪಂಚೆ ಹಾಗೂ ಟವಲ್ ಧರಿಸಿದ ಸಾಕಷ್ಟು ಪುನೀತ್ ಅಭಿಮಾನಿಗಳು ಹೊಸಪೇಟೆ ಅಲ್ಲಿರುವ ಪುನೀತ್ ಅವರ ಪುತ್ತಳಿ ಮುಂದೆ ಈ ರೀತಿ ಮಾಲೆ ಹಾಕಿಸಿಕೊಂಡಿದ್ದಾರೆ.
ಅವರ ವಿಧಿ ವಿಧಾನದ ಪ್ರಕಾರ ಇದ್ದ ನಿಯಮಗಳಂತೆ ಅವರು ನಡೆದುಕೊಳ್ಳುತ್ತಾರೆ ಎನ್ನಲಾಗಿದೆ. ಮಾರ್ಚ್ 17ರ ನಂತರ ಬೆಂಗಳೂರಿನಲ್ಲಿರುವ ಪುನೀತ್ ಅವರ ಪುಣ್ಯ ಭೂಮಿಗೆ ಬೇಟಿಕೊಟ್ಟು ನಂತರ ಮಾಲೆಯನ್ನು ತೆಗೆಯಬೇಕು ಎನ್ನುವ ನಿಯಮ ಇದೆ. ಅವರ ವಿಧಿ ವಿಧಾನದ ಪ್ರಕಾರ ಅಪ್ಪು ಮಾಲೆ ಧರಿಸಿರುವ ಯಾವುದೇ ಅಭಿಮಾನಿಗಳು ಅದನ್ನು ತೆಗೆಯುವ ದಿನಗಳವರೆಗೆ ಯಾವುದೇ ದುಶ್ಚಟ ಇದ್ದರು ತ್ಯಜಿಸಬೇಕು. ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ತಪ್ಪದೆ ಸ್ನಾನ ಮಾಡಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು.
ಅಪ್ಪು ಮಾಲಾಧಾರಿಗಳು ಮೂರು ಸಮಯ ಕೂಡ ಟಿಫನ್ ಅನ್ನೇ ಉಪಹಾರವನ್ನು ಸೇವಿಸಬೇಕು. ಮಾಂಸಹಾರ ನಿಷೇಧಿಸಲಾಗಿತ್ತು. ಇದು ಪಾಲಿಸಲು ಆಗದೆ ಇರುವವರು ಐದು ದಿನಗಳು ಅಥವಾ ಏಳು ದಿನಗಳು ಬೇಕಾದರೂ ಮಾಲೆ ಹಾಕಬಹುದು ಎಂದು ನಿಯಮದಲ್ಲಿ ಬರೆದಿತ್ತು. ಹೊಸಪೇಟೆ ಭಾಗದಲ್ಲಿ ಶುರುವಾಗಿರುವ ಈ ಅಪ್ಪು ಮಾಲೆ ಹಾಕುವ ಕಾರ್ಯಕ್ರಮ ಈ ಸುದ್ದಿ ವೈರಲಾಗುತ್ತಿದ್ದಂತೆ ನಾಡ ಪೂರ್ತಿ ಹಬ್ಬುವ ಸಾಧ್ಯತೆಗಳು ಇದೆ.
ಯಾಕೆಂದರೆ ಈಗಾಗಲೇ ಕರ್ನಾಟಕದ ಮೂಲೆ ಮೂಲೆಯಲ್ಲೂ, ಹಳ್ಳಿ ಹಳ್ಳಿಗಳಲ್ಲೂ ಪುನೀತ್ ಅವರಿಗೆ ಅಭಿಮಾನಿಗಳು ಇದ್ದಾರೆ. ಅವರೆಲ್ಲರೂ ಸಹ ಇದರಿಂದ ಸ್ಫೂರ್ತಿ ಪಡೆದುಕೊಂಡು ಇದನ್ನು ಅನುಸರಿಸುವ ಸಾಧ್ಯತೆಗಳು ಇವೆ. ಆದರೆ ಒಂದು ವಲಯ ಮಾತ್ರ ಇದನ್ನು ಬಾರಿ ಖಂಡಿನೆ ಮಾಡುತ್ತಿದೆ. ಅಯ್ಯಪ್ಪಸ್ವಾಮಿ ಮಾಲೆಗೆ ಇದ್ದ ಘನತೆ ಹಾಗೂ ಮೌಲ್ಯ ಹೋಗುತ್ತದೆ. ಇದು ದಕ್ಷಿಣ ಭಾರತದ ಭಾಗದ ಜನರ ನಂಬಿಕೆಯ ಹಾಗೂ ಧರ್ಮದ ವಿಚಾರ ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.