
ನಮ್ಮ ಹಿಂದೂ ಪಂಚಾಂಗದ ಪ್ರಕಾರ ಈಗಷ್ಟೇ ಅಧಿಕ ಶ್ರಾವಣ ಕಳೆದು ನಿಜ ಶ್ರಾವಣ ಆರಂಭವಾಗಿದೆ. ಹಬ್ಬಗಳ ಸಾಲುಬರುವ ಈ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬವೂ ಆಯ್ತು ಅದರ ಹಿಂದೆ ಬರುವುದು ಹೆಣ್ಣುಮಕ್ಕಳಿಗೆಲ್ಲ ಬಹಳ ಇಷ್ಟವಾದ ನಾಡಿನಾದ್ಯಂತ ಎಲ್ಲರೂ ಭಕ್ತಿ ಭಾವದಿಂದ ತಾಯಿ ಮಹಾಲಕ್ಷ್ಮಿ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥಿಸುವ ವರಮಹಾಲಕ್ಷ್ಮಿ ಹಬ್ಬ.
ಈ ಬಾರಿ ಆಗಸ್ಟ್ 25ನೇ ತಾರೀಕಿನಂದು ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಅನೇಕ ಕುಟುಂಬಗಳಲ್ಲಿ ವಾಡಿಕೆ ಪ್ರಕಾರ ಈ ವ್ರತವನ್ನು ಆಚರಿಸಿಕೊಂಡು ಬರುತ್ತಿರುತ್ತಾರೆ. ಆದರೆ ಇನ್ನೂ ಕೆಲವರು ನಮ್ಮ ಕುಟುಂಬದಲ್ಲಿ ಈಗ ಆಚರಣೆ ಇರಲಿಲ್ಲ ಇನ್ನು ಮುಂದೆ ನಾವು ಆರಂಭಿಸಬಹುದಾ ಎನ್ನುವ ಗೊಂದಲದಲ್ಲಿ ಇರುತ್ತಾರೆ. ಯಾರು ಬೇಕಾದರೂ ಕ್ರಮಪೂರ್ವಕವಾಗಿ ಶ್ರದ್ಧಾ ಭಕ್ತಿ ನಂಬಿಕೆಯಿಂದ ಈ ವ್ರತವನ್ನು ಆರಂಭಿಸಬಹುದು.
ಯಾವುದೇ ಹಬ್ಬ ವ್ರತ ಆಚರಣೆ ಮಾಡುವ ಮುನ್ನ ಅದಕ್ಕೆ ಇರುವ ವಿಧಿ ವಿಧಾನಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಎಲ್ಲೂ ಕೂಡ ತಪ್ಪುಗಳು ಆಗದಂತೆ, ನಮಗೆ ದೋಷಗಳು ಬಾರದ ಹಾಗೆ ಪೂಜೆ ಮಾಡಬೇಕು ಇದು ಮುಖ್ಯ. ಹಾಗಾಗಿ ಈ ಅಂಕಣದಲ್ಲಿ ವರಮಹಾಲಕ್ಷ್ಮಿ ಹಬ್ಬ ಮಾಡುತ್ತಾ ಇರುವವರಿಗೆ ಬೆಳಗ್ಗೆ ಅವರು ಕಳಶಾ ಪ್ರತಿಷ್ಠಾಪನೆ ಮಾಡುವುದರಿಂದ ಹಿಡಿದು ಲಕ್ಷ್ಮಿ ಹೆಚ್ಚಿಸುವವರೆಗೆ, ಆರತಿ ಮಾಡುವವರೆಗೂ ಕೂಡ ಏನೆಲ್ಲಾ ಕ್ರಮಗಳು ಇರುತ್ತವೆ.
ಯಾವ ರೀತಿ ಸರಿಯಾಗಿ ಇವುಗಳನ್ನು ಪಾಲಿಸಬೇಕು ಯಾವುದನ್ನು ಮಾಡಬಾರದು ಮತ್ತು ಯಾವುದನ್ನು ತಪ್ಪದೆ ಮಾಡಲೇಬೇಕು ಯಾವ ರೀತಿ ಪೂಜೆ ಮಾಡಿದರೆ ತಾಯಿಯ ಅನುಗ್ರಹ ಸಿಗುತ್ತದೆ, ಕುಟುಂಬದ ಏಳಿಗೆ ಆಗುತ್ತದೆ, ಅಷ್ಟೈಶ್ವರ್ಯಗಳು ಲಭಿಸುತ್ತದೆ, ಮಹಾಲಕ್ಷ್ಮಿಗೆ ಸಂತೃಪ್ತಿ ಆಗುವಂತೆ ಯಾವ ರೀತಿ ಪೂಜೆ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತಿದ್ದೇವೆ.
ಬೇಗ ಹಾಗೂ ಸುಲಭವಾಗಿ ವರಮಹಾಲಕ್ಷ್ಮಿಗೆ ಸೀರೆಯಿಂದ ಸೀರೆ ಉಡಿಸುವ ಹೊಸ ವಿಧಾನ.!
ವರಮಹಾಲಕ್ಷ್ಮಿ ಹಬ್ಬವನ್ನು ಮಾಡುವುದಕ್ಕೆ ತಯಾರಿ ಒಂದು ದಿನದ ಹಿಂದಿನಿಂದ ಆರಂಭವಾಗುತ್ತದ ಅದು ಸಾಲುವುದಿಲ್ಲ ಎಂದೇ ಹೇಳಬಹುದು. ಯಾಕೆಂದರೆ ಬಹಳ ವಾರಗಳ ಹಿಂದಿನಿಂದಲೇ ಗೃಹಿಣಿಯರು ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಮನೆಯನ್ನು ಸ್ವಚ್ಛ ಮಾಡಿ, ವಸ್ತುಗಳನ್ನೆಲ್ಲ ಮಡಿ ಮಾಡಿ, ವರಮಹಾಲಕ್ಷ್ಮಿ ಅಲಂಕಾರಕ್ಕೆ ಬೇಕಾದ ಬಟ್ಟೆ ಒಡವೆ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡಿ ಹಬ್ಬದ ಹಿಂದಿನ ದಿನ ಹೂವು ಹಣ್ಣು ಬಾಳೆಎಲೆ ಮುಂತಾದವುಗಳನ್ನೆಲ್ಲ ತಂದು ಅಲಂಕಾರ ಮಾಡುವುದಕ್ಕೆ ಯಾವ ಡಿಸೈಡ್ ಸೆಲೆಕ್ಟ್ ಮಾಡುವುದು ಎನ್ನುವುದರವರೆಗೂ ಕೂಡ ಕನ್ಫ್ಯೂಷನ್ ಹಾಗೂ ಟೆನ್ಶನ್ ಇದ್ದೇ ಇರುತ್ತದೆ.
ಇಷ್ಟು ಮಾಡಿದ ಮೇಲೆ ಮರುದಿನ ಬೆಳಗ್ಗೆ ಒಳ್ಳೆ ಮುಹೂರ್ತದಲ್ಲಿ ಕಳಶ ಪ್ರಸಿಷ್ಟಾಪನೆ ಮಾಡಿ ಎಲ್ಲರೂ ಮೆಚ್ಚುವ ಹಾಗೆ ಅಲಂಕಾರ ಮಾಡಿ ತಾಯಿಗೆ ಇಷ್ಟವಾಗುವ ತಿನಿಸು ಮಾಡಿ ಭಕ್ತಿಯಿಂದ ಬೇಡಿಕೊಳ್ಳುವವರೆಗೂ ಕೂಡ ಕೆಲಸ ಇದ್ದೇ ಇರುತ್ತದೆ. ಕಳಶ ಸ್ಥಾಪನೆ ಮಾಡಲು ಶುಭ ಮುಹೂರ್ತಗಳು ಇರುತ್ತವೆ. ಈ ಬಾರಿ ಕೂಡ ಐದು ಮುಹೂರ್ತಗಳು ಇವೆ.
ಅವರಿಗೆ ಹೊಂದಿಕೆ ಆಗುವ ಸಮಯದಲ್ಲಿ ಕಳಸ ಪ್ರತಿಷ್ಠಾಪನೆ ಮಾಡಬಹುದು ಇದನ್ನು ಮಾಡುವ ಮುನ್ನ ಮೊದಲು ಮನೆ ದೇವರಿಗೆ ಪೂಜೆ ಮಾಡಿ, ಗಣೇಶನಿಗೆ ಪೂಜೆ ಮಾಡಿ, ಹೊಸ್ತಿಲು ಮತ್ತು ತುಳಸಿ ಕಟ್ಟೆ ಪೂಜೆ ಮಾಡಿ ದೀಪ ಹಚ್ಚಿಟ್ಟು ನಂತರ ಕಳಶ ಪ್ರತಿಷ್ಠಾಪನೆ ಮಾಡಬೇಕು. ಕಲಶ ಪ್ರತಿಷ್ಠಾಪನೆ ಮಾಡುವ ವಿಷಯದಲ್ಲಿ ಕೂಡ ಹಲವರಿಗೆ ಕನ್ಫ್ಯೂಷನ್ ಇದೆ ಯಾವ ವಸ್ತುಗಳನ್ನು ಕಲಶಕ್ಕೆ ಹಾಕಬಹುದು, ಪೂಜೆ ಯಾವಾಗ ಪೂರ್ತಿಯಾಗುತ್ತದೆ ಇವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.