ವೈಷ್ಣವಿ ಗೌಡ ಎನ್ನುವುದು ಇವರ ನಿಜವಾದ ಹೆಸರು ಆಗಿದ್ದರೂ ಕೂಡ ಈಕೆ ಅಭಿನಯಿಸಿದ್ದ ಸನ್ನಿಧಿ ಎನ್ನುವ ಪಾತ್ರದ ಹೆಸರಿನಿಂದಲೇ ಕರ್ನಾಟಕದಾದ್ಯಂತ ಕರೆಸಿಕೊಳ್ಳುತ್ತಾರೆ. ವೈಷ್ಣವಿ ಗೌಡ ಅವರು ಈ ರೀತಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದೆ ಆಕಸ್ಮಿಕ. ಹೀಗೆ ಆಕಸ್ಮಿಕವಾಗಿ ಇವರಿಗೆ ಬಾಲ ನಟಿಯಾಗಿ ಜೀ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ಅವರ ನಿರ್ದೇಶನದ ದೇವಿ ಎನ್ನುವ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ದೊರಕಿ ಬಂತು.
ಜಾಹಿರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಅಂದಿನಿಂದ ಇವರ ಬಣ್ಣದ ಲೋಕದ ಪ್ರಯಾಣ ಶುರು ಆಯಿತು. ಬಾಲ ನಟಿಯಾಗೆ ಆ ಪಾತ್ರದಿಂದ ಬಹಳ ಪ್ರಭಾವ ಬೀರಿದ್ದ ಇವರು ನಂತರ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸುತ್ತಿದ್ದರು. ಒಂದಾದ ಮೇಲೆ ಒಂದರಂತೆ ಬಣ್ಣದ ಲೋಕದಿಂದ ಅವಕಾಶಗಳು ಅರಸಿ ಬಂದ ಕಾರಣ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ ಇವರು ಅಭಿನಯದ ಕಡೆ ಮುಖ ಮಾಡಿದರು.
ಇದರ ಜೊತೆಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಪದವಿ ಕೂಡ ಮುಗಿಸಿದ ಇವರು ಅಭಿನಯ ಮಾಡುವುದರ ಜೊತೆ ಜೊತೆಗೆ ನಾಟ್ಯದಲ್ಲೂ ಕೂಡ ಪರಿಣತಿ ಪಡೆದುಕೊಂಡರು. ಭಾರತ ನಾಟ್ಯ, ಕುಚ್ಚುಪುಡಿ, ಬೆಲ್ಲಿ ಡಾನ್ಸ್ ಹೀಗೆ ವಿವಿಧ ಪ್ರಕಾರದ ನೃತ್ಯಗಳನ್ನು ನೀರು ಕುಡಿದ ರೀತಿ ಮಾಡುವ ಇವರಿಗೆ ನೃತ್ಯ ಮಾಡುವುದು ಎಂದರೆ ಬಹಳ ಇಷ್ಟವಂತೆ. ದೇವಿ ಧಾರಾವಾಹಿಯ ಜನಪ್ರಿಯತೆ ನಂತರ ಇವರಿಗೆ ಪುನರ್ ವಿವಾಹ, ಮುಂಗಾರು ಮಳೆ ಮುಂತಾದ ಧಾರಾವಾಹಿಗಳಲ್ಲಿ ಪಾತ್ರ ಮಾಡುವ ಅವಕಾಶ ದೊರಕಿ ಬಂತು.
ಕುಣಿಯೋಣ ಬಾರ ಎನ್ನುವ ರಿಯಾಲಿಟಿ ಶೋ ಅಲ್ಲಿ ಕಂಟೆಸ್ಟೆಂಟ್ ಕೂಡ ಆಗಿ ಭಾಗವಹಿಸಿದ್ದರು. ಆದರೆ ಅವು ಯಾವು ಅಷ್ಟು ಹೆಸರು ತರಲಿಲ್ಲ. ನಂತರ ಈಕೆಗೆ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಮೆಗಾ ಧಾರವಾಹಿ ಅಗ್ನಿಸಾಕ್ಷಿ. ಈ ಧಾರವಾಹಿಯ ಸನ್ನಿಧಿ ಪಾತ್ರ ಇವರ ಇಮೇಜ್ ಅನ್ನೇ ಬದಲಾಯಿಸಿ ಬಿಟ್ಟಿತ್ತು. ಎಂಟು ವರ್ಷಗಳಿಗಿಂತಲೂ ಹೆಚ್ಚುಕಾಲ ಪ್ರಸಾರವಾದ ಈ ಧಾರವಾಹಿಯ ನಾಯಕಿ ಸನ್ನಿಧಿ ಆಗಿ ವೈಷ್ಣವಿ ಗೌಡ ಅವರು ಕಾಣಿಸಿಕೊಂಡಿದ್ದರು
ನಂತರ ನಿರೂಪಣೆ ಅಲ್ಲಿ ಕೂಡ ತಮ್ಮನ್ನು ನಿರೂಪಿಸಿಕೊಂಡ ಇವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭರ್ಜರಿ ಕಾಮಿಡಿ ಎನ್ನುವ ಕಾಮಿಡಿ ಕೂಡ ನಡೆಸಿಕೊಟ್ಟರು. ಇದು ಮುಗಿಯುತ್ತಿದ್ದ ಹಾಗೆ ಇವರಿಗೆ ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗುವ ಅದೃಷ್ಟ ದೊರಕಿತ್ತು. ಆ ಅವಕಾಶವನ್ನು ಕೂಡ ಬಾಚಿಕೊಂಡ ಇವರು ತಮ್ಮ ವ್ಯಕ್ತಿತ್ವವನ್ನು ಬಿಗ್ ಬಾಸ್ ಮನೆಯೊಳಗೆ ಏನೆಂದು ಇಡೀ ಕರ್ನಾಟಕಕ್ಕೆ ಪರಿಚಯಿಸಿಕೊಟ್ಟರು. ಇವರನ್ನು ನೋಡುತ್ತಿದ್ದರೆ ಮನಸಲ್ಲಿ ಯಾವ ರೀತಿ ಇವರ ವ್ಯಕ್ತಿತ್ವವನ್ನು ಲೆಕ್ಕ ಹಾಕಬಹುದು ಅದೇ ರೀತಿ ಮನೆ ಒಳಗೆ ಇದ್ದ ಇವರು ಮನೆಯ ನಾಲ್ಕನೇ ಸ್ಪರ್ಧಿ ಆಗಿ ಹೊರಬಿದ್ದರು.
ತದ ನಂತರ ತಮ್ಮದೇ ಒಂದು ಯುಟ್ಯೂಬ್ ಚಾನೆಲ್ ಓಪನ್ ಮಾಡಿರುವ ಇವರು ವಿಭಿನ್ನ ಕಂಟೆಂಟ್ ಮೂಲಕ ಗಮನ ಸೆಳೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಇವರು ಇನ್ಸ್ಟಾಗ್ರಾಮ್ ಅಲ್ಲಿ ತಮ್ಮ ರೀಲ್ಸ್ ಗಳನ್ನು ಶೇರ್ ಮಾಡಿ ಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಹೆಚ್ಚಾಗಿ ಡ್ಯಾನ್ಸ್ ವಿಡಿಯೋಗಳನ್ನು ಮಾಡುವ ಇವರು ವಿಕ್ರಾಂತ್ ರೋಣ ಸಿನಿಮಾದ ಎಕ್ಕಸಕ್ಕ ಹಾಡಿಗೆ ಕಪ್ಪು ಬಣ್ಣದ ಉಡುಗೆ ತೊಟ್ಟು ಕುಣಿದಿದ್ದರು. ಇದೀಗ ಶಿವಣ್ಣ ಅವರ ಕಡ್ಡಿಪುಡಿ ಸಿನಿಮಾದ ಸೌಂದರ್ಯ ಸಮರ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿ ಮತ್ತೊಮ್ಮೆ ಸುದ್ದಿ ಆಗುತ್ತಿದ್ದಾರೆ.