ಮಕ್ಕಳಿಂದ ಹಿಡಿದು ಮನೆ ಮಂದಿಯೆಲ್ಲಾ ಭಕ್ತಿ ಜೊತೆ ಬಹಳ ಪ್ರೀತಿಯಿಂದ ಕಾಣುವ ದೇವರು ಎಂದರೆ ಗಣೇಶ. ಗಣಪ ಎಂದರೆ ಒಬ್ಬ ಸ್ನೇಹಿತನ ರೀತಿ ಎನಿಸುತ್ತದೆ ಹಾಗಾಗಿ ನಮ್ಮ ಹಿಂದೂಗಳಿಗೆ ಗಣಪತಿ ಎಂದರೆ ಅಷ್ಟು ಇಷ್ಟ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ರೀತಿ ಗಣಪನ ಮಹಿಮೆ ಅಪಾರ.
ಹಾಗಾಗಿ ಮೊದಲಿಗೆ ಗಣಪತಿಗೆ ಪೂಜೆ ಮಾಡಬೇಕು ಎನ್ನುವ ನಿಯಮ ಇದೆ, ಜೀವನದಲ್ಲಿ ಬರುವ ಎಲ್ಲಾ ವಿಘ್ನಗಳನ್ನು ಕೂಡ ನಿವಾರಣೆ ಮಾಡುವ ಶಕ್ತಿ ಈ ಸಂಕಷ್ಟಹರ ಗಣಪತಿಗಿದೆ. ಗಣೇಶನನ್ನು ನಮ್ಮ ಯಾವುದೇ ಕಷ್ಟದ ಸಮಯದಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಆ ವಿಘ್ನ ದೂರ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗೆಯೇ ಪೂಜಿಸುವುದಕ್ಕೆ ಬಹಳ ಸರಳವಾದ ನಿಯಮಗಳು ಇವೆ, ಆ ಪದ್ಧತಿ ಪ್ರಕಾರ ಪ್ರಾರ್ಥಿಸಿದರೆ ಬಹಳ ಬೇಗ ಫಲ ಸಿಗುತ್ತದೆ.
ಬಲಮುರಿ ಹಾಗೂ ಎಡಮುರಿ ಗಣೇಶನಿಗೆ ಇರುವ ವ್ಯತ್ಯಾಸವೇನು? ಇದರ ವಿಶೇಷವೇನು ಮತ್ತು ಯಾವುದು ಶ್ರೇಷ್ಠ ನೋಡಿ.!
ಕೆಲವು ಮಂತ್ರಗಳನ್ನು ಪಠಿಸಿ ಗಣೇಶನನ್ನು ಪ್ರಾರ್ಥಿಸಿದರೆ ಖಂಡಿತ ನಿಮ್ಮನ್ನು ವಿಘ್ನೇಶ್ವರ ಕಾಪಾಡುತ್ತಾನೆ. ಆದರೆ ನೀವು ಈ ಮಂತ್ರ ಪಠಣೆ ಮಾಡುವ ಮುನ್ನ ಸ್ನಾನ ಮಾಡಿ ಮಾಡಿ ಬಟ್ಟೆ ಉಟ್ಟಿರಬೇಕು. ಶ್ರದ್ಧೆ ಭಕ್ತಿಯಿಂದ ಗಣಪನಿಗೆ ವಂದನೆ ಮಾಡಿ ಪ್ರಾರ್ಥಿಸಲು ಕುಳಿತುಕೊಳ್ಳಬೇಕು ಮನಸ್ಸು ಸಕಾರಾತ್ಮಕವಾಗಿತ್ತು ಪರಿಶುದ್ಧವಾಗಿರಬೇಕು.
ಪೂರ್ವ ದಿಕ್ಕಿಗೆ ಮುಖ ಮಾಡಿ ಗಣೇಶನ ಫೋಟೋ ಅಥವಾ ವಿಗ್ರಹದ ಮುಂದೆ ಪಠಿಸಬೇಕು. ಗಣೇಶನಿಗೆ ಇಷ್ಟವಾದ ಗರಿಕೆ ದಾಸವಾಳ ಈ ರೀತಿ ಹೂಗಳು ಸಾಧ್ಯವಾದರೆ ಮೋದಕ, ಕಡಲೆಕಾಳು ಈ ರೀತಿಯ ನೈವೇದ್ಯ ಇವುಗಳನ್ನು ಅರ್ಪಿಸಿ ಪ್ರಾರ್ಥಿಸಿದರೆ ಇನ್ನು ಒಳ್ಳೆಯದು. 108 ಬಾರಿ ಈ ಮಂತ್ರಗಳನ್ನು ಪಠಿಸಬೇಕು ಹಾಗೂ ಪಠಿಸುವಾಗ ಏಕಾಗ್ರತೆ ಇರಬೇಕು, ಮಧ್ಯೆ ಮಧ್ಯೆ ಮಾತನಾಡಬಾರದು ತದೇಕ ಚಿತ್ತವಾಗಿ ಮನಸಿನ ಪೂರ್ತಿ ಗಣಪತಿಯನ್ನು ನೆನೆದುಕೊಳ್ಳುತ್ತಾ ಪಠಿಸಬೇಕು.
ಮಹಿಳೆಯರಿಗೆ ಈ ಲಕ್ಷಣಗಳು ಇದ್ದರೆ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ.!
● “ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ”
ಈ ಮಂತ್ರದ ಪಠಣೆಯಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ವೃತ್ತಿಗೆ ಸಂಬಂಧ ಪಟ್ಟ ಯಾವುದೇ ತೊಡಕುಗಳು ಇದ್ದರೂ ಕೂಡ ಅದೆಲ್ಲವೂ ನಿವಾರಣೆ ಆಗುತ್ತದೆ, ಜೀವನದಲ್ಲಿ ಉತ್ತಮ ಅವಕಾಶಗಳು ಸಿಗುತ್ತದೆ ಹಾಗೂ ಮನಸ್ಸು ಬಹಳ ನಿರಾಳವಾಗುತ್ತದೆ.
● “ಓಂ ಏಕದಂತಾಯ ವಿಧ್ಮಹೆ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್”
ಇದು ಗಣೇಶ ಗಾಯತ್ರಿ ಮಂತ್ರವಾಗಿದೆ. ಈ ಮಂತ್ರವನ್ನು ಪಠಣೆ ಮಾಡುವುದರಿಂದ ನಿಮ್ಮ ಭಯವೆಲ್ಲ ದೂರ ಆಗುತ್ತದೆ. ಹಲವು ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದಿರುತ್ತೀರಿ ಮತ್ತು ಹಣಕಾಸಿನ ಸಮಸ್ಯೆಗಳು ನಿವಾರಣೆ ಹಾಕಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಹುಟ್ಟಿದ ವಾರದ ಆಧಾರದ ಮೇಲೆ ನಿಮ್ಮ ಗುಣಲಕ್ಷಣಗಳು ಹೇಗಿರುತ್ತದೆ ನೋಡಿ..!
● “ಗಜಾನನಂ ಭೂತ ಗಾಣಧಿ ಸೇವಿತಂ ಕಪಿಥ ಜಂಬೋ ಫಲ ಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ ಪಾದ ಪಂಕಜಂ”
ಈ ಮಂತ್ರವನ್ನು ಪಠಣೆ ಮಾಡುವುದರಿಂದ ಎಲ್ಲಾ ರೀತಿಯ ಒತ್ತಡಗಳು ದೂರ ಆಗುತ್ತವೆ. ಗಣಪತಿ ಆಶೀರ್ವಾದ ನಿಮಗೆ ದೊರೆಯುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳು ದೊರೆಯುತ್ತವೆ.
● “ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನ ಜನ್ಮಯಾ ವಶಮಾನಾಯೇ ಸ್ವಾಹಾ ತತ್ಪುರುಷಾಯಾ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್ ಓಂ ಶಾಂತಿಃ ಶಾಂತಿಃ ಶಾಂತಿಃ”
ಇದು ಗಣೇಶನ ಮೂಲ ಮಂತ್ರವಾಗಿದೆ. ಬಹಳ ಭಕ್ತಿ ಹಾಗೂ ನಂಬಿಕೆಯಿಂದ ಈ ಮಂತ್ರವನ್ನು ಪಠಣೆ ಮಾಡಬೇಕು. ಮನಸ್ಸಿನಲ್ಲಿ ಧನಾತ್ಮಕ ಭಾವನೆ ಉಂಟಾಗುವುದರಿಂದ ಜೀವನದ ಮೇಲೆ ವಿಶ್ವಾಸ ಹೆಚ್ಚಾಗುತ್ತದೆ.