ತೆಲುವಿನ ಖ್ಯಾತ ನಟ ನಾನಿ ಅವರು ಬೆಂಗಳೂರಿನಲ್ಲಿ ನಡೆದಂತಹ 67ನೇ ಫಿಲಂ ಫೇರ್ ಅವಾರ್ಡ್ ಫಂಕ್ಷನ್ ಗೆ ಹಾಜರಾಗಿದ್ದರೆ ಈ ಸಮಯದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೇಳುವುದರ ಮೂಲಕ ಕನ್ನಡ ಭಾಷೆಯನ್ನು ಹಾಗೂ ಕನ್ನಡ ಸಿನಿಮಾ ಮತ್ತು ಕನ್ನಡ ಸಿನಿಮಾದಲ್ಲಿ ಇರುವಂತಹ ನಟ ನಟಿಯರನ್ನು ಹಾಡಿ ಹೊಗಳಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಸಿನಿಮಾ ಅಂದರೆ ಮುಸಿಯು ಕೂಡ ನೋಡದಂತಹ ಜನರು ಇದೀಗ ಕನ್ನಡ ಸಿನಿಮಾದ ಹೆಸರು ಕೇಳುತ್ತಿದ್ದ ಹಾಗೆ ಬೆಚ್ಚಿ ಬೆರಗಾಗುತ್ತಿದ್ದಾರೆ. ಇಂತಹ ತಾಕತ್ತನ್ನು ಕನ್ನಡಕ್ಕೆ ನೀಡಿದಂತಹ ಖ್ಯಾತಿ ಕೆಜಿಎಫ್ ಸಿನಿಮಾ ಗೆ ಸೇರುತ್ತದೆ ಅಂತ ಹೇಳಿದರು ಕೂಡ ತಪ್ಪಾಗಲಾರದು.
ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿ ಕನ್ನಡದಲ್ಲಿ ಹೊರ ಹೊಮ್ಮಿದ ಸಿನಿಮಾ ಅಂದರೆ ಅದು ಕೆಜಿಎಫ್ ಅಂತಾನೇ ಹೇಳಬಹುದು ಕೆಜಿಎಫ್ ಸಿನಿಮಾ ಬಂದ ನಂತರ ಬೇರೆ ಯಾವ ಸಿನಿಮಾವು ಕೂಡ ಈ ಮಟ್ಟದಲ್ಲಿ ಹೆಸರು ಮಾಡುವುದಿಲ್ಲ ದೊಡ್ಡ ಸಾಧನೆ ಮಾಡುವುದಿಲ್ಲ ಅಂತ ಅಂದುಕೊಂಡಿದ್ದರು. ಆದರೆ ನಿಜಕ್ಕೂ ಈ ತಪ್ಪಾಯ್ತು ಅಂತಾನೆ ಹೇಳಬಹುದು ಏಕೆಂದರೆ ಕೆಜಿಎಫ್ ಸಿನಿಮಾದ ನಂತರ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಸಿನಿಮಾ ತೆರೆಕಡ್ಡಿದು. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಹೊರಹೊಮ್ಮಿತ್ತು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತು. ಈ ಸಿನಿಮಾದ ನಂತರ ಗರುಡಾಗಮನ ವೃಷಭ ವಾಹನ ಸಿನಿಮಾ ತೆರೆಕಂಡಿತು ಇದು ಕೂಡ ಯಾರು ಕೂಡ ನಿರೀಕ್ಷೆ ಮಾಡಿರದಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆಯಿತು.
ಈ ಸಿನಿಮಾವನ್ನು ನೋಡಿದ ನಂತರ ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಇಂದು ಮುಂದೆ ಕನ್ನಡ ಸಿನಿಮಾವನ್ನು ಹಿಡಿದು ನಿಲ್ಲಿಸುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ ಎಂದು ಮಾತನಾಡುವುದಕ್ಕೆ ಪ್ರಾರಂಭ ಮಾಡಿದ್ದರು. ಇನ್ನೇನು ಈ ವಿಚಾರ ಮರೆಯುತ್ತಿದ್ದ ಹಾಗೆ ಮತ್ತೊಂದು ಕನ್ನಡ ಸಿನಿಮಾ ಅಬ್ಬರಿಸಲು ಸಜ್ಜಾಯಿತು. ಹೌದು ಅದು ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾ ಅಂತಾನೆ ಹೇಳಬಹುದು ಕಾಂತರಾ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ ಇದೀಗ ಭಾರತದ ಎಲ್ಲಾ ಭಾಷೆಯಲ್ಲೂ ಕೂಡ ಮೂಡಿ ಬರಲಿದೆ.
ಈ ಸಿನಿಮ ತೆರೆ ಕಂಡು ಒಂದು ವಾರವಾಗಿದೆ ಭರ್ಜರಿ ಕಲೆಕ್ಷನ್ ಮೂಲಕ ಹೌಸ್ ಫುಲ್ ಪ್ರದರ್ಶನವನ್ನು ಕಂಡಿದೆ ವಿಶೇಷ ಹಾಗೂ ವಿಚಿತ್ರ ಏನೆಂದರೆ ಮೊದಲ ಕನ್ನಡ ಸಿನಿಮಾ ಬೇರೆ ಭಾಷೆಗೆ ಡಬ್ಬಿಂಗ್ ಆದರೆ ಮಾತ್ರ ಆ ಸಿನಿಮಾವನ್ನು ಬೇರೆ ಭಾಷೆಯ ನಟರು ನೋಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ಕಾಂತರಾ ಸಿನಿಮಾವನ್ನು ವೀಕ್ಷಣೆ ಮಾಡಿದಂತಹ ಕೆಲವು ನಟರು ಮತ್ತು ನಿರ್ಮಾಪಕರು ಈ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ, ಹೌದು, ತೆಲುಗಿನ ಖ್ಯಾತ ನಿರ್ದೇಶಕ ಆದಂತಹ ರಾಜಮೌಳಿ ಹಾಗೂ ತೆಲುಗಿನ ನಾನಿ ಸೇರಿದಂತೆ ಸಾಕಷ್ಟು ಕಲಾವಿದರು ಕಾಂತರಾ ಸಿನಿಮಾವನ್ನು ಕನ್ನಡದಲ್ಲಿ ನೋಡಿ ಈ ಸಿನಿಮಾವನ್ನು ಮೆಚ್ಚಿಕೊಂಡು ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಇವುಗಳನ್ನು ನಾವು ಕೇವಲ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೆವು. ಆದರೆ ಇದೇ ಮೊದಲ ಬಾರಿಗೆ ಫಿಲಂ ಫೇರ್ ಅವಾರ್ಡ್ ಫಂಕ್ಷನ್ ಗೆ ಬಂದಿದ್ದಂತಹ ನಟ ನಾನಿ ಅವರು ಕಾತಾರಾ ಸಿನಿಮಾವನ್ನು ನೋಡಿ “ಯಪ್ಪಾ ಕನ್ನಡದಲ್ಲಿ ಈಗೀಗ ಏನು ಸಿನಿಮಾ ತೆಗಿತಿದ್ದೀರಪ್ಪ ಕನ್ನಡ ಚಿತ್ರರಂಗದ ಬಗ್ಗೆ ಇಡೀ ಭಾರತ ಮಾತನಾಡುತ್ತಿದ ಇತ್ತೀಚೆಗೆ ಬಂದ ಕಾಂತಾರ ಬಗ್ಗೆ ಕೂಡ ಕೇಳಿದೆ ಸಖತ್ ಆಗಿದ್ದೆಯಂತೆ. ಎಲ್ಲಿ ಹೋದರೂ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ ತುಂಬ ಹೆಮ್ಮೆಯಾಗುತ್ತಿದೆ” ಎಂದು ನಾನಿ ಹೇಳಿದ್ದಾರೆ.
ನಿಜಕ್ಕೂ ಕೂಡ ಇದು ಸಂತಸವಾದ ವಿಚಾರವೇ ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದವರು ಕನ್ನಡವನ್ನು ಅಸಡ್ಡೆಯಿಂದ ಕಾಣುತ್ತಿದ್ದರು ಆದರೆ ಇದೀಗ ಕನ್ನಡ ಸಿನಿಮಾ ಬಗ್ಗೆ ಹಾಡಿ ಹೊಗಳುವಂತಹ ಕಾಲ ಬಂದಿದೆ. ನಿಜಕ್ಕೂ ನಮ್ಮ ಚಿತ್ರರಂಗ ಮುಂದಿನ ದಿನದಲ್ಲಿ ಭಾರತ ಚಿತ್ರರಂಗದಲ್ಲಿಯೇ ಮೊದಲ ಸ್ಥಾನವನ್ನು ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂಬುವುದು ಇದರಿಂದಲೇ ಸಾಬೀತಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.