ಮನೆ ಎಂದ ಮೇಲೆ ಅಲ್ಲಿ ನಾವು ಎಲ್ಲ ರೀತಿಯ ವಸ್ತುಗಳನ್ನು ಆಹಾರ ಪದಾರ್ಥಗಳನ್ನು ಇಡುವುದು ಸರ್ವೇಸಾಮಾನ್ಯ. ಆದರೆ ಆ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ಸಣ್ಣಪುಟ್ಟ ಕ್ರಿಮಿ ಕೀಟಗಳು ಕೂಡ ವಾಸಿಸುವುದು ಸರ್ವೇಸಾಮಾನ್ಯ ಆದ ಮಾತ್ರಕ್ಕೆ ಮನೆಯಲ್ಲಿ ನಾವು ವಸ್ತುಗಳನ್ನು ಇಡದೆ ಇರಲು ಸಾಧ್ಯವಿಲ್ಲ.
ನಮ್ಮ ದಿನನಿತ್ಯದ ಆಹಾರ ಪದಾರ್ಥವನ್ನು ತಯಾರು ಮಾಡುವುದಕ್ಕೆ ಆ ವಸ್ತುಗಳು ಕಡ್ಡಾಯವಾಗಿ ಬೇಕಾಗಿರುತ್ತದೆ. ಆದ್ದರಿಂದ ಅವುಗಳನ್ನು ನಾವು ಜೋಪಾನವಾಗಿ ಯಾವುದೇ ಕ್ರಿಮಿಕೀಟಗಳು ಓಡಾಡದೇ ಇರುವ ರೀತಿ ಮುಚ್ಚಿಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ಅವುಗಳನ್ನು ತೆರೆದಿಟ್ಟರೆ ಅಲ್ಲಿ ಜಿರಳೆ, ಹಲ್ಲಿಗಳು ಓಡಾಡುವ ಸಾಧ್ಯತೆ ಇರುತ್ತದೆ.
ಆನಂತರ ನಾವು ಅದೇ ಆಹಾರವನ್ನು ಅಡುಗೆಯಲ್ಲಿ ಉಪಯೋಗಿಸಿ ದರೆ ಅದನ್ನು ಸೇವನೆ ಮಾಡಿದ ನಮಗೂ ಕೂಡ ಕೆಲವೊಂದಷ್ಟು ಆರೋಗ್ಯದಲ್ಲಿ ತೊಂದರೆಗಳು ಉಂಟಾಗುತ್ತದೆ. ಆದ್ದರಿಂದ ಇಂತಹ ಕೆಲವೊಂದಷ್ಟು ವಿಚಾರದ ಬಗ್ಗೆ ಕೆಲವೊಂದಷ್ಟು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
ಮ.ಅದರಲ್ಲೂ ನಾವು ಅಡುಗೆಗೆ ಉಪಯೋಗಿಸುವಂತಹ ಹಲವಾರು ಆಹಾರ ಪದಾರ್ಥ ಗಳನ್ನು ಆದಷ್ಟು ಮುಚ್ಚಿಡುವುದು ತುಂಬಾ ಒಳ್ಳೆಯದು. ಅಡುಗೆ ಮನೆ ಯಲ್ಲಿ ನಾವು ಪಾತ್ರೆ ತೊಳೆಯುವಂತಹ ಸಿಂಕ್ ಕೆಳಭಾಗದಲ್ಲಿ ಹಾಗೂ ಹೆಚ್ಚಾಗಿ ವಸ್ತುಗಳನ್ನು ತೆಗೆದು ಇಡದೆ ಇರುವಂತಹ ಸ್ಥಳದಲ್ಲಿ ಈ ಜಿರಳೆ ಗಳು ಕಾಣಿಸಿಕೊಳ್ಳುವುದು ಸಹಜ.
ಹಾಗೆಂದ ಮಾತ್ರಕ್ಕೆ ಅವು ಸಾಯಲಿ ಎನ್ನುವ ಉದ್ದೇಶದಿಂದ ಮಾರುಕಟ್ಟೆಗಳಲ್ಲಿ ಸಿಗುವ ಕೆಲವೊಂದಷ್ಟು ಕ್ರಿಮಿಕೀಟ ಔಷಧಿಗಳನ್ನು ತಂದು ನಾವು ಅಡುಗೆ ಮನೆಯಲ್ಲಿ ಹಚ್ಚುವು ದರಿಂದ ಕೆಲವೊಂದಷ್ಟು ತೊಂದರೆಗಳು ಉಂಟಾಗುತ್ತದೆ. ಜೊತೆಗೆ ಜಿರಳೆಗಳು ಓಡಾಡಿದಂತಹ ಸ್ಥಳದಲ್ಲಿ ಒಂದು ರೀತಿಯ ವಾಸನೆ ಬರುತ್ತದೆ.
ಅದನ್ನು ನಾವು ತೆಗೆದುಕೊಳ್ಳುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕೂಡ ನಮಗೆ ಬರುವ ಸಾಧ್ಯತೆ ಇದೆ. ಜಿರಳೆಗಳು ಆಹಾರ ಪದಾರ್ಥದ ಮೇಲೆ ಓಡಾಡಿದರು ಕೂಡ ಅದು ನಮಗೆ ತುಂಬಾ ಹಾನಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಅದನ್ನು ಸುಲಭವಾಗಿ ಆಚೆ ಹಾಕಲು ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮನೆಯಲ್ಲಿರುವಂತಹ ಜಿರಳೆಯನ್ನು ಮನೆಯಿಂದ ಆಚೆ ಓಡಿಸಬೇಕು ಎಂದರೆ ಈಗ ನಾವು ಹೇಳುವ ಈ ವಿಧಾನ ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
ಈ ವಿಧಾನ ಅನುಸರಿಸಿದ 5 ರಿಂದ 10 ನಿಮಿಷದೊಳಗೆ ಜಿರಳೆಗಳು ಮನೆಯಿಂದ ಆಚೆ ಹೋಗುತ್ತದೆ. ಹಾಗಾದರೆ ಆ ಮನೆಮದ್ದು ಯಾವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಈ ಒಂದು ಮನೆ ಮದ್ದು ಅಂದರೆ ಔಷಧಿಯನ್ನು ಮಾಡುವುದಕ್ಕೆ ಬೇಕಾಗಿರುವ ಪದಾರ್ಥ.
* ಕರ್ಪೂರ
* ಬೇವಿನ ಸೊಪ್ಪು
* ಇಂಗು
* ನೀಲಗಿರಿ ತೈಲ
ಇಷ್ಟನ್ನು ಸಹ ತೆಗೆದುಕೊಂಡು ಇದನ್ನು ಚೆನ್ನಾಗಿ ಕಲಿಸಿ ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಬೇಕು ಆನಂತರ ಆ ಉಂಡೆಯನ್ನು ಜಿರಳೆಗಳು ಓಡಾಡುವಂತಹ ಸ್ಥಳದಲ್ಲಿ ಇಡುವುದರಿಂದ ಅದರ ವಾಸನೆಗೆ ಜಿರಳೆಗಳು ಹತ್ತಿರವೂ ಕೂಡ ಬರುವುದಿಲ್ಲ. ಮನೆಯಿಂದ ಆಚೆ ಹೋಗುತ್ತದೆ ಹೌದು ಇವೆಲ್ಲದರಲ್ಲಿಯೂ ಕೂಡ ಒಂದು ರೀತಿಯ ಸುವಾಸನೆ ಬರುತ್ತದೆ.
ಇದು ಜಿರಳೆಗಳಿಗೆ ಆಗುವುದಿಲ್ಲ ಆದ್ದರಿಂದ ಯಾವುದೇ ರೀತಿಯ ಹಾನಿಯನ್ನು ಉಂಟು ಮಾಡದೆ ಇರುವಂತಹ ಈ ಒಂದು ಮನೆಮದ್ದನ್ನು ಮಾಡಿ ನಿಮ್ಮ ಮನೆಗಳಲ್ಲಿ ಜಿರಳೆ ಓಡಾಡುವ ಸ್ಥಳದಲ್ಲಿ ಇಡುವುದು ತುಂಬಾ ಒಳ್ಳೆಯದು. ಈ ಉಂಡೆಯನ್ನು ಒಮ್ಮೆ ಇಟ್ಟರೆ ಸಾಲದು ವಾರಕ್ಕೆ ಒಮ್ಮೆ ಇದನ್ನು ಬದಲಿಸುತ್ತಾ ಇರಬೇಕು. ಆಗ ಮಾತ್ರ ಜಿರಳೆಗಳು ಮನೆಯಿಂದ ಆಚೆ ಹೋಗಲು ಸಾಧ್ಯವಾಗುತ್ತದೆ. ಆದರೆ ಈ ಮನೆ ಮದ್ದು ಅವುಗಳನ್ನು ಸಾಯಿಸುವುದಿಲ್ಲ ಬದಲಿಗೆ ಅದು ಅದರ ವಾಸನೆ ತಾಳಲಾರದೆ ಆಚೆ ಹೋಗುತ್ತದೆ.