Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeCinema Updatesಚಿತ್ರರಂಗಕ್ಕೆ ಕಾಲಿಟ್ಟ ವಂಶಿಕಾ ಮೊದಲ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಯಾವ ನಟಿಗೂ ಕಮ್ಮಿ...

ಚಿತ್ರರಂಗಕ್ಕೆ ಕಾಲಿಟ್ಟ ವಂಶಿಕಾ ಮೊದಲ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಯಾವ ನಟಿಗೂ ಕಮ್ಮಿ ಇಲ್ಲ.

ಸದ್ಯಕ್ಕೆ ಕಿರುತೆರೆಯಲ್ಲಿ ಆಳುತ್ತಿರುವ ಬಾಲ ನಟಿಯರ ಪೈಕಿ ವಂಶಿಕಾ ಅವರು ಮೊದಲ ಸ್ಥಾನದಲ್ಲಿ ನಿಂತುಕೊಳ್ಳುತ್ತಾರೆ, ಹೌದು ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದ ಮೂಲಕ ಜಗತ್ಪ್ರಸಿದ್ಧಿ ಆದಂತಹ ವಂಶಿಕ ಇದೀಗ ಎಲ್ಲಿಲ್ಲದ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಕಾರ್ಯಕ್ರಮ ಇರಬಹುದು ಸಿನಿಮಾ ಇರಬಹುದು ಜಾಹೀರಾತು ಇರಬಹುದು ಎಲ್ಲದರಲ್ಲೂ ಕೂಡ ಇದೀಗ ವಂಶಿಕ ಅವರು ನಟನೆ ಮಾಡುತ್ತಿದ್ದಾರೆ ತನ್ನ ಪ್ರತಿಭೆಯಿಂದಲೇ ಇದೀಗ ಎಲ್ಲರ ಮನೆ ಮಾತಾಗಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸುವುದರ ಮೂಲಕ ಮೊಟ್ಟಮೊದಲ ಬಾರಿಗೆ ಕಿರುತೆರೆ ಲೋಕಕ್ಕೆ ಕಾಲಿಟ್ಟರು.

ಈಕೆಗೆ ಇನ್ನೂ ಕೂಡ ಕೇವಲ ನಾಲ್ಕೇ ವರ್ಷ ಆದರೂ ಕೂಡ ಅಪ್ರತಿಮ ಪ್ರತಿಭೆಯನ್ನು ಒಳಗೊಂಡಿದ್ದಾರೆ ಈ ಕಾರ್ಯಕ್ರಮದಲ್ಲಿ ವಿಜೇತಳಾದ ನಂತರ ಗಿಚ್ಚಿ ಗಿಲಿ ಗಿಲಿ ಎಂಬ ಮತ್ತೊಂದು ಕಾಮಿಡಿ ಶೋ ಕಾರ್ಯಕ್ರಮದಲ್ಲೂ ಕೂಡ ಪಾಲ್ಗೊಳ್ಳುತ್ತಾಳೆ. ಈಕೆ ಮಾಡುವಂತಹ ಡಾನ್ಸ್ ಇರಬಹುದು, ಡೈಲಾಗ್ ಡೆಲಿವರಿ ಆಗಿರಬಹುದು ಎಲ್ಲವೂ ಕೂಡ ತಂದೆಗಿಂತಲೂ ಕೂಡ ಹೆಚ್ಚು ಅಂತ ಹೇಳಬಹುದು ನಿಮ್ಮೆಲ್ಲರಿಗೂ ತಿಳಿದಿರುವಂತೆ ವಂಶಿಕ ಅವರ ತಂದೆ ಮಾಸ್ಟರ್ ಆನಂದ ಕೂಡ ಮುತ್ತಿನ ಹಾರ ಎಂಬ ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದವರು. ಇಲ್ಲಿಂದ ಆರಂಭವಾದಂತಹ ಇವರ ಸಿನಿಮಾ ಜರ್ನಿ ಇಂದಿಗೂ ಕೂಡ ಮುಂದುವರೆಯುತ್ತಿದೆ.

ಹಾಗಾಗಿ ತಂದೆಯ ಪ್ರತಿಭೆ ಗುಣಗಳೆ ಮಗಳಿಗೂ ಕೂಡ ಇದೀಗ ಬಂದಿದೆ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯ ಪಟ್ಟಿದೆ ಇವೆಲ್ಲವೂ ಒಂದು ಕಡೆಯಾದರೆ ಇದೀಗ ವಂಶಿಕ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾಳೆ. ಹೌದು ವಂಶಿಕ ಅಭಿಮಾನಿಗಳಿಗೆ ಇದು ಸಂತಸ ತರುವಂತಹ ವಿಚಾರವೇ ಏಕೆಂದರೆ ವಂಶಿಕ ಇನ್ನು ಮುಂದೆ ಬೆಳ್ಳಿ ಪರದೆಯ ಮೇಲು ಕೂಡ ಕಾಣಿಸಿಕೊಳ್ಳಲಿದ್ದಾಳೆ. ವಶಿಷ್ಟ ಸಿಂಹ ಅವರ ಲವ್ಲಿ ಎಂಬ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಬೆಳ್ಳಿ ತೆರೆಗೆ ಇದೀಗ ವಂಶಿಕ ಅವರು ಪಾದರ್ಪಣೆ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಕೇವಲ ಕಿರುತೆರೆಯಲ್ಲಿ ರಂಜಿಸುತ್ತಿದ್ದಂತಹ ವಂಶಿಕ ಇನ್ನು ಮುಂದೆ ಬೆಳ್ಳಿತೆರೆಯಲ್ಲೂ ಕೂಡ ರಂಜಿಸಲು ಸಿದ್ಧವಾಗಿದ್ದಾಳೆ.

ಈ ವಿಚಾರ ತಿಳಿಯುತ್ತಿದ್ದ ಹಾಗೆ ವಂಶಿಕ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ ಇನ್ನು ವಿಚಾರಕ್ಕೆ ಬರುವುದಾದರೆ ವಂಶಿಕ ಈ ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಎಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಕೆಲವು ಬಲಮೂಲಗಳ ಪ್ರಕಾರ ವಂಶಿಕ ಅವರು ಈ ಸಿನಿಮಾಗಾಗಿ ಸುಮಾರು 10 ಲಕ್ಷ ರೂಪಾಯಿ ಸಂಬಾವನಿಯನ್ನು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ನಿಜಕ್ಕೂ ಕೂಡ ಇದು ಆಶ್ಚರ್ಯ ತರುವಂತಹ ವಿಚಾರವೇ ಏಕೆಂದರೆ ಹೊಸ ನಟಿಯರಿಗೆ ಸುಮಾರು ಐದರಿಂದ 10 ಲಕ್ಷ ರೂಪಾಯಿ ಸಂಬವನಯನ್ನು ನೀಡುತ್ತಾರೆ. ಆದರೆ ಇದೀಗ ವಂಶಿಕ ಹೀರೋಯಿನ್ ಗಳನ್ನು ಕೂಡ ಮೀರಿಸುವ ಮಟ್ಟಕ್ಕೆ ಬಂದು ನಿಂತಿದ್ದರೆ ಏಕೆಂದರೆ ಬಾಲ ನಟಿಯಾಗಿದ್ದರೂ ಕೂಡ ಚಿಕ್ಕ ಪಾತ್ರದಲ್ಲಿ ನಟನೆ ಮಾಡುತ್ತಿದ್ದರು.

ಹೆಚ್ಚು ಸಂಭಾವನೆ ಪಡೆಯುವ ಮೂಲಕ ಇದೀಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ ಕೆಲವು ಅಭಿಮಾನಿಗಳು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ವಂಶಿಕ ಬಾಲ ನಟಿಯಾದರೂ ಕೂಡ ಆಕೆಗೆ ಇರುವಂತಹ ಪ್ರತಿಭೆಯ ಕಾರಣವೇ ಎಂದು ಇಷ್ಟು ದೊಡ್ಡ ಮಟ್ಟದ ಸಂಭಾವನೆಯನ್ನು ಪಡೆಯುತ್ತಿದ್ದಾಳೆ ಎಂದು ಹೇಳುತ್ತಿದ್ದಾರೆ. ಇನ್ನು ವಸಿಷ್ಟ ಸಿನಿಮಾ ನಟನೆ ಮಾಡುತ್ತಿರುವಂತಹ ಲವ್ಲಿ ಸಿನಿಮಾ ಕಮರ್ಷಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು ರೊಮ್ಯಾನ್ಸ್-ಲವ್ ಸ್ಟೋರಿ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಲವ್ಲಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ವಸಿಷ್ಟ ಸಿನಿಮಾ ಹಾಗೂ ವಂಶಿಕ ಯಾವ ರೀತಿ ಅಭಿನಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.