ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಗಂಡನಿಂದ ಕೆಲವೊಂದಷ್ಟು ಆಸೆ ಆಕಾಂಕ್ಷೆಗಳನ್ನು ಪಡೆಯಲು ಬಯಸುತ್ತಾಳೆ ಹೌದು. ಅದು ಕೇವಲ ಪ್ರೀತಿ ಮಾತ್ರವಲ್ಲದೆ ಕೆಲವೊಂದು ಸಂದರ್ಭದಲ್ಲಿ ಅವಳನ್ನು ಯಾವ ರೀತಿ ಯಾಗಿ ನೋಡಿಕೊಳ್ಳಬೇಕು ಅವಳ ಜೊತೆ ಯಾವ ರೀತಿ ಮಾತನಾಡ ಬೇಕು ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಹೆಂಡತಿ ತನ್ನ ಗಂಡನಿಂದ ಇದೇ ರೀತಿಯಾಗಿ ಅವರು ಇರಬೇಕು ಎಂದು ಇಷ್ಟ ಪಡುತ್ತಾಳೆ.
ಆದರೆ ಕೆಲವೊಂದಷ್ಟು ಗಂಡಂದಿರು ಇಂತಹ ಯಾವುದೇ ರೀತಿಯ ವಿಚಾರ ಗಳನ್ನು ಅವರು ಹೆಂಡತಿಯ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಬದಲಿಗೆ ಇಲ್ಲ ಸಲ್ಲದ ಮಾತುಗಳ ಬಗ್ಗೆ ಅವಳನ್ನು ಹೀಯಾಳಿಸುವ ಬಗ್ಗೆ ಹೀಗೆ ಒಂದೊಂದು ನೋವನ್ನು ಉಂಟು ಮಾಡುತ್ತಿರುತ್ತಾರೆ ಆದರೆ ಆ ರೀತಿ ಮಾಡುವುದರಿಂದ ಅವಳ ಮನಸ್ಸು ಮತ್ತಷ್ಟು ಹಾಳಾಗುತ್ತದೆ.
ಮೊಸರಿನ ಜೊತೆ ತಿನ್ನಬಾರದ 5 ವಸ್ತುಗಳು.!
ಅದರ ಬದಲು ಹೆಂಡತಿಯಾದವಳು ತನ್ನ ಗಂಡನ ಬಳಿ ಯಾವುದನ್ನು ಪ್ರೀತಿಯಿಂದ ಪಡೆಯಲು ಇಷ್ಟಪಡುತ್ತಾಳೆ ಎಂದು ತಿಳಿದುಕೊಂಡು. ಅದನ್ನು ಅವಳಿಗೆ ಕೊಡುವುದು ಬಹಳ ಮುಖ್ಯ ಹಾಗೂ ಅದರಿಂದ ಅವಳು ತುಂಬಾ ಸಂತೋಷ ಪಡುತ್ತಾಳೆ ಎಂದೇ ಹೇಳಬಹುದು. ಹಾಗಾದರೆ ಒಬ್ಬ ಹೆಣ್ಣು ತನ್ನ ಗಂಡನಿಂದ ಯಾವುದೆಲ್ಲ ವಿಚಾರವಾಗಿ ತನ್ನ ಗಂಡ ನನ್ನನ್ನು ಈ ರೀತಿಯಾಗಿ ನೋಡಿಕೊಳ್ಳಬೇಕು ಎಂದು ಇಷ್ಟಪಡುತ್ತಾಳೆ ಎನ್ನುವ ವಿಚಾರವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
* ಒಬ್ಬ ಹೆಣ್ಣನ್ನು ಗಂಡ ಆದವನು ಬೇರೆಯವರ ಮುಂದೆ ಬಯ್ಯ ಬಾರದು.
* ಹೆಂಡತಿಯ ಮುಂದೆ ಬೇರೆ ಹೆಣ್ಣಿನ ಬಗ್ಗೆ ಮಾತನಾಡುತ್ತಾ ಬೇರೆ ಹೆಣ್ಣನ್ನು ಹೊಗಳಬಾರದು. ಇದರಿಂದ ಅವಳ ಮನಸ್ಸಿಗೆ ಬಹಳಷ್ಟು ನೋವು ಉಂಟಾಗುತ್ತದೆ.
* ಬೇರೆಯವರ ಹೆಂಡತಿ ಸುಂದರವಾಗಿದ್ದಾಳೆ ಎಂದು ನೆನೆಯದೆ ಸಿಕ್ಕಿರುವುದರಲ್ಲೇ ಸಂತೋಷ ಪಡಬೇಕು.
ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಮುಖ್ಯ ಕಾರಣಗಳು..?
* ಮನಸ್ಸಿಗೆ ನೋವಾಗುವಂತೆ ಎಂದಿಗೂ ಮಾತನಾಡಬಾರದು.
* ಊಟದಲ್ಲಿ ಕೊರತೆಯನ್ನು ಹೇಳಬಾರದು.
* ಮನೆಯಲ್ಲಿ ಹೆಂಡತಿಯ ಜೊತೆ ಜಗಳ ಮಾಡಿ ಸಮಾಧಾನ ಮಾಡದೇ ಇರಬಾರದು.
* ಚಿಕ್ಕ ಚಿಕ್ಕ ಸಹಾಯಗಳನ್ನು ಮಾಡಬೇಕು ಚಿಕ್ಕ ಚಿಕ್ಕ ಆಸೆಗಳನ್ನು ಈಡೇರಿಸಬೇಕು.
* ನನಗಿರುವ ಕಷ್ಟವು ನನ್ನ ಹೆಂಡತಿಗೂ ಇರುತ್ತದೆ ಎಂದು ಅರಿತುಕೊಳ್ಳ ಬೇಕು.
* ಕೋಪ ಮಾಡಿಕೊಳ್ಳಬಾರದು ಮಕ್ಕಳ ಮುಂದೆ ಬೈಯಬಾರದು.
* ಯಾವ ಜಾಗದಲ್ಲಿಯೂ, ಯಾರ ಮುಂದೆಯೂ ಹೆಂಡತಿಯನ್ನು ನಿಂದಿಸಬಾರದು.
* ಅಮ್ಮನ ಬಳಿ ತೋರಿಸುವ ಪ್ರೀತಿ ಹೆಂಡತಿಯ ಬಳಿಯೂ ತೋರಿಸ ಬೇಕು.
* ಹುಷಾರಿಲ್ಲದೇ ಇದ್ದಾಗ ಹತ್ತಿರವಿದ್ದು ನೋಡಿಕೊಳ್ಳಬೇಕು.
* ಮುಖ್ಯವಾದ ಸಮಾರಂಭಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು.
ಗೃಹಿಣಿಯರಿಗೆ ಉತ್ತಮ ಅಡುಗೆಯ ಟಿಪ್ಸ್ ಗಳು.!
* ಪ್ರೀತಿ ಮತ್ತು ಸಂತೋಷದಿಂದ ಇರಬೇಕು.
* ಮುಖ್ಯವಾದ ವಿಷಯಗಳನ್ನು ಮುಚ್ಚಿಡದೇ ಎಲ್ಲವನ್ನು ಹೆಂಡತಿಯ ಬಳಿ ಹೇಳಬೇಕು.
* ಮುಚ್ಚು ಮರೆ ಇರಕೂಡದು. ಹೆಂಡತಿಯಲ್ಲಿ ನಂಬಿಕೆ ಇಡಬೇಕು.
* ಕುಟುಂಬದ ಮುಖ್ಯವಾದ ವಿಷಯಗಳನ್ನು ಹೆಂಡತಿಯ ಜೊತೆಗೂಡಿ ಆಲೋಚಿಸಬೇಕು
* ವರ್ಷಕ್ಕೆ ಒಂದು ಸಲವಾದರೂ ಪ್ರವಾಸಕ್ಕೆ ಕರೆದುಕೊಂಡು ಹೋಗ ಬೇಕು.
* ಹೇಳುವುದನ್ನು ಸಮಾಧಾನವಾಗಿ ಕೇಳಬೇಕು.
* ಹೆಂಡತಿಯ ಮಾತನ್ನು ಗೌರವಿಸಬೇಕು.
* ವಾರಕ್ಕೆ ಒಂದು ಸಲವಾದರೂ ಮನಸ್ಸು ಬಿಚ್ಚಿ ಮಾತನಾಡಬೇಕು.
* ಮಕ್ಕಳು ಮತ್ತು ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು.
ಯೌವನವನ್ನು ಕಾಪಾಡುವ 10 ಆಹಾರಗಳು.!
ಹೀಗೆ ಮೇಲೆ ಹೇಳಿದಂತಹ ಇಷ್ಟು ವಿಚಾರಗಳನ್ನು ಬಹಳ ಎಚ್ಚರಿಕೆ ಯಿಂದ ಅನುಸರಿಸುವುದು ಒಳ್ಳೆಯದು ಇದರಿಂದ ನಿಮ್ಮ ಹೆಂಡತಿ ಖುಷಿಯಾಗಿ ಇರುತ್ತಾಳೆ ಹಾಗೂ ಯಾವುದೇ ಎಂತದ್ದೇ ಕಷ್ಟದ ಪರಿಸ್ಥಿತಿ ಇದ್ದರೂ ಅವಳು ನೊಂದಿಕೊಳ್ಳುವುದಿಲ್ಲ ಬದಲಿಗೆ ಆ ಪರಿಸ್ಥಿತಿಗೆ ಹೊಂದಿಕೊಂಡು ನಿಮ್ಮ ಜೊತೆ ಪ್ರೀತಿ ವಿಶ್ವಾಸದಿಂದ ಇರುತ್ತಾಳೆ ಹಾಗೂ ನಿಮ್ಮ ಕುಟುಂಬ ನಿಮ್ಮ ಮಕ್ಕಳಿಗಾಗಿಯೇ ತನ್ನ ಜೀವನ ಪೂರ್ತಿ ದುಡಿಯುತ್ತಾಳೆ ಎಂದೇ ಹೇಳಬಹುದು.