ಅಪ್ಪು ಸ್ಥಾನವನ್ನು ಯುವರಾಜಗೆ ದಯವಿಟ್ಟು ಕೊಡಬೇಡಿ, ಸ್ವಂತ ಪರಿಶ್ರಮದಿಂದ ಹಾಗು ವ್ಯಕ್ತಿತ್ವದಿಂದ ಅವರವರೇ ಜಾಗ ಮಾಡಿಕೊಳ್ಳಬೇಕು ಎಂದ ರಾಘವೇಂದ್ರ ರಾಜಕುಮಾರ್
. ನೆನ್ನೆ ಅಪ್ಪು ಹುಟ್ಟಿದ ದಿನ, ಇಡೀ ಕರ್ನಾಟಕಕ್ಕೆ ಈ ದಿನ ಇನ್ಸ್ಪಿರೇಷನ್ ಡೇ. ಇದರ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರಾಘಣ್ಣ ಮುಖ್ಯವಾಗಿ ಎರಡು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮೊದಲಿಗೆ ಅಪ್ಪು ಇನ್ಸ್ಪಿರೇಷನ್ ದಿನದ ಬಗ್ಗೆ ಮಾತನಾಡಿದ ಅವರು ಅಪ್ಪು ಅವನು ಇಲ್ಲದಿದ್ದರೂ ಕೂಡ ಹುಟ್ಟು ಹಬ್ಬವನ್ನು ಮಾಡಿಸಿಕೊಳ್ಳುವಂತಹ ವ್ಯಕ್ತಿತ್ವದವನು, ಅಪ್ಪುಗೆ ಎರಡು ಹುಟ್ಟಿದಬ್ಬ ಮಾರ್ಚ್ 17 ಹಾಗೂ ಅಕ್ಟೋಬರ್ 29. ನಾವು ಅಪ್ಪುವನ್ನು ಹೂತಿಲ್ಲ, ಬಿತ್ತಿದ್ದೇವೆ. ಅದಕ್ಕಾಗಿ ಇಂದು ಅಪ್ಪುನಂತೆ ಸ್ಪೂರ್ತಿ…