ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಗೌರವಧನದ ಆಧಾರದ ಮೇಲೆ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು ಸುಮಾರು 800ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
7ನೇ ತರಗತಿ ಉತ್ತೀರ್ಣರಾದವರಿಂದ ಹಿಡಿದು ವೈದ್ಯಕೀಯ ವಿದ್ಯಾಭ್ಯಾಸ ಮಾಡಿರುವ ಅಭ್ಯರ್ಥಿಗಳವರಿಗೆ ಹುದ್ದೆಗಳು ಖಾಲಿ ಇದ್ದು ಅರ್ಹರಾದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಹುದ್ದೆಗಳ ಕುರಿತ ವಿವರ ಹಾಗೂ ಅರ್ಜಿ ಸಲ್ಲಿಸಲು ಇರುವ ವಿಧಾನ ಹಾಗೂ ಪ್ರಮುಖ ದಿನಾಂಕಗಳ ಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಉದ್ಯೋಗ ಸ್ಥಳ:- ಚಿಟಗುಪ್ಪಿ ಆಸ್ಪತ್ರೆ, ಹುಬ್ಬಳ್ಳಿ.
ಒಟ್ಟು ಹುದ್ದೆಗಳ ಸಂಖ್ಯೆ:- 800
ಹುದ್ದೆಗಳ ವಿವರ:-
1. ವೈದ್ಯರು
* ಸ್ತ್ರೀರೋಗ ತಜ್ಞರು
* ಅರವಳಿಕೆ ತಜ್ಞರು
* ಸಾಮಾನ್ಯ ಕರ್ತವ್ಯ ವೈದ್ಯರು
2. ಅರೆ ವೈದ್ಯಕೀಯ ಸಿಬ್ಬಂದಿಗಳು
* ಶುಶ್ರುಷಕ ಅಥವಾ ಶುಶ್ರೂಷಕಿ
* ಆರೋಗ್ಯ ಮಹಿಳಾ ಸಹಾಯಕಿಯರು
* ಭೌತಿಕ ಚಿಕಿತ್ಸಕ
* ಓಟಿ ತಂತ್ರಜ್ಞರು
* CSSD ಸೆಂಟ್ರಲ್ ಸ್ಪೈರರ್ ಸಪ್ಲೈ
* ಹೌಸ್ ಕೀಪರ್ ಮ್ಯಾನೇಜರ್
* ವೈದ್ಯಕೀಯ ದಾಖಲೆ ಅಧಿಕಾರಿ
3. LDC
4. ಡ್ರೆಸ್ಸರ್, ವಾರ್ಡ್ ಬಾಯ್, ಆಯಾ
5. ಅಂಬುಲೆನ್ಸ್ ವಾಹನ ಚಾಲಕರು.
ಶೈಕ್ಷಣಿಕ ವಿದ್ಯಾರ್ಹತೆ:-
* ಸ್ತ್ರೀರೋಗ ತಜ್ಞರು – MD(OBG) DNB ಲಭ್ಯವಿರದಿದ್ದರೆ DGO
* ಅರವಳಿಕೆ ತಜ್ಞರು – MD(ಅನಸ್ತೇಶಿಯಾ) /DNB ಅಥವಾ ಅನಸ್ತೇಶಿಯಾದಲ್ಲಿ ಡಿಪ್ಲೋಮೋ
* ಸಾಮಾನ್ಯ ಕರ್ತವ್ಯ ವೈದ್ಯರು – MBBS / BAMS ನ್ನು ರಾಜ್ಯ ಮಂಡಳಿಯಲ್ಲಿ ನೋಂದಣಿಯಾಗಿರಬೇಕು.
* ಶುಶ್ರುಷಕ ಅಥವಾ ಶುಶ್ರೂಷಕಿ – ಡಿಪ್ಲೋಮೋ GNM/ BSc. ನರ್ಸಿಂಗ್ ರಾಜ್ಯ ಮಂಡಳಿಯಲ್ಲಿ ನೋಂದಣಿ ಆಗಿರಬೇಕು
* ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು – ANM ಕೋರ್ಸನ್ನು ರಾಜ್ಯಮಂಡಳಿಯಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು
* ಭೌತಿಕ ಚಿಕಿತ್ಸಕ – BPT/DPT ರಾಜ್ಯ ಮಂಡಳಿಯಲ್ಲಿ ನೋಂದಣಿಯಾಗಿರಬೇಕು.
* ಓಟಿ ತಂತ್ರಜ್ಞರು – OT ತಂತ್ರಜ್ಞಾನದಲ್ಲಿ ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ.
* CSSD ಸೆಂಟ್ರಲ್ ಸ್ಪೈರರ್ ಸಪ್ಲೈ – CSSD ಯಲ್ಲಿ ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ
* ಹೌಸ್ ಕೀಪರ್ ಮ್ಯಾನೇಜರ್ – ಡಿಪ್ಲೋಮಾ ಇನ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ವಿದ್ಯಾರ್ಹತೆ.
* ವೈದ್ಯಕೀಯ ದಾಖಲೆ ಅಧಿಕಾರಿ – ವೈದ್ಯಕೀಯ ದಾಖಲೆ ತಂತ್ರಜ್ಞಾನ ಅಥವಾ ತತ್ಸಮಾನ ಡಿಪ್ಲೋಮೋದಲ್ಲಿ ಯಾವುದೇ ಪದವಿಯೊಂದಿಗೆ 5 ವರ್ಷಗಳ ಅರ್ಹತೆ ಅಥವಾ ಅಪೇಕ್ಷಿತ ಅನುಭವ.
* LDC – MS Office ನಲ್ಲಿ ಪ್ರಾವೀಣ್ಯತೆ ಹೊಂದಿರುವ ಯಾವುದೇ ಪದವಿ ಅಥವಾ ಡಿಪ್ಲೋಮಾ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ನೊಂದಿಗೆ ಟ್ಯಾಲಿ ಅನುಭವ.
* ಡ್ರೆಸ್ಸರ್, ವಾರ್ಡ್ ಬಾಯ್, ಆಯಾ – 8ನೇ ತರಗತಿ ಪಾಸ್ ಮತ್ತು ಮೇಲ್ಪಟ್ಟವರು.
* ಅಂಬುಲೆನ್ಸ್ ವಾಹನ ಚಾಲಕರು – ಹೆವಿ ಡ್ರೈವಿಂಗ್ ಲೈಸನ್ಸ್ ನೊಂದಿಗೆ 10ನೇ ತರಗತಿ ಮತ್ತು ಪ್ರಥಮ ಚಿಕಿತ್ಸಾ ಕೋರ್ಸ್ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಪ್ರಮುಖ ಸೂಚನೆಗಳು:-
* ಒಬ್ಬರು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕು, ಹೆಚ್ಚಿಗೆ ಅರ್ಜಿ ಸಲ್ಲಿಸಿದರೆ ತಿರಸ್ಕೃತವಾಗುತ್ತದೆ.
* 1/3 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.
* ಅರ್ಜಿಯನ್ನು ಸಲ್ಲಿಸುವಾಗ Resume / Bio data ದ ಜೊತೆಗೆ ಗೆಜೆಟೆಡ್ ಅಧಿಕಾರಿ ಧೃಡೀಕರಣದೊಂದಿಗೆ ನಡತೆ ಪ್ರಮಾಣ ಪತ್ರವನ್ನು ಮತ್ತು ಸದರಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ ಪ್ರತಿಗಳನ್ನು ಸಲ್ಲಿಸಬೇಕು.
* ಆಯ್ಕೆ ಪ್ರಕ್ರಿಯೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತೀರ್ಮಾನವೆ ಅಂತಿಮವಾಗಿರುತ್ತದೆ.
* ಸೂಚಿಸಿರುವ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಿರದೆ ಇದ್ದರೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರನ್ನು ಅಥವಾ ಆಯಾ ಕ್ಷೇತ್ರದಲ್ಲಿ ಜ್ಞಾನ ಹೊಂದಿರುವವರನ್ನು ಪರಿಗಣಿಸಲಾಗುವುದು.
* ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 10:00 ರಿಂದ 1:00 ರ ಒಳಗೆ ಆನ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ:-
www.hdmc.mrc.gov.in
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಕಡೆಯ ದಿನಾಂಕ – 18 ನವೆಂಬರ್, 2023
* ಸಂದರ್ಶನ ನಡೆಯುವ ದಿನಾಂಕಗಳು – 22 ಮತ್ತು 23 ನವೆಂಬರ್, 2023.