ಈಗ ಪ್ರತಿಯೊಬ್ಬರ ಮನೆಯಲ್ಲೂ ಕೂಡ ವಾಷಿಂಗ್ ಮಿಷನ್ ಇರುತ್ತದೆ. ಕೆಲವರು ಆರೋಗ್ಯ ಸಮಸ್ಯೆ ಇದೆ ಬಟ್ಟೆ ವಾಶ್ ಮಾಡಲು ಆಗುವುದಿಲ್ಲ ಎಂದು ಖರೀದಿಸಿದರೆ, ಇನ್ನು ಕೆಲವರು ಬಟ್ಟೆ ವಾಶ್ ಮಾಡಲು ಹೆಚ್ಚು ಸಮಯ ಬೇಕು, ಸಮಯವಿಲ್ಲ ಹಾಗಾಗಿ ಮಿಷನ್ ಇದ್ದರೆ ಸಮಯ ಉಳಿಯುತ್ತದೆ ಎಂದು ಮಿಷನ್ ಗೆ ಹಾಕಿ ಬಟ್ಟೆಗಳನ್ನು ವಾಶ್ ಮಾಡುತ್ತಾರೆ.
ಈ ರೀತಿ ಮಿಷನ್ ಗಳಿಂದ ಬಟ್ಟೆ ವಾಶ್ ಮಾಡುವವರ ಸಾಮಾನ್ಯ ಕಂಪ್ಲೆಂಟ್ ಏನೆಂದರೆ ನಮ್ಮ ಬಟ್ಟೆ ನೀಟಾಗಿ ವಾಶ್ ಆಗುತ್ತಿಲ್ಲ, ಹೊಸ ಬಟ್ಟೆಗಳು ಕೂಡ ಒಂದೆರಡು ವಾಷ್ ಗೆ ಫೇಡ್ ಆಗಿ ಹಳೆ ಬಟ್ಟೆ ರೀತಿ ಆಗುತ್ತಿವೆ, ಬಟ್ಟೆಗಳು ಹಾಳದ ರೀತಿ ಎನಿಸುತ್ತಿದೆ ಇನ್ನು ಇತ್ಯಾದಿ ದೂರುಗಳು ಇದ್ದೇ ಇದೆ.
ಯಾವ ರೀತಿ ವಾಷಿಂಗ್ ಮಷೀನ್ ನಲ್ಲಿ ವಾಶ್ ಮಾಡುವುದರಿಂದ ಬಟ್ಟೆಗಳು ನೀಟಾಗಿ ಕ್ಲೀನ್ ಆಗುತ್ತವೆ ಮತ್ತು ಯಾವೆಲ್ಲ ತಪ್ಪು ಮಾಡುವುದರಿಂದ ಯಾವ ರೀತಿ ಸಮಸ್ಯೆ ಆಗುತ್ತದೆ ಇತ್ಯಾದಿಗಳ ಬಗ್ಗೆ ಗೃಹಿಣಿಯರಿಗೆ ಅನುಕೂಲ ಆಗಲಿ ಎಂದು ಕೆಲ ಉಪಯುಕ್ತ ಮಾಹಿತಿಗಳನ್ನು ತಿಳಿಸಿ ಕೊಡುತ್ತಿದ್ದೇವೆ.
● ನೀವು ವಾಷಿಂಗ್ ಮಿಷನ್ ಗೆ ವಾಷಿಂಗ್ ಪೌಡರ್ ಹಾಕುವ ಬದಲು ಲಿಕ್ವಿಡ್ ಬಳಸಿ, ಒಂದು ವೇಳೆ ಪೌಡರ್ ಬಳಸಬೇಕಾದ ಪರಿಸ್ಥಿತಿ ಇದ್ದರೆ. ಅದನ್ನು ನೀರಿಗೆ ಹಾಕಿ ಅದು ಕರಗಿದ ಮೇಲೆ ಮಿಷನ್ ಗೆ ಹಾಕಿ ಇಲ್ಲವಾದಲ್ಲಿ ಅದು ಮಿಷನ್ ಕೆಳಗೆ ಸೇರುತ್ತದೆ ಬಟ್ಟೆ ನೀಟಾಗಿ ಕ್ಲೀನ್ ಆಗುವುದಿಲ್ಲ, ನಂತರದ ದಿನಗಳಲ್ಲಿ ಮಿಷನ್ ಹಾಳಾಗಬಹುದು.
ನಿಮಗೆ ಬೇಕಾದ ಗಂಡು ಅಥವಾ ಹೆಣ್ಣು ಮಗುವನ್ನು ಪಡೆಯಲು ಗಂಡ ಹೆಂಡತಿ ಈ ಸೂತ್ರ ಪಾಲಿಸಿ.!
● ಹೆಚ್ಚು ಕೊಳೆ ಇರುವ ಬಟ್ಟೆಗಳನ್ನು ಮೊದಲು ವಾಷಿಂಗ್ ಪೌಡರ್ ಹಾಕಿ ನೆನೆಸಿ ನಂತರ ಮಿಷನ್ ಗೆ ಹಾಕಿ
● ಬಿಳಿ ಬಟ್ಟೆಗಳನ್ನು ಬೇರೆ ಬಟ್ಟೆಗಳ ಜೊತೆ ವಾಶ್ ಮಾಡಲು ಹಾಕಬೇಡಿ, ಎಲ್ಲಾ ಬಿಳಿ ಬಟ್ಟೆಗಳನ್ನು ಸೆಪೆರೇಟ್ ವಾಶ್ ಮಾಡಿ. ಆ ಸಮಯದಲ್ಲಿ ಸ್ವಲ್ಪ ಅಡುಗೆ ಸೋಡಾ ಕೂಡ ಹಾಕಿದರೆ ನೀಟಾಗಿ ವಾಶ್ ಆಗುತ್ತದೆ.
● ಬಟ್ಟೆಗಳು ಬೇಗ ಫೇಡ್ ಆಗಬಾರದು, ಎಂಬ್ರಾಯ್ಡರಿ ಕೀಳಬಾರದು, ಎಂದರೆ ಯಾವಾಗಲೂ ಬಟ್ಟೆಯನ್ನು ಉಲ್ಟಾ ಮಾಡಿ ವಾಶ್ ಮಾಡಲು ಹಾಕಬೇಕು.
● ಕಾಟನ್ ಬಟ್ಟೆಗಳಿಗೆ, ಡಾರ್ಕ್ ವಾಶ್, ಕ್ಲಿಕ್ ವಾಶ್, ಬ್ಲಾಂಕೆಟ್ ಗಳಿಗೆ ಸೆಪರೇಟ್ ಆಪ್ಷನ್ ಇರುತ್ತದೆ. ಆ ಪ್ರಕಾರವಾಗಿ ಸೆಟ್ ಮಾಡಿಕೊಂಡು ವಾಶ್ ಮಾಡಿದರೆ ಚೆನ್ನಾಗಿ ವಾಶ್ ಆಗುತ್ತದೆ.
● ಒಂದೇ ಬಾರಿಗೆ ಲೋಡ್ ಫುಲ್ ಬಟ್ಟೆ ಹಾಕುವುದರಿಂದ ಬಟ್ಟೆ ನೀಟಾಗಿ ವಾಶ್ ಆಗುವುದಿಲ್ಲ, ಅಂದಾಜು 6-6.5 kg ಮಿಷನ್ ಗೆ 70%ರಷ್ಟು ಅಂದರೆ 6 ಜೊತೆ ಬಟ್ಟೆ ಹಾಕಿ ಅದು ರೋಟೆಟ್ ಆಗಲು ಸ್ಪೇಸ್ ಕೊಡಬೇಕು ಆಗ ಬಟ್ಟೆ ನೀಟಾಗಿ ವಾಶ್ ಆಗುತ್ತದೆ.
● ಮೊದಲೇ ಲಿಕ್ವಿಡ್ ಹಾಕಿ ಬಟ್ಟೆ ಹಾಕಿ ವಾಷ್ ಮಾಡುವುದಕ್ಕಿಂತ ಮೊದಲು ಬಟ್ಟೆ ಹಾಕಿ ನಂತರ ಮಿಷನ್ ಸ್ಟಾರ್ಟ್ ಮಾಡಿ ನೀರು ಬರಲು ಸ್ಟಾರ್ಟ್ ಆದಾಗ ಲಿಕ್ವಿಡ್ ಹಾಕುವುದರಿಂದ ಲಿಕ್ವಿಡ್ ಚೆನ್ನಾಗಿ ಬಟ್ಟೆಗಳ ಮತ್ತೆ ಸೇರಿ ನೀಟಾಗಿ ವಾಶ್ ಆಗುತ್ತಿದೆ.
● ಕರ್ಟನ್ ಗಳನ್ನು ವಾಶ್ ಮಾಡುವಾಗ ಅವುಗಳ ರಿಂಗ್ ಇರುವ ಕಡೆ ಪ್ಲಾಸ್ಟಿಕ್ ಇದ್ದರೆ ಕಟ್ ಆಗುತ್ತದೆ. ಹಾಗಾಗಿ ರಿಂಗ್ ಗಳನ್ನೆಲ್ಲ ಸೇರಿಸಿ ಒಂದು ದಾರ ಕಟ್ಟಿ ನಂತರ ವಾಶ್ ಮಾಡಲು ಹಾಕಿ.
● ಹೊಸ ಬಟ್ಟೆಗಳನ್ನು ಒಂದೇ ಬಾರಿಗೆ ಮಿಷನ್ ಗೆ ಹಾಕುವುದು ತಪ್ಪು, ಮೊದಲು ಅದನ್ನು ಕೈಯಲ್ಲಿ ವಾಶ್ ಮಾಡಿ ನೋಡಿ ಬಣ್ಣ ಹೋಗಲಿಲ್ಲ ಎಂದರೆ ನೆಕ್ಸ್ಟ್ ವಾಷಿಂಗ್ ಮಿಷನ್ ಹಾಕಿ. ಇಲ್ಲವಾದಲ್ಲಿ ಅದು ಬಣ್ಣ ಹೋಗುವ ಬಟ್ಟೆ ಆದರೆ ಮಿಷನ್ ಗೆ ಹಾಕಿರುವ ಎಲ್ಲಾ ಬಟ್ಟೆಗೂ ಸ್ಪ್ರೆಡ್ ಆಗಿಬಿಡುತ್ತದೆ.
● ಬಟ್ಟೆಗಳಲ್ಲಿ ವಾಶ್ ಕೇರ್ ಲೇಬಲ್ ಇರುತ್ತದೆ. ಅದರಲ್ಲಿ ಸೂಚಿಸಿರುವ ಡೀಟೇಲ್ಸ್ ಫಾಲ್ಲೋ ಮಾಡಿ ಬಟ್ಟೆಯನ್ನು ವಾಶ್ ಮಾಡಲು ಹಾಕಿದರೆ ಬಟ್ಟೆ ಹಾಳಾಗುವುದಿಲ್ಲ.