ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವ ಗಾದೆ ಇದೆ. ಈ ಗಾದೆ ಮಾಡಿದಾಗ ಅರ್ಥ ಏನಿತ್ತೋ ಆದರೆ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಹಸ್ತವನ್ನು ಕನ್ನಡಿಗೆ ಹೋಲಿಸಬಹುದು. ಯಾಕೆಂದರೆ ನಮ್ಮ ಹುಟ್ಟಿದ ಜನ್ಮ ನಕ್ಷತ್ರ, ರಾಶಿ, ಸಮಯ, ಘಳಿಗೆ ಆಧಾರದ ಮೇಲೆ ಜಾತಕ ಏಕೆ ಸಿದ್ಧವಾಗಿರುತ್ತದೆಯೋ ನಮ್ಮ ಹಣೆಬರಹ ಹೇಗೆ ಬರೆಯಲಾಗಿರುತ್ತದೆ ಅದೇ ರೀತಿಯಾಗಿ ನಮ್ಮ ಕೈ ರೇಖೆಗಳು ಇರುತ್ತವೆ ಎನ್ನುವುದನ್ನು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.
ಇಂದಿಗೂ ಕೂಡ ಕೈಯಲ್ಲಿರುವ ಕೈ ರೇಖೆ ತೋರಿಸಿ ಭವಿಷ್ಯವನ್ನು ಕೇಳುವವರು, ಅದನ್ನು ನಂಬಿ ಪಾಲಿಸುವ, ಮತ್ತು ಅದರಂತೆ ಬದುಕಿನಲ್ಲಿ ಘಟನೆಗಳು ನಡೆದಿರುವ ಉದಾಹರಣೆಯನ್ನು ತಿಳಿಸುವ ಸಹಸ್ರಾರು ಮಂದಿ ಇದ್ದಾರೆ. ಹಲವರಿಗೆ ಜಾತಕ ಬರೆಸಲು ಆಗಿರುವುದಿಲ್ಲ, ಇನ್ನು ಕೆಲವರಿಗೆ ತಂದೆ ತಾಯಿ ಅವರು ಹುಟ್ಟಿದ ಸರಿಯಾದ ದಿನಾಂಕವನ್ನೇ ಮರೆತು ಬಿಟ್ಟಿರುತ್ತಾರೆ.
ಗ್ಯಾಸ್ ಸ್ಟವ್ ಬರ್ನರ್ ಹೀಗೆ ಕ್ಲೀನ್ ಮಾಡಿ.!
ಅಂತವರಿಗೆಲ್ಲಾ ಜೀವನದಲ್ಲಿ ಏನಾಗುತ್ತದೆ ಏನಾಗಬಹುದು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಕೈ ರೇಖೆಗಳೇ ದಾರಿದೀಪ ಎಂದು ಹೇಳಬಹುದು. ಕೈಯಲ್ಲಿರುವ ರೇಖೆಗಳು ಹಣ, ವಿದ್ಯೆ, ಆರೋಗ್ಯ, ಸಂಪತ್ತು, ವೈವಾಹಿಕ ಜೀವನ, ಮಕ್ಕಳು ಈ ರೀತಿ ಎಲ್ಲದರ ಬಗ್ಗೆಯೂ ತಿಳಿಸುತ್ತವೆ. ಅವುಗಳು ಬೆಳವಣಿಗೆ ಹೊಂದಿರುವ ಅಥವಾ ಕವಲೊಡೆದಿರುವ ಅಥವಾ ಅವುಗಳ ಉಂಟುಮಾಡುವ ಚಿಹ್ನೆಯ ಮೂಲಕ ಹೀಗೆ ಆಗುತ್ತದೆ ಎಂದು ನಿಖರವಾಗಿ ಹೇಳುತ್ತಾರೆ ತಜ್ಞ ಜ್ಯೋತಿಷ್ಯಿಗಳು.
ಹಾಗೆಯೇ ಇಂದು ಈ ಅಂಕಣದಲ್ಲಿ ಹೇಗೆ ಕೈ ರೇಖೆಗಳು ವಿವಾಹ ಜೀವನದ ಬಗ್ಗೆ ತಿಳಿಸುತ್ತವೆ, ಎರಡನೇ ಮದುವೆ ಯೋಗದ ಬಗ್ಗೆ ಹೇಗೆ ತಿಳಿದುಕೊಳ್ಳಬಹುದು ಎನ್ನುವುದನ್ನು ತಿಳಿಸುತ್ತಿದ್ದೇವೆ. ಸದ್ಯಕ್ಕೆ ಈಗಿನ ಕಾಲಕ್ಕೆ ಹೋಲಿಸಿಕೊಂಡರೆ ಇದನ್ನು ಎರಡನೇ ವಿವಾಹದ ಯೋಗ ಎನ್ನಬೇಕೋ ಅಥವಾ ದೋಷ ಎನ್ನುವ ಬೇಕೋ ಎನ್ನುವ ಕನ್ಫ್ಯೂಷನ್ ಖಂಡಿತ ಉಂಟಾಗುತ್ತದೆ.
ಪ್ರತಿದಿನ ನೀರನ್ನು ಹೀಗೆ ಕುಡಿಯಿರಿ ಸಾಯುವವರೆಗೂ ಯಾವ ರೋಗ ಇಲ್ಲದೆ ಆರೋಗ್ಯವಾಗಿರುವಿರಿ.!
ಈ ಹಿಂದೆ ಪುರುಷರಿಗೆ ಮಾತ್ರ ಬಹುಪತ್ನಿತ್ವದ ಅವಕಾಶ ಇತ್ತು, ರಾಜ ಮಹಾರಾಜರು ಹೀಗೆ ಹೆಚ್ಚು ಮದುವೆ ಆಗುತ್ತಿದ್ದರು. ಕಾಲ ಕಳೆದಂತೆಲ್ಲ ಪ್ರತಿಯೊಬ್ಬರಿಗೂ ಜೀವನ ಸಂಗಾತಿ ಅನಿವಾರ್ಯ ಆಗಿರುವ ಕಾರಣದಿಂದಾಗಿ ಹೊಂದಾಣಿಕೆ ಸಮಸ್ಯೆ ಉಂಟಾಗಿ ಅಥವಾ ಸಂಗಾತಿ ಅಗಲಿದ ಕಾರಣಕ್ಕಾಗಿ ಅಥವಾ ಪ್ರೀತಿ ಮಾಡುವಾಗ ಮೋಸ ಹೋದ ಕಾರಣ ಮದುವೆಗೆ ಮುಂಚೆ ಮುರಿದ ಸಂಬಂಧದ ಕಾರಣ ಆ ಸಂಗಾತಿಯನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿ ಜೀವನ ನಡೆಸಬೇಕಾದ ಪರಿಸ್ಥಿತಿ ಬರುತ್ತದೆ.
ಈ ರೀತಿ ಯಾವುದೇ ರೂಪದಲ್ಲಿ ಯಾರಾದರೂ ನಮ್ಮ ಜೊತೆ ಸಂಗಾತಿಯಾಗಿ ಬರುವುದಿದ್ದರೂ ಅದನ್ನು ಕೈ ರೇಖೆ ಮೂಲಕ ತಿಳಿದುಕೊಳ್ಳಬಹುದು. ನಿಮ್ಮ ಕೈ ನಲ್ಲಿರುವ ಆರೋಗ್ಯ ರೇಖೆಯ ಕೆಳಗೆ ಹಾಗೂ ಕಿರುಗಳ ಬೆರಳಿನ ಪಕ್ಕದಲ್ಲಿ ಮೂಡಿರುವ ಗೆರೆಗಳು ಇದನ್ನು ಹೇಳುತ್ತವೆ. ಇದರಲ್ಲಿ ಕೆಲವರಿಗೆ ಒಂದೇ ಗಾಢವಾದ ಗೆರೆ ಇರುತ್ತದೆ, ಅಂತಹವರನ್ನು ಏಕ ಪತ್ನಿ ಅಥವಾ ಏಕ ಪತಿ ಹೊಂದಿರುವವರು ಎನ್ನಬಹುದು.
ಹೀಗೆ ಮಾಡಿ ಎಷ್ಟೇ ಹಳೆಯದಾಗಿರೋ ಬಾತ್ರೂಮ್ ಮತ್ತೆ ಹೊಸತಾಗುತ್ತೆ.!
ಆದರೆ ಕೆಲವರಿಗೆ ಎರಡು ಗಾಢ ರೇಖೆಗಳು ಅಥವಾ ಒಂದು ಗಾಢ ರೇಖೆ ಜೊತೆಗೆ ಎರಡು ಮೂರು ಸಣ್ಣ ರೇಖೆಗಳು ಇರುತ್ತವೆ. ಎಷ್ಟು ರೇಖೆಗಳು ಇರುತ್ತವೋ ಅಷ್ಟು ಸಂಗಾತಿಗಳು ಅವರ ಬದುಕಿನಲ್ಲಿ ಬರುತ್ತಾರೆ ಎಂದು ಹೇಳಬಹುದಾಗಿದೆ. ಹಣೆ ಬರಹದಲ್ಲಿ ಈಗಾಗಲೇ ಬರೆದಿರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎನ್ನುವ ಮಾತು ಕೂಡ ಇದೆ. ಆದರೆ ಸ್ವಲ್ಪ ಎಚ್ಚರಿಕೆಯಿಂದ ನಡೆದುಕೊಂಡು, ಪರಿಹಾರಗಳನ್ನು ಮಾಡಿಕೊಂಡು ಮುಂದೆ ಬರುವ ಸಂಕಷ್ಟಗಳನ್ನು ಅರಿತುಕೊಂಡು ಆ ಕುರಿತು ಜಾಗೃತಿಯಾಗಿ ಬದುಕಲು ಪ್ರಯತ್ನಿಸಬಹುದಲ್ಲವೇ.?