ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ಎಷ್ಟೇ ಹಣವನ್ನು ಸಂಪಾದನೆ ಮಾಡಿ ದರು ಕೆಲವೊಮ್ಮೆ ಅವರು ಮಾಡಿದಂತಹ ಹಣ ಅವರ ಕೈಯಲ್ಲಿಯೇ ಉಳಿಯುವುದಿಲ್ಲ ಒಂದು ರೀತಿಯಾಗಿ ಹಣ ಖರ್ಚಾಗುತ್ತಿರುತ್ತದೆ ಆದರೆ ಯಾವ ಒಂದು ಕಾರಣಕ್ಕಾಗಿ ಈ ರೀತಿಯಾಗಿ ಹಣ ಖರ್ಚಾಗುತ್ತಿದೆ ಎನ್ನುವಂತಹ ವಿಷಯ ಪ್ರತಿಯೊಬ್ಬರಿಗೂ ಕೂಡ ತಿಳಿಯುವುದಿಲ್ಲ.
ಅದರಲ್ಲೂ ತಿಳಿದೋ ತಿಳಿಯದೆಯೋ ಮಾಡಿರುವಂತಹ ಕೆಲವೊಂದು ತಪ್ಪುಗಳಿಂದ ನಾವು ಈ ರೀತಿಯಾದಂತಹ ಸಮಸ್ಯೆಗಳನ್ನು ಅನುಭವಿ ಸುತ್ತಿದ್ದೇವೆ ಎಂದು ಹೇಳಿದರೆ ಅದು ನಿಜ. ಹೌದು ನಾವು ನಮ್ಮ ಜೀವನ ದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಈ ರೀತಿಯಾದ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಇಂತಹ ಕೆಲವೊಂದು ತಪ್ಪುಗಳನ್ನು ನೀವು ಮಾಡಿದ್ದರೆ ಹಾಗೂ ಮಾಡುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳು ವುದು ಮುಖ್ಯ.
ಗೃಹಿಣಿಯರಿಗೆ ಉತ್ತಮ ಅಡುಗೆಯ ಟಿಪ್ಸ್ ಗಳು.!
ಇಲ್ಲವಾದರೆ ಮೇಲೆ ಹೇಳಿದಂತೆ ನೀವು ಸಂಪಾದಿಸಿದಂತಹ ಹಣ ಎಲ್ಲವೂ ಕೂಡ ಖರ್ಚಾಗುತ್ತಿರುತ್ತದೆ ಎಂದೇ ಹೇಳಬಹುದು ಹಾಗಾದರೆ ಆ ಒಂದು ಕಾರಣಗಳು ಯಾವುದು ಎಂದು ತಿಳಿಯೋಣ.
* ಮನೆಗಳಲ್ಲಿ ಸತ್ತಂತಹ ಹಿರಿಯರ ಕಾರ್ಯಗಳನ್ನು ಮಾಡದೆ ಇರು ವುದು.
* ದೇವರಲ್ಲಿ ನಾವು ಹರಕೆಯನ್ನು ಮಾಡಿ ಅದು ನೆನಪಿದ್ದರೂ ಕೂಡ ಅದನ್ನು ನಾವು ಸರಿಯಾದ ಸಮಯದಲ್ಲಿ ತೀರಿಸದೇ ಇರುವುದು ಕೂಡ ಬಹಳ ಪ್ರಮುಖವಾದ ಕಾರಣವಾಗಿದೆ.
* ಮಲಗಿ ಎದ್ದಾಗ ತಾಳಿಸರ ಬೆನ್ನಿಗೆ ಇದ್ದರೂ ಗಮನಿಸದೆ ಹಾಗೆ ಇರುವುದು.
* ನಾಗರ ಪೂಜೆ ಮಾಡುವಂತಹ ಪದ್ಧತಿ ಇದ್ದರು ಅದನ್ನು ಮಾಡದೆ ಇರುವುದು.
* ದೇವರ ಪೂಜಾ ಸಾಮಗ್ರಿಗಳು ಸವೆದಿದ್ದರೂ ಅಥವಾ ಹೊಡೆದಿದ್ದರೂ ಅದನ್ನು ಸರಿಪಡಿಸದೆ ದೇವರ ಮನೆಯಲ್ಲಿ ಹಾಗೆ ಪೂಜೆ ಮಾಡುವುದು ಕೂಡ ಇದಕ್ಕೆ ಬಹಳ ಪ್ರಮುಖವಾದ ಕಾರಣ.
* ಮಂಗಳಾರತಿ ಮಾಡುವಂತಹ ಸಮಯದಲ್ಲಿ ಮಂಗಳಾರತಿ ತಟ್ಟೆಯ ಜೊತೆಗೆ ಒಂದು ಹೂವನ್ನು ಹಿಡಿದು ಆರತಿ ಮಾಡದೇ ಇರುವುದು.
ಯೌವನವನ್ನು ಕಾಪಾಡುವ 10 ಆಹಾರಗಳು.!
* ಮನೆಯ ಮುಂದೆ ಹೂವು ಬಂದರೆ ಬೇಡ ಎನ್ನುವುದು. ಬೇಡ ಎನ್ನುವುದರ ಬದಲು ಬದಲಿಗೆ ನಾಳೆ ಕೊಂಡುಕೊಳ್ಳುವ ಎಂದು ಹೇಳುವುದು ಉತ್ತಮ.
* ವರ್ಷಕ್ಕೊಮ್ಮೆಯಾದರೂ ನೀವು ಬೇರೆಯವರಿಗೆ ಅನ್ನದಾನ ಬಟ್ಟೆ ಯನ್ನು ಕೊಡದೆ ಇರುವುದು.
* ದೇವರ ಮನೆಯ ಒಳಗಡೆ ಹಳೆಯ ಪೂರ್ವಜರ ಫೋಟೋ ಅಥವಾ ಸತ್ತವರ ಫೋಟೋ ಇಡುವುದು ಕೂಡ ಇದಕ್ಕೆ ಬಹಳ ಪ್ರಮುಖವಾದ ಕಾರಣ.
* ರೊಟ್ಟಿ ಹಂಚನ್ನು ಹಾಗೂ ಹಾಲು ಕಾಯಿಸುವಂತಹ ಪಾತ್ರೆಯನ್ನು ಬೋರಲು ಹಾಕಿದ್ದರೆ.
* ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ ಇದ್ದರೂ ಸಹ ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ.
* ಮೊಂಡು ಪೊರಕೆಯನ್ನು ಬಳಸುವುದು.
* ಹಾಸಿಗೆಯನ್ನು ಪೊರಕೆಯಿಂದ ಸ್ವಚ್ಛ ಮಾಡುವುದು.
* ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು.
* ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು.
* ನೆಲದ ಮೇಲೆ ಯಾವುದೇ ಚಾಪೆಯನ್ನು ಹಾಕದೆ ಹಾಗೆಯೇ ಕುಳಿತು ದೇವರ ಪೂಜೆ ಮಾಡುವುದು.
ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.!
* ದೇವರ ದರ್ಶನ ಪಡೆದು ಮನೆಗೆ ಬಂದು ತಕ್ಷಣ ಪಾದಗಳನ್ನು ತೊಳೆಯುವುದು.
* ಮುರಿದ ಬಾಚಣಿಕೆಯಿಂದ ತಲೆ ಬಾಚುವುದು ಇದು ರಾಹುವಿನ ತತ್ವ ಹೊಂದಿರುತ್ತದೆ ಅದು ಬಡತನ ತರುತ್ತದೆ.
* ದೇವಸ್ಥಾನದಲ್ಲಿ ದಾನ ಮಾಡದೆ ಊಟ ಮಾಡಿಕೊಂಡು ಬರುವುದು.
* ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾದ ಬೆಲೆ ಕಡಿಮೆ ಮಾಡುವುದು.
* ಬಾಗಿಲುಗಳ ಮೇಲೆ ಸಿಕ್ಕ ಸಿಕ್ಕ ಫೋಟೋ ಹಾಗೂ ಸ್ಟಿಕ್ಕರ್ ಳನ್ನು ಅಂಟಿಸುವುದು.
* ಮನೆಯೊಳಗೆ ರಾತ್ರಿ ಇಡಿ ಕಸ ಅಥವಾ ಮುಸುರೆ ಇಡುವುದು.
* ಆಫೀಸ್ ಬ್ಯಾಗ್ ಅಥವಾ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೆ ಇರುವುದು.
* ಮುಸ್ಸಂಜೆ ಹೊತ್ತು ಮಲಗುವುದು ಮತ್ತು ಹಲ್ಲನ್ನು ಕಡಿಯುವುದು.
* ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿಯಾಗುವುದು.
* ಊಟ ಇರುವ ತಟ್ಟೆಯನ್ನು ದಾಟುವುದು.
* ಊಟದ ತುತ್ತನ್ನು ತೂಕ ಹಾಕುತ್ತಾ ತಿನ್ನುವುದು.