ಪ್ರತಿಯೊಬ್ಬರೂ ಕೂಡ ದೇವಸ್ಥಾನಗಳಿಗೆ ಹೋಗುತ್ತೇವೆ. ನಮ್ಮ ಕುಲದೇವರ ನಮ್ಮ ಇಷ್ಟ ದೇವರ ಹಾಗೂ ಮನೆ ಹತ್ತಿರ ಸಾಧ್ಯವಾಗುವ ಯಾವುದಾದರೂ ದೇವರ ಸನ್ನಿಧಾನಕ್ಕೆ ಹೋಗುವ ಅಭ್ಯಾಸ ಇದ್ದೇ ಇರುತ್ತದೆ. ಈ ರೀತಿ ದೇವಸ್ಥಾನಗಳಿಗೆ ಹೋದಾಗ ಮನಸ್ಸಿಗೆ ಒಂದು ರೀತಿಯ ಸಮಾಧಾನ ಸಿಗುತ್ತದೆ. ಬಹಳ ಸಕರಾತ್ಮಕವಾದ ಭಾವನೆಗಳು ಉಂಟಾಗುತ್ತದೆ.
ಈ ನೆಮ್ಮದಿಯನ್ನು ಅನುಭವಿಸುವುದಕ್ಕಾಗಿ ಲೋಕದ ಜಂಜಾಟಗಳನ್ನು ಮರೆತು ಭಗವಂತನನ್ನು ಕ್ಷಣ ಹೊತ್ತು ಸ್ಮರಿಸುವುದಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತೇವೆ. ಈ ರೀತಿ ದೇವಸ್ಥಾನಕ್ಕೆ ಹೋಗುವಾಗ ಹಾಗೂ ಬರುವಾಗ ಕೆಲವು ನಿಯಮಗಳಿವೆ. ಇವುಗಳನ್ನು ಪಾಲಿಸಿದರೆ ಇವುಗಳ ಫಲ ಇನ್ನಷ್ಟು ಸಿಗುತ್ತದೆ. ಅದರಲ್ಲಿ ಪ್ರಮುಖವಾದ ಕೆಲವು ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಮನೆ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗುವಾಗ ಅದರಲ್ಲೂ ಶನೇಶ್ವರನ ದೇವಸ್ಥಾನವಾಗಿದ್ದರೆ ನೀವು ಬರಿಗಾಲಿನಲ್ಲಿ ದೇವಸ್ಥಾನಕ್ಕೆ ಹೋಗುವುದು ಒಳ್ಳೆಯದು ಹಾಗೂ ದೇವಸ್ಥಾನ ಪ್ರವೇಶ ಮಾಡುವ ಮುನ್ನ ದೇವಸ್ಥಾನದ ಹೊರಗಡೆ ಇರುವ ನಲ್ಲಿಯಲ್ಲಿ ಕಾಲು ಕೈಗಳನ್ನು ತೊಳೆದುಕೊಂಡು ನಂತರ ದೇವಸ್ಥಾನದ ಒಳಗಡೆ ಹೋಗಿ
* ಗಣೇಶನ ದೇವಸ್ಥಾನಕ್ಕೆ ಹೋದಾಗ ಬೆನ್ನ ಹಿಂದೆ ಕೈ ಮುಗಿಯಬಾರದು
* ಶನಿ ದೇವರಿಗೆ ತಲೆ ಬಗ್ಗಿಸಿ ಸಾಷ್ಟಾಂಗ ನಮಸ್ಕಾರ ಮಾಡಬಾರದು
* ದೇವಸ್ಥಾನದ ಆವರಣದಲ್ಲಿ ಸಾಧ್ಯವಾದಷ್ಟು ಹೊತ್ತು ಮೌನವಾಗಿರಬೇಕು ಅಥವಾ ಭಗವಂತನ ಧ್ಯಾನದಲ್ಲಿದ್ದು ಸ್ತೋತ್ರಗಳನ್ನು ಅಥವಾ ಮಂತ್ರಗಳನ್ನು ಪಠಿಸಬೇಕು. ವಿನಾಕಾರಣ ಇಲ್ಲಸಲ್ಲದ ಮಾತನಾಡುವುದು ಗಲಾಟೆ ಮಾಡುವುದು ನಿಮ್ಮ ಪುಣ್ಯವನ್ನು ಕಡಿಮೆ ಮಾಡುತ್ತದೆ
* ದೇವಸ್ಥಾನದಿಂದ ಮನೆಗೆ ಬಂದ ತಕ್ಷಣ ಕಾಲುಗಳನ್ನು ತೊಳೆಯಬೇಡಿ ಮುಖ ತೊಳೆಯಬೇಡಿ ಮತ್ತು ದೇವಸ್ಥಾನದಿಂದ ಮನೆಗೆ ಮರಳುವಾಗ ಕುಂಕುಮ ಹೂವು ಏನನ್ನಾದರೂ ಮನೆಯಲ್ಲಿರುವವರಿಗಾಗಿ ಪ್ರಸಾದ ರೂಪದಲ್ಲಿ ಪಡೆದುಕೊಂಡು ಬನ್ನಿ
* ದೇವಸ್ಥಾನಕ್ಕೆ ಹೋಗುವಾಗ ಸ್ನಾನ ಮಾಡಿ ಶುದ್ಧವಾದ ಮಡಿ ಬಟ್ಟೆ ಹಾಕಿ ಹೋಗಬೇಕು. ದೇವಸ್ಥಾನ ಬಹಳ ಪವಿತ್ರವಾಗಿರುತ್ತದೆ. ಅದರ ಶುದ್ಧತೆಯನ್ನು ಹಾಳು ಮಾಡುವ ಕೃತ್ಯಗಳನ್ನು ಮಾಡಬೇಡಿ. ಹೊರಗೆ ಮಾಡಿದ ಪಾಪಗಳನ್ನು ದೇವಸ್ಥಾನದಲ್ಲಿ ಕಳೆದುಕೊಳ್ಳಬಹುದು ಆದರೆ ದೇವಸ್ಥಾನದಲ್ಲಿ ಮಾಡುವ ಪಾಪ ಅದರಲ್ಲೂ ಗೊತ್ತಿದ್ದು ಬೇಕಂತಲೇ ಮಾಡುವ ತಪ್ಪುಗಳು ವಜ್ರಲೇಪನದಂತೆ ನಿಮ್ಮನ್ನು ಅಂಟಿಕೊಳ್ಳುತ್ತದೆ.
* ಯಾರಾದರೂ ತೀರ್ಥಯಾತ್ರೆಗೆ ಹೋಗುತ್ತಿದ್ದರೆ ಅಥವಾ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ನಿಮ್ಮ ಬಳಿ ಹೇಳಿದರೆ ನಿಮ್ಮ ಕೈಯಲ್ಲಿ ಆದಷ್ಟು ಹಣವನ್ನು ಅವರಿಗೆ ಕೊಡಿ ಮತ್ತು ಅವರ ಪ್ರಯಾಣ ಸುಖಕರವಾಗಿರಲಿ ಎಂದು ಪ್ರಾರ್ಥಿಸಿ
* ದೇವಸ್ಥಾನದಲ್ಲಿ ಯಾವುದೇ ದೇವರ ವಿಗ್ರಹಗಳಿಗೆ ಪ್ರದಕ್ಷಿಣೆ ಹಾಕುವಾಗ ಕೈಯಿಂದ ಮುಟ್ಟಬೇಡಿ
* ದೇವಸ್ಥಾನಕ್ಕೆ ಹೋಗುವಾಗ ಸಂಪ್ರದಾಯದ ಪ್ರಕಾರವಾಗಿ ಬಟ್ಟೆ ಧರಿಸಿ. ತೀರ ಮಾಡರ್ನ್ ಅವತಾರದಲ್ಲಿ ದೇವಸ್ಥಾನಗಳಿಗೆ ಹೋಗಬೇಡಿ ಮತ್ತು ದೇವಸ್ಥಾನದಲ್ಲಿ ಕುಳಿತುಕೊಂಡು ಬೇರೆ ವಿಚಾರಗಳನ್ನು ಯೋಚನೆ ಮಾಡಬೇಡಿ. ದೇವಸ್ಥಾನದಲ್ಲಿ ಕುಳಿತು ಸ್ನೇಹಿತರ ಜೊತೆ ಹರಟೆ ಹೊಡೆಯುವುದು, ಮೊಬೈಲ್ ಗಳನ್ನು ಬಳಸುವುದು ಇವುಗಳನ್ನು ಮಾಡುವುದರಿಂದ ಪ್ರಯೋಜನವಿಲ್ಲ ಬದಲಾಗಿ ಮೌನದಿಂದ ಭಗವಂತನನ್ನು ಸ್ಮರಿಸಿ.
* ದೇವಸ್ಥಾನಕ್ಕೆ ಹೋಗುವಾಗ ನೀವು ನಿಮ್ಮ ಮನೆಯ ಕೈತೋಟದಲ್ಲಿ ಬೆಳೆದ ಹೂವುಗಳನ್ನೇ ಆರಿಸಿ ದೇವರಿಗಾಗಿ ತೆಗೆದುಕೊಂಡು ಹೋದರೆ ಇನ್ನು ಹೆಚ್ಚಿನ ಸಮಾಧಾನ ಸಿಗುತ್ತದೆ. ಒಂದು ವೇಳೆ ಅನುಕೂಲತೆ ಇಲ್ಲದೆ ಇದ್ದವರು ಕೈಲಾದಷ್ಟು ದೇವರಿಗೆ ಕಾಣಿಕೆ ಹೂವಿನ ರೂಪದಲ್ಲಿ ತೆಗೆದುಕೊಂಡು ಹೋಗಿ.
ಬಹಳ ದೇವಸ್ಥಾನಗಳಲ್ಲಿ ಈ ರೀತಿ ಹೆಚ್ಚಾಗಿ ಹೂವನ್ನು ಅರ್ಪಿಸುತ್ತಾರೆ ಆಗ ಭಗವಂತನ ವಿಗ್ರಹಗಳಿಗಾಗಿ ಅಥವಾ ಫೋಟೋಗಾಗಲಿ ಈ ಹೂವನ್ನು ಹಾಕಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಹೂವನ್ನು ಖರೀದಿಸುವ ಮನಸ್ಸು ಇಲ್ಲ ಎಂದರೆ ಅದೇ ಹಣದಲ್ಲಿ ತಿನ್ನುವ ಯಾವುದಾದರೂ ಪದಾರ್ಥವನ್ನು ಖರೀದಿಸಿ ದೇವಸ್ಥಾನದ ಹೊರಗೆ ಕುಳಿತಿರುವ ಅಸಹಾಯಕರಿಗೆ ಅರ್ಪಿಸಿ.