ಪ್ರತಿಯೊಬ್ಬರ ಸೌಂದರ್ಯವನ್ನು ಹೆಚ್ಚಿಸುವುದು ಅವರ ಹಲ್ಲುಗಳು ಹಾಗೂ ಅವರ ತಲೆ ಕೂದಲು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಯಾರು ಎಷ್ಟೇ ಕಪ್ಪಾಗಿದ್ದರು ಕೂಡ ಅವರ ಬಣ್ಣ ಮುಖ್ಯವಲ್ಲ ಅವರ ಹಲ್ಲುಗಳು ಹಾಗೂ ಅವರ ಕೂದಲುಗಳಿಂದ ಆ ವ್ಯಕ್ತಿ ತುಂಬಾ ಸುಂದರವಾಗಿ ಕಾಣುತ್ತಾನೆ ಎಂದು ಹೇಳಬಹುದು.
ಆದರೆ ಕೆಲವೊಂದಷ್ಟು ಜನರಿಗೆ ಯಾವುದೇ ರೀತಿಯ ಸಿಹಿ ಪದಾರ್ಥಗಳನ್ನು ತಿಂದರೆ ಹಾಗೂ ಗಟ್ಟಿ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಹಲ್ಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ ಆದ್ದರಿಂದ ಅವರು ಆ ನೋವನ್ನು ತಾಳಲಾರದೆ ಹಲ್ಲುಗಳನ್ನು ಕೀಳಿಸುವಂತಹ ಸನ್ನಿವೇಶಗಳನ್ನು ಸಹ ನಾವು ನೋಡಿರಬಹುದು.
ಹಾಗಾದರೆ ಈ ದಿನ ಹಲ್ಲಿನ ವಿಚಾರವಾಗಿ ಸಂಬಂಧಿಸಿದ ಅಂದರೆ. ಹಲ್ಲುಗಳನ್ನು ನಾವು ಯಾವ ರೀತಿಯಾಗಿ ನೋಡಿಕೊಳ್ಳಬೇಕು, ಯಾವ ರೀತಿಯಾಗಿ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಹಲ್ಲುಗಳ ಆರೋಗ್ಯ ಹಾಳಾಗದಂತೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು, ಹಲ್ಲುಗಳು ಸದಾ ಕಾಲ ಹೊಳೆಯಬೇಕು ಎಂದರೆ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
* ಜಾಜಿ ಎಲೆಗಳನ್ನು ಚೆನ್ನಾಗಿ ತೊಳೆದು, ಬಾಯಲ್ಲಿಟ್ಟುಕೊಂಡು ಹಲ್ಲುಗ ಳಿಂದ ಜಗಿಯುವುದರಿಂದ ಹಲ್ಲು ನೋವು ಕಡಿಮೆ ಆಗುವುದಲ್ಲದೇ ಬಾಯಿ ಹುಣ್ಣು ವಾಸಿಯಾಗುವುದು. ದುರ್ವಾಸನೆ ಇದ್ದರೆ ದೂರವಾಗುವದು.
* ಎಳೆಯ ಬೇವಿನ ಕಡ್ಡಿಗಳಿಂದ ಹಲ್ಲು ಉಜ್ಜಿದರೆ ಉತ್ತಮ ಫಲಿತಾಂಶ ಕಂಡು ಬರುತ್ತದೆ. ಉಜ್ಜುವ ಮೊದಲು ಕಡ್ಡಿಗಳನ್ನು ಹಲ್ಲುಗಳಿಂದ ಅಗೆಯಬೇಕು. ಆಗ ಬರುವ ದ್ರವದಿಂದ ಬಾಯನ್ನು ಚೆನ್ನಾಗಿ ಮುಕ್ಕಳಿಸಬೇಕು.
* ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಇದರ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲಿನಲ್ಲಿರುವ ಕ್ರಿಮಿಗಳು ನಾಶವಾಗುತ್ತದೆ.
* ಒಣಗಿಸಿಟ್ಟ ನಿಂಬೆ ಸಿಪ್ಪೆಯನ್ನು ಪುಡಿಮಾಡಿ ಅಡಿಗೆ ಸೋಡ, ಉಪ್ಪು ಬೆರೆಸಿಟ್ಟುಕೊಂಡು ಪ್ರತಿದಿನ ಎರಡು ಸಲ ಹಲ್ಲುಜ್ಜಿದರೆ ಹಲ್ಲು ಫಳಫಳ ಹೊಳೆಯುತ್ತವೆ.
* ಸ್ವಲ್ಪ ಬಾದಾಮಿ ಕುಟ್ಟಿ ತೆಗೆದ ನಂತರ ಅದರ ಹೊರಗಿನ ಗಟ್ಟಿಯಾದ ಸಿಪ್ಪೆಯನ್ನು ಸುಟ್ಟು ಅದರ ಬೂದಿಯಿಂದ ಹಲ್ಲುಗಳನ್ನು ಉಜ್ಜಿದರೆ ಹಲ್ಲುಗಳು ಗಟ್ಟಿಯಾಗುತ್ತವೆ.
* ಈ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಬೇಕು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ದಿನವು ಈ ಪುಡಿಯಿಂದ ಉಜ್ಜಿದರೆ ಹಲ್ಲುಗಳು ಬೆಳ್ಳಗಾಗುತ್ತವೆ.
* ರಸ ತೆಗೆದ ನಿಂಬೆ ಹೋಳಿಗೆ ನಾಲ್ಕು ತೊಟ್ಟು ಸಾಸಿವೆ ಎಣ್ಣೆ ಸ್ವಲ್ಪ ಉಪ್ಪು ಚಿಮುಕಿಸಿ ಹಲ್ಲುಜ್ಜಿದರೆ ಹಲ್ಲುಗಳ ಮೇಲಿನ ಹಳದಿ ಬಣ್ಣ ಹೊರಟು ಹೋಗುತ್ತದೆ.
*ನಿಂಬೆರಸ ಮತ್ತು ಉಪ್ಪಿನ ಮಿಶ್ರಣದಿಂದ ಹಲ್ಲುಜ್ಜುವುದರಿಂದ ಹಲ್ಲುಗಳ ಹೊಳಪು ಹೆಚ್ಚುತ್ತದೆ.
* ಪುದಿನಾ ಸೊಪ್ಪನ್ನು ಬಾಯಲ್ಲಿ ಹಾಕಿ ಜಗಿಯುತ್ತಿದ್ದರೆ ಬಾಯಿಯ ದುರ್ಗಂದ ದೂರವಾಗುತ್ತದೆ ಮತ್ತು ಹಲ್ಲು ಗಟ್ಟಿಯಾಗುತ್ತದೆ.
* ಉಪ್ಪಿನ ಪುಡಿಯಿಂದ ಹಲ್ಲು ಉಜ್ಜಿದರೆ ಹಲ್ಲಿನಲ್ಲಿ ಹುಳುಕು ಉಂಟು ಮಾಡುವ ಕ್ರಿಮಿಗಳು ನಾಶವಾಗಿ ಹಲ್ಲು ಗಟ್ಟಿಯಾಗುತ್ತದೆ ಹಾಗೂ ಶುಭ್ರವಾಗಿ ಕಾಣುತ್ತದೆ.
* ಪ್ರತಿದಿನ ಊಟದ ನಂತರ ಸೇಬನ್ನು ಹಲ್ಲಿನಿಂದ ಕಚ್ಚಿ ತಿನ್ನುವುದರಿಂದ ಹಲ್ಲುಗಳು ಮಿಂಚಿನಂತೆ ಹೊಳೆಯುತ್ತವೆ. ಗಜ್ಜರಿಯನ್ನು ಕಚ್ಚಿ ತಿನ್ನುವುದ ರಿಂದ ಹಲ್ಲುಗಳು ಹೊಳೆಯುತ್ತದೆ.
* ಉಪ್ಪು, ಬೇಕಿಂಗ್ ಪೌಡರ್ ಸಮಪ್ರಮಾಣದಲ್ಲಿ ಬೆರೆಸಿ ದಿನವೂ ಎರಡು ಹೊತ್ತು ಹಲ್ಲಿಗೆ ತಿಕ್ಕಿದರೆ ಹುಟ್ಟಿನಿಂದ ಬಂದಂತಹ ಕಂದುಬಣ್ಣ ಕೂಡ ನಿವಾರಣೆಯಾಗಿ ಹಲ್ಲು ಹೊಳೆಯುತ್ತವೆ.
* ತೆಂಗಿನ ಚಿಪ್ಪನ್ನು ಸುಟ್ಟು ಕರಕು ಮಾಡಿ ಅದನ್ನು ಉಪ್ಪಿನ ಜೊತೆಗೆ ಹಲ್ಲುಜ್ಜಲು ಬಳಸಿದರೆ ಹಲ್ಲು ವಸಡು ಗಟ್ಟಿಯಾಗುತ್ತದೆ.
* ಭತ್ತದ ಹೊಟ್ಟನ್ನು ಸುಟ್ಟು ಬೂದಿಮಾಡಿ ಅದಕ್ಕೆ ಅಡುಗೆ ಉಪ್ಪು, ಮತ್ತು ಸ್ವಲ್ಪ ನಿಂಬೆರಸ ಇವುಗಳನ್ನು ಸೇರಿಸಿ ಅದರಿಂದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲಿನ ಹೊಳಪು ಹೆಚ್ಚುತ್ತದೆ.