ಈಗಿನ ಕಾಲದಲ್ಲಿ ಅನೇಕರು ಹಲವು ಕಾಲಗಳು ಒಟ್ಟಿಗೆ ಇದ್ದು ಮದುವೆ ಹಂತಕ್ಕೆ ಬಂದಾಗ ಪ್ರೀತಿಸಿದ ಹುಡುಗಿ ಬಿಟ್ಟು ಹೋದಳು ಎಂದು ಅಥವಾ ಮದುವೆಯಾದ ಸ್ವಲ್ಪ ದಿನದಲ್ಲಿ ಹೊಂದಾಣಿಕೆ ಇಲ್ವದೇ ಹೆಂಡತಿ ಬಿಟ್ಟು ಹೋದಳು ಎನ್ನುವುದು ಅನೇಕ ಗಂಡಸರ ದೂರಾಗಿದೆ. ಕೆಲವರು ಇದನ್ನು ಸ್ವತಃ ತಾವೇ ಅನುಭವಿಸಿ ನೋವಿನಲ್ಲಿದ್ದರೆ. ಇನ್ನೂ ಕೆಲವರು ತಮ್ಮ ಸ್ನೇಹಿತರು ಹಾಗೂ ಸಹೋದರರಿಗೆ ಈ ರೀತಿ ಆಗಿದ್ದನ್ನು ನೋಡಿ ಪ್ರೀತಿ ಹಾಗೂ ಸಂಬಂಧಗಳ ಮೇಲೆ ನಂಬಿಕೆ ಕಳೆದುಕೊಂಡಿರುತ್ತಾರೆ.
ಆದರೆ ಎಲ್ಲಾ ಹೆಣ್ಣು ಮಕ್ಕಳು ಕೆಟ್ಟವರಲ್ಲ ಹಾಗೆ ಎಲ್ಲಾ ಪುರುಷರು ಕೂಡ ಒಳ್ಳೆಯವರಲ್ಲ ನಿಮ್ಮಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ನಿಮ್ಮ ಹುಡುಗಿ ಎಂದು ನಿಮ್ಮನ್ನು ಬಿಟ್ಟು ಹೋಗಲಾರಳು. ಸಾಧ್ಯವಾದರೆ ಈ ಒಂದು ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ರೂಪಿಸಿಕೊಳ್ಳಿ ಹೇಗೆ ಬೇಡ ಎಂದು ಹೋದವರು ಕೂಡ ವಾಪಸ್ ಬರುತ್ತಾರೆ ನೀವೇ ನೋಡಿ.
1. ಜೀವನವನ್ನು ಆಸ್ಪಾದಿಸುವುದಕ್ಕೆ ದುಡ್ಡು ಒಂದೇ ಮುಖ್ಯ ಅಲ್ಲ ನಮ್ಮ ವ್ಯಕ್ತಿತ್ವವನ್ನು ನಾವು ಸರಿಯಾಗಿ ರೂಪಿಸಿಕೊಂಡರೆ ಹಣ ಗೌರವ ಎಲ್ಲವೂ ಕೂಡ ನಮ್ಮನೆ ಹುಡುಕಿಕೊಂಡು ಬರುತ್ತದೆ. ಹಾಗಾಗಿ ಇಂತಹ ವ್ಯಕ್ತಿತ್ವವನ್ನು ನಾವು ರೂಢಿಸಿಕೊಳ್ಳಬೇಕು. ಇದು ಕೇವಲ ಹೊರಗಿನಿಂದ ತೋರಿಕೆಗಾಗಿ ಮಾತ್ರ ಇಲ್ಲದೆ ನಮ್ಮ ಆನಂದಕ್ಕಾಗಿ ಮನಸ್ಸಿನ ಒಳಗಿನಿಂದ ಕೆಲವು ಬದಲಾವಣೆಗಳನ್ನು ನಾವು ಮಾಡಿಕೊಳ್ಳಬೇಕು.
2. ಅದರಲ್ಲಿ ಮುಖ್ಯವಾಗಿ ನೀವು ದೇಹದ ಸೌಂದರ್ಯ ಹಾಗೂ ಆರೋಗ್ಯಕ್ಕೆ ಕಾಳಜಿ ಮಾಡಿ. ಅದಕ್ಕಾಗಿ ವ್ಯಾಯಾಮಕ್ಕೆ ಸಮಯ ಕೊಡಿ. ಗಂಡು ಮಕ್ಕಳು ಗಟ್ಟಿಮುಟ್ಟಾಗಿ ಮೈಕಟ್ಟು ಚೆನ್ನಾಗಿ ಇದ್ದರೆ ಸಹಜವಾಗಿ ಎಲ್ಲರೂ ಆಕರ್ಷಿತರಾಗುತ್ತಾರೆ.
3. ಹಣಕಾಸಿನ ತೊಂದರೆ ನಿಮ್ಮ ಜೀವನದಲ್ಲಿ ಕಾಡಬಾರದು ಎಂದರೆ ಯಾವ ಪರ್ಸನಲ್ ವಿಚಾರವು ನಿಮ್ಮ ವೃತ್ತಿ ಜೀವನವನ್ನು ಕೆಡಿಸಬಾರದು.
4. ನೀವು ಯಾವುದೇ ಉದ್ಯೋಗ ಮಾಡುತ್ತಿದ್ದರು ಅಥವಾ ವ್ಯವಹಾರ ಮಾಡುತ್ತಿದ್ದರು ಅದು ಒಂದಕ್ಕೆ ಮೀಸಲಾಗಬೇಡಿ ನಿಮಗೆ ಒಂದಕ್ಕಿಂತ ಹೆಚ್ಚಿನ ಹಣಕಾಸಿನ ಮೂಲಗಳು ಇರಬೇಕು. ಇದರಿಂದ ಜೀವನದಲ್ಲಿ ಕೆಲಸ ಕಡಿಮೆಯಾಗಿ ಆದಾಯ ಹೆಚ್ಚಾಗುತ್ತದೆ ಆ ಮೂಲಕ ನೀವು ನಿಮ್ಮ ಜೀವನವನ್ನು ಉತ್ತಮ ಮಟ್ಟದಲ್ಲಿ ಇಟ್ಟುಕೊಳ್ಳಬಹುದು ಹಾಗಾಗಿ ದುಡಿಯುವ ಸಮಯದಲ್ಲಿಯೇ ಕೆಲವು ಕಡೆ ಹೂಡಿಕೆ ಮಾಡಿ ಆದಷ್ಟು ಬೇಗ ರಿಟರ್ನ್ಸ್ ಬರುವಂತೆ ಪ್ಲಾನ್ ಮಾಡಿ.
5. ಜೀವನದಲ್ಲಿ ಯಾವಾಗಲೂ ನೋ’ವಿನಲ್ಲಿರುವ ಅಥವಾ ಹೆಣ್ಣು ಮಕ್ಕಳ ರೀತಿ ಸದಾ ನೊಂದುಕೊಂಡು ಕ’ಣ್ಣೀ’ರಿಡುವ ಪುರುಷರ ಕಡೆ ಹೆಣ್ಣು ಮಕ್ಕಳು ತಿರುಗಿ ಸಹ ನೋಡುವುದಿಲ್ಲ. ಹಾಗಾಗಿ ನಿಮಗೆ ಎಷ್ಟೇ ನೋವಿದ್ದರೂ ಅದನ್ನು ಮನಸ್ಸಿನ ಒಳಗೆ ಇಟ್ಟುಕೊಂಡು ಹೊರಗಿನ ಪ್ರಪಂಚಕ್ಕೆ ಏನು ಆಗಿಲ್ಲ ಎನ್ನುವಂತೆ ಸ್ಟ್ರಾಂಗ್ ಆಗಿ ಇರಿ. ನಿಮ್ಮ ಭಾವನೆಗಳನ್ನು ಎಲ್ಲರೆದುರು ತೋಡಿಕೊಳ್ಳಬೇಡಿ.
6. ಒಂದು ವೇಳೆ ನಿಮಗೆ ಆ ರೀತಿ ಸಹಿಸಲಾಗದ ನೋ’ವು ಇದೆ ಎಂದರೆ ಆ ನೋ’ವ’ನ್ನು ಮರೆಯಲು ಕುಡಿತದ ದಾಸರಾಗುವ ಬದಲು ನೀವು ಯಾವುದಾದರೂ ಹೊಸದನ್ನು ಕಲಿಯಲು ಆರಂಭಿಸಿ. ಓದುವ ಅಭ್ಯಾಸ ಅಥವಾ ನಿಮಗಿರುವ ಯಾವುದು ಕಲೆಯನ್ನು ಇನ್ನಷ್ಟು ಎತ್ತರ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ತರಬೇತಿಗಳು ಇವುಗಳಿಗೆ ಸ್ವಲ್ಪ ಸಮಯ ಮೀಸಲಿಟ್ಟು ಬಿಸಿಯಾಗಿ.
7. ಜೀವನದಲ್ಲಿ ಯಾರೇ ಬಂದರೂ ಯಾರೇ ಹೋದರು ತಂದೆ ತಾಯಿ ಹಾಗೂ ಕುಟುಂಬ ಮೊದಲು ಎನ್ನುವುದನ್ನು ಎಂದಿಗೂ ಮರೆಯಬೇಡಿ. ಯಾರ ಕಾರಣಕ್ಕಾಗಿಯೂ ಕೂಡ ನಿಮ್ಮ ಪೋಷಕರನ್ನು ನೋಯಿಸಬೇಡಿ. ಈ ರೀತಿ ಕುಟುಂಬಕ್ಕೆ ಹೆಚ್ಚಿನ ಮಹತ್ವ ಕೊಡುವವರ ಕಡೆ ಒಳ್ಳೆ ಮನಸ್ಸಿರುವವರು ಖಂಡಿತ ಬರುತ್ತಾರೆ
8. ಧೂಮಪಾನ ಮಾಡುವುದು, ಮಧ್ಯಪಾನ ಮಾಡುವುದು ಅವನ್ಯವಶಕವಾಗಿ ಹಣವನ್ನು ದುಂದು ವೆಚ್ಚ ಮಾಡುವುದು, ಅಶ್ಲೀಲ ಚಿತ್ರಗಳನ್ನು ನೋಡುವುದು ಇತ್ಯಾದಿ ವಿಚಾರಗಳಿಂದ ನೀವು ಎಷ್ಟು ದೂರ ಇರುತ್ತೀರೋ ನಿಮ್ಮ ಆರೋಗ್ಯ ಅಷ್ಟು ವೃದ್ಧಿಸುತ್ತದೆ ಹಾಗೂ ನಿಮ್ಮ ಸುತ್ತಲಿರುವ ಪ್ರಭೆ ಅಷ್ಟು ಸಕಾರಾತ್ಮಕವಾಗಿರುತ್ತದೆ. ಈ ರೀತಿ ನಿಮ್ಮ ಔರ ಸುಂದರವಾಗಿ ಸೃಷ್ಟಿಕೊಂಡರೆ ಎಲ್ಲರೂ ನಿಮ್ಮತ್ತ ಆಕರ್ಷಿತರಾಗುತ್ತಾರೆ ಹಾಗೂ ಗೌರವಿಸುತ್ತಾರೆ.
9. ನಿಮ್ಮನ್ನು ಯಾವುದೇ ಹುಡುಗಿ ಬಿಟ್ಟು ಹೋದರು ಆಕೆಯ ಬಗ್ಗೆ ಎಲ್ಲೂ ಕೆಟ್ಟದಾಗಿ ಹೇಳಿಕೊಂಡು ತಿರುಗಬೇಡಿ, ಇದು ನಿಮಗೆ ಹೆಣ್ಣು ಮಕ್ಕಳ ಮೇಲೆ ಎಷ್ಟು ಗೌರವ ಇದೆ ಎನ್ನುವುದನ್ನು ತೋರಿಸಿ ಬಿಡುತ್ತದೆ. ಹಾಗಾಗಿ ಅವರ ತಪ್ಪು ಅವರಿಗೆ ಅರ್ಥವಾಗಲು ಬಿಟ್ಟುಬಿಡಿ ಅಥವಾ ತಪ್ಪೇ ಮಾಡಿದರೆ ಅವರೇ ಶಿ’ಕ್ಷೆ ಪಡುತ್ತಾರೆ ನೀವು ಆಗಿದ್ದನ್ನು ಕೆಟ್ಟ ಕನಸು ಎಂದು ಮರೆತು ಮುಂದಿನ ಜೀವನದ ಬಗ್ಗೆ ನೋಡಿ.
10. ಜೀವನದಲ್ಲಿ ನಿಜವಾಗಿಯೂ ಮೋ’ಸ ಹೋಗಿದ್ದರೆ ಬದುಕನ್ನು ಬದಲಾಯಿಸಿಕೊಂಡು ಮತ್ತೊಮ್ಮೆ ಮೈ ಕೊಡವಿ ಏಳುವುದಕ್ಕೆ ಅದಕ್ಕಿಂತ ಮತ್ತೊಂದು ಅವಕಾಶ ಸಿಗುವುದಿಲ್ಲ ಹಾಗಾಗಿ ಅದೇ ಛಲದಿಂದ ಜೀವನದಲ್ಲಿ ಸಾಧನೆ ಮಾಡಲು ಮುನ್ನುಗ್ಗಿ ನಿಮ್ಮ ಸಾಧನೆ ನೋಡಿ ಅವರೇ ಮರಳಿ ಬರುತ್ತಾರೆ ನಂತರ ಅವರನ್ನು ಸ್ವೀಕರಿಸುವುದು ಬಿಡುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು.