ಪ್ರತಿಯೊಂದು ಹೆಣ್ಣು ಕೂಡ ನಾನು ಶ್ರೀಮಂತಿಕೆಯಲ್ಲಿ ಬದುಕಬೇಕು ನನಗೆ ಇಷ್ಟು ಐಶ್ವರ್ಯ ಬೇಕು ಎಂದು ಕೇಳುವುದಿಲ್ಲ ಅವಳು ಕೇಳುವುದು ಕೇವಲ ಪ್ರೀತಿ ಮಾತ್ರ. ಹೌದು ತನ್ನ ಗಂಡನಾಗಿ ಬರುವವನು ನನ್ನನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡರೆ ಸಾಕು ನನಗೆ ಯಾವುದೇ ರೀತಿಯ ಚಿನ್ನ ವಜ್ರ ಯಾವುದು ಬೇಡ ಎನ್ನುವ ಪರಿಸ್ಥಿತಿಯಲ್ಲಿ ಪ್ರತಿಯೊಂದು ಹೆಣ್ಣು ಕೂಡ ಇರುತ್ತದೆ ಹಾಗೂ ಅದು ಅವರ ಬಯಕೆಯೂ ಕೂಡ ಆಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಆದರೆ ಪ್ರತಿಯೊಬ್ಬ ಹೆಣ್ಣು ಕೂಡ ಇದೇ ರೀತಿಯಾಗಿ ಇರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದಷ್ಟು ಜನ ಹೆಣ್ಣು ಮಕ್ಕಳು ಹಣ ಆಸ್ತಿ ಗಾಗಿಯೇ ಪ್ರೀತಿಯನ್ನು ಮಾಡುತ್ತಾರೆ. ಆದರೆ ಹೆಚ್ಚಿನ ಹೆಣ್ಣು ಮಕ್ಕಳು ನಮ್ಮ ಜೀವನದಲ್ಲಿ ಯಾವುದೇ ರೀತಿಯ ಎಷ್ಟೇ ಕಷ್ಟ ಬಂದರೂ ಆ ಒಂದು ಸಂದರ್ಭದಲ್ಲಿ ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುವಂತಹ ಒಂದು ಜೀವ ಜೊತೆಗಿದ್ದರೆ ಸಾಕು ಎಂದು ಹಂಬಲಿಸುತ್ತಾಳೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಜೀವನದಲ್ಲಿ ಯಾವ ರೀತಿಯಾದಂತಹ ಕೆಲವೊಂದಷ್ಟು ಬಯಕೆಯನ್ನು ಹೊಂದಿರುತ್ತಾಳೆ ಅಂದರೆ ಅವಳು ಯಾವ ಕೆಲವು ವಿಚಾರವಾಗಿ ಇಷ್ಟಪಡುತ್ತಾಳೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ಅವಳನ್ನು ಕಣ್ಣೀರು ಹಾಕಿಸದೇ. ಮನಸ್ಸನ್ನ ಅರಿತೂ ಕಣ್ಣರೆಪ್ಪೆ ತರಾ ನೋಡಿಕೊಳ್ಳುವ ಗಂಡಸಿಗಬೇಕು ಅಂತ! ಒಂದುವೇಳೆ ಹಾಗೆ ನೋಡಿ ಕೊಳ್ಳುವ ಗಂಡ ಸಿಕ್ಕರೇ ಎಷ್ಟೇ ಕಷ್ಟವನ್ನಾದರೂ ಅವಳೂ ಸಹಿಸಿ ಕೊಳ್ಳುತ್ತಾಳೆ. ಅದೆಷ್ಟೇ ನೋವನ್ನಾದರೂ ನಗುತ್ತಾ ಸ್ವೀಕರಿಸುತ್ತಾಳೆ.
* ಅವಳ ಬಗ್ಗೆ ನೂರು ಜನ. ನೂರು ತರಾ ಮಾತಾಡಲೀ ನಾನಿದ್ದೇನೆ ಭಯಪಡಬೇಡ ಎನ್ನುವ ಆ ಒಂದು ಜೀವ ಸದಾ ಅವಳ ಜೊತೆಗಿದ್ದೂ ಅಪ್ಪಿ ಸಂತೈಸಿದರೇ ಸಾಕು.
ಬಡತನ ಹಾಗೂ ದಾರಿದ್ರ್ಯಕ್ಕೆ ಇದೇ ಕಾರಣ…!
* ಆ ನೂರು ಜನರ ನೂರು ಮಾತುಗಳನ್ನೂ ಸಹಾ ಧೈರ್ಯದಿಂದ ಎದು ರಿಸಿ ಬದುಕಿ ತೋರಿಸುತ್ತಾಳೆ.
* ಅದಕ್ಕೆ ಅನ್ನೋದು ಹೆಣ್ಣಿನ ಮನಸ್ಸಿಗೆ ಬೇಲೇನೆ ಕಟ್ಟೋಕಾಗಲ್ಲ
* ಮೂರು ಗಂಟು ಹಾಕಿದ ತಕ್ಷಣ ತನ್ನ ತಂದೆ ತಾಯಿಯನ್ನು ಮತ್ತು ತನ್ನ ಒಡಹುಟ್ಟಿದವರನ್ನು.
ಬಿಟ್ಟು ಬಂದು ಹೊಸ ಮನೆತನಕ್ಕೂ ಹಾಗೂ ಹೊಸವಾತಾವರಣಕ್ಕೂ ಹೊಂದಿಕೊಂಡು ಮತ್ತು ತನ್ನ ಕುಟುಂಬಕ್ಕೆ ತನ್ನ ಜೀವವನ್ನೇ ಮುಡಿಪಾಗಿ ಡುವ ಏಕೈಕ ವ್ಯಕ್ತಿಯೆಂದರೆ ಅದು ಹೆಣ್ಣು ಮಾತ್ರ.
* ಒಂದು ಹೆಣ್ಣು ತನ್ನ ತವರು ಮನೆಯಲ್ಲಿದ್ದಾಗ ಯಾವುದಕ್ಕೂ ಯೋಚಿ ಸುವುದಿಲ್ಲ. ಅದೇ ಗಂಡನ ಮನೆಯಲ್ಲಿ ಎಲ್ಲವನ್ನೂ ಯೋಚಿಸುವುದರಲ್ಲೇ ಮುಗಿಸುವಳು ತನ್ನ ಜೀವನ.
ಪುರುಷರಿಗೆ ಕಿವಿ ಮಾತು…! 2 ನಿಮಿಷ ಬಿಡುವು ಮಾಡಿಕೊಂಡು ನೋಡಿ.!
* ಒಂದು ಹೆಣ್ಣಿನ ಜೀವನ ಬಂಗಾರ ಆಗಬೇಕು ಎಂದರೆ ಕೈಹಿಡಿಯುವ ವನು ಬಂಗಾರದಂತ ಪ್ರೀತಿ ತೋರಿಸಬೇಕು kg ಗಟ್ಟಲೆ ಬಂಗಾರ ತಂದು ಕೊಟ್ಟರೂ ಹೆಣ್ಣು ಒಲಿಯುದಿಲ್ಲ. ಬಂಗಾರದಂತಹ ಪ್ರೀತಿ ತೋರಿದರೆ ಒಲಿಯದ ಹೆಣ್ಣೆ ಇಲ್ಲ.
* ಪ್ರತಿಯೊಂದು ಹೆಣ್ಣಿಗೂ ಓದಿರುವ ಗಂಡ ಸಿಗುವುದು ಸಹಜ ಆದರೆ ಅವಳ ಮನಸ್ಸನ್ನು ಓದುವ ಗಂಡ ಸಿಗಬೇಕು ಅಂದರೆ ಅವಳು ತುಂಬ ಪುಣ್ಯ ಮಾಡಿರಬೇಕು.
* ಗುಣವಂತನಾದ ಗಂಡನ ಜೊತೆ ಗುಡಿಸಲಿನಲ್ಲಿ ಇರಬಹುದು.
ಆದರೆ ಅರ್ಥಮಾಡಿಕೊಳ್ಳಲಾರದ ಗಂಡನ ಜೊತೆ ಅರಮನೆಯಲ್ಲಿ ಕೂಡ ಇರಲು ಸಾಧ್ಯವಿಲ್ಲ.
* ಮಗಳನ್ನು” ಶ್ರೀಮಂತರ ಮನೆಗೆ” ಕೊಟ್ಟರೆ “ಸುಖವಾಗಿರುತ್ತಾಳೆ”, ಎಂದುಕೊಳ್ಳುವುದು “ತಪ್ಪು” ಯಾವ ಮನೆಯಲ್ಲಿ ಹೆಣ್ಣನ್ನು ಗೌರವಿಸಿ, ಶ್ರೀಮಂತಿಕೆಯಿಂದ ನೋಡಿಕೊಳ್ಳುತ್ತಾರೋ ಅಂತಹ ಮನೆಯಲ್ಲಿ ಮಾತ್ರ ಒಂದು ಹೆಣ್ಣು ಸುಖವಾಗಿರಲು ಸಾಧ್ಯ.
ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡಬಹುದು.!
* ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ ತಾಯಿ ಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸ್ನೇಹಿತೆಯಾಗಿ, ಪುತ್ರಿ ಯಾಗಿ ಮಾರ್ಗದರ್ಶಿಯಾಗಿ, ವಿವಿಧ ಸ್ತರಗಳಲ್ಲಿ ವಿವಿಧ ರೂಪಗಳಲ್ಲಿ ಪುರುಷನ ಜೀವನದ ಉನ್ನತಿಗೆ ಕಾರಣಕರ್ತಳಾದ ಮಹಿಳೆಯ ಪಾತ್ರ ಅವಿಸ್ಮರಣೀಯ.
* ‘ಮಳೆ’ ಇಲ್ಲದ ‘ವನ’ ‘ಮಹಿಳೆ’ ಇಲ್ಲದ ‘ಜೀವನ’ ಎರಡೂ ಬರಡಾದಂತೆ.!