ಅಂದಿನ ಕಾಲದಲ್ಲೇ ಒಂದು ದಿನಕ್ಕೆ ಕೋಮಲ್ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತ.? ಮೊದಲ ಬಾರಿಗೆ ಮಾಧ್ಯಮದ ಮುಂದೆ ಸಂಭಾವನೆ ವಿಚಾರ ಬಿಚ್ಚಿಟ್ಟ ಕೋಮಲ್
ಕೋಮಲ್ ಕರ್ನಾಟಕದಲ್ಲಿ ಹಾಸ್ಯಕ್ಕೆ ಹೆಸರಾಂತ ನಟ.30 ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿ ಪಳಗಿರುವ ಕೋಮಲ್ ಅವರು ಈವರೆಗೆ ನೂರಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರನ್ನು ನಕ್ಕು ನಗಿಸಿದ್ದಾರೆ. ಗೋವಿಂದಾಯ ನಮಃ, ಕರೋಡ್ಪತಿ ಮುಂತಾದ ಹಾಸ್ಯ ಸಿನಿಮಾಗಳಲ್ಲಿ ಹಾಸ್ಯನಾಯಕನಾಗಿದ್ದಾರೆ. ಬಹುತೇಕ ಕನ್ನಡದ ಎಲ್ಲಾ ಹೀರೋಗಳ ಸಿನಿಮಾದಲ್ಲೂ ಕೂಡ ಹೀರೋ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್ ಅವನು ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಿಂದ ದೂರ ಆಗುತ್ತಿದ್ದಾರಾ ಎನ್ನುವ ಅನುಮಾನಗಳು ಕಾಡುತ್ತಿವೆ. ಯಾಕೆಂದರೆ ಇತ್ತೀಚೆಗೆ ಕೋಮಲ್ ಅವರು ಯಾವ ಸಿನಿಮಾದಲ್ಲಿ…