ನಟಿ ಮನ್ವಿತಾ ಕಾಮತ್ ತಾಯಿಯ ಚಿಕಿತ್ಸೆಗೆ ನೆರವಾದ ಸೋನು ಸೋದ್, ರಿಯಲ್ ಹೀರೋಗೆ ಧನ್ಯವಾದ ಸಲ್ಲಿಸಿದ ಮನ್ವಿತಾ.
ನಮ್ಮಲ್ಲಿ ಸಾಕಷ್ಟು ನಟ ನಟಿಯರು ಇದ್ದಾರೆ ಆದರೆ ಆ ನಟ ನಟಿಯರಲ್ಲಿ ಸಹಾಯ ಮಾಡುವಂತಹ ಗುಣವನ್ನು ಹೊಂದಿರುವಂತಹ ವ್ಯಕ್ತಿಗಳು ಕೆಲವೇ ಕೆಲವು ಅಂತ ಹೇಳಬಹುದು. ಆ ಪೈಕಿ ಸೋನು ಸೂದ್ ಅವರು ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದಾದ್ಯಂತ ಯಾರಿಗೆ ಏನೇ ತೊಂದರೆ ಆದರೂ ಕೂಡ ಮೊದಲು ಸಹಾಯಕ್ಕೆ ಧಾವಿಸುವ ಏಕೈಕ ವ್ಯಕ್ತಿ ಅಂದರೆ ಅದು ಸೋನು ಸೂದ್ ಅಂತ ಹೇಳಬಹುದು. ಏಕೆಂದರೆ ಕಳೆದ ಎರಡು ವರ್ಷಗಳ ಹಿಂದೆ ಕರೋನ ಹಾವಳಿ ಹೆಚ್ಚಾದಂತಹ ಸಮಯದಲ್ಲಿ…