ಹೆಣ್ಣು ಮಕ್ಕಳ ದೇಹದಲ್ಲಿ ಆಗುವ ಅಷ್ಟು ಬದಲಾವಣೆಗಳು ಗಂಡಿನ ದೇಹದಲ್ಲಿ ಆಗುವುದಿಲ್ಲ. ಹೆಣ್ಣು ಬೆಳಿಯುತ್ತಾ ಹೋದಂತೆ ಆಕೆ ಋತುಮತಿಯಾದಾಗ, ಋತುಚಕ್ರ ನಡೆಯುತ್ತಿರುವಾಗ ಹಾಗೆ ಋತುಚಕ್ರ ನಿಲ್ಲುವ ಸಮಯದಲ್ಲಿ ದೇಹದಲ್ಲಿ ಹಲವಾರು ಹಾರ್ಮೋನ್ ವೇರಿಯೇಶನ್ ಗಳು ಕಂಡು ಬರುತ್ತವೆ ಹೇಗೆ ಹದಿಹರೆಯದವರಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆಯೋ ಹಾಗೆ ಮುಟ್ಟು ನಿಲ್ಲುವ ಸಮಯದಲ್ಲೂ ಕೂಡ ಮಹಿಳೆಯಲ್ಲೂ ಸಾಕಷ್ಟು ಸೂಕ್ಷ್ಮತೆಗಳು ಕಾಣಸಿಗುತ್ತವೆ.
ಈ ಲಕ್ಷಣಗಳನ್ನು perimenopause ಎಂದು ಕರೆಯುತ್ತಾರೆ. ಈ ಲಕ್ಷಣಗಳು ಐದು ವರ್ಷಗಳ ಕಾಲ ಅವರಿಗೆ ಕಾಣಿಸಿಕೊಳ್ಳುತ್ತವೆ. ಮುಟ್ಟು ನಿಲ್ಲುವ ಸಮಯದ ಹಿಂದಿನ ಐದು ವರ್ಷಗಳು ಅಂದರೆ ಸಾಮಾನ್ಯವಾಗಿ 48ನೇ ವಯಸ್ಸಿನಿಂದ 53ರ ವಯಸ್ಸಿನ ತನಕ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಅದುವರೆಗೂ ಚೆನ್ನಾಗಿ ಇದ್ದವರು ತೀರ ಸಪ್ಪೆಯಾಗಿರುತ್ತಾರೆ. ಒಂದು ದಿನ ಹೆಚ್ಚು ಊಟ ಮಾಡಿದರೆ ಒಂದು ದಿನ ಊಟವೇ ಬೇಡ ಎನ್ನುತ್ತಾರೆ. ಮೊದಲಿನಷ್ಟು ಯಾವುದರಲ್ಲೂ ಆಸಕ್ತಿ ಇಲ್ಲ, ಲವಲವಿಕೆಯಿಂದ ಇರಲು ಆಗುವುದಿಲ್ಲ. ದೇಹವು ಕೂಡ ಆಕ್ಟಿವ್ ಆಗಿ ಇರುವುದಿಲ್ಲ. ರಾತ್ರಿ ಹೊತ್ತು ಮಧ್ಯ ಮಧ್ಯ ಎಚ್ಚರ ಆಗುತ್ತಿರುತ್ತದೆ, ನಿದ್ರೆ ಸರಿಯಾಗಿ ಬರುವುದಿಲ್ಲ, ಚಿಕ್ಕ ಚಿಕ್ಕ ವಿಷಯಕ್ಕೆ ಭಯ ಪಡುತ್ತಾರೆ.
ಹೊರಗೆ ಆಗುವ ವಿಷಯಗಳು ಅವರನ್ನು ವಿಪರೀತವಿಗಿ ನೆಗೆಟಿವ್ ಆಗಿ ಚಿಂತೆ ಮಾಡುವಂತೆ ಮಾಡುತ್ತವೆ. ಸಣ್ಣ ಸಣ್ಣ ಮಾತುಗಳನ್ನು ಕೂಡ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ ಅದುವರೆಗೂ ಕುಟುಂಬದ ಎಲ್ಲರ ಬಗ್ಗೆ ಗಮನ ತೆಗೆದುಕೊಂಡು ಎಲ್ಲರ ಆರೈಕೆ ಮಾಡುತ್ತಿದ್ದವರು ಈಗ ಇದ್ದಕ್ಕಿದ್ದಂತೆ ಮಂಕಾಗಿ ಮೌನಿಗಳಾಗಿ ಬಿಡುತ್ತಾರೆ. ಒಳಗೊಳಗೆ ಆ’ತಂ’ಕ ಪಡುತ್ತಾರೆ.
ಒಬ್ಬರೇ ದುಃ’ಖಿಸುತ್ತಾರೆ, ಜೋರು ಶಬ್ದ ಆದರೆ ಯಾರಾದರೂ ಏನಾದರೂ ತಿರುಗಿಸಿ ಹೇಳಿದರೂ ಮೊದಲ ರೀತಿ ಪ್ರತಿಕ್ರಿಯಸಲಾಗದೆ ಡಿಪ್ರೆಷನ್ ಗೆ ಹೋಗುತ್ತಾರೆ. ಇದೆಲ್ಲವೂ ಕೂಡ ಅವರ ದೇಹದಲ್ಲಿ ಹಾಗೂ ಹಾರ್ಮೋನ್ ಕೊರತೆಗಳಿಂದ ಮತ್ತು ಆ ಸಮಯದಲ್ಲಿ ದೇಹಕ್ಕೆ ಬೇಕಾಗಿರುವ ಕೆಲ ಪೋಷಕಾಂಶಗಳು ಕೊರತೆ ಆದಾಗ ಉಂಟಾಗುವ ಸಾಮಾನ್ಯ ಸಮಸ್ಯೆಗಳೇ ಆಗಿವೆ.
ಈ ಲಕ್ಷಣಗಳು ಕಾಣಿಸಿಕೊಂಡಾಗ ಮಹಿಳೆಯರು ಅದನ್ನು ಅರಿತು ಅದನ್ನು ಸೂಕ್ಷ್ಮತೆಯಿಂದ ಗಮನಿಸಿಕೊಂಡು ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆ ಮಾಡಿಕೊಂಡು ದೇಹವನ್ನು ಆರಾಮವಾಗಿ ಇಟ್ಟುಕೊಂಡರೆ ಸಮಸ್ಯೆ ಇಲ್ಲ. ಆದರೆ ಅನೇಕರಿಗೆ ಇದು ಬಹಳ ತೊಂದರೆ ಕೊಡುತ್ತಿರುತ್ತದೆ. ಆಗ ಹೊರಗೆಯಿಂದ ಅವರಿಗೆ ಹಾರ್ಮೋನ್ಸ್ ಸಪ್ಲಿಮೆಂಟ್ ಕೊಡಬೇಕಾಗುತ್ತದೆ.
ಕೆಲವರಿಗೆ ಆ ಸಮಯದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಥೆರಪಿ ಮಾಡಿದರೆ ಇನ್ನು ಕೆಲವರಿಗೆ ಪ್ರೊಜೆಸ್ಟಿರಾನ್ ಪಿಲ್ಸ್ ಅವಶ್ಯಕತೆ ಕೂಡ ಇರುತ್ತದ. ಈ ಥೆರಪಿಯ ಅವಶ್ಯಕತೆ ಇಲ್ಲದವರಿಗೆ ಮಾಡಿದರೆ ಎಷ್ಟು ತೊಂದರೆಯೂ ಹಾಗೆ ಅವಶ್ಯಕತೆ ಇದ್ದವರಿಗೆ ಸಿಗದೇ ಹೋದರೆ ಅಷ್ಟೇ ಪ್ರಮಾಣದ ತೊಂದರೆ ಇದೆ.
ಹಾಗಾಗಿ ಈ ಸಮಸ್ಯೆಗಳಾದಾಗ ಮಹಿಳೆಯರು ಯಾವುದೇ ಮುಜುಗರ ಇಲ್ಲದೆ ಹತ್ತಿರದಲ್ಲಿರುವ ಮಹಿಳಾ ವೈದ್ಯರನ್ನು ಸಂಪರ್ಕಿಸಿ, ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಅವರಿಗೆ ಹಾರ್ಮೋನ್ಸ್ ಅವಶ್ಯಕತೆ ಇದ್ದರೆ ಕಿಡ್ನಿ ಫಂಕ್ಷನ್, ಲಿವರ್ ಫಂಕ್ಷನ್ , ಬ್ಲೆಡ್ ಫ್ಲೋ ಮುಂತಾದ ಅಂಗಗಳ ಕಾರ್ಯ ಚಟುವಟಿಕೆ ಬಗ್ಗೆ ಟೆಸ್ಟ್ ಮಾಡಿ ತಿಳಿದುಕೊಂಡು ಅವರ ದೇಹವನ್ನು ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಯನ್ನು ವೈದ್ಯರು ಸೂಚಿಸುತ್ತಾರೆ.
ಮಲ್ಟಿ ವಿಟಮಿನ್ ಡಿಫಿಷಿಯನ್ಸಿ, ಕ್ಯಾಲ್ಸಿಯಂ ಮೆಗ್ನೇಶಿಯಂ ಝಿಂಕ್ ಮುಂತಾದ ಪೋಷಕಾಂಶಗಳ ಕೊರತೆಯೂ ಇರುತ್ತದೆ ಆಗ ಅದರ ಸಪ್ಲಿಮೆಂಟ್ ಕೂಡ ಕೊಡಬೇಕಾಗುತ್ತದೆ ಅಥವಾ ಹೊರಗಿನಿಂದ ಊಟ ತಿಂಡಿ ಉತ್ತಮ ವಾತಾವರಣ ವ್ಯಾಯಾಮ ಸೂರ್ಯನ ಬೆಳಕು ಇವುಗಳಿಂದ ಇದರ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸೂಚಿಸಲಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಆ ಸಮಯದಲ್ಲಿ ಕುಟುಂಬದ ಸಹಕಾರ ಸಾಂತ್ವನ ಕೂಡ ಮುಖ್ಯ ನಿಮ್ಮ ಮನೆಯ ಮಹಿಳೆಯರಿಗೆ ಈ ಸಮಸ್ಯೆ ಇದ್ದರೆ ಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗಲು ತಿಳಿಸಿ.