ಪ್ರತಿದಿನ ನಾವು ರಸ್ತೆಯಲ್ಲಿ ಗಾಡಿಗಳಲ್ಲಿ ಓಡಾಡುವಾಗ ಟ್ರಾಫಿಕ್ ಪೋಲೀಸರು ಹಲವಾರು ಗಾಡಿಗಳನ್ನು ಹಿಡಿಯುವುದು ದಂಡ ಕಟ್ಟಿಸುವುದು ನೂರು ಇನ್ನೂರು ರೂಪಾಯಿಗಳ ಲಂಚ ಪಡೆಯುವುದನ್ನು ನಾವು ನೋಡಿದ್ದೇವೆ. ಕೆಲವು ಬಾರಿ ನಾವು ಎಲ್ಮೆಟ್ ಧರಿಸದಿದ್ದಾಗ ಗಾಡಿಯನ್ನು ಇಡಿದು ಡಾಕ್ಯುಮೆಂಟ್ ಪರಿಶೀಲಿಸಿ ನಮಗೂ ದಂಡ ವಿಧಿಸಿರುತ್ತಾರೆ. ಆದರೆ ಇಲ್ಲಿ ಒಂದು ಎತ್ತಿನಗಾಡಿಗೆ ಒಬ್ಬ ಪೋಲೀಸ್ ಆಫೀಸರ್ ಸಾವಿರ ರೂಪಾಯಿ ದಂಡ ಹಾಕಿದ್ದಾನೆ. ಅದು ಯಾಕೆ ? ಅದಕ್ಕೆ ರೈತ ಪೊಲೀಸ್ ಆಫೀಸರ್ ಗೆ ಹೇಗೆ ಬುದ್ದಿ ಕಲಿಸಿದ್ದಾನೆ ಎಂಬುದನ್ನು ತಿಳಿಯೋಣ.
ನಮ್ಮ ದೇಶದಲ್ಲಿ ಕಳೆದ 2 – 3 ವರ್ಷಗಳಲ್ಲಿ ದಂಡ ವಿಧಿಸುವುದು ತುಂಬಾ ಕಡಿಮೆ ಇತ್ತು. ಆದರೆ ಮೋದಿ ಸರ್ಕಾರವು ಬಂದಾಗ ಅವರು ಜಾರಿಗೊಳಿಸಿದ ಕೆಲವು ಹೊಸ ಕಾನೂನುಗಳಿಂದ 5 ರಿಂದ 10 ಪಟ್ಟರಷ್ಟು ಹೆಚ್ಚು ದಂಡ ವಿಧಿಸಲಾಗುತ್ತಿದ್ದು, ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಹಲವು ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ಬದಲು ಲಂಚ ತೆಗೆದುಕೊಳ್ಳುತ್ತಿರುವುದು ತಿಳಿದ ಸಂಗತಿ ಆಗಿದೆ. ಆದರೆ ಇಲ್ಲಿ ಒಬ್ಬ ದುರಹಂಕಾರಿ ಪೋಲೀಸ್ ಆಫೀಸರ್ ಎತ್ತಿನ ಗಾಡಿಗೆ ದಂಡ ವಿಧಿಸಿದ್ದಾನೆ.
ಇದು ಉತ್ತರಖಾಂಡ ರಾಜ್ಯದ ದೆಹರಾದೂನ್ ನಲ್ಲಿ ನಡೆದ ಒಂದು ಘಟನೆ. ಇಲ್ಲಿನ ಸುದೀರ್ ಪಾಂಡೆ ಎಂಬ ರೈತ ತನ್ನ ಜಮೀನಿನಲ್ಲಿ ಬೆಳೆದ ತರಕಾರಿಗಳನ್ನು ಮಾರಲು ಮಾರುಕಟ್ಟೆಗೆ ಹೋಗಿದ್ದ ಆ ಸಮಯದಲ್ಲಿ ತನ್ನ ಗಾಡಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಅಲ್ಲಿಗೆ ಬಂದ ಟ್ರಾಫಿಕ್ ಪೋಲೀಸರು ಎತ್ತುಗಳನ್ನು ನೋಡಿದ ಮತ್ತು ಟ್ರಾಫಿಕ್ ಜಾಮ್ ಆಗಿರುವುದನ್ನು ನೋಡಿ ಇನ್ಸ್ಪೆಕ್ಟರ್ ಪಂಕಜ್ ಅವರು ಸಾವಿರಾರು ರೂಪಾಯಿ ದಂಡ ವಿಧಿಸಿ ಚಲನ್ ಅನ್ನು ಹಾಕಿದರು.
ಅಲ್ಲಿಗೆ ಬಂದ ಆ ರೈತನಿಗೆ ಪೊಲೀಸರು ದಂಡ ಕಟ್ಟಿ ನಿನ್ನ ಎತ್ತಿನಗಾಡಿಯನ್ನು ಬಿಡಿಸಿಕೊಂಡು ಹೋಗು ಎಂದು ಗದರಿಸುತ್ತಾರೆ. ಆಗ ಬುದ್ದಿವಂತಿಕೆ ಇಂದ ಉತ್ತರಿಸಿ ಸರ್ ನಾನು ಈ ದಂಡವನ್ನು ಕಟ್ಟುತ್ತೇನೆ ಆದರೆ ಈ ದಂಡವನ್ನು ಯಾವ ಕಾನೂನಿನ ಅಡಿಯಲ್ಲಿ ಮತ್ತು ಯಾವ ತಪ್ಪಿಗಾಗಿ ವಿಧಿಸಿದ್ದೀರಿ ಎಂದು ತಿಳಿಸುತ್ತೀರಾ ಎಂದು ಕೇಳಿದ. ಆಗ ಪೋಲೀಸ್ ಆಫೀಸರ್ ಸೆಕ್ಷನ್ 81 ಮೋಟರ್ ವಾಹನ ಕಾಯ್ದೆಯ ಅಡಿ ಮತ್ತು No Parking ಗಾಗಿ ದಂಡ ಹಾಕಿದ್ದೇನೆ ಎಂದು ಹೇಳುತ್ತಾರೆ.
ಆಗ ರೈತ ಬಿಲ್ ನಲ್ಲಿ ಗಾಡಿ ನಂಬರ್ ಏನಂತ ಹಾಕಿದ್ದೀರಿ ಸರ್ ಎಂದ, ಅದಕ್ಕೆ ಪೋಲೀಸರು ಗಾಡಿ ನಂಬರ್ ಯಾಕೆ ಬೇಕು? ದಂಡ ಕಟ್ಟಿ ಹೋಗು ಎಂದು ಗದರಿಸಿದರು. ಆಗ ರೈತ ಗಾಡಿ ನಂಬರ್ ಹಾಕದೆ ದಂಡ ಹೇಗೆ ಹಾಕುತ್ತೀರಾ ಸರ್, ನನ್ನದು ಎತ್ತಿನಗಾಡಿ ಯಾವುದೇ ನೋಂದಣಿ ಮಾಡಿಸಿರುವುದಿಲ್ಲ. ಅಲ್ಲದೆ ಅವು ಪ್ರಾಣಿಗಳು ಗಾಡಿ ಅಲ್ಲ, ಮೋಟಾರ್ ವಾಹನಗಳ ಕಾಯ್ದೆ ಕೇವಲ ಮೋಟಾರ್ ಗಾಡಿಗಳಿಗೆ ಮಾತ್ರ ಸರ್ ಎಂದು ಬುದ್ಧಿವಂತಿಕೆ ಇಂದ ಹೇಳಿದ.
ಇದನ್ನು ಕೇಳಿದ ಟ್ರಾಫಿಕ್ ಪೋಲೀಸ್ ಏನನ್ನು ಮಾತನಾಡದೇ ದಂಗಾಗಿ ಹೋದ ಮತ್ತು ಎತ್ತಿನಗಾಡಿಯನ್ನು ಬಿಟ್ಟು ಕಳುಹಿಸಿದ. ಇದನ್ನು ನೋಡಿದ ಅಲ್ಲಿ ನೆರೆದಿದ್ದ ದಾರಿ ಹೊಕ್ಕನೊಬ್ಬ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಇದನ್ನು ವೀಕ್ಷಿಸಿದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ವಿಚಾರವನ್ನು ಇನ್ನಷ್ಟು ಜನರಿಗೆ ತಲುಪಿಸಿ ಇಂತಹ ಅಧಿಕಾರಿಗಳು ಇನ್ನದರೂ ಬುದ್ದಿ ಕಲಿಯಲಿ.