ರೇಷನ್ ಕಾರ್ಡ್ ತಿದ್ದುಪಡಿಗೆ ನಾಳೆಯೇ ಕೊನೆ ದಿನ.!

 

ಮಹಿಳೆಯರು ಗೃಹಲಕ್ಷ್ಮಿ ಯೋಜನೆ(Grilahakshmi Yojana)ಗೆ ಅರ್ಜಿ ಸಲ್ಲಿಸುವಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಇತ್ತ ಕೆಲವರು ಅಯ್ಯೋ ನಮ್ಮ ಮನೆ ರೇಷನ್‌ ಕಾರ್ಡ್‌(Ration card) ನಮ್ಮ ಯಜಮಾನರ ಹೆಸರಿನಲ್ಲಿದೆ. ನಾವು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋಕೆ ಆಗೋದಿಲ್ಲ. ನಮ್ಮ ರೇಷನ್‌ ಕಾರ್ಡ್‌ನಲ್ಲಿ ಯಜಮಾನರ ಹೆಸರು ಬದಲಾಯಿಸಬೇಕು. ಯಜಮಾನಿಯ ಹೆಸರಿಗೆ ರೇಷನ್‌ ಕಾರ್ಡ್‌ ಮಾಡಿಸಬೇಕು ಅಂತೆಲ್ಲಾ ಯೋಚಿಸೋರಿಗೆ ರಾಜ್ಯ ಸರ್ಕಾರ(State Govt)ದ ಗುಡ್‌ನ್ಯೂಸ್‌ ನೀಡಿದೆ.

ಹೌದು, ರೇಷನ್‌ ಕಾರ್ಡ್‌ನಲ್ಲಿ ಮನೆ ಯಜಮಾನಿಯ ಹೆಸರು ಬದಲಾಯಿಸುವುದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿ ಇಲ್ಲವೇ, ಹೊಸ ಸೇರ್ಪಡೆಯನ್ನು ತಡೆ ಹಿಡಿದಿದ್ದ ರಾಜ್ಯ ಸರ್ಕಾರ ಅದನ್ನು ತೆರವುಗೊಳಿಸಿದೆ. ಆದರೆ, ಇದಕ್ಕಾಗಿ ಕೆಲವು ದಿನಗಳ ಡೆಡ್‌ಲೈನ್‌ ಅನ್ನು ಸಹ ವಿಧಿಸಿದೆ. ಹಾಗಾದ್ರೆ ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರು ಬದಲಾಯಿಸುವುದು ಹೇಗೆ? ರಾಜ್ಯ ಸರ್ಕಾರದ ಆದೇಶ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ಹೊಸ ರೂಲ್ಸ್ ಈಗಲೇ ಈ ಕೆಲಸ ಮಾಡಿ‌ ಇಲ್ಲದಿದ್ರೆ ನಿಮಗೇ ನಷ್ಟ.!

ರಾಜ್ಯ ಸರ್ಕಾರ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಇದೀಗ ಅವಕಾಶ ಕಲ್ಪಿಸಿದೆ. ಆದರೆ ಈ ಅವಕಾಶವು ಕೇವಲ ನಾಲ್ಕು ದಿನ ಮಾತ್ರ ಲಭ್ಯವಿರಲಿದೆ. ಅಂದರೆ ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿ ಮಾಡಿಸಲು ಆಗಸ್ಟ್‌ 16, 2023 ರಿಂದಲೇ ಅವಕಾಶ ನೀಡಲಾಗಿದ್ದು, ಇದೇ ಆಗಸ್ಟ್‌ 19, 2023ರ ತನಕ ಅವಕಾಶವಿರಲಿದೆ. ಈ ದಿನಾಂಕದೊಳಗೆ ನೀವು ಅಗತ್ಯ ದಾಖಲೆಗಳನ್ನು ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್‌ ಕೇಂದ್ರಗಳಿಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಸಲ್ಲಿಸಬಹುದಾಗಿದೆ.

ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಬದಲಾಯಿಸಲು ಬೇಕಾದ ದಾಖಲೆಗಳು

* ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥ ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣಪತ್ರ
* ಮೂಲ ಪಡಿತರ ಚೀಟಿ
* ನಿಮ್ಮ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ
* ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ಪೂರಕ ದಾಖಲೆಗಳು
* ಸ್ವಯಂ ಘೋಷಣೆ (ಅನ್ವಯವಾಗುವಂತೆ)
* ಹೊಸದಾಗಿ ಸೇರ್ಪಡೆ ಮಾಡಬೇಕಾದ ಕುಟುಂಬದ ಯಜಮಾನಿಯ ಪಾಸ್‌ಪೋರ್ಟ್ ಗಾತ್ರದ ಫೋಟೋ, ಅವರ ಆಧಾರ್ ಕಾರ್ಡ್

ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರು ಬದಲಾಯಿಸಲು ಹೀಗೆ ಮಾಡಿ

* ನಿಮ್ಮ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ , ಕರ್ನಾಟಕ ಒನ್‌ ಕೇಂದ್ರಗಳಿಗೆ ಬೇಟಿ ನೀಡಿ
* ಯಜಮಾನಿಯ ಹೆಸರು ಬದಲಾವಣೆಗೆ ಬೇಕಾದ ಅರ್ಜಿ ಪಡೆದು ತುಂಬಿರಿ
* ಅರ್ಜಿ ನಮೂನೆಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ.
* ಇದೀಗ ನಿಮ್ಮ ಬಯೋಮೆಟ್ರಿಕ್‌ ದೃಡೀಕರಣದ ಮೂಲಕ ನೀವು ನೀಡಿರುವ ದಾಖಲೆಗಳನ್ನು ದೃಡೀಕರಿಸಿ
* ನೀವು ನೀಡಿದ ದಾಖಲೆಗಳನ್ನು ಸೇವ್‌ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುತ್ತಾರೆ
* ನಂತರ ನೀವು ಸಲ್ಲಿಸಿರುವ ಅರ್ಜಿ ಸ್ವೀಕೃತಿಯನ್ನು ನೀಡುತ್ತಾರೆ
* ಈ ಅರ್ಜಿ ಸ್ವೀಕೃತಿಯನ್ನು ಜೊತೆಯಲ್ಲಿಟ್ಟುಕೊಳ್ಳಬೇಕು
* ನಂತರದ ದಿನಗಳಲ್ಲಿ ನಿಮಗೆ ಆಹಾರ ಕಚೇರಿಯಿಂದ SMS ಬರಲಿದೆ
* ಎಸ್‌ಎಂಎಸ್‌ ಸ್ವೀಕರಿಸಿದ ನಂತರ ನೀವು ಸ್ವೀಕರಿಸಿದ ಸ್ವೀಕೃತಿಯೊಂದಿಗೆ ನಿಮ್ಮ ಪಡಿತರ ಚೀಟಿಯನ್ನು ಪ್ರಿಂಟ್‌ ತೆಗೆದುಕೊಳ್ಳಬಹುದಾಗಿದೆ.

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಹೆಸರು ತೆಗೆದು ಹಾಕುವುದು ಮನೆ ಯಜಮಾನಿ‌ ಬದಲಾವಣೆ ತಿದ್ದುಪಡಿ ಆರಂಭ. ತಿದ್ದುಪಡಿಗೆ ಏನೆಲ್ಲಾ ದಾಖಲೆಗಳು ಬೇಕು ಕಂಪ್ಲೀಟ್‌ ಡಿಟೇಲ್ಸ್ ಇಲ್ಲಿದೆ ನೋಡಿ.!

ಸದ್ಯ ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರು ಬದಲಾಯಿಸುವುದು ಹಾಗೂ ಸದಸ್ಯರ ಹೆಸರು ತಿದ್ದುಪಡಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಇನ್ನು ಕೂಡ ಆದೇಶ ನೀಡಲಾಗಿಲ್ಲ. ಅಷ್ಟೇ ಅಲ್ಲ ನೀವು ರೇಷನ್‌ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿಗೆ ಆಫ್‌ಲೈನ್‌ ಮೂಲಕ ಅಂದರೆ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ , ಕರ್ನಾಟಕ ಒನ್‌ ಕೇಂದ್ರಗಳಿಗೆ ಬೇಟಿ ನೀಡುವ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ನೀಡಿದರೆ ಆವಾಗ ನೀವು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.

ಮನೆಯಲ್ಲಿಯೇ ಕುಳಿತು ನಿಮ್ಮ ರೇಷನ್‌ ಕಾರ್ಡ್‌ನಲ್ಲಿ ಯಜಮಾನಿಯ ಹೆಸರು ಬದಲಾಯಿಸುವುದು ಹೇಗೆ?

* ಮೊದಲಿಗೆ https://ahara.kar.nic.in/ಗೆ ಲಾಗ್ ಇನ್ ಆಗಿ.
* ಮೇನ್‌ ಪೇಜ್‌ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್‌ ಮಾಡಿ.
* ಇದರಲ್ಲಿ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕ್ಲಿಕ್‌ ಮಾಡಿರಿ.
* ಹೊಸ ಪೇಜ್‌ ತೆರೆಯಲಿದೆ.
* ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿರಿ.
* ಇದರಲ್ಲಿ ನೀವು ಆಯ್ಕೆ ಮಾಡುವ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ,
* ನಂತರ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ,
* ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು(ಸಬ್ಮೀಟ್) ಮಾಡಿರಿ,
* ಅರ್ಜಿ ಸಲ್ಲಿಕೆಯ ರಿಜಿಸ್ಟರ್‌ ನಂಬರ್‌ ಸಿಗಲಿದೆ.
* ಈ ನಂಬರ್‌ ಬಳಸಿಕೊಂಡು ನೀವು ನಿಮ್ಮ ಅರ್ಜಿಯ ಸ್ಟೇಟಸ್‌ ಟ್ರ್ಯಾಕ್‌ ಮಾಡಬಹುದಾಗಿದೆ.

ಯಜಮಾನಿಯ ಹೆಸರು ಬದಲಾಯಿಸಿದ ತಕ್ಷಣ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದೇ?

ಸರ್ಕಾರ ನೀಡಿರುವ ಆದೇಶದಂತೆ ಇಲ್ಲಿಯವರೆಗೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸದೇ ಇರುವವರು ಯಜಮಾನಿಯ ಹೆಸರು ಬದಲಾವಣೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಈಗಾಗಲೇ ನಿಮ್ಮ ಅತ್ತೆ ಅಥವಾ ಸೊಸೆ ಹೆಸರಿನಲ್ಲಿ ಅರ್ಜಿ ಸಲ್ಲಿಸಿ ಇದೀಗ ಯಜಮಾನಿಯ ಹೆಸರು ಬದಲಾಯಿಸಲು ಅರ್ಜಿ ಸಲ್ಲಿಸಿದ್ದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನಿಮ್ಮ ಅರ್ಜಿ ಇತ್ಯರ್ಥವಾಗುವ ನಿಮಗೆ ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ತಡೆಹಿಡಿಯಲಾಗುತ್ತದೆ.

Leave a Comment