ಮನುಷ್ಯ ದೈಹಿಕ ಶ್ರಮ ಖರ್ಚು ಮಾಡಿ ಮಾಡುತ್ತಿದ್ದ ಕೆಲಸಗಳನ್ನು ಮಾಡಲು ಈಗ ಯಂತ್ರಶಕ್ತಿ ಬಳಕೆ ಆಗುತ್ತಿದೆ. ಇದು ಗೃಹಿಣಿಯರಿಗೂ ಕೂಡ ಅನುಕೂಲತೆ ಮಾಡಿ ಕೊಡುತ್ತಿದ್ದು ಅಡಿಗೆ ಮನೆ ಕೆಲಸ, ಮನೆ ಕೆಲಸಗಳಿಗೂ ಯಂತ್ರ ಶಕ್ತಿಯ ಬಳಕೆ ಆಗುತ್ತಿದೆ. ಪ್ರತಿ ಮನೆಗಳಲ್ಲೂ ಕೂಡ ಬಟ್ಟೆ ವಾಶ್ ಮಾಡುವುದಕ್ಕಾಗಿ ವಾಷಿಂಗ್ ಮಷೀನ್ ಬಂದಿರೋದನ್ನ ನಾವು ಕಾಣಬಹುದು.
ಅವರವರ ಅನುಕೂಲತೆ ಅಥವಾ ಇಚ್ಛೆಗೆ ಅನುಸಾರವಾಗಿ ಫ್ರಂಟ್ ಲೋಡ್ ಅಥವಾ ಟಾಪ್ ಲೋಡ್ ವಾಷಿಂಗ್ ಮಷೀನ್ ಗಳನ್ನು ಬಳಸಿ ಅವರ ದಿನನಿತ್ಯದ ಬಟ್ಟೆಗಳನ್ನು ಕ್ಲೀನ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಮಯದ ಉಳಿತಾಯ ಆಗುತ್ತಿರುವುದರ ಜೊತೆಗೆ ಮಹಿಳೆಯರ ಶ್ರಮವೂ ಕೂಡ ಉಳಿತಾಯವಾಗುತ್ತಿದೆ.
ಆದರೆ ಮಿಷಿನ್ ಬಳಕೆ ಬಗ್ಗೆ ಅನೇಕ ಕಂಪ್ಲೀಟ್ ಗಳನ್ನು ಕೂಡ ಸರ್ವೇಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಬಟ್ಟೆ ಚೆನ್ನಾಗಿ ಕ್ಲೀನ್ ಆಗುತ್ತಿಲ್ಲ ಎನ್ನುವುದು ಹೆಚ್ಚಿನ ಕಂಪ್ಲೇಂಟ್, ಇದರ ಜೊತೆಗೆ ಪದೇ ಪದೇ ರಿಪೇರಿಗೆ ಬರುತ್ತಿದ್ದೆ ಎನ್ನುವ ದೂರು ಕೂಡ. ಮನೆಯಲ್ಲಿ ಫ್ರಂಟ್ ಲೋಡ್ ವಾಷಿಂಗ್ ಮಿಷನ್ ಇರಲಿ ಅಥವಾ ಅದು ಟಾಪ್ ಲೋಡ್ ವಾಷಿಂಗ್ ಮಿಷನ್ ಇರಲಿ ನಿಮ್ಮ ಮನೆಗೆ ವಾಷಿಂಗ್ ಮಷೀನ್ ಹೆಚ್ಚು ದಿನ ಬಾಳಿಕೆ ಬರಬೇಕು.
ಪದೇ ಪದೇ ರಿಪೇರಿ ಆಗಬಾರದು ಎಂದರೆ ಮಿಷನ್ ಗೆ ಹಾಕುವ ಬಟ್ಟೆಯು ಕ್ಲೀನ್ ಆಗಿ ವಾಶ್ ಆಗಬೇಕು ಎಂದರೆ ಈಗ ನಾವು ಹೇಳುವ ಈ ಸುಲಭ ಉಪಾಯವನ್ನು ಬಳಸಿ. ಪ್ರತಿ ಎರಡು ತಿಂಗಳಿಗೊಮ್ಮೆ ಈಗ ನಾವು ಹೇಳುವ ಈ ರೀತಿಯಾಗಿ ನೀವು ನಿಮ್ಮ ವಾಷಿಂಗ್ ಮಿಷನ್ ಅನ್ನು ಕ್ಲೀನ್ ಮಾಡಿದರೆ ಈ ಎಲ್ಲ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.
ವಾಷಿಂಗ್ ಮಿಷನ್ ಅನ್ನು ಕೂಡ ಕ್ಲೀನ್ ಮಾಡಬೇಕು ಎನ್ನುವುದನ್ನು ಅನೇಕರು ಮರೆತುಬಿಡುತ್ತಾರೆ. ಇದೇ ಕಾರಣಕ್ಕಾಗಿ ಕೊಳೆ ನೀಟಾಗಿ ಹೊರ ಹೋಗದೆ ಅಲ್ಲಿಗೆ ಹಾಕಿದ ಬಟ್ಟೆಗಳಲ್ಲಿ ಮಿಕ್ಸ್ ಆಗಿ ಬಟ್ಟೆ ನೀಟಾಗಿ ವಾಶ್ ಆದ ರೀತಿ ಕಾಣುವುದಿಲ್ಲ. ಜೊತೆಗೆ ಅದು ಅಲ್ಲಿ ಸ್ಟೋರ್ ಆಗುವುದರಿಂದ ರಿಪೇರಿಗೆ ಬರುತ್ತದೆ. ಹಾಗಾಗಿ ವಾಷಿಂಗ್ ಮಿಷನ್ ಅನ್ನು ಈ ರೀತಿ ಕ್ಲೀನ್ ಮಾಡಿ.
ಒಂದು ಲೋಟ ನೀರಿಗೆ ಅರ್ಧ ಚಮಚ ಟೂಥ್ ಪೇಸ್ಟ್ ಒಂದು ಚಮಚ ಬೇಕಿಂಗ್ ಸೋಡಾ ಮತ್ತು ಒಂದು ಹೋಳು ನಿಂಬೆಹಣ್ಣಿನ ರಸ ಅಥವಾ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಈ ಮಿಶ್ರಣದಿಂದ ಮೇಲಿರುವ ರಬ್ಬರ್ ಅನ್ನು ನೀಟಾಗಿ ಕ್ಲೀನ್ ಮಾಡಿ ಬೇಕಿದ್ರೆ ಇದರ ಜೊತೆಗೆ ವಿಮ್ ಜೆಲ್ ಕೂಡ ಬಳಸಬಹುದು. ಬೆಲ್ಟ್ ನೀಟ್ ಆಗಿ ವಾಷ್ ಆದಮೇಲೆ ಲಿಕ್ವಿಡ್ ಅಥವಾ ಡಿಟರ್ಜೆಂಟ್ ಹಾಕುವ ಬಾಕ್ಸ್ ಅನ್ನು ಕೂಡ ಒಂದು ಚಿಕ್ಕ ಬ್ರಷ್ ಸಹಾಯದಿಂದ ಚೆನ್ನಾಗಿ ಉಜ್ಜಿ ಕ್ಲೀನ್ ಮಾಡಿ.
ನಂತರ ಫಿಲ್ಟರ್ ಗಳಲ್ಲಿ ಕೊಳೆ ಜಾಸ್ತಿ ಸ್ಟೋರ್ ಆಗಿರುತ್ತದೆ ಅದನ್ನು ಕ್ಲೀನ್ ಆಗಿ ತೊಳೆದು ಮತ್ತೆ ಹಾಕಿ. ಕೊನೆಗೆ ಈ ಮೇಲೆ ಹೇಳಿದ ಸೊಲ್ಯೂಷನ್ ಅನ್ನು ಡ್ರಮ್ ಒಳಗೆ ಹಾಕಿ ನಿಮ್ಮ ವಾಷಿಂಗ್ ಮಿಷನ್ ನಲ್ಲಿ ಟಬ್ ಕ್ಲೀನ್ ಮಾಡಲು ಯಾವ ಆಪ್ಷನ್ ಇದೆ ಆ ಆಪ್ಷನ್ ಅನ್ನು ಆನ್ ಮಾಡಿ. ಒಂದು ವೇಳೆ ನಿಮ್ಮ ವಾಷಿಂಗ್ ಮೆಷಿನ್ ನಲ್ಲಿ ಟಬ್ ಅಥವಾ ಟ್ರಮ್ ಕ್ಲೀನ್ ಮಾಡುವ ಆಪ್ಷನ್ ಇಲ್ಲ ಎಂದರೆ ಕ್ವಿಕ್ ವಾಶ್ ಆನ್ ಮಾಡಿ ಕ್ಲೀನ್ ಮಾಡಿ ಪ್ರತಿ ಎರಡು ತಿಂಗಳಿಗೆ ಒಮ್ಮೆ ಈ ರೀತಿ ಕ್ಲೀನ್ ಮಾಡಿ ವಾಷಿಂಗ್ ಮಿಷನ್ ಮೆಂಟೇನ್ ಮಾಡಿ.