ಐಟಿ ಹಬ್ ಬೆಂಗಳೂರಿನಲ್ಲೊಂದು ಐತಿಹಾಸಿಕ ದೇವಸ್ಥಾನವಿದೆ. ದಿನದ 24 ಗಂಟೆಗಳ ಕಾಲ ಸದ್ದು ಗದ್ದಲದ ನಡುವೆ ಕಳೆದು ಹೋಗಿರುವ ಮಂದಿಗೆ ಪುರಾಣ ಪ್ರಸಿದ್ಧವಾದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಟ್ಟವರು ಬೇರೊಂದು ಲೋಕಕ್ಕೆ ಹೋದ ಅನುಭವವನ್ನು ಪಡೆಯುತ್ತಾರೆ. ಅಲ್ಲದೆ ಈ ದೇವಸ್ಥಾನದಲ್ಲಿ ಬಹಳ ವಿಶೇಷಗಳಿವೆ.
ಬೆಂಗಳೂರಿನಲ್ಲಿ ತೀರ್ಥ ಸ್ಥಾನ ಮಾಡಿಸುವ ಏಕೈಕ ದೇವಸ್ಥಾನ ಇದಾಗಿದ್ದು ಈ ದೇವಸ್ಥಾನದಲ್ಲಿ ಮನುಷ್ಯನ ಸರ್ವೇ ಸಾಮಾನ್ಯ ಸಮಸ್ಯೆಗಳಾದ ವಿವಾಹ ವಿಳಂಬ, ಸಂತಾನ ವಿಳಂಬ, ವ್ಯಾಪಾರ ವ್ಯವಹಾರದಲ್ಲಿ ತೊಂದರೆಗಳು ಇನ್ನು ಮುಂತಾದ ಎಲ್ಲಾ ರೀತಿಯ ಸಮಸ್ಯೆಗಳಿಗೂ ಸರ್ವ ಅನಿಷ್ಠಗಳಿಗೂ ಪರಿಹಾರ ಪೂಜೆಗಳು ಇವೆ ಮತ್ತು ಇಲ್ಲಿ ಹೇಳುವಂತಹ ನಾಡಿ ಭವಿಷ್ಯ ಬಹಳ ವಿಶೇಷವಾಗಿದ್ದು.
ಇದನ್ನು ಕೇಳಿ ಪರಿಹಾರ ಮಾಡಿಕೊಂಡ ಎಲ್ಲರೂ ಕೂಡ ಅವರ ಇಷ್ಟಾರ್ಥಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಅನೇಕ ಉದಾಹರಣೆಗಳು ಇವೆ. ಯಲಹಂಕ ಬಳಿ ಇರುವ ಅಟ್ಟೂರಿನ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ಸನ್ನಿಧಿ ಇದಾಗಿದ್ದು ಇಲ್ಲಿರುವ ಶಿವಲಿಂಗ ದ್ವಾಪರ ಯುಗದಲ್ಲಿ ಪ್ರತಿಷ್ಠಾಪನೆಯಾಗಿತ್ತು ಎಂದು ಪುರಾಣ ಮೂಲಗಳು ತಿಳಿಸುತ್ತವೆ.
ಮೂರು ಬಾರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದ್ದು ಚೋಳರ ಕಾಲದಲ್ಲಿ ರಾಜ ರಾಜ ಚೋಳ, ರಾಜೇಂದ್ರ ಚೋಳ, ಕರಿಕಾಳ ಚೋಳರು ಒಮ್ಮೆ ನಂತರ ನಾಡಪ್ರಭು ಕೆಂಪೇಗೌಡ ಅವರು ಯಲಹಂಕದ ಆಡಳಿತ ವಹಿಸಿಕೊಂಡಿದ್ದ ಸಮಯದಲ್ಲಿ ಮತ್ತೊಮ್ಮೆ ಇತ್ತೀಚೆಗೆ ಊರಿನ ಗ್ರಾಮಸ್ಥರಲ್ಲಿ ಸೇರಿ ಶಿಥಿಲಾವಸ್ಥೆಗೆ ಸೇರಿದ್ದ ದೇವಸ್ಥಾನಕ್ಕೆ ಮರು ಜೀವ ತುಂಬಿದ್ದಾರೆ.
ಇಂದು ಈ ದೇವಸ್ಥಾನದ ಖ್ಯಾತಿ ಎಷ್ಟು ಬೆಳಗಿದೆ ಎಂದರೆ ಬೆಂಗಳೂರಿಗರು ಮಾತ್ರವಲ್ಲದೆ ನಾಡಿನ ಮೂಲೆ ಮೂಲೆಗಳಿಂದ ದೇವಸ್ಥಾನಕ್ಕೆ ಭಕ್ತಾದಿಗಳು ಬರುತ್ತಿದ್ದಾರೆ. ವಿವಾಹ ಕಾರ್ಯ ಕೂಡಿ ಬರದೆ ಇದ್ದವರಿಗೆ ಇಲ್ಲಿ ಅರ್ಧನಾರೀಶ್ವರ ಅಭಿಷೇಕ ಮಾಡಿ ಕಂಕಣ ಕಟ್ಟಲಾಗುತ್ತದೆ. ಈ ರೀತಿ ಮಾಡಿಸಿಕೊಂಡು ಹೋದ ಕೆಲವೇ ದಿನಗಳಲ್ಲಿ ಲಗ್ನ ಕೂಡಿಬಂದಿರುವ ಉದಾಹರಣೆಗಳು ನೂರಾರಿದೆ.
ಅದೇ ರೀತಿ ಮಕ್ಕಳಾಗದೆ ಇದ್ದವರಿಗೆ ಅನ್ನದಾನದ ವಿಶೇಷ ಪೂಜೆ ಹೇಳಲಾಗುತ್ತದೆ. ಇದಿಷ್ಟೇ ಅಲ್ಲದೆ ಅನಾರೋಗ್ಯ ಹಣ ಆಸ್ತಿ ಸಮಸ್ಯೆ ಉದ್ಯೋಗದಲ್ಲಿ ತೊಂದರೆ ಮಾನಸಿಕ ಕಾಯಿಲೆಗಳು ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕೂಡ ಈ ದೇವಸ್ಥಾನಕ್ಕೆ 9 ಸೋಮವಾರದಂದು ಅಥವಾ 5 ತ್ರಯೋದಶಿಗಳಂದು ಪ್ರದೋಷ ಸಮಯದಲ್ಲಿ ಬಂದು ತೀರ್ಥ ಸ್ನಾನ ಮಾಡಿ ದೇವಸ್ಥಾನದ ಸುತ್ತ 21 ಪ್ರದರ್ಶನ ಹಾಕಿ ತಮ್ಮ ಕೈಲಾದ ಹರಕೆ ಕಟ್ಟಿಕೊಂಡು ಹೋದರೆ ಆ ಕಾರ್ಯ ನೂರಕ್ಕೆ ನೂರರಷ್ಟು ಜರಗುತ್ತದೆ ಎನ್ನುವುದು ಇಲ್ಲಿಗೆ ನಡೆದುಕೊಳ್ಳುವ ಭಕ್ತಾದಿಗಳ ನಂಬಿಕೆ.
ಇಲ್ಲಿನ ಮತ್ತೊಂದು ವಿಶೇಷ ಸಂಗತಿಯೇನೆಂದರೆ, ನಾಡಿಯನ್ನು ನೋಡಿ ಇಲ್ಲಿ ಶಾಸ್ತ್ರ ಹೇಳಲಾಗುತ್ತದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರದಂದು ಬೆಳಗ್ಗೆ 8.00 ರಿಂದ ಮಧ್ಯಾಹ್ನ 2.00 ರವರೆಗೆ ಈ ದೇವಸ್ಥಾನದ ಆವರಣದಲ್ಲಿ ಪಾರಂಪರಗತವಾಗಿ ನಡೆಸಿಕೊಂಡು ಬಂದಿರುವ ಪುರೋಹಿತರ ಕುಟುಂಬದವರು ನಾಡಿ ನೋಡಿ ಶಾಸ್ತ್ರ ಹೇಳುತ್ತಾರೆ ತಮಗೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ಇಲ್ಲಿ ಮುಕ್ತವಾಗಿ ಹೇಳಿಕೊಳ್ಳಬಹುದು.
ಆ ಕಾರ್ಯ ಆಗುತ್ತಿದೋ ಇಲ್ಲವೋ ಅಥವಾ ಏನು ವಿಜ್ಞಗಳಿವೆ ಏನನ್ನು ಮಾಡಿದರೆ ಆ ಕಾರ್ಯ ಈಡೇರುತ್ತದೆ ಅಥವಾ ಪ್ರಯತ್ನ ಪಡಬೇಕೋ ಬೇಡವೋ ಎನ್ನುವುದನ್ನು ನಾಡಿ ಪರೀಕ್ಷಿಸಿಯೇ ಹೇಳಲಾಗುತ್ತದೆ. ಈ ದೇವಸ್ಥಾನದ ಕುರಿತು ಇನ್ನಷ್ಟು ರೋಚಕ ವಿಷಯಗಳನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ತಪ್ಪದೆ ಒಮ್ಮೆಯಾದರೂ ಈ ದೇವಸ್ಥಾನಕ್ಕೆ ಭೇಟಿಕೊಟ್ಟು ಶ್ರೀ ಕಾಶಿ ವಿಶ್ವನಾಥನ ದರ್ಶನ ಪಡೆದ ಪಾವನರಾಗಿ.