Home Useful Information ಧರೆಗಿಳಿದ ಅಮೃತ ಈ ಗಿಡ.! ಈ ಎಲೆಯಲ್ಲಿ ಎಷ್ಟೆಲ್ಲಾ ಔಷಧೀಯ ಗುಣಗಳಿವೆ ನೋಡಿ.!

ಧರೆಗಿಳಿದ ಅಮೃತ ಈ ಗಿಡ.! ಈ ಎಲೆಯಲ್ಲಿ ಎಷ್ಟೆಲ್ಲಾ ಔಷಧೀಯ ಗುಣಗಳಿವೆ ನೋಡಿ.!

0
ಧರೆಗಿಳಿದ ಅಮೃತ ಈ ಗಿಡ.! ಈ ಎಲೆಯಲ್ಲಿ ಎಷ್ಟೆಲ್ಲಾ ಔಷಧೀಯ ಗುಣಗಳಿವೆ ನೋಡಿ.!

 

ಈ ದಿನ ನಾವು ಹೇಳಲು ಹೊರಟಿರುವ ಅಮೃತಬಳ್ಳಿ ಎಲೆ ಮತ್ತು ಕಾಂಡ ನಮ್ಮ ಆರೋಗ್ಯದ ಮೇಲೆ ಎಂತಹ ಅದ್ಭುತವಾದಂತಹ ಪರಿಣಾಮ ಬೀರುತ್ತದೆ ಎಂದರೆ ಇದು ಒಂದು ಅಮೃತ ಸಮಾನವೇ ಎಂದೇ ಅನಿಸು ತ್ತದೆ. ಒಟ್ಟಾರೆಯಾಗಿ ಅಮೃತ ಬಳ್ಳಿಯ ಪ್ರಯೋಜನ ನೋಡುವುದಾ ದರೆ ಈ ಗಿಡದ ಎಲೆ ಕಾಂಡ ಬೇರು ಪ್ರತಿಯೊಂದು ಭಾಗವು ಕೂಡ ಅಷ್ಟೇ ಆರೋಗ್ಯಕಾರಿಗುಣವನ್ನು ಹೊಂದಿರುವಂಥದ್ದು.

ಆದ್ದರಿಂದ ಈ ಒಂದು ಗಿಡವನ್ನು ಅಮೃತಕ್ಕೆ ಸಮಾನ ಎಂದು ಆಯುರ್ವೇದದಲ್ಲಿ ತಿಳಿಸಲಾ ಗಿದೆ. ಈ ಅಮೃತಬಳ್ಳಿ ಯಾಕೆ ಅಮೃತಕ್ಕೆ ಸಮ ಎಂದು ನೋಡುವುದಾ ದರೆ ಕೆಲವೊಂದಷ್ಟು ಔಷಧಿಗಳು ವಾತರೋಗಳನ್ನು ದೂರ ಮಾಡಿದರೆ ಕೆಲವೊಂದಷ್ಟು ಔಷಧಿಗಳು ಪಿತ್ತ ರೋಗಗಳನ್ನು ದೂರಮಾಡುತ್ತದೆ.

ಕೆಲವೊಂದಷ್ಟು ಔಷಧಿಗಳು ಕಫ ರೋಗಗಳನ್ನು ದೂರ ಮಾಡುತ್ತದೆ ಆದರೆ ಈ ಅಮೃತಬಳ್ಳಿ ವಾತ ಪಿತ್ತ ಕಫ ಈ ಮೂರು ರೋಗಗಳನ್ನು ದೂರ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಇದರ ಒಂದು ಗುಣ ಧರ್ಮವನ್ನು ನಾವು ನೋಡುವುದಾದರೆ ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂಥದ್ದು, ಕಟು ಮತ್ತು ಕಷಾಯ ಒಂದು ರಸಗುಣವನ್ನು ಹೊಂದಿರುವಂಥದ್ದು.

ಹಾಗಾಗಿ ಈ ಅಮೃತಬಳ್ಳಿ ಸರ್ವ ರೋಗವನ್ನು ನಿವಾರಿಸುವುದರ ಜೊತೆಗೆ ನಮ್ಮ ಆಯಸ್ಸನ್ನು ವೃದ್ಧಿ ಮಾಡುತ್ತದೆ. ಆದ್ದರಿಂದ ಅದನ್ನು ನಾವು ಅಮೃತಕ್ಕೆ ಸಮಾನ ಎಂದು ಕರೆಯಲಾಗುತ್ತದೆ. ಕೆಲವು ಸಾಧನೆಗಳನ್ನು ಮಾಡುತ್ತಾ ಯೋಗಗಳನ್ನು ಮಾಡುತ್ತಾ ಇದರ ಸೇವನೆಯನ್ನು ಮಾಡಿದರೆ ಚಿರಂಜೀವಿಗಳಾದ ಬಹಳಷ್ಟು ಜನರನ್ನು ನಾವು ಕಾಣಬಹುದು.

ಒಟ್ಟಾರೆಯಾಗಿ ಅಮೃತ ಎಂದರೆ ಸಾವಿಲ್ಲದ ಸಾವನ್ನು ದೂರ ಮಾಡುವಂತಹ ಎಂಬ ಅರ್ಥ ಬರುತ್ತದೆ. ಈ ಅಮೃತಬಳ್ಳಿಯನ್ನು ಪಂಚ ವಿಧ ಕಷಾಯದ ರೂಪದಲ್ಲಿ ಸೇವನೆ ಮಾಡಬಹುದು. ಆಯುರ್ವೇದದಲ್ಲಿ ಸ್ವರಸ, ಕಲ್ಕ, ಕ್ವಾತ, ಹಿಮ ಮತ್ತು ಪಾಂಠ ಎಂದು ಹೇಳಿ ಐದು ರೀತಿಯ ಕಷಾಯ ವಿಧಾನವನ್ನು ಹೇಳಲಾ ಗುತ್ತದೆ. ಈ 5 ರೀತಿಯಲ್ಲಿ ನಾವು ಅಮೃತಬಳ್ಳಿಯ ಕಷಾಯವನ್ನು ಸೇವನೆ ಮಾಡಬಹುದು.

ಹಾಗಾದರೆ ಅಮೃತಬಳ್ಳಿಯ ಕಷಾಯವನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೂ ಎಲೆಯನ್ನು ಮತ್ತು ಕಾಂಡವನ್ನು ಹೇಗೆ ಕಷಾಯ ಮಾಡಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಎಂಬ ಮಾಹಿತಿಯನ್ನು ಈ ದಿನ ತಿಳಿಯೋಣ.

* ವಾತ ಜನ್ಯವಾಗಿ ಬರುವಂತಹ ರೋಗಗಳು ಅಂದರೆ ಸಂಧಿವಾತ ಆಮವಾತ ಆಗಿರಬಹುದು ಹಾಗೂ ಹೃದಯದ ಸಮಸ್ಯೆ ಆಗಿರಬಹುದು ಕರುಳಿನ ತೊಂದರೆ ಅಜೀರ್ಣ, ಮಲಬದ್ಧತೆಯ ಸಮಸ್ಯೆಗಳು ಆಗಿರಬಹುದು ಚರ್ಮವ್ಯಾಧಿಗಳು ಹೀಗೆ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ದೂರ ಮಾಡುವುದಕ್ಕೆ ನಾವು ಈ ಅಮೃತಬಳ್ಳಿಯ ಕಷಾಯವನ್ನು ಸೇವನೆ ಮಾಡುವುದು ಬಹಳ ಮುಖ್ಯ.

* ಕಫ ಜನ್ಯವಾಗಿ ಬರುವಂತಹ ಕಾಯಿಲೆಗಳಿಗೆ ಇದರ ಸ್ವರಸ ಅಥವಾ ಪೌಡರ್ ಕಷಾಯವನ್ನು ನೀವು ಜೇನುತುಪ್ಪದ ಜೊತೆ ಸೇವನೆ ಮಾಡ ಬಹುದು. ಹೀಗೆ ಮಾಡುತ್ತಾ ಬಂದರೆ ಸಂಪೂರ್ಣವಾಗಿ ಕಫಜ ವಿಕಾರಗಳು ದೂರವಾಗುತ್ತಾ ಬರುತ್ತದೆ.

* ಹಾಗೆಯೇ ಪಿತ್ತ ವಿಕಾರವಾಗಿ ಬರುವಂತಹ ರೋಗಗಳು ಅಂದರೆ ಚರ್ಮ ವ್ಯಾಧಿಗಳು, ನರ ದೌರ್ಬಲ್ಯತೆ, ಕಣ್ಣಿನ ಸಮಸ್ಯೆ, ಕೂದಲು ಉದುರುವುದು, ಕಿವಿ ಕೇಳಿಸದೆ ಇರುವುದು, ಬಿಪಿ ಹೆಚ್ಚಾಗುವುದು ಇವೆಲ್ಲವೂ ಕೂಡ ಪಿತ್ತವಿಕಾರದಿಂದ ಬರುತ್ತದೆ ಇಂಥವರು ಅಮೃತ ಬಳ್ಳಿಯ ಕಷಾಯ ಮತ್ತು ಸ್ವರಸವನ್ನು ಸೇವನೆ ಮಾಡಬಹುದು.

ಈ ಕಷಾಯವನ್ನು ಹೇಗೆ ತಯಾರಿಸುವುದು ಎಂದು ನೋಡುವುದಾದರೆ 10 ಗ್ರಾಂ ನಷ್ಟು ಈ ಕಾಂಡವನ್ನು ಜಜ್ಜಿ ರಾತ್ರಿ ನೀರಿನಲ್ಲಿ ನೆನೆ ಹಾಕಬೇಕು ಬೆಳಿಗ್ಗೆ ಅದನ್ನು 200 ml ನೀರಿನಲ್ಲಿ ಕುದಿಸಿ 100 ml ಇಳಿಸಿ ಸೇವನೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/P_FkLtFMA_U?si=gHcGQXD5ia4pBGtc

LEAVE A REPLY

Please enter your comment!
Please enter your name here