ರಿಯಲ್ ಸ್ಟಾರ್ ಉಪ್ರೇಂದ್ರ ಅಭಿನಯದ ಬುದ್ಧಿವಂತ 2 ಸಿನಿಮಾ ಅರ್ಧಕ್ಕೆ ನಿಂತಿದ್ಯಾಕೆ ಗೊತ್ತ.?

 

ಬುದ್ಧಿವಂತ ಉಪೇಂದ್ರ ಅವರ ಈ ಸಿನಿಮಾವನ್ನು ಎಷ್ಟೇ ವರ್ಷಗಳಾದರೂ ಕೂಡ ಜನ ಮರೆಯಲು ಸಾಧ್ಯವಿಲ್ಲ. ಪಂಚಾಮೃತ ಎನ್ನುವ ಹೆಸರಿನಲ್ಲಿ ವೈಟ್ ಅಂಡ್ ವೈಟ್ ಗೆಟಪ್ ಅಲ್ಲಿ ಕೋರ್ಟ್ ಅಲ್ಲಿ ಜಡ್ಜ್ ಎದುರು ನಿಂತು ಜಡ್ಜಮ್ಮ ಎಂದು ಡೈಲಾಗ್ ಹೊಡೆಯುತ್ತಿದ್ದ ಉಪ್ಪಿ ಅವರ ಆ ಮಾತುಗಳು ಇನ್ನು ಕಿವಿಯಲ್ಲಿ ಗುನುಗುತ್ತಿವೆ. ಸಿನಿಮಾದಲ್ಲಿನ ಹಾಡುಗಳು ಕೂಡ ಮೋಡಿ ಮಾಡಿ ಜನಮನ ಗೆದ್ದ ಒಂದು ಸೂಪರ್ಹಿಟ್ ಸಸ್ಪೆನ್ಸ್ ಸಿನಿಮಾ ಬುದ್ಧಿವಂತ.

ಈ ಬುದ್ಧಿವಂತ ಸಿನಿಮಾ ರಿಲೀಸ್ ಆಗಿ ಹಿಟ್ ಆದಾ ಮೇಲೆ ಬುದ್ಧಿವಂತ 2 ಸಿನಿಮಾ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇತ್ತು. 2019ರಲ್ಲಿ ಬುದ್ದಿವಂತ 2 ಗೆ ಉಪೇಂದ್ರ ಅವರು ಕೂಡ ಒಪ್ಪಿದ್ದರು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿ ಸಿನಿಮಾ ಬರಬೇಕಿತ್ತು. ಆದರೆ ಸಿನಿಮಾ ಬಗ್ಗೆ ಅಪ್ಡೇಟ್ಸ್ ಇಲ್ಲ ಇದರ ಕುರಿತು ನಿರ್ಮಾಪಕರು ಹೇಳಿದ್ದೇನು ಗೊತ್ತಾ?

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್, ಕೆ. ಎನ್ ಸ್ಟುಡಿಯೋ ಬ್ಯಾನರ್ ಅಡಿ ಕನ್ನಡಕ್ಕೆ ಸಾಕಷ್ಟು ಸಿನಿಮಾಗಳು ಸಿಕ್ಕಿವೆ. ಚಮಕ್, ಅಯೋಗ್ಯ ಇನ್ನು ಮುಂತಾದ ಅನೇಕ ಹಾಸ್ಯಾತ್ಮಕ ಸಿನಿಮಾಗಳನ್ನು ಕೊಟ್ಟ ಈ ನಿರ್ಮಾಪಕರು ಇದೀಗ ಹಾಸ್ಯ ಚಕ್ರವರ್ತಿ ಕೋಮಲ್ ಅವರ ಕಂಬ್ಯಾಕ್ ಸಿನಿಮಾವಾದ ಉಂಡೆನಾಮ ವನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಏಪ್ರಿಲ್ 14ರಂದು ಕೋಮಲ್ ಅವರ ಬಹು ನಿರೀಕ್ಷಿತ ಚಿತ್ರ ಉಂಡೆನಾಮ ರಿಲೀಸ್ ಆಗುತ್ತಿದೆ.

ಇದಕ್ಕೆ ಸಂಬಂಧಪಟ್ಟ ಹಾಗೆ ಇಡೀ ತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದರ ನಿರ್ಮಾಪಕರಾದ ಕೆ ಎಲ್ ನಂದಕಿಶೋರ್ ಅವರನ್ನು ಸಂದರ್ಶನ ಮಾಡುವ ಸಮಯದಲ್ಲಿ ನಿರೂಪಕರೊಬ್ಬರು ಬುದ್ಧಿವಂತ2 ಸಿನಿಮಾ ಬಗ್ಗೆ ಪ್ರಶ್ನಿಸಿದ್ದಾರೆ. ಬುದ್ಧಿವಂತ 2 ಸಿನಿಮಾ ಏನಾಯಿತು, ಸಿನಿಮಾ ಬಗ್ಗೆ ಅಪ್ಡೇಟ್ ಕೂಡ ಇಲ್ಲ, ಸಿನಿಮಾ ನಿಂತು ಹೋಯ್ತಾ ಜನ ಈ ಸಿನಿಮಾ ಬರುವುದಿಲ್ಲ ಶೂಟಿಂಗ್ ನಿಂತು ಹೋಗಿದೆ ಎಂದೆಲ್ಲ ಮಾತನಾಡುತ್ತಿದ್ದಾರೆ.

ಈ ಸಿನಿಮಾ ರಿಲೀಸ್ ಆಗುವುದಿಲ್ಲವೇ, ಸಿನಿಮಾ ಬಗ್ಗೆ ಏನಾಗಿದೆ ಎಂದು ಕೇಳಿದಾಗ ನಾವು ಸಿನಿಮಾ ಮುಹೂರ್ತವನ್ನು ಕೋವಿಡ್ ಸಮಯ ಶುರುವಾಗುವಾಗ ಮಾಡಿದ್ದೆವು. ಆದರೆ ಮುಹೂರ್ತ ಆದ ಒಂದು ತಿಂಗಳ ನಂತರ ಲಾಕ್ ಡೌನ್ ಆಗಿ ಹೋಯಿತು. ಸಿನಿಮಾ ಬಾರಿ ಬಜೆಟ್ ಅಲ್ಲಿ ತಯಾರಾಗಿದೆ, ಅದಕ್ಕಾಗಿ ಅದ್ದೂರಿ ಸೆಟ್ಗಳು ಕೂಡ ಹಾಕಬೇಕು. ಪರ್ಮಿಷನ್ ಸಿಕ್ಕಾಗ ನಾವು ಪ್ರಯತ್ನ ಮಾಡಿದರು ಮತ್ತೆ ಲಾಕ್ ಡೌನ್ ಆದ ಕಾರಣ ಮತ್ತೆ ಅದನ್ನೆಲ್ಲ ಮುಚ್ಚುವ ಪರಿಸ್ಥಿತಿ ಬಂತು.

ಅದಕ್ಕೆ ಸರಿಯಾಗಿ ಪ್ಲಾನ್ ಮಾಡಿಕೊಂಡು ಈಗ ಎಲ್ಲಾ ಪರ್ಮೀಷನ್ ಸಿಕ್ಕ ನಂತರ ಸಿನಿಮಾ ಪೂರ್ತಿ ಗೊಳಿಸಿದ್ದೇವೆ. ಸಿನಿಮಾ ಪೂರ್ತಿಯಾಗಿ ಈಗ ತಯಾರಾಗಿದೆ. ಆದರೆ ಕಬ್ಜಾ ಸಿನಿಮಾ ಆದ ಮೇಲೆ ಈ ಸಿನಿಮಾ ರಿಲೀಸ್ ಮಾಡಬೇಕು ಎಂದು ಮೊದಲೇ ನಾವು ಒಪ್ಪಂದ ಮಾಡಿಕೊಂಡಿದ್ದೆವು. ಹಾಗಾಗಿ ಜುಲೈ ತಿಂಗಳಷ್ಟರಲ್ಲಿ ಬುದ್ದಿವಂತ2 ಸಿನಿಮಾ ನೋಡುಗರಿಗೆ ಸಿಗುತ್ತದೆ.

ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ ಇದು ಕರ್ನಾಟಕದಲ್ಲಿ ಈ ಸಿನಿಮಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ಖಂಡಿತ ಈ ಸಿನಿಮಾ ನಿಲ್ಲುವ ಮಾತೇ ಇಲ್ಲ. ಈ ತಿಂಗಳಿಂದಲೇ ನಾವು ಬುದ್ಧಿವಂತ2 ಸಿನಿಮಾ ಕುರಿತ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ.

Leave a Comment