ನಾವು ವಿಶ್ವದಲ್ಲಿ ಅನೇಕ ಬಗೆಯ ದೇವಸ್ಥಾನಗಳನ್ನು ಕಂಡಿರುತ್ತೇವೆ ಅಥವಾ ಅವುಗಳ ಬಗ್ಗೆ ಕೇಳಿರುತ್ತೇವೆ. ಕೆಲವು ವಿಶೇಷ ದೇವಸ್ಥಾನಗಳು ನಮಗೆ ಅಚ್ಚರಿಯನ್ನು ತರವ ರೀತಿ ಹಾಗೂ ಇನ್ನೂ ಅನೇಕ ರೀತಿ ದೇವಸ್ಥಾನಗಳು ನಮ್ಮ ಊಹೆಗೆ ನಿಲುಕದ ರೀತಿ ಕುತೂಹಲಗಳನ್ನು ಇನ್ನು ತನ್ನೊಳಗೆ ಉಳಿಸಿಕೊಂಡಿರುವ ಹಾಗೆ ಕಾಣುತ್ತವೆ.
ಇಂತಹ ದೇವಾಲಯಗಳ ಪಟ್ಟಿಗೆ ಮತ್ತೊಂದು ವಿಶೇಷವಾದ ದೇವಾಲಯ ಸೇರುತ್ತದೆ. ಇಲ್ಲಿ ದೇವರು ನೆಲೆಗೊಂಡಿರುವ ಭಂಗಿಯ ಕಾರಣದಿಂದಾಗಿ ಕೂಡ ಪ್ರಖ್ಯಾತಿಯಲ್ಲಿದೆ. ಸಾಮಾನ್ಯವಾಗಿ ನಾವು ದೇವರು ನಿಂತಿರುವ ಹಾಗೂ ಕುಳಿತಿರುವ ಭಂಗಿಯಲ್ಲಿರುವ ವಿಗ್ರಹಗಳನ್ನು ನೋಡಿದ್ದೇವೆ.
ಭಾರತದಲ್ಲಿ ಕೆಲವು ವಿಷ್ಣು ದೇವಸ್ಥಾನಗಳಲ್ಲಿ ಶಯನ ಸ್ವರೂಪದಲ್ಲಿರುವ ದೇವರ ವಿಗ್ರಹಗಳನ್ನು ಕಂಡಿದ್ದೇವೆ ಪೂಜಿಸಿದ್ದೇವೆ. ಆದರೆ ಇಡೀ ವಿಶ್ವದಲ್ಲಿ ಒಂದೇ ಒಂದು ಕಡೆ ಭಗವಂತನು ತೇಲುವ ರೂಪಯಲ್ಲಿ ದರ್ಶನ ಕೊಡುತ್ತಿದ್ದಾರೆ. ಈ ದೇವಸ್ಥಾನದ ಈ ವಿಶೇಷತೆಗೆ ಇಂದು ಇಡೀ ಜಗತ್ತೇ ದೇವಾಲಯದತ್ತ ತಿರುಗಿ ನೋಡುವಂತಾಗಿದೆ. ಇಲ್ಲಿನ ಮತ್ತೊಂದು ವಿಶೇಷತೆ ಏನೆಂದರೆ ಶಿವ ಹಾಗೂ ವಿಷ್ಣು ಬೇರೆ ಬೇರೆ ಅಲ್ಲ ಹರಿಹರ ಒಂದೇ ಎನ್ನುವ ರೀತಿ ಸಂದೇಶವನ್ನು ನೀಡುವ ವಿಶೇಷ ದೇವಸ್ಥಾನವಾಗಿದೆ.
ಈ ಸುದ್ದಿ ಓದಿ:- ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!
ಬುಧ ನೀಲಕಂಠ ಎಂದು ಕರೆಸಿಕೊಂಡಿರುವ ಈ ದೇವಸ್ಥಾನವು ನಮ್ಮ ನೆರೆಯ ರಾಜ್ಯವಾದ ನೇಪಾಳದಲ್ಲಿದೆ. ನೇಪಾಳ ಕೂಡ ಹಿಂದೂ ರಾಜ್ಯ, ಈ ಹಿಂದೆ ಇದು ಅಖಂಡ ಭಾರತದ ಭಾಗವಾಗಿತ್ತು. ಈಗ ಭಾರತದ ಬೇರ್ಪಟ್ಟು ಪ್ರತ್ಯೇಕ ದೇಶವಾಗಿದ್ದರು ಕೂಡ ಇನ್ನೂ ನಮ್ಮ ಸನಾತನ ಧರ್ಮದ ಮೂಲಗಳನ್ನು ನಾವು ಕಾಣಬಹುದು, ಇಂತಹ ಕುರುಹುಗಳಲ್ಲಿ ಈ ಬುಧ ನೀಲಕಂಠ ದೇವಸ್ಥಾನವೂ ಕೂಡ ಸೇರಿದೆ.
ತೆರೆದ ಪ್ರದೇಶದಲ್ಲಿ ವಿಷ್ಣುವಿನ ವಿಗ್ರಹ ಇರುವ ಈ ದೇವಾಲಯವು ತುಂಬಾ ವಿಶೇಷವಾಗಿದೆ. ಈ ದೇವಾಲಯವು ರಾಜಧಾನಿ ಕಾಟ್ಮಂಡು ಕಣಿವೆಯ ಶಿವಪುರಿಯ ಉತ್ತರಭಾಗದಲ್ಲಿದೆ. ವಿಷ್ಣು ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ಮಲಗಿರುವ ಹಾಗೆ ಈ ವಿಷ್ಣುವಿನ ವಿಗ್ರಹ ಕಾಣುತ್ತದೆ. ಈ ಮೂರ್ತಿಯೂ ಇರುವ ಪ್ರದೇಶವು ಸುತ್ತಲೂ 13 ಮೀ ಸರೋವರ ಇವರಿಸಿದೆ. ಮತ್ತು ಇದರ ಆಳ 6 ಮೀ ಉದ್ದವಿದೆ.
ಇಷ್ಟೇ ಅಲ್ಲದೇ ಈ ವಿಗ್ರಹದಲ್ಲಿ ಮತ್ತೊಂದು ರಹಸ್ಯವಿದೆ. ಅದೇನೆಂದರೆ, ನೀಲಕಂಠ ಎಂದು ಕರೆಯುವುದು ಶಿವನನ್ನು ,ಆದರೆ ಇಲ್ಲಿರುವುದು ವಿಷ್ಣುವಿನ ವಿಗ್ರಹ. ಅದಕ್ಕಾಗಿ ಇದನ್ನು ಬುದನೀಲಕಂಠ ದೇವಾಲಯ ಎಂದು ಕರೆಯಲಾಗುತ್ತದೆ. ಶಿವರಾತ್ರಿಯ ದಿನದಂದು ಈ ವಿಗ್ರಹಕ್ಕೆ ವಿಶೇಷ ಪೂಜೆ ಇರುತ್ತದೆ. ಈ ಪೂಜೆ ನಡೆಯುವ ಸಂದರ್ಭದಲ್ಲಿ ಆ ಸರೋವರದಲ್ಲಿ ಉಂಟಾಗುವ ನೆರಳಿಗು ಕೂಡ ಪೂಜೆ ಸಲ್ಲಿಸಲಾಗುತ್ತದೆ ಹಾಗೂ ಆ ನೆರಳಿನ ರಹಸ್ಯವನ್ನು ಇನ್ನು ಸಹ ಯಾರಿಗೂ ಭೇದಿಸಲು ಸಾಧ್ಯವಾಗಿಲ್ಲ.
ಈ ಸುದ್ದಿ ಓದಿ:- ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!
ಯಾಕೆಂದರೆ ಆ ನೆರಳಿನಲ್ಲಿ ಗೋಚರಿಸುವುದು ಶಿವನ ರೂಪ. ವಿಗ್ರಹ ವಿಷ್ಣುವಿನದಾದರು ಅದರ ನೆರಳು ಹಾಗೂ ರೂಪ ಶಿವನದ್ದು, ಇದೇ ಈ ದೇವಾಲಯದ ವಿಸ್ಮಯಕಾರಿ ಹಾಗೂ ಆಶ್ಚರ್ಯಕರ ಸಂಗತಿಯಾಗಿದೆ.ಈ ನೆರಳು ಹೇಗೆ ಗೋಚರಿಸುತ್ತದೆ, ಯಾವ ಕಾರಣದಿಂದ ಹೀಗೆ ಕಾಣಿಸುತ್ತದೆ ಎಂಬುದನ್ನು ಕಂಡು ಹಿಡಿಯಲು ಶತ ಪ್ರಯತ್ನಗಳಾಗಿವೆ, ಆದರೆ ಯಾರಿಗೂ ಸಾಧ್ಯವೇ ಆಗಿಲ್ಲ.
ವಿಚಿತ್ರವೆಂದರೆ ಈ ವಿಗ್ರಹ ಸಮುದ್ರದಲ್ಲಿ ಸಂಪೂರ್ಣವಾಗಿ ತೇಲುತ್ತದೆ ಪುರಾಣದ ಪ್ರಕಾರ ಹಾಗೂ ಅಲ್ಲಿನ ಪೂಜಾರಿಗಳ ಪ್ರಕಾರ ಆ ವಿಗ್ರಹದ ಕೆಳಗಡೆ ಶಿವನ ಮೂರ್ತಿಯೂ ಇದೆ ಎಂದು ನಂಬಲಾಗಿದೆ ಅಷ್ಟೇ. ಆದರೆ ಅದನ್ನು ಇಲ್ಲಿವರೆಗೂ ಸಾಭೀತು ಪಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಹಲವು ವರ್ಷಗಳ ಹಿಂದೆ ಈ ಭಾಗದಲ್ಲಿ ರೈತನೊಬ್ಬ ಉಳುಮೆ ಮಾಡುವಾಗ ನೆಲದಿಂದ ರಕ್ತ ಹರಿಯುತ್ತಿರುವ ರೀತಿ ಆಗುತ್ತದೆ.
ಈ ಬಗ್ಗೆ ಕುತೂಹಲಗೊಂಡ ರೈತ ಒಳಗೇನಿದೆ ಎಂದು ನೋಡಿದಾಗ ವಿಷ್ಣುವಿನ ವಿಗ್ರಹ ಇರುವುದು ಮತ್ತು ಅದರ ಕೆಳಗೆ ಜಲ ಹರಿದು ಬರುತ್ತಿರುವುದು ನೋಡಿ ಆಶ್ಚರ್ಯ ಚಕಿತರಾಗಿ ಋಷಿ ಮುನಿಗಳ ಸಲಹೆ ಮೇರೆಗೆ ಸಮುದ್ರ ಮೇಲೆಯೇ ವಿಷ್ಣುವಿನ ರೂಪದಲ್ಲಿಯೇ ಪೂಜಿಸಿಕೊಂಡು ಬಂದಿದ್ದಾರೆ ಎನ್ನುವ ಪ್ರತೀತಿಗಳು ಇವೆ.