ಅಡುಗೆ ಮನೆಯ ಸಿಂಕ್ ಬ್ಲಾಕ್ ಆದರೆ ಗೃಹಿಣಿಯರಿಗೆ ಅದೊಂದು ದೊಡ್ಡ ತಲೆನೋವು. ಈ ರೀತಿ ಆಗಿಬಿಟ್ಟರೆ ಅಡುಗೆ ಮನೆಗೆ ಹೋಗಲು ಮನಸಾಗುವುದು ಇಲ್ಲ, ಅಡುಗೆ ಮಾಡುವ ಇಂಟರೆಸ್ಟ್ ಕೂಡ ಬರುವುದಿಲ್ಲ. ಅವರ ಇಡೀ ದಿನದ ಮೂಡ್ ಹಾಳಾಗಿಬಿಡುತ್ತದೆ. ಆದರೆ ಕೆಲವರ ಮನೆಯಲ್ಲಿ ಪದೇ ಪದೇ ಈ ರೀತಿ ಅಡುಗೆ ಮನೆ ಸಿಂಕ್ ಸಮಸ್ಯೆ ಮಾಡುತ್ತಿರುತ್ತದೆ.
ಈ ರೀತಿ ಅಡುಗೆಮನೆ ಸಿಂಗ್ ಬ್ಲಾಕ್ ಆದಾಗ ಇನ್ಫೆಕ್ಷನ್ ಆಗಿ ಆರೋಗ್ಯ ತೊಂದರೆ ಉಂಟಾಗಬಹುದು ಹಾಗಾಗಿ ಅಡಿಗೆಮನೆ ಸಿಂಕ್ ಬ್ಲಾಕ್ ಆಗದ ಹಾಗೆ ಎಚ್ಚರ ವಹಿಸಬೇಕು. ಅಡುಗೆಮನೆ ಸಿಂಕ್ ಮಾತ್ರ ಅಲ್ಲದೆ ವಾಷ್ ಬೇಸಿನ್ ಸಿಂಕ್ ಗಳು, ಬಾತ್ ರೂಮಲ್ಲಿ ಇರುವ ಬೇಸನ್ ಇನ್ಕಳು ಈ ರೀತಿ ಕಟ್ಟಿಕೊಂಡು ನೀರು ಹೊರಹೋಗದೆ ದೊಡ್ಡ ಕಿರಿಕಿರಿಯನ್ನು ಮಾಡುತ್ತವೆ.
ಹಲವು ಕಾರಣಗಳಿಂದ ಈ ರೀತಿ ಅಡುಗೆ ಮನೆಯ ಸಿಂಕ್ ಕಟ್ಟಿಕೊಳ್ಳುತ್ತದೆ. ಒಮ್ಮೊಮ್ಮೆ ಏರ್ ಔಟ್ ಆಗದೆ ಈ ರೀತಿ ಸಮಸ್ಯೆ ಉಂಟಾಗಬಹುದು. ಆಗ ನೀರು ಆಚೆ ಹೋಗದೆ ಸಿಂಕ್ ತುಂಬಾ ತುಂಬಿಕೊಳ್ಳುತ್ತದೆ. ಇದು ಅಡುಗೆ ಮನೆ ಅಂದವನ್ನು ಹಾಳು ಮಾಡಿ ಬಹಳ ಬೇಜಾರು ಮಾಡುತ್ತದೆ.
ಇನ್ನು ಕೆಲವೊಮ್ಮೆ ಅಡಿಗೆ ಮನೆಯಲ್ಲಿ ನಾವು ಬಳಸಿದ ವೇಸ್ಟ್ ಪದಾರ್ಥಗಳು ಸಿಂಕಲ್ಲಿ ಸಿಕ್ಕಿ ಹಾಕಿಕೊಂಡು ಅಥವಾ ಬಹಳ ದಿನಗಳಾದ ಬಳಿಕ ಅದು ಕೊಳೆತು ಗ್ರೀಸ್ ರೀತಿ ಆಗಿ ಸಿಂಕ್ ಕೆಳಗೆ ಇರುವ ಪೈಪ್ ಬಳಿ ಬ್ಲಾಕ್ ಆಗಿಬಿಟ್ಟಿರುತ್ತದೆ. ಆಗಲು ಸಹ ಈ ರೀತಿ ನೀರು ಆಚೆ ಹೋಗಲು ಸಾಧ್ಯ ಆಗದೆ ಕಟ್ಟಿಕೊಳ್ಳುತ್ತದೆ. ಈ ರೀತಿ ಸಿಂಕ್ ಬ್ಲಾಕ್ ಆಗಬಾರದು ಎಂದರೆ ನಾವು ಆದಷ್ಟು ಆಹಾರ ಪದಾರ್ಥಗಳು ಅದರಲ್ಲಿ ಹೋಗುವುದನ್ನು ತಡೆಯಬೇಕು ಆ ರೀತಿ ಆಗದಂತೆ ಮುಂಜಾಗ್ರತೆ ವಹಿಸಬೇಕು.
ಅದು ಒಂದು ವೇಳೆ ನಿಮ್ಮ ಮನೆಯ ಸಿಂಕ್ ಪದೇ ಪದೇ ಈ ರೀತಿ ಕಟ್ಟಿಕೊಳ್ಳುತ್ತಿದೆ ಎಂದರೆ ಅದು ಕಟ್ಟಿಕೊಂಡಾಗ ನಾವು ಹೇಳುವ ಈ ಉಪಾಯಗಳನ್ನು ಮಾಡಿ ಈ ಉಪಾಯಗಳನ್ನು ಸರಿಯಾಗಿ ಪಾಲಿಸಿದರೆ ಇನ್ನು ಮುಂದೆ ಎಂದು ಕೂಡ ಸಿಂಕ್ ಗಳು ಕಟ್ಟಿಕೊಳ್ಳದ ಹಾಗೆ ನೋಡಿಕೊಳ್ಳಬಹುದು. ಒಂದು ಯಾವುದಾದರೂ ಖಾಲಿ ನೀರಿನ ಬಾಟಲ್ ತೆಗೆದುಕೊಳ್ಳಿ ಅದಕ್ಕೆ ಅರ್ಧ ನೀರು ತುಂಬಿಸಿ ಈಗ ಈ ಬಾಟಲಿನ ಬಾಯಿ ಭಾಗವನ್ನು ಸಿಂಕಿನ ಹೋಲ್ಗಳ ಬಳಿ ಇಟ್ಟು ಜೋರಾಗಿ ಪ್ರೆಸ್ ಮಾಡಿ ಆಗ ಏರ್ ಔಟ್ ಆಗಿ ಎಲ್ಲಾ ನೀರು ಸಲೀಸಾಗಿ ಆಚೆ ಹೋಗುತ್ತದೆ.
ಒಂದು ಬಾರಿ ಮಾತ್ರ ಅಲ್ಲದೆ ನಾಲ್ಕೈದು ಬಾರಿ ನೀರು ಹೋಗುವ ತನಕ ಇದೇ ರೀತಿ ಅರ್ಧ ಬಾಟಲ್ ನೀರು ತುಂಬಿ ಹೀಗೆ ಮಾಡುತ್ತಿರಿ. ಮತ್ತೊಂದು ಉಪಾಯ ಇದೆ ಅದೇನೆಂದರೆ ಒಂದು ಪಾತ್ರೆಯಲ್ಲಿ ಬಿಸಿ ನೀರು ತೆಗೆದುಕೊಂಡು ಅದಕ್ಕೆ ಎರಡು ಸ್ಪೂನ್ ವಾಷಿಂಗ್ ಪೌಡರ್ ಹಾಕಿ, ಒಂದು ಚಮಚ ಅಡುಗೆ ಉಪ್ಪನ್ನು ಹಾಕಿ ಈಗ ಇದರಲ್ಲಿ ಅರ್ಧ ಭಾಗವನ್ನು ಸಿಂಕಿನ ಹೋಲ್ ಬಳಿ ಹಾಕಿ ಇನ್ನುಳಿದ ಅರ್ಧ ಭಾಗವನ್ನು ಸಿಂಕಿನ ಕೆಳಗಡೆ ಪೈಪ್ ಹೋಗುವಲ್ಲಿ ಹೋಲ್ ಇರುತ್ತದೆ ಅಲ್ಲಿ ಹಾಕಿ. ಈ ರೀತಿ ಮಾಡಿಕೊಂಡಾಗ ಅಲ್ಲಿ ಯಾವುದೇ ಪದಾರ್ಥಗಳು ಕಟ್ಟಿಕೊಂಡಿದ್ದರು ಕೂಡ ಅದು ಕೊಚ್ಚಿ ಹೋಗುತ್ತದೆ. 15 ದಿನಗಳೊಮ್ಮೆ ಈ ಉಪಾಯ ಮಾಡಿದರೆ ನಿಮ್ಮ ಅಡುಗೆಮನೆ ಸಿಂಕ್ ಎಂದು ಕೂಡ ಕಟ್ಟಿಕೊಳ್ಳುವುದಿಲ್ಲ.