ಸೊಳ್ಳೆಗಳಿಂದ ಮನುಷ್ಯನಿಗೆ ಅನೇಕ ರೀತಿಯ ರೋಗಗಳು ಬರುತ್ತವೆ. ಡೆಂಗ್ಯೂ ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಮಾ’ರ’ಣಾಂ’ತಿ’ಕ ಕಾಯಿಲೆಗಳು ಕೂಡ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಹೀಗಾಗಿ ಆರೋಗ್ಯ ಇಲಾಖೆಯು ಕೂಡ ಸೊಳ್ಳೆ ನಿಯಂತ್ರಣದ ಬಗ್ಗೆ ಅನೇಕ ಮಾರ್ಗಸೂಚಿಗಳನ್ನು ಹೇಳಿ ಎಚ್ಚರವಾಗಿರುವಂತೆ ಜಾಗೃತಿ ಮೂಡಿಸುತ್ತಿದೆ.
ಹೀಗಿದ್ದರೂ ಜನರ ನಿರ್ಲಕ್ಷತೆಯಿಂದ ಪ್ರತಿನಿತ್ಯವೂ ಈ ಕಾಯಿಲೆಗಳಿಗೆ ಸಾವಿರಾರು ಜನ ತುತ್ತಾಗುತ್ತಿದ್ದಾರೆ. ಇದರ ಜೊತೆಗೆ ಕಾಲರ ಡೈರಿಯಾ ಅಲರ್ಜಿ ವೈರಲ್ ಫೀವರ್ ಗಳು ಇನ್ನು ಮುಂತಾದ ಅನೇಕ ಕಾಯಿಲೆಗಳು ಸೊಳ್ಳೆ ಕಡಿತದಿಂದ ಬರುತ್ತಿವೆ. ಇದರಿಂದ ತಪ್ಪಿಸಿಕೊಳ್ಳಬೇಕು ಎಂದರೆ ಮನೆ ಸುತ್ತಮುತ್ತ ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.
ಯಾವುದೇ ವಸ್ತುಗಳಲ್ಲಿ ನೀರು ಶೇಖರಣೆ ಆಗದಂತೆ ನೋಡಿಕೊಳ್ಳಬೇಕು, ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತದೆ ಹಾಗಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರ ಜೊತೆಗೆ ಸೊಳ್ಳೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಅನೇಕ ಪ್ರಯತ್ನಗಳನ್ನು ಮಾಡುತ್ತೇವೆ.
ಮೈತುಂಬ ಬಟ್ಟೆ ಧರಿಸುವುದು, ಸಂಜೆ ಆಗುತ್ತಿದ್ದಂತೆ ಸೊಳ್ಳೆ ಬತ್ತಿ ಹಚ್ಚುವುದು, ಸೊಳ್ಳೆ ಕಾಯಿಲ್ ಗಳನ್ನು ಹಾಕುವುದು, ಸೊಳ್ಳೆ ಬ್ಯಾಟ್ ಇಂದ ಸೊಳ್ಳೆ ಹೊಡೆದು ಸಾಯಿಸುವುದು ಈಗಂತೂ ಸೊಳ್ಳೆ ಕಚ್ಚಬಾರದು ಎಂದು ಲೋಶನ್ ಗಳು ಬಂದಿವೆ ಅವುಗಳನ್ನು ಕೈಗೆ ಕಾಲುಗಳಿಗೆ ಹಚ್ಚಿಕೊಳ್ಳುವುದು ಇನ್ನು ಎಷ್ಟೆಷ್ಟು ಹರಸಾಹಸ ಪಡುತ್ತೇವೆ.
ಆದರೆ ಈ ರೀತಿ ಸೊಳ್ಳೆ ಹೋಗಿಸುವುದಕ್ಕೆ ಉಪಯೋಗಿಸುವ ರಾಸಾಯನಿಕಗಳು ಉರಿವಾಗ ಹೊರ ಹಾಕುವ ವಾಸನೆಯೂ ಬಹಳ ಕೆಟ್ಟದಾಗಿದ್ದು ಇದರಿಂದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳು ಹೇಳಿವೆ. ಹಾಗಾಗಿ ನ್ಯಾಚುರಲ್ ಆಗಿ ಸೊಳ್ಳೆಗಳನ್ನು ಓಡಿಸುವ ಪ್ರಯತ್ನ ಪಡುವುದು ಒಳ್ಳೆಯದು.
ಅದಕ್ಕಾಗಿ ಹೇಗೆ ನ್ಯಾಚುರಲ್ ಆಗಿ ಮನೆಮದ್ದುಗಳನ್ನು ಮಾಡಿಕೊಂಡು ಸೊಳ್ಳೆಗಳು ಸಾಯುವಂತೆ ಅಥವಾ ಇನ್ಯಾವತ್ತು ಸೊಳ್ಳೆಗಳು ನಮ್ಮ ಮನೆ ಕಾಲಿಡದಂತೆ ಮಾಡಬಹುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೀವು ಟ್ರೈ ಮಾಡಿ ಸೊಳ್ಳೆಗಳಿಂದ ಮುಕ್ತಿ ಹೊಂದಿ.
* ನಾಟಿ ಹಸುವಿನ ಬೆರಣಿ ಅನೇಕ ರೀತಿಯ ಒಳ್ಳೆಯ ಗುಣಗಳನ್ನು ಹೊಂದಿದೆ. ಈ ಬೆರಣಿಯನ್ನು ಉರಿಸುವುದರಿಂದ ಹೊಗೆ ಬರುತ್ತದೆ ಆ ಹೊಗೆಯು ಮನೆ ತುಂಬ ಹರಡಿದಾಗ ಸೊಳ್ಳೆಗಳು ಮನೆ ಬಿಟ್ಟು ಹೋಗುತ್ತವೆ, ಹಾಗಾಗಿ ನಾಟಿ ಹಸುವಿನ ಬೆರಣಿಯನ್ನು ಬಳಸಿ ಈ ಬೆರಣಿ ಉರಿಯುವಾಗ ಬೇವಿನ ಎಲೆಗಳನ್ನು ಹಾಕುವುದರಿಂದ ಕೂಡ ಉತ್ತಮ ಪರಿಣಾಮಗಳು ಉಂಟಾಗುತ್ತದೆ.
* ಒಂದು ವೇಳೆ ಪಟ್ಟಣ ಪ್ರದೇಶದಲ್ಲಿ ಇರುವವರು ಈ ಬೆರಣಿಯ ಪ್ರಯೋಗ ಮಾಡಲು ಸಾಧ್ಯವಾಗದೆ ಇದ್ದರೆ ಪಚ್ಚ ಕರ್ಪೂರದನ್ನು ಹಚ್ಚಿ ಅದರ ಮೇಲೆ ಪಲಾವ್ ಎಲೆಗಳನ್ನು ಹಾಕಿ ಅದು ಹೊಗೆ ಬರುತ್ತದೆ. ಇದನ್ನು ಮನೆಯ ಮೂಲೆ ಮೂಲೆಗಳಿಗೂ ಓಡಾಡಿ ನಂತರ ತಂದು ಒಂದು ಕಡೆ ಇಡಿ, ಸೊಳ್ಳೆಗಳು ಮನೆ ಬಿಟ್ಟು ಹೋಗುತ್ತವೆ.
* ಕೆಲವರು ಮನೆಗಳಲ್ಲಿ ಕಾಯಿಲ್ ಗಳನ್ನು ಉಪಯೋಗಿಸುತ್ತಿರುತ್ತಾರೆ. ಆ ಕಾಯಿಲ್ ಇದ್ದರೆ ಅದರ ಟ್ಯೂಬ್ ನಲ್ಲಿ ಇರುವ ದ್ರಾವಣವನ್ನು ಚೆಲ್ಲಿ ಈಗ ನೀವೇ ಒಂದು ದ್ರಾವಣವನ್ನು ಮಾಡಿ ಹಾಕಿ. ಹೇಗೆ ಮಾಡಬೇಕು ಎಂದರೆ 2ಗ್ರಾಂ ಪಚ್ಚ ಕರ್ಪೂರ, 5 ಗ್ರಾಂ ಬೇವಿನ ಎಲೆ ಹಾಗೂ 5 ಗ್ರಾಂ ನೀಲಗಿರಿ ಎಲೆ ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ ಒಂದು ಕಾಟನ್ ಬಟ್ಟೆಗೆ ಅದನ್ನು ಹಾಕಿ ಹಿಂಡಿ ರಸ ತೆಗಿಯಬೇಕು.
ಆ ರಸವನ್ನು ಕಾಯಿಲ್ ಗೆ ಲಿಕ್ವಿಡ್ ನಂತೆ ಹಾಕಿ ಪ್ಲಗ್ ಆನ್ ಮಾಡುವುದರಿಂದ ಸೊಳ್ಳೆ ಮನೆಗೆ ಬರುವುದಿಲ್ಲ ಇದ್ದರೂ ಹೊರಟು ಹೋಗುತ್ತದೆ. ಕಾಟನ್ ಬಟ್ಟೆಯನ್ನು ಉಂಡೆ ಉಂಡೆಗಳನ್ನಾಗಿ ಮಾಡಿಕೊಂಡು ಅದನ್ನು ಬೇವಿನ ಎಣ್ಣೆಗೆ ಹದ್ದಿ ನಂತರ ಬೆಂಕಿ ಹಚ್ಚಿ ಉರಿಸುವುದರಿಂದ ಉಂಟಾಗುವ ಹೊಗೆಯಿಂದ ಕೂಡ ಸೊಳ್ಳೆಗಳು ನಾಶವಾಗುತ್ತವೆ.