ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜಕುಮಾರ್ ಅವರು ಇಂದಿಗೆ ಅರವತ್ತನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಚಿತ್ರರಂಗದಲ್ಲಿ ಸುಮಾರು ನಾಲ್ಕು ದಶಕಗಳಿಂದಲೂ ಕೂಡ ಸಕ್ರಿಯವಾಗಿ ಇರುವಂತಹ ಶಿವರಾಜ್ ಕುಮಾರ್ ಅವರು ಇಲ್ಲಿಯವರೆಗೂ ಕೂಡ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆನಂದ್ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಶಿವರಾಜ್ ಕುಮಾರ್ ಅವರು ಅಂದಿನಿಂದ ಇಂದಿನವರೆಗೂ ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೊದಲ ಕೇವಲ ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಿವರಾಜ್ ಕುಮಾರ್ ಅವರು ಇತ್ತೀಚಿನ ದಿನದಲ್ಲಿ ರಿಯಾಲಿಟಿ ಶೋ ನಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗುವಂತೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ಕಾರ್ಯಕ್ರಮದಲ್ಲಿ ಜಡ್ಜಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಯಸ್ಸು 60 ಆಗಿದ್ದರೂ ಕೂಡ ಇವರು ಮಾಡುವಂತಹ ನಟನೆ ಡ್ಯಾನ್ಸ್ ಮತ್ತು ಆಕ್ಟಿಂಗ್ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಏಕೆಂದರೆ 20 ವಯಸ್ಸಿನ ಯುವಕರಂತೆ ಸದಾ ಕಾಲ ಎನರ್ಜಿಟಿಕ್ ಆಗಿ ಇರುತ್ತಾರೆ.
ನಿಜ ಹೇಳಬೇಕು ಅಂದರೆ ಶಿವಣ್ಣ ಅವರನ್ನು ಬಿಟ್ಟರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇವರಷ್ಟು ಆಕ್ಟಿವ್ ಆಗಿ ಮತ್ತು ಎನರ್ಜಿಟಿಕ್ ಆಗಿ ಇರುವಂತಹ ಮತ್ತೋರ್ವ ನಟ ಯಾರು ಇಲ್ಲ ಅಂತಾನೆ ಹೇಳಬಹುದು. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಮತ್ತು ಹಾಡುಗಳಲ್ಲಿ ಇವರು ಮಾಡಿರುವ ನೃತ್ಯದಿಂದಲೇ ಇದನ್ನು ತಿಳಿದುಕೊಳ್ಳಬಹುದು. ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಇವತ್ತು ಶಿವಣ್ಣ ಅವರ ಹುಟ್ಟುಹಬ್ಬ ಎಲ್ಲವೂ ಚೆನ್ನಾಗಿ ಇದ್ದರೆ ಎಲ್ಲವೂ ಮೊದಲಿನಂತೆ ಇದ್ದರೆ ಖಂಡಿತವಾಗಿಯೂ ಕೂಡ ಈ ದಿನ ಶಿವಣ್ಣ ಅವರ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಅಭಿಮಾನಿಗಳೊಟ್ಟಿಗೆ ಆಚರಣೆ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಅಪ್ಪು ಅವರ ಅ.ಗ.ಲಿ.ಕೆ.ಯಿಂದ ಶಿವಣ್ಣ ಅವರು ಮಾನಸಿಕವಾಗಿ ಮತ್ತು ಶಾರಿರಿಕವಾಗಿ ಬಹಳ ಕುಗ್ಗಿ ಹೋಗಿದ್ದಾರೆ ಮೇಲ್ನೋಟಕ್ಕೆ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವಂತೆ ಕಂಡರೂ ಕೂಡ ಅವರ ಜೀವನದಲ್ಲಿ ನಗು ಎಂಬುದೇ ಮಾಸಿ ಹೋಗಿದೆ ಅಷ್ಟೇ ಅಲ್ಲದೆ ಯಾವ ಕೆಲಸವನ್ನು ಕೂಡ ಅವರು ಆಸಕ್ತಿ ಯುತವಾಗಿ ಮಾಡುತ್ತಿಲ್ಲ.
ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಶಿವಣ್ಣ ಅವರ ಹುಟ್ಟುಹಬ್ಬ ಆಗಿದ್ದರು ಕೂಡ ಈ ದಿನ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಮುಂದಾಗಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರೆ ಈ ಬಾರಿ ನಾನು ಹುಟ್ಟು ಹಬ್ಬವನ್ನು ಮಾಡಿಕೊಳ್ಳುವುದಿಲ್ಲ ದಯವಿಟ್ಟು ಅಭಿಮಾನಿಗಳು ನಿರಾಸೆ ಆಗಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶಿವಣ್ಣ ಅವರ ಈ ಮನವಿಯನ್ನು ಕೇಳಿದಂತಹ ಅಭಿಮಾನಿಗಳು ಒಂದು ಕಡೆ ನಿರಾಸರಾಗಿದ್ದಾರೆ ಮತ್ತೊಂದು ಕಡೆ ಹತಾಶರಾಗಿದ್ದಾರೆ ಏಕೆಂದರೆ ಅಪ್ಪು ಅವರು ಇದ್ದಿದ್ದರೆ ಈ ಒಂದು ಹುಟ್ಟುಹಬ್ಬವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಯೋಜಿಸುತ್ತಿದ್ದರು ಅಂತ. ಆದರೂ ಕೂಡ ಕೆಲವು ಅಭಿಮಾನಿಗಳು ಶಿವಣ್ಣ ಅವರಿಗೆ ತಿಳಿಯದಂತೆ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಮತ್ತು ವಿಶೇಷವಾಗಿ ಆಚರಿಸಬೇಕು ಎಂಬ ಯೋಜನೆ ಹಾಕಿಕೊಂಡಿದ್ದಾರೆ.
ಶಿವಣ್ಣ ಅವರ ಅಪ್ಪಟ ಅಭಿಮಾನಿ, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರು ಇಂದು ಬೆಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ಕೆಲವು ಎನ್‌ಜಿಓಗಳಿಗೆ ಶಿವಣ್ಣನ ಅಭಿಮಾನಿಗಳು ಊಟದ ವ್ಯವಸ್ಥೆ ಮಾಡಿದ್ದಾರೆ ಶಿವಸೈನ್ಯ ತಂಡ ಚಾಮರಾಜನಗರದಲ್ಲಿ ಅನ್ನದಾನ ಮಾಡುತ್ತಿದೆ. ಬೆಂಗಳೂರಿನಲ್ಲಿ ಶಿವಣ್ಣನ ಅಭಿಮಾನಿಗಳು ಅನ್ನದಾನ, ಬಡಮಕ್ಕಳಿಗೆ ಪುಸ್ತಕ ಹಂಚಿಕೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ಮೂಲಕ ಶಿವರಾಜ್ ಕುಮಾರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ ಅಭಿಮಾನಿಗಳು. ಅಪ್ಪು ಇದ್ದಿದ್ದರೆ ಈ ಜನ್ಮದಿನವೇ ಬೇರೆ ರೀತಿ ಆಚರಿಸಬಹುದಿತ್ತು ಆದರೂ ಕೂಡ ಅಪ್ಪು ಇಲ್ಲದಿರುವಂತಹ ನೋವು ಆದಷ್ಟು ಬೇಗ ಶಿವಣ್ಣ ಅವರಿಗೆ ಬರಿಸುವಂತಹ ಶಕ್ತಿ ಆ ದೇವರು ನೀಡಲಿ. ಇನ್ನಷ್ಟು ಆಯಸ್ಸು ಆರೋಗ್ಯ ಶಿವಣ್ಣ ಅವರಿಗೆ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ. ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.