ನಿದ್ರಾಹೀನತೆ (Insomnia)ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿ ಕಾಯಿಲೆಯಾಗಿ ಹೋಗಿದೆ. ಜನರು ಹಲವು ಕಾರಣಗಳಿಂದಾಗಿ ಈಗ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅತಿಯಾದ ಒತ್ತಡ, ಅಜೀರ್ಣ, ಮಲಬದ್ದತೆ, ತಪ್ಪಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಇನ್ನು ಮುಂತಾದವುಗಳಿಂದ ನಿದ್ರೆ ಇಲ್ಲದೆ ಬಳುತ್ತಿದ್ದಾರೆ.
ಕೆಲವರು ನಿದ್ರೆ ಬರಲಿ ಎನ್ನುವ ಕಾರಣಕ್ಕಾಗಿ ದುಶ್ಚಟಗಳ ಮೊರೆ ಹೋಗುತ್ತಿದ್ದಾರೆ ಆದರೆ ಅಮಲಿನಿಂದ ಬರುವ ನಿದ್ರೆ ದುಸ್ವಪ್ನಗಳಿಂದ ಕೂಡಿರುತ್ತದೆ. ಪದೇ ಪದೇ ಎಚ್ಚರಿಕೆಯಾಗಿ ನಿದ್ರೆಯ ಸುಖ ಸಿಗದೇ ಇನ್ನಷ್ಟು ಆಯಾಸಗೊಳಿಸುತ್ತದೆ. ನಿದ್ರೆಗಾಗಿ ಔಷಧಿಗಳ ಮೊರೆ ಹೋಗುವವರು ಇದ್ದಾರೆ ಅದು ಕೂಡ ಒಂದು ರೀತಿಯಲ್ಲಿ ಸೈಡ್ ಎಫೆಕ್ಟ್ ಆಗುತ್ತದೆ.
ಯಾವುದೇ ಔಷಧಿ ಇಲ್ಲದೆ ನ್ಯಾಚುರಲ್ ಆಗಿ ಕಣ್ತುಂಬ ನಿದ್ದೆ (Natural Sleep) ಮಾಡಲು ಆಯುರ್ವೇದದಲ್ಲಿ ಕೆಲವು ಟಿಪ್ಗಳನ್ನು (tips) ತಿಳಿಸಲಾಗಿದೆ. ಇದನ್ನು ಹಿರಿಯರು ಬಹಳ ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದರು ಹಾಗಾಗಿ ನಾವೆಲ್ಲ ಹಿಂದಿನ ಕಾಲದಲ್ಲಿ ನೆಮ್ಮದಿಯಾಗಿ ನಿಶ್ಚಿಂತೆಯಾಗಿ ನಿದ್ದೆ ಮಾಡಿ ಮರು ದಿನ ಬಹಳ ಚಟುವಟಿಕೆಯಿಂದ ಕೂಡಿರುತ್ತಿದ್ದೆವು.
ನಿದ್ರಾಹೀನತೆ ಸಮಸ್ಯೆ ಬಂದರೆ ಅದು ಅದರ ಜೊತೆಗೆ ಇನ್ನಷ್ಟು ಕಾಯಿಲೆಗಳನ್ನು ದೇಹಕ್ಕೆ ಹೊತ್ತು ತರುತ್ತದೆ. ಆ ಕಾರಣಕ್ಕಾಗಿ ನಿದ್ರೆಯು ಕೂಡ ಒಂದು ಮದ್ದು ಎಂದು ತಿಳಿದು ಸರಿಯಾಗಿ ಪಾಲಿಸಬೇಕು. ಒಂದು ವೇಳೆ ನೀವೇನಾದರೂ ಈ ರೀತಿ ಸಮಸ್ಯೆಯಿಂದ ಬಳಲುತ್ತಿದ್ದರೆ ಈಗ ನಾವು ಹೇಳುವ ಈ ಟಿಪ್ ಗಳನ್ನು ಫಾಲೋ ಮಾಡಿ ನೋಡಿ ಮತ್ತು ಇದು ನಿಮಗೆ ಅನುಕೂಲಕರವಾಗಿದ್ದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೂ ಕೂಡ ಈ ಟಿಪ್ ಗಳನ್ನು ಹಂಚಿಕೊಳ್ಳಿ.
● ಅತಿಯಾದ ಆಹಾರ ಸೇವನೆ ಹಾಗೂ ಕಡಿಮೆ ಆಹಾರ ಸೇವನೆ ಕೂಡ ನಿದ್ರಾಹೀನತೆಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ದೇಹಕ್ಕೆ ಎಷ್ಟು ಮಿತಿ ಇರುತ್ತದೆ ಅದಕ್ಕೆ ಸರಿಯಾದ ರೀತಿಯಲ್ಲಿ ರಾತ್ರಿ ಹೊತ್ತು ಆಹಾರ ಸೇವಿಸಿ.
● ರಾತ್ರಿ ಹೊತ್ತು ಗಸಗಸೆ ಪಾಯಸವನ್ನು ಕುಡಿಯುವುದರಿಂದ ಕಣ್ತುಂಬ ನಿದ್ದೆ ಬರುತ್ತದೆ.
● ಊಟ ಆದ ಮೇಲೆ ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ಕೂಡ ನಿದ್ರಾಹೀನತೆ ಸಮಸ್ಯೆ ನಿಧಾನವಾಗಿ ಕಡಿಮೆ ಆಗುತ್ತದೆ.
● 200ml ನೀರಿನಲ್ಲಿ ಎರಡು ಟೇಬಲ್ ಚಮಚದಷ್ಟು ಸೋಂಪು ಕಾಳು ಹಾಕಿ ಅದನ್ನು ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯುವುದರಿಂದ ರಾತ್ರಿ ಎಚ್ಚರವಿಲ್ಲದಂತೆ ನೆಮ್ಮದಿಯಾಗಿ ನಿದ್ರೆ ಮಾಡಬಹುದು.
● ಒಂದು ಚಿಟಿಕೆ ಬಜೆ ಬೇರಿಗೆ ಒಂದು ಚಿಟಿಕೆ ಒಣಶುಂಟಿ ಪುಡಿಯನ್ನು ಹಾಕಿ ಜೇನುತುಪ್ಪದ ಜೊತೆ ಮಿಕ್ಸ್ ಮಾಡಿ ಸೇವನೆ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಒಂದು ಲೋಟ ಹಾಲು ಕುಡಿದು ಮಲಗುವುದರಿಂದ ಕೂಡ ಚೆನ್ನಾಗಿ ನಿದ್ರೆ ಬರುತ್ತದೆ.
● ಅಜೀರ್ಣ, ಮಲಬದ್ಧತೆ ಇಂತಹ ಸಮಸ್ಯೆಗಳು ದೇಹವನ್ನು ಕಾಡದಂತೆ ನೋಡಿಕೊಳ್ಳಬೇಕು.
● ರಾತ್ರಿ ಹೊತ್ತು ಸ್ನಾನ ಮಾಡಿ ಮಲಗುವುದರಿಂದ ಕೂಡ ಚೆನ್ನಾಗಿ ನಿದ್ದೆ ಬರುತ್ತದೆ.
● ರಾತ್ರಿ ಮಲಗೋ ಮುನ್ನ ಪ್ರಾಣಾಯಾಮ ಮಾಡಿ ಮಲಗುವುದರಿಂದ ಕೂಡ ಚೆನ್ನಾಗಿ ನಿದ್ದೆ ಬರುತ್ತದೆ.
● ಕಣ್ಣು ಕಿವಿ ಮೂಗು ಹಾಗೂ ಹೊಕ್ಕಳಿಗೆ ಶುದ್ಧವಾದ ಹಸುವಿನ ತುಪ್ಪ ಅಥವಾ ಹರಳೆಣ್ಣೆಯನ್ನು ಹಾಕಿ ಕೈಕಾಲುಗಳಿಗೂ ಕೂಡ ಹರಳೆಣ್ಣೆಯಿಂದ ಮಸಾಜ್ ಮಾಡಿ ಮಲಗುವುದರಿಂದ ಕೂಡ ಚೆನ್ನಾಗಿ ನಿದ್ದೆ ಬರುತ್ತದೆ.
● ಮಲಗುವ ವೇಳೆಯ ಒಂದು ಗಂಟೆ ಮುಂಚೆ ಮೊಬೈಲ್ ಮತ್ತು ಟಿವಿ ಬಳಕೆಯಿಂದ ದೂರ ಇದ್ದು ಮಲಗುವುದರಿಂದ ಕೂಡ ಮಲಗಿದ ತಕ್ಷಣ ನಿದ್ದೆ ಬರುತ್ತದೆ.