ಈಗಿನ ಕಾಲದಲ್ಲಿ ಮನುಷ್ಯನ ಮರಣ ದರವನ್ನು ಗಣತಿ ಮಾಡಿದಾಗ ದೈಹಿಕ ಅನಾರೋಗ್ಯದ ಸಮಸ್ಯೆಯಿಂದಲೇ 65% ಮಂದಿ ಸಾ’ವನ್ನಪ್ಪುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಇದರಲ್ಲಿ ಹೃದಯಘಾತ ಹಾಗೂ ಸಂಬಂಧಿತ ಸಮಸ್ಯೆಯಿಂದ ಸಾ’ವ’ನಪುತ್ತಿರುವವರ ಸಂಖ್ಯೆ ನಂಬರ್ ಒನ್ ಸ್ಥಾನದಲ್ಲಿದೆ.
ನಂತರದ ಸ್ಥಾನದಲ್ಲಿ ರಕ್ತದೊತ್ತಡ, ಕ್ಯಾನ್ಸರ್, ಪಾಶ್ವ ವಾಯು ಇನ್ನಿತರ ಖಾಯಿಲೆಗಳು ಬರುತ್ತಿವೆ. ಹೃದಯ ಸಂಬಂಧಿತ ಸಮಸ್ಯೆಯಿಂದ ಮ’ರ’ಣ ಹೊಂದುತ್ತಿರುವವರ ಸಂಖ್ಯೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ 35% ಇದೆ ಎನ್ನುವುದು ಕಳವಳಕಾರಿ ವಿಷಯ.
ಹಿಂದೆಲ್ಲಾ ಮಹಿಳೆಯರಿಗೆ ಹೃದಯಾಘಾತವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿತ್ತು, ಅದರಲ್ಲೂ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಘಾತ ಆಗುವುದಿಲ್ಲ ಎಂದು ನಂಬಲಾಗುತ್ತಿತ್ತು. ಆದರೆ ಈಗ ಅದು ಕೂಡ ಹುಸಿಯಾಗಿ ನಿಧಾನವಾಗಿ ಮಹಿಳೆಯರು ಕೂಡ ಈ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಹಲವಾರು ಕಾರಣಗಳಿಂದಾಗಿ ನಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತಿವೆ ಹಾಗೂ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದೇವೆ. ಇವುಗಳಿಗೆ ಏನು ಕಾರಣ ಎನ್ನುವುದನ್ನು ತಿಳಿದುಕೊಂಡು ಬಿಟ್ಟರೆ ನಾವು ಅರ್ಧ ಕಾಯಿಲೆಯಿಂದ ಗುಣವಾದಂತೆ.
ಅದರ ಬಗ್ಗೆ ಕೆಲ ವಿಷಯವನ್ನು ಅದರಲ್ಲೂ ಒಂದು ರೂಪಾಯಿ ಕೂಡ ಖರ್ಚು ಮಾಡಿದ ನ್ಯಾಚುರಲ್ ಆಗಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದಂತೆ ಹೇಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಹಾಗೂ ಹೃದಯಘಾತ ಆಗದಂತೆ ನಾವು ಬದುಕಬಹುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
* ವಾಯು ಮಾಲಿನ್ಯ ಎನ್ನುವುದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಮಾತ್ರ ಉಂಟು ಮಾಡುವುದಿಲ್ಲ, ವಾತಾವರಣದಲ್ಲಿ 5ಮೈಗ್ರಾನ್ ಗಿಂತ ಕಡಿಮೆ ಇರುವ ವಿಷ ಕಣಗಳು ನಾವು ಉಸಿರಾಡಿದಾಗ ಆಕ್ಸಿಜನ್ ಜೊತೆ ದೇಹ ಸೇರುವುದರಿಂದ ಆ ಮೂಲಕ ರಕ್ತನಾಳಗಳಲ್ಲಿ ಸಂಚರಿಸಿ ರಕ್ತನಾಳಗಳಲ್ಲಿ ಬ್ಲಾಕ್ ಉಂಟು ಮಾಡುತ್ತದೆ. ಇದರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತಿದೆ ಹಾಗಾಗಿ ವಾತಾವರಣ ಶುದ್ಧವಾಗಿಟ್ಟುಕೊಳ್ಳಬೇಕು, ಶುದ್ಧವಾಗಿರುವ ಕಡೆ ಜೀವಿಸಬೇಕು.
* BP, ಶುಗರ್, ಕೊಲೆಸ್ಟ್ರಾಲ್, ಒಬೆಸಿಟಿ ಇವೆಲ್ಲವೂ ಕೂಡ ಹೃದಯಘಾತ ಆಗುವುದಕ್ಕೆ ಕಾರಣ ಎಂದು ನಮಗೆ ಗೊತ್ತಿದೆ. ಇವುಗಳು ಬರದಂತೆ ಮೊದಲೇ ಎಚ್ಚರವಹಿಸಿ ಆರೋಗ್ಯವನ್ನು ಕಾಯ್ದುಕೊಳ್ಳಬೇಕ. ಇವುಗಳು ಕಾಯಿಲೆಗಳಲ್ಲ ಬದಲಾಗಿ ನಾವು ರೂಡಿಸಿಕೊಂಡಿರುವ ತಪ್ಪಾದ ಆಹಾರ ಪದ್ಧತಿಯಿಂದ ಹಾಗೂ ತಪ್ಪಾದ ಜೀವನ ಶೈಲಿಯಿಂದ ನಮ್ಮ ದೇಹಕ್ಕೆ ಆಗಿರುವ ಡಿಸ್ಆರ್ಡರ್ ಗಳು ಹಾಗಾಗಿ ಇವುಗಳನ್ನು ಸರಿಪಡಿಸಿಕೊಳ್ಳಬೇಕು.
* ಈಗಿನ ಕಾಲದಲ್ಲಿ ಆಹಾರ ಪದಾರ್ಥಗಳು ಹಾಗೂ ಆಹಾರ ಪದ್ಧತಿ ಎರಡೂ ಕೂಡ ಸರಿ ಇಲ್ಲ ಆಹಾರ ಪದಾರ್ಥಗಳನ್ನು ಬೆಳೆಯುವಾಗ ಅದನ್ನು ಸಂಸ್ಕರಿಸಿ ಶೇಖರಿಸಿ ಇಡುವಾಗ ಅತಿಯಾದ ರಾಸಾಯನಿಕಗಳ ಬಳಕೆ ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು ಈ ಕಾರಣ ಮತ್ತು ನಾವು ನಮ್ಮ ನೆಲದ ಆಹಾರ ಪದ್ಧತಿಯನ್ನು ಬಿಟ್ಟು ಅವೈಜ್ಞಾನಿಕವಾದ ಆಹಾರಗಳನ್ನು ಸೇವಿಸುತ್ತಿರುವುದರಿಂದ ಕೂಡ ದೇಹದಲ್ಲಿ ಅಸಮತೋಲನಗಳು ಉಂಟಾಗಿ ಆ ಮೂಲಕ ಹೃದಯ ಸಂಬಂಧಿತ ಸಮಸ್ಯೆಗಳು ಬರುತ್ತಿವೆ ಇವುಗಳದು ಸರಿಪಡಿಸಿಕೊಳ್ಳಬೇಕು.
* ದೇಹ ಇನ್ ಆಕ್ಟಿವ್ ಆಗಿರುವುದು ಎಲ್ಲಾ ಕಾಯಿಲೆಗಳ ಮೂಲ. ದಿನಕ್ಕೆ 30 ನಿಮಿಷಗಳ ಕಾಲ ನಡೆದಾಡಿದರೆ ಹೃದಯ ಆರೋಗ್ಯವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ ಆದರೆ ಇಂದು ಯಾರಿಗೂ ಅಷ್ಟು ಸಂಯಮವಿಲ್ಲ. ಯೋಗ, ಧ್ಯಾನ, ಲಘು ವ್ಯಾಯಾಮ ಇವುಗಳನ್ನು ರೂಡಿಸಿಕೊಂಡಾಗ ಹೃದಯ ಸಂಬಂಧಿತ ಕಾಯಿಲೆಗಳನ್ನು ದೂರ ಇಡಬಹುದು.
* ಇಂದು ಎಲ್ಲರಿಗೂ ವಿಪರೀತವಾದ ಒತ್ತಡ ಇದೆ ಯಾವುದೇ ಸಮಸ್ಯೆ ಇದ್ದರೂ ಅದು ಎಷ್ಟಿದೆ ಎನ್ನುವುದನ್ನ ಪರೀಕ್ಷೆ ಮಾಡಬಹುದು ಆದರೆ ಒತ್ತಡದ ಮಟ್ಟವನ್ನು ಅಳೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಮನೆಗೆ ಸಂಬಂಧಿಸಿದ ಒತ್ತಡ ಅಥವಾ ವಿದ್ಯಾಭ್ಯಾಸದ ಒತ್ತಡ, ಉದ್ಯೋಗದ ಒತ್ತಡ ಈ ರೀತಿ ಒತ್ತಡಗಳು ಇದ್ದು ಇವು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.
* ನಿದ್ರೆ ಇಲ್ಲದೆ ರಾತ್ರಿ ಎಲ್ಲ ಕೆಲಸ ಮಾಡುವುದು ಹತ್ತು ವರ್ಷಗಳಲ್ಲಿ ಆಗುವುದನ್ನು ಒಂದೇ ವರ್ಷದಲ್ಲಿ ಮಾಡಬೇಕು ಎನ್ನುವ ಅತಿಯಾದ ಮಹತ್ವಾಕಾಂಕ್ಷೆಗಳು ವಾಸ್ತವಕ್ಕೆ ದೂರವಾದ ಆಸೆಗಳು ಇವುಗಳು ನಮ್ಮಿಂದ ನಾವೇ ತಂದುಕೊಳ್ಳುತ್ತಿರುವ ಒತ್ತಡಗಳು ಇವುಗಳನ್ನು ಅರ್ಥಮಾಡಿಕೊಳ್ಳಬೇಕು.
* ಧೂಮಪಾನ, ಮದ್ಯಪಾನ, ತಂಬಾಕು, ಗುಟ್ಕಾ ಡ್ರಗ್ ಸೇವನೆ ಇವುಗಳು ನಿಧಾನವಾಗಿ ದೇಹವನ್ನು ಕೊಲ್ಲುವ ವಿಷಯಗಳು ಹಾಗಾಗಿ ಇವುಗಳ ವ್ಯಸನದಿಂದ ದೂರ ಬರಬೇಕು.
* ಸೂರ್ಯನ ಎಳೆ ಬಿಸಲಿನಲ್ಲಿ ವಾಕ್ ಮಾಡುವುದು, ನಮ್ಮ ಸುತ್ತಲೂ ಹತ್ತು ಜನ ಆತ್ಮೀಯ ಸ್ನೇಹಿತರನ್ನು ಇಟ್ಟುಕೊಂಡು ಕಷ್ಟ ಸುಖ ಶೇರ್ ಮಾಡಿಕೊಳ್ಳುವುದು, ಮನಸಾರೆ ನಗುವುದು ಉತ್ತಮ ಪೋಷಕಾಂಶಗಳುಳ್ಳ ಆಹಾರಗಳು, ಸೊಪ್ಪು ತರಕಾರಿಗಳು ಧಾನ್ಯಗಳು ಇವಗಳನ್ನು ಸೇವಿಸುವುದು.
ಯಾವಾಗಲೂ ನಗುನಗುತ್ತಾ ಇರುವುದು ಚೆನ್ನಾಗಿ ನಿದ್ದೆ ಮಾಡುವುದು, ಆಗಾಗ ರೆಸ್ಟ್ ತೆಗೆದುಕೊಳ್ಳುವುದು ಇದೆಲ್ಲವೂ ಕೂಡ ದೇಹಕ್ಕೆ ಹಣ ಖರ್ಚು ಮಾಡದೆ ಸಿಗುವ ಸುಲಭ ಔಷಧಿಗಳು ಇವುಗಳನ್ನು ಪ್ರತಿಯೊಬ್ಬರು ಉಚಿತವಾಗಿ ಪಡೆಯಬಹುದು ಈ ಅಭ್ಯಾಸ ಮಾಡಿಕೊಂಡಾಗ ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರ ಇರಬಹುದು.