ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬಟ್ಟೆಗಳ ಸಂಖ್ಯೆ ಹೆಚ್ಚಾಗಿ ಇರುತ್ತದೆ ಹೌದು ಅದರಲ್ಲಂತೂ ಹೆಣ್ಣುಮಕ್ಕಳು ಇರುವಂತಹ ಕಡೆ ಬಟ್ಟೆಗಳ ಪ್ರಮಾಣ ಹೆಚ್ಚಾಗಿ ಇರುತ್ತದೆ ಎಂದು ಹೇಳಬಹುದು. ಎಲ್ಲೆ ಹೋದರು ಹೆಣ್ಣು ಮಕ್ಕಳು ಹೊಸದಾದಂತಹ ಬಟ್ಟೆಗಳನ್ನು ಖರೀದಿ ಮಾಡುವುದು ಸರ್ವೇಸಾಮಾನ್ಯ ಆದರೆ ಅವೆಲ್ಲವನ್ನು ಸಹ ಒಂದೇ ಬೀರುವಿನಲ್ಲಿ ಇಡುವುದು ಕಷ್ಟ.
ಹೌದು ಅದಕ್ಕಾಗಿಯೇ ಕೆಲವೊಂದಷ್ಟು ಜನ ಬಟ್ಟೆಗಳನ್ನು ಬೇರೆ ಬ್ಯಾಗ್ ಗಳಲ್ಲಿ ಹಾಗೂ ಬಕೆಟ್ ಹೀಗೆ ಕೆಲವೊಂದು ಕಡೆ ಮಂಚದ ಕೆಳಗಡೆ ಇಡುತ್ತಿರುತ್ತಾರೆ ಆದರೆ ಇನ್ನು ಮುಂದೆ ಈ ರೀತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಕೇವಲ ಒಂದು ಬಟ್ಟೆಯ ಬ್ಯಾಗ್ ಇದ್ದರೆ ಸಾಕು ಅಂದರೆ ನೀವು ಅಂಗಡಿಗಳಲ್ಲಿ ಹೊಸದಾಗಿ ಖರೀದಿ ಮಾಡಿದರೆ ಬಟ್ಟೆ ಬ್ಯಾಗ್ ಇರುತ್ತದೆಯಲ್ಲಾ ಅದೊಂದು ಇದ್ದರೆ ಸಾಕು.
ಹೊಟ್ಟೆ ಕರಗಿಸಲು ಇದಕ್ಕಿಂತ ಬೇರೆ ಉಪಾಯ ಇಲ್ಲ.! ಈ ರೀತಿ ಮಾಡಿ ಸುಲಭವಾಗಿ ದೇಹದ ತೂಕ ಕಡಿಮೆಯಾಗುತ್ತೆ.!
ನೀವು ಅದರ ಸಹಾಯದಿಂದ ಹೆಚ್ಚಿನ ಬಟ್ಟೆಯನ್ನು ಅದರಲ್ಲಿ ಇಟ್ಟು ಬಿರುವಿನಲ್ಲಿ ಒಂದು ಕಡೆ ನೇತು ಹಾಕಬಹುದು. ಹೌದು ಆ ಒಂದು ಬ್ಯಾಗ್ ನಲ್ಲಿಯೇ ಹೆಚ್ಚಿನ ಪ್ರಮಾಣದ ಬಟ್ಟೆಯನ್ನು ನೀವು ಇಡಬಹುದು ಹಾಗಾದರೆ ಅದನ್ನು ಹೇಗೆ ಇಡುವುದು ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.
* ಮೊದಲು ಆ ಬ್ಯಾಗ್ ತೆಗೆದುಕೊಂಡು ಆ ಬ್ಯಾಗ್ ಸೈಡ್ ಅಲ್ಲಿ ಕತ್ತರಿಸ ಬೇಕು ಅದರ ಪಕ್ಕದಲ್ಲಿ ಇರುವಂತಹ ಸಂಪೂರ್ಣ ಭಾಗವನ್ನು ತೆಗೆದು ಆ ಒಂದು ಹಿಡಿಕೆಯನ್ನು ನಿಮ್ಮ ಬೀರುವಿನ ಮೇಲ್ಭಾಗಕ್ಕೆ ನೇತುಹಾಕಿ ಬ್ಯಾಗ್ ಕತ್ತರಿಸಿರುವಂತಹ ಜಾಗದಲ್ಲಿ ಒಂದರ ಮೇಲೊಂದು ಬಟ್ಟೆಗಳನ್ನು ಇಡಬಹುದು ಹೌದು ಈ ರೀತಿ ಇರುವುದರಿಂದ ಹೆಚ್ಚಿನ ಬಟ್ಟೆಗಳನ್ನು ಅದರೊಳಗೆ ಇಟ್ಟು ಒಂದೇ ಕಡೆ ಸಿಗುವಂತೆ ಇಡಬಹುದು.
ಮನೆಯಲ್ಲಿ ನೆಮ್ಮದಿ ನೆಲೆಸಲು ಇದನ್ನು ಅನುಸರಿಸಿ.!
ಈ ಒಂದು ವಿಧಾನ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಅದರ ಒಳಗಡೆ ಕೇವಲ ಬಟ್ಟೆ ಅಷ್ಟೇ ಅಲ್ಲದೆ ಅಗತ್ಯವಿರುವಂತಹ ಕೆಲವೊಂದು ವಸ್ತುಗಳನ್ನು ಸಹ ಇಡಬಹುದು ಗಂಡು ಮಕ್ಕಳ ಹೆಣ್ಣು ಮಕ್ಕಳ ಪ್ಯಾಂಟ್ ಟಿ-ಶರ್ಟ್ ಹೀಗೆ ಪ್ರತಿಯೊಂದನ್ನು ಸಹ ಇಡಬಹುದು ಹಾಗೂ ಜಾಗದ ಉಳಿತಾಯವೂ ಸಹ ಆಗುತ್ತದೆ.
* ಇನ್ನು ಎರಡನೆಯದಾಗಿ ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆ ಯ ಮೊಬೈಲ್ ಚಾರ್ಜರ್ ಇದ್ದರೆ ಅದನ್ನು ಇನ್ನು ಮುಂದೆ ಬಿಸಾಕುವ ಅವಶ್ಯಕತೆ ಇರುವುದಿಲ್ಲ. ಅದನ್ನು ಎರಡು ಎಳೆಯಲ್ಲಿ ಮಾಡಿಕೊಂಡು ದಪ್ಪದಾಗಿರುವಂತಹ ಯಾವುದಾದರೂ ಮಣಿಯನ್ನು ಅದರೊಳಗೆ ತೂರಿಸಬೇಕು ನಂತರ ಒಂದು ಮಣಿಯನ್ನು ಕೆಳಭಾಗದಲ್ಲಿ ಇಟ್ಟು ಅದರ ಮೇಲೆ ಒಂದು ಚಿಕ್ಕ ಬಟ್ಟೆಯನ್ನು ಮಡಚಿ ಇಡಬೇಕು ಆನಂತರ ಒಂದು ಮಣಿಯನ್ನು ತಳ್ಳಿ ಮತ್ತೊಂದು ಬಟ್ಟೆ ಹೀಗೆ ಒಂದರ ಮೇಲೊಂದು ಬಟ್ಟೆಯನ್ನು ಹಾಕಿ ಅದನ್ನು ಯಾವುದಾದರೂ ಸ್ಥಳ ಇರುವ ಕಡೆ ನೇತು ಹಾಕಬಹುದು.
ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಬಹು ಮುಖ್ಯ ವಿಚಾರ.!
ಈ ರೀತಿಯಾಗಿ ನೀವು ಮಾಡಿಕೊಂಡರೆ ನಿಮ್ಮ ಬಾಗಿಲಿನ ಹಿಂಭಾಗದಲ್ಲಿ ನೇತು ಹಾಕಬಹುದು ಅಥವಾ ಬೀರುವಿನ ಒಳಭಾಗದಲ್ಲಿಯೂ ಕೂಡ ನೇತು ಹಾಕಬಹುದು. ಇದರಿಂದ ಬಟ್ಟೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ಒಂದು ಕಡೆ ಸುಲಭವಾಗಿ ಸಿಗುವ ರೀತಿ ಜೋಡಿಸಿಟ್ಟು ಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿಯ ಚಾರ್ಜರ್ ಇದ್ದರೆ ಇನ್ನು ಮುಂದೆ ಬಿಸಾಕಬೇಡಿ ಬದಲಿಗೆ ಈ ರೀತಿಯ ಉಪಯೋಗವನ್ನು ಮಾಡಿಕೊಂಡು ಮತ್ತೆ ಉಪಯೋಗಿಸುವುದು ತುಂಬಾ ಒಳ್ಳೆಯದು.
* ನೀವೇನಾದರೂ ಬೇರೆ ಸ್ಥಳಗಳಿಗೆ ಪ್ರಯಾಣ ಮಾಡಬೇಕು ಎಂದರೆ ಬಟ್ಟೆಗಳನ್ನು ಸಿಕ್ಕ ಸಿಕ್ಕ ಹಾಗೆ ಮಡಚಿ ಇಟ್ಟುಕೊಂಡರೆ ಹೆಚ್ಚಿನ ಸ್ಥಳದ ಅವಶ್ಯಕತೆ ಇರುತ್ತದೆ. ಆದರೆ ನಿಮ್ಮ ಬಟ್ಟೆಯನ್ನು ಸರಿಯಾದ ರೀತಿ ಯಲ್ಲಿ ಮಡಚಿಟ್ಟು ಅದನ್ನು ತೆಗೆದುಕೊಂಡು ಹೋಗುವುದು ಸೂಕ್ತ ಅದರಲ್ಲೂ ಟೀ-ಶರ್ಟ್ ಇವುಗಳನ್ನು ಸಣ್ಣದಾಗಿ ಮಡಚಿ ಅದನ್ನು ನಿಮ್ಮ ಬ್ಯಾಗಿನಲ್ಲಿ ಇಟ್ಟುಕೊಂಡರೆ ಸ್ಥಳದ ಕೊರತೆ ಉಂಟಾಗುವುದಿಲ್ಲ ಹಾಗೂ ಹೆಚ್ಚಿನ ಬಟ್ಟೆಯನ್ನು ಕೂಡ ತೆಗೆದುಕೊಂಡು ಹೋಗಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.