ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರವು ಇಂದು ಹೆಚ್ಚಿನ ಜನರು ನಂಬುತ್ತಿರುವ ವಿಷಯವಾಗಿದೆ. ಅನೇಕರ ಜೀವನಗಳಲ್ಲಿ ಈ ರೀತಿ ಇದನ್ನು ನಂಬಿ ಪರಿಹಾರಗಳನ್ನು ಮಾಡಿಕೊಂಡ ಮೇಲೆ ಅಥವಾ ಈ ಶಾಸ್ತ್ರಗಳು ತೋರಿಸುವ ಮಾರ್ಗದರ್ಶನದ ಪ್ರಕಾರವಾಗಿ ನಡೆದುಕೊಂಡಾಗ ಬದುಕಿನಲ್ಲಿ ಒಳ್ಳೆಯ ಬದಲಾವಣೆಗಳು ಆಗಿರುವ ಕಾರಣದಿಂದಾಗಿ 21ನೇ ಶತಮಾನದ ಈ ಕಾಲದಲ್ಲಿಯೂ ಕೂಡ ಇವುಗಳ ಮೌಲ್ಯ ಕಡಿಮೆಯಾಗಿಲ್ಲ.
ಇತ್ತೀಚಿಗೆ ವಿಜ್ಞಾನವೂ ಕೂಡ ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರವನ್ನು ಶ್ಲಾಘಿಸುತ್ತದೆ ಎನ್ನುವುದನ್ನು ಕೂಡ ಅಲ್ಲಗಳೆಯುವಂತಿಲ್ಲ. ಪ್ರತಿಯೊಂದು ದಿನ, ವಾರ, ವರ್ಷ ಎಲ್ಲವೂ ಕೂಡ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ನವ ಗ್ರಹಗಳ ಸಂಚಾರ, ಹೊಸ ಸಂವತ್ಸರಗಳು, ಮಾಸಗಳು ಎಲ್ಲವೂ ಕೂಡ ಹೊಸ ರೀತಿಯ ಬದಲಾವಣೆಯನ್ನು ಉಂಟು ಮಾಡುತ್ತಿರುತ್ತವೆ.
ಆ ಪ್ರಕಾರವಾಗಿ ನೂತನ ವರ್ಷದಲ್ಲಿ ಹಲವಾರು ರಾಶಿಗಳಲ್ಲಿ ಮಹತ್ವದ ಬದಲಾವಣೆಗಳಾಗಿದ್ದು ಇದರಲ್ಲಿ ಮುಖ್ಯವಾಗಿ 5 ರಾಶಿಯವರಿಗೆ ಅಪಾರವಾದ ಯೋಗವಿದೆ ಅದರಲ್ಲೂ ಮನೆ ಕಟ್ಟುವಂತಹ ಅಥವಾ ಸ್ವಂತ ಮನೆ ಕೊಳ್ಳುವಂತಹ ಯೋಗವನ್ನು ಈ ರಾಶಿಯವರು ಹೊಂದಿದ್ದಾರೆ. ಆ ರಾಶಿಗಳ ವಿವರ ಹೀಗಿದೆ ನೋಡಿ.
ವೃಷಭ ರಾಶಿ :-
ವೃಷಭ ರಾಶಿಯ ಜನರು ಸದಾ ಆಕ್ಟಿವ್ ಆಗಿರಲು ಬಯಸುತ್ತಾರೆ. ಒಂದಲ್ಲ ಒಂದು ಕೆಲಸ ಕಾರ್ಯಗಳಲ್ಲಿ ಅಥವಾ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಭವಿಷ್ಯದ ಬಗ್ಗೆ ಬಹಳ ಕನಸು ಕಾಣುತ್ತಾರೆ. ಜೀವನದಲ್ಲಿ ಆದಷ್ಟು ಬೇಗ ಸೆಟಲ್ ಆಗಿ ನೆಮ್ಮದಿಯಾಗಿ ಇರಬೇಕು ಎನ್ನುವ ಮನಸ್ಥಿತಿ ಇವರದ್ದಾಗಿದೆ ಹಾಗಾಗಿ ಇವರು ಭವಿಷ್ಯದ ಕನಸುಗಳಿಗಾಗಿ ಬಹಳ ಚಿಕ್ಕ ಸಮಯದಿಂದಲೇ ಹಣವನ್ನು ಕೂಡಿಡುತ್ತಿರುತ್ತಾರೆ. ಇಂತಹ ಕನಸುಗಳಲ್ಲಿ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಕೂಡ ಒಂದು ವೃಷಭ ರಾಶಿಯವರು ಬಹಳ ದಿನಗಳಿಂದ ಈ ಬಗ್ಗೆ ಪ್ರಯತ್ನ ಪಟ್ಟಿರುತ್ತಾರೆ. 2024ರ ವರ್ಷದಲ್ಲಿ ಅವರಿಗೆ ಸ್ವಂತ ಮನೆಯ ಯೋಗವು ಬರುತ್ತಿದೆ.
ಕರ್ಕಾಟಕ ರಾಶಿ:-
ಕರ್ಕಾಟಕ ರಾಶಿಯವರ ವಿಶೇಷ ಗುಣ ಏನೆಂದರೆ ಇವರು ತಾವು ಬೆಳೆಯುವ ಜೊತೆಗೆ ತಮ್ಮ ಸುತ್ತಮುತ್ತಲಿನವರು ಕೂಡ ಅಭಿವೃದ್ಧಿಯಾಗಬೇಕು ಎಂದು ಆಸೆ ಪಡುತ್ತಾರೆ. ಬಂದು ಬಳಗವೇ ಆಗಲಿ, ಸ್ನೇಹಿತರೆ ಆಗಲಿ ಸಹಾಯ ಕೇಳಿದರೆ ಇಲ್ಲ ಎನ್ನುವ ಗುಣದವರು. ಇವರ ಈ ಗುಣವೇ ಇವರನ್ನು ಎಲ್ಲರಿಗೂ ಆತ್ಮೀಯರನ್ನಾಗಿಸುತ್ತದೆ, ಎಲ್ಲರ ಪ್ರೀತಿಯೇ ಇವರ ಬಂಡವಾಳ ಎಂದು ಹೇಳಬಹುದು. ಈ ವರ್ಷ ಇದೇ ರೀತಿಯಾಗಿ ಇವರು ಅಂದುಕೊಳ್ಳದೆ ಇದ್ದರೂ ಕೂಡ ಯಾವುದೇ ಪ್ಲಾನ್ ಇಲ್ಲದೆ ದಿಢೀರ್ ಎಂದು ಇಂತಹದೊಂದು ಅದೃಷ್ಟವನ್ನು ಕುಟುಂಬದವರು ಹಾಗೂ ಸ್ನೇಹಿತರ ಸಹಕಾರದಿಂದ ಹೊಂದಲಿದ್ದಾರೆ. ಕರ್ಕಾಟಕ ರಾಶಿಯವರಿಗೆ ಈ ವರ್ಷ ಬಹಳ ಸಮಯ ಉತ್ತಮವಾಗಿದ್ದು ಈ ವರ್ಷಾಂತ್ಯದೊಳಗೆ ಸ್ವಂತ ಮನೆಯ ಯೋಗವು ಕೂಡ ಬರುತ್ತದೆ.
ವೃಶ್ಚಿಕ ರಾಶಿ:-
ವೃಶ್ಚಿಕ ರಾಶಿಯವರು ಬಹಳ ಬುದ್ಧಿವಂತರು ತಮ್ಮ ನಿರ್ಧಾರಗಳನ್ನು ಸಾಧಿಸಿಯೇ ತೀರುತ್ತಾರೆ. ಈ 2024ರ ವರ್ಷವು ಬಹಳ ಅದೃಷ್ಟ ತಂದಿರುವ ವರ್ಷವಾಗಿರುವುದರಿಂದ ವ್ಯಾಪಾರ ವ್ಯವಹಾರ ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ಅನೇಕ ವಿಷಯಗಳಲ್ಲಿ ಶುಭಫಲ ಕಾಣಲಿದ್ದಾರೆ ಮತ್ತು ಅನೇಕ ಸಂಗತಿಗಳನ್ನು ಆರಂಭಿಸಲಿದ್ದಾರೆ. ಈ ರೀತಿಯಾಗಿ ಮನೆ ಖರೀದಿಸುವ ಅಥವಾ ಕಟ್ಟುವ ಪ್ರಯತ್ನಕ್ಕೆ ಕೈ ಹಾಕಿದರೆ ಅವರ ಕನಸು ಕೈಗೂಡಲಿದೆ.
ಮಕರ ರಾಶಿ:-
ಬಹಳ ಅದೃಷ್ಟವಂತ ರಾಶಿಯಾಗಿರುವ ಮಕರ ರಾಶಿಯವರಿಗೆ ಎಲ್ಲಾ ಕಾರ್ಯದಲ್ಲೂ ಜಯ ಸಿಗುತ್ತದೆ. ಇವರು ಇಚ್ಛೆಪಟ್ಟ ಎಲ್ಲವೂ ಕೂಡ ಸಿಗುತ್ತದೆ. ಇವರು ಯಾವುದಾದರೂ ಕೆಲಸ ಮಾಡಬೇಕು ಎಂದರೆ ಮಾರಿಯೇ ತೀರುವ ಹಠಗಾರರು. ಬಹಳ ಯೋಗ ಪುರುಷರಾಗಿರುವ ಇವರಿಗೆ ಈ ವರ್ಷ ಅನೇಕ ಬಗೆ ಯೋಗಗಳಿದ್ದು ಇದರಲ್ಲಿ ಸ್ವಂತ ಮನೆಯನ್ನು ಹೊಂದುವಂತಹ ಯೋಗವು ಕೂಡ ಒಂದಾಗಿದೆ.
ಕುಂಭ ರಾಶಿ:-
ಕುಂಭ ರಾಶಿಯವರಿಗೆ ಕೂಡ ಈ ವರ್ಷ ಬಹಳ ಅದೃಷ್ಟ ಇದೆ. ಮನೆ ಕಟ್ಟುವ ಆಸೆ ಮಾತ್ರವಲ್ಲದೆ ಇನ್ಯಾವುದೇ ಕೆಲಸಕ್ಕೆ ಇವರು ಕೈ ಹಾಕಿದರು ಕೂಡ ಅದರಲ್ಲಿ ನಿರೀಕ್ಷೆ ರೀತಿಯ ಫಲವನ್ನು ಪಡೆಯಲಿದ್ದಾರೆ. ಜೀವನದಲ್ಲಿ ಬಹಳ ಅಚ್ಚುಕಟ್ಟಾಗಿ ಜೀವನ ನಿರ್ವಹಿಸುವ ಇವರು ಎಲ್ಲವನ್ನು ಪ್ಲಾನ್ ಮಾಡಿಯೇ ಮಾಡುತ್ತಾರೆ ಇವರ ಈ ರೀತಿಯ ಪ್ಲಾನ್ ಗಳಲ್ಲಿ ಸ್ವಂತ ಮನೆಯ ಆಸೆಯು ಕೂಡ ಒಂದು. ಆ ಕನಸಿಗೆ ಈ ವರ್ಷ ಸಮಯ ಕೂಡಿ ಬರುತ್ತಿದೆ.