ಸ್ವಪ್ನಶಕುನ ಎನ್ನುವುದು ಅನಾದಿಕಾಲದಿಂದಲೂ ಕೂಡ ಇದೆ. ರಾಮಾಯಣ ಮಹಾಭಾರತದ ಕಾಲದಲ್ಲಿ ಕೂಡ ಇದಕ್ಕೆ ಸಂಬಂಧಿಸಿದ ಕಥೆಗಳ ಬಗ್ಗೆ ನಾವು ಕೇಳಿದ್ದೇವೆ. ಅಶೋಕವನದಲ್ಲಿ ಸೀತೆಯು ಕಣ್ಣೀರಿಡುತ್ತಿರುವಾಗ ತ್ರಿಜಂಡೆ ರಾಕ್ಷಸಿ ಒಬ್ಬಳು ತನ್ನ ಕನಸಿನಲ್ಲಿ ಬಿಳಿಕುದುರೆಯಲ್ಲಿ ಶ್ರೀರಾಮಚಂದ್ರ ಬಂದು ಸೀತಾಮಾತೆಯನ್ನು ಕರೆದುಕೊಂಡು ಹೋದ ಹಾಗೆ ಹಾಗೂ ರಾವಣನನ್ನು ಕಪ್ಪು ವಸ್ತ್ರ ಉಟ್ಟಿದ್ದವರು ದಕ್ಷಿಣದ ಕಡೆಗೆ ಕೋಣನ ಮೇಲೆ ಹೇರಿ ಹೋದಂತೆ ಕನಸು ಬಿದ್ದಿದೆ ಎಂದು ಹೇಳಿ ಸಮಾಧಾನ ಪಡಿಸಿದ್ದಳು.
ನಂತರದ ದಿನಗಳಲ್ಲಿ ರಾಮ ರಾವಣರ ಯುದ್ಧ ನಡೆದು ಅದು ನಿಜವಾಯಿತು ಅಂತೆಯೇಶಮಹಾಭಾರತ ಕಾಲದಲ್ಲಿ ಕೂಡ ಅಭಿಮನ್ಯು ಕುರುಕ್ಷೇತ್ರ ಯುದ್ಧಕ್ಕೆ ಹೊರಟಾಗ ಉತ್ತರೆಗೂ ಕೂಡ ಸ್ವಪ್ನದಲ್ಲಿ ಅಭಿಮನ್ಯುಗೆ ಅಪಾಯವಿದೆ ಎನ್ನುವ ಮುನ್ಸೂಚನೆ ಸಿಕ್ಕಿತ್ತು. ಆದರೆ ಅಭಿಮನ್ಯು ತನ್ನ ಕರ್ತವ್ಯ ಮಾಡಲೇಬೇಕಿತ್ತು ಹಾಗಾಗಿ ಚಕ್ರವ್ಯೂಹವನ್ನು ಭೇದಿಸಲು ಹೋಗಿ ಸಿಲುಕಿದ ಕಥೆಯನ್ನು ಕೇಳಿದ್ದೇವೆ.
ಹಾಗೆ ಕಲಿಯುಗದಲ್ಲೂ ಕೂಡ ಬೀಳುವ ಕೆಲವು ಕನಸುಗಳು ನಮಗೆ ಮುಂದೆ ಆಗುವ ಘಟನೆಗಳ ಬಗ್ಗೆ ಮುನ್ಸೂಚನೆ ಕೊಡುತ್ತವೆ ಆದರೆ ರೋಗಿಗಳಿಗೆ, ಮಧ್ಯಾಹ್ನ ನಿದ್ರೆ ಮಾಡುವವರಿಗೆ, ವಾಯು ರೋಗ ಇರುವವರಿಗೆ, ಕೈ ಕಾಲು ಮಂಡಿ ನೋವು ಇರುವವರಿಗೆ ಸದಾ ಒಂದೇ ವಿಷಯದ ಬಗ್ಗೆ ಯೋಚನೆ ಮಾಡುತ್ತಾ ಇದ್ದು ಅದೇ ವಿಷಯದ ಬಗ್ಗೆ ಕನಸು ಕಂಡವರಿಗೆ ಇದು ಫಲಿಸುವುದಿಲ್ಲ.
ಅದನ್ನು ಹೊರತುಪಡಿಸಿ ಆರೋಗ್ಯಕರವಾಗಿರುವ ವ್ಯಕ್ತಿ ಒಂದನೇ ಜಾಮು ಅಂದರೆ ರಾತ್ರಿ 8:00 ರಿಂದ 10:00 ಗಂಟೆ ಒಳಗಡೆ ಕಾಣುವ ಕನಸು ಒಂದು ವರ್ಷದ ಒಳಗೆ ಫಲಿಸುತ್ತದೆ, ಎರಡನೇ ಜಾಮು ಅಂದರೆ ರಾತ್ರಿ 10:00 ರಿಂದ 12:00 ಗಂಟೆ ಒಳಗೆ ಕಾಣುವ ಕನಸು 8 ತಿಂಗಳಿನಲ್ಲಿ ನಿಜವಾಗುತ್ತದೆ, ಮೂರನೇ ಜಾಮು ಎಂದರೆ 12:00 ಯಿಂದ 3:00 ಗಂಟೆ ಒಳಗಡೆ ಕಾಣುವ ಕನಸು 6 ತಿಂಗಳಲ್ಲಿ ಈಡೇರುತ್ತದೆ ಹಾಗೂ ನಾಲ್ಕನೇ ಜಾಮು ಅಂದರೆ ಮುಂಜಾವು 3:00 ರಿಂದ 6:00 ರ ಒಳಗೆ ಬೀಳುವ ಕನಸು ಶೀಘ್ರವಾಗಿ ನಿಜವಾಗುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ.
ದೇವತೆಗಳಿಗೂ ಗುರುವಾದ ಬೃಹಸ್ಪದಚಾರ್ಯರು ಸ್ವಪ್ನ ಧ್ಯಾಯ ಎನ್ನುವ ಗ್ರಂಥದಲ್ಲಿ ಇದರ ಬಗ್ಗೆ ತಿಳಿಸಿದ್ದಾರೆ. ಕನಸಿನಲ್ಲಿ ಸ್ಪಷ್ಟವಾಗಿ ನಡೆಯುವ ಘಟನೆ ಕಾಣುವುದಿಲ್ಲ, ಆದರೆ ಅದಕ್ಕೆ ಮುನ್ಸೂಚನೆ ಸಿಗುತ್ತದೆ ಇದನ್ನು ಹೇಗೆ ತರ್ಕ ಮಾಡಬಹುದು ಎನ್ನುವುದನ್ನು ಕೂಡ ಸ್ವಪ್ನ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಬೆಳಗಿನ ಜಾವದ ಕನಸಿನಲ್ಲಿ ಕುದುರೆ ಮೇಲೆ ಹಾಗೂ ಆನೆ ಮೇಲೆ ಕುಳಿತಂತೆ ಕನಸು ಬಿದ್ದರೆ ಅವರು ತಮ್ಮ ವೃತ್ತಿ ಜೀವನದಲ್ಲಿ ಬಡ್ತಿ ಹೊಂದುತ್ತಾರೆ ಎಂದು ಅರ್ಥ.
ಅದೇ ರೀತಿಯಾಗಿ ಕನಸಿನಲ್ಲಿ ಹಂಸ ಪಕ್ಷಿ, ಕೋಳಿ ಇಂತಹ ಪಕ್ಷಿಗಳನ್ನು ಕಂಡರೆ ವಿವಾಹ ಯೋಗ ಕೂಡಿ ಬರಲಿದೆ ಎಂದರ್ಥ. ನೀವೇನಾದರೂ ಕನಸಿನಲ್ಲಿ ನದಿ ಅಥವಾ ಕೆರೆಯಲ್ಲಿ ತಾವರೆ ಹೂವಿನ ಮೇಲೆ ಕುಳಿತು ಪಾಯಸ ಕುಡಿಯುತ್ತಿರುವ ಕನಸು ಬಿದ್ದರೆ ಶೀಘ್ರವಾಗಿ ಅಪಾರ ಧನ ಲಾಭವಾಗಲಿದೆ ಎಂದರ್ಥ. ನಿಮಗೆ ರಾಜಯೋಗ ಬರುತ್ತಿದೆ ಎಂದು ಸೂಚನೆ.
ಪತಿ-ಪತ್ನಿ ಮಧ್ಯ ವಿರಸ ಉಂಟಾಗಿ ಬೇರೆ ಬೇರೆಯಾಗಿದ್ದರೆ ಇಬ್ಬರಲ್ಲಿ ಒಬ್ಬರ ಕನಸಿನಲ್ಲಿ ಇಬ್ಬರು ಒಟ್ಟಿಗೆ ಒಂದೇ ತಟ್ಟೆಯಲ್ಲಿ ಊಟ ತಿನ್ನುತ್ತಿರುವ ಹಾಗೆ ಅಥವಾ ಒಟ್ಟಿಗೆ ತಾಂಬೂಲ ತಿನ್ನುತ್ತಿರುವ ಹಾಗೆ ಕನಸು ಬಿದ್ದರೆ ಒಂದು ತಿಂಗಳಲ್ಲಿ ಇಬ್ಬರು ಒಂದೇ ಕಡೆ ಕೂಡಿ ಬಾಳುತ್ತಾರೆ ಮತ್ತೆ ಎಂದು ಅವರು ಬೇರೆ ಆಗುವುದಿಲ್ಲ ಎಂದರ್ಥ.
ನಿಮ್ಮ ಕನಸಿನಲ್ಲಿ ಯಾರಾದರೂ ನಿಮಗೆ ಬಿಳಿ ಛತ್ರಿ ಹಿಡಿದರೆ ಅಥವಾ ಬೀಸಣಿಗೆ ಬೀಸಿದರೆ ಅಥವಾ ಬಿಳಿ ಹಾರ ಹಾಕಿ ಸನ್ಮಾನ ಮಾಡುವ ರೀತಿ ಕನಸು ಬಂದರೆ ಶೀಘ್ರದಲ್ಲಿ ರಾಜಯೋಗ ಬರುತ್ತದೆ ಎಂದು ಅರ್ಥ. ಕನಸಿನಲ್ಲಿ ಅರಿಶಿಣ ಕುಂಕುಮ ಬಳೆ ಚಿನ್ನ ದುಡ್ಡು ಮುಂತಾದ ಮಂಗಳದ್ರವ್ಯಗಳು ಕಂಡರೆ ತಾಯಿ ಮಹಾಲಕ್ಷ್ಮಿ ಶೀಘ್ರದಲ್ಲೇ ಮನೆಗೆ ಬರುತ್ತಾರೆ ಎಂದರ್ಥ.
ಒಂದು ವೇಳೆ ಕನಸಿನಲ್ಲಿ ದೇವರು ಕಂಡರೆ ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮಾಡಿ ನಿಮ್ಮ ಕನಸಿನಲ್ಲಿ ಶಿವ ಕಾಣಿಸಿದರೆ ಶಿವನ ದೇವಾಲಯ, ವೆಂಕಟೇಶ್ವರನನ್ನು ಕಂಡಿದ್ದರೆ ಹತ್ತಿರದಲ್ಲಿರುವ ವೆಂಕಟೇಶ್ವರನ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿದರೆ ಆ ದೇವರ ಅನುಗ್ರಹವಾಗುತ್ತದೆ.