ಸೈಮಾ ಅವಾರ್ಡ್ಸ್ ಗೆ ಆಯ್ಕೆಯಾದ ಡಿ ಬಾಸ್ ರಾಬರ್ಟ್ ಸಿನಿಮಾ, ನಾಮಿನೇಟ್ ಆದ 5 ಸಿನಿಮಾದ ಪೈಕಿ ದರ್ಶನ್ ಸಿನಿಮಾ ಮೊದಲ ಸ್ಥಾನ ಪಡೆದಿದೆ.
ದಕ್ಷಿಣ ಭಾರತದ ಚಿತ್ರರಂಗದ ಅವಾರ್ಡ್ಸ್ ಕಾರ್ಯಕ್ರಮ ಆದ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ಸ್ ಪ್ರಖ್ಯಾತ ಬೆಂಗಳೂರು ನಗರಿಯಲ್ಲಿ ಇಂದಿನಿಂದ ಪ್ರಾರಂಭ ಆಗಿದ್ದು ಈ ಕಾರ್ಯಕ್ರಮ ನಾಳೆಯೂ ಕೂಡ ಮುಂದುವರೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್, ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ, ತಮಿಳಿನ ಕಮಲ್ ಹಾಸನ್ ಮತ್ತು ಹಿಂದಿಯ ರಣವೀರ್ ಸಿಂಗ್ ಪೀಠವನ್ನು ಅಲಂಕರಿಸಲಿದ್ದಾರೆ. ಈ ಬಾರಿಯ ಸೈಮಾ ಅವಾರ್ಡ್ ನಲ್ಲಿ ಕನ್ನಡದ…