ನಾವು ಪ್ರತಿನಿತ್ಯ ಮಾಡುವಂತಹ ಕೆಲವೊಂದಷ್ಟು ತಪ್ಪುಗಳಿಂದ ನಾವು ನಮ್ಮ ಜೀವನದಲ್ಲಿ ಹಲವಾರು ರೀತಿಯ ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸುತ್ತಿರುತ್ತೇವೆ ಆದರೆ ನಾವು ಯಾವ ರೀತಿಯ ತಪ್ಪುಗಳನ್ನು ಮಾಡುತ್ತೇವೆ ಎನ್ನುವುದನ್ನು ನಾವು ಆಲೋಚನೆ ಮಾಡುವುದಿಲ್ಲ ಬದಲಿಗೆ ನಮಗೆ ತಿಳಿಯದ ಹಾಗೆ ಹಲವಾರು ರೀತಿಯ ತಪ್ಪುಗಳನ್ನು ನಾವು ಮಾಡುತ್ತಿರುತ್ತೇವೆ.
ಆದ್ದರಿಂದ ಅಂತಹ ಕೆಲವೊಂದಷ್ಟು ತಪ್ಪು ಗಳನ್ನು ನಾವು ಸರಿಪಡಿಸಿಕೊಂಡರೆ ನಮ್ಮ ಜೀವನದಲ್ಲಿ ನಾವು ಅಂದು ಕೊಂಡ ರೀತಿಯಾಗಿ ಬದುಕಬಹುದಾಗಿದೆ. ಹಾಗಾದರೆ ಈ ದಿನ ಯಾವ ಒಂದು ಕಾರಣದಿಂದ ನಾವು ನಮ್ಮ ಜೀವನದಲ್ಲಿ ಯಾವುದೇ ರೀತಿಯ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಈ ರೀತಿಯ ಪರಿಸ್ಥಿತಿಯನ್ನು ಅನುಭವಿಸುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳು ಏನು ಎನ್ನುವುದನ್ನು ತಿಳಿದುಕೊಳ್ಳೋಣ.
ಪುರುಷರಿಗೆ ಕಿವಿ ಮಾತು…! 2 ನಿಮಿಷ ಬಿಡುವು ಮಾಡಿಕೊಂಡು ನೋಡಿ.!
ಹೌದು ಮೊದಲೇ ಹೇಳಿದಂತೆ ನಾವು ಮಾಡುವಂತಹ ಕೆಲವೊಂದು ತಪ್ಪಿನಿಂದ ನಮ್ಮ ಜೀವನದಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ. ಹಾಗಾದರೆ ನಾವು ಮಾಡುವಂತಹ ತಪ್ಪುಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
* ಮನೆಯಲ್ಲಿರುವಂತಹ ಹಿರಿಯರಿಗೆ ನಾವು ಗೌರವವನ್ನು ಕೊಡದೆ ಇರುವುದು.
* ಹೆಣ್ಣು ಮಕ್ಕಳನ್ನು ಕೆಟ್ಟ ಮಾತಿನಿಂದ ನಿಂದಿಸುವುದು.
* ದೇವರಿಗೆ ಯಾವುದೇ ರೀತಿಯ ಪೂಜೆಯನ್ನು ಮಾಡದೆ ಇರುವುದು.
* ಹೊತ್ತು ಮುಳುಗಿದ ಮೇಲೆ ಮನೆಯಲ್ಲಿ ಕಸಗೂಡಿಸುವುದು.
ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡಬಹುದು.!
* ನಾವು ಊಟ ಮಾಡುವಂತಹ ಸಮಯದಲ್ಲಿ ಊಟ ಮುಗಿದ ಮೇಲೆ ನಮ್ಮ ಕೈ ಬೆರಳುಗಳನ್ನು ಚೀಪುವುದು.
* ಮುಸ್ಸಂಜೆ ಸಮಯ ಅಥವಾ ಕತ್ತಲಾದ ಮೇಲೆ ತಲೆಯನ್ನು ಬಾಚುವುದರಿಂದ.
* ಶೌಚಾಲಯ ಅಥವಾ ಬಚ್ಚಲು ಮನೆಯ ಬಾಗಿಲನ್ನು ಸದಾ ಕಾಲ ತೆಗೆಯುವುದರಿಂದಲೂ ಕೂಡ ನಾವು ನಮ್ಮ ಜೀವನದಲ್ಲಿ ಹೆಚ್ಚಿನ ದಾರಿದ್ರ್ಯವನ್ನು ಅನುಭವಿಸುತ್ತೇವೆ ಎಂದು ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ.
* ಮನೆಯಲ್ಲಿ ಪೂಜೆ ಮಾಡಿದ ತಕ್ಷಣ ತಲೆಯನ್ನು ಬಾಚುವುದು.
* ಅಡುಗೆ ಮನೆಯ ಬಳಿ ಮೂತ್ರ ವಿಸರ್ಜನೆ ಮಾಡುವುದು.
* ಹೊತ್ತು ಮುಳುಗಿದ ಮೇಲೂ ಮನೆಯಲ್ಲಿ ದೀಪ ಬೆಳಗಿಸದೆ ಕತ್ತಲಾಗಿ ಬಿಡುವುದು.
* ಚಪ್ಪಲಿಯನ್ನು ಬೋರಲು ಹಾಕುವುದು.
* ಮನೆಯಲ್ಲಿ ಸದಾ ಕಾಲ ಒಂದಲ್ಲ ಒಂದು ವಿಚಾರವಾಗಿ ಜಗಳ ಆಡುವುದು.
ಈ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಕರ ಬಳಿ ಹೇಳಬೇಡಿ.!
* ಮನೆಯಲ್ಲಿರುವಂತಹ ಸದಸ್ಯರ ಮೇಲೆ ಕೆಟ್ಟ ಪದಗಳನ್ನು ಬಳಸಿ ಬಯ್ಯುವುದು.
* ಮಧ್ಯಾಹ್ನದ ಸಮಯದಲ್ಲಿ ನಿದ್ದೆ ಮಾಡುವುದು.
* ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಅಲ್ಲಲ್ಲಿ ಕಸ ಧೂಳು ಇದ್ದರೂ ಕೂಡ ನಾವು ನಮ್ಮ ಜೀವನದಲ್ಲಿ ಯಾವುದೇ ರೀತಿಯ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
* ಬೆಳಗಿನ ಸಮಯ ಸೂರ್ಯೋದಯ ಆದ ನಂತರವೂ ಹೆಚ್ಚು ಸಮಯದವರೆಗೆ ನಿದ್ರೆ ಮಾಡುವುದು.
* ನಾವು ಸಂಪಾದನೆ ಮಾಡುವುದಕ್ಕಿಂತ ಹೆಚ್ಚು ಖರ್ಚನ್ನು ಮಾಡುವುದು.
* ಮನೆಯಲ್ಲಿ ಒಡೆದ ಅಥವಾ ತೂತಾದ ಪಾತ್ರೆಗಳನ್ನು ಅಡುಗೆಗೆ ಉಪಯೋಗಿಸುವುದು.
* ಹರಿದಿರುವಂತಹ ಹಾಗೂ ಸುಟ್ಟಿರುವಂತಹ ಬಟ್ಟೆಗಳನ್ನು ಧರಿಸುವುದರಿಂದ.
ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಶಾಸ್ತ್ರಗಳು ಏನು ಹೇಳುತ್ತವೆ.!
* ಮನೆಯಲ್ಲಿರುವಂತಹ ಪೊರಕೆಯನ್ನು ತುಳಿಯುವುದರಿಂದ. ಪೊರಕೆ ಯು ತಾಯಿ ಲಕ್ಷ್ಮಿ ದೇವಿಯ ಸ್ವರೂಪವಾಗಿದ್ದು ಅದನ್ನು ನಾವು ಯಾರು ತುಳಿಯದ ಹಾಗೂ ಯಾರಿಗೂ ಕಾಣಿಸದ ಹಾಗೆ ಮನೆಯಲ್ಲಿ ಇಡುವುದು ತುಂಬಾ ಒಳ್ಳೆಯದು.
* ತಲೆಗೆ ಹಾಕಿಕೊಳ್ಳುವಂತಹ ದಿಂಬಿನ ಮೇಲೆ ಕುಳಿತುಕೊಳ್ಳುವುದು.
* ಹೊಸ್ತಿಲಿನ ಮೇಲೆ ಕುಳಿತು ಕೊಳ್ಳುವುದು. ಹೊಸ್ತಿಲಿನಲ್ಲಿ ಎಲ್ಲಾ ದೇವಾನು ದೇವತೆಗಳು ನೆಲೆಸಿರುತ್ತಾರೆ ಎನ್ನುವಂತಹ ಮಾತು ಇದೆ. ಆದ್ದರಿಂದ ಹೊಸ್ತಿಲನ್ನು ನಾವು ದೇವರ ಸ್ವರೂಪ ಎಂದು ಪೂಜಿಸುತ್ತೇವೆ ಆದ್ದರಿಂದ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದಾಗಲಿ ನಮ್ಮ ಕಾಲುಗಳನ್ನು ಹೊಸ್ತಿಲಿನ ಮೇಲೆ ಇಡುವುದಾಗಲಿ ಮಾಡಬಾರದು.
* ಮಂಗಳವಾರ ಮತ್ತು ಶುಕ್ರವಾರ ಮನೆಯಲ್ಲಿರುವಂತಹ ಧೂಳನ್ನು ತೆಗೆಯುವುದು.