ನಾವು ಸ.ತ್ತ ಮೇಲೆ ಮತ್ತೆ ಬದುಕಬೇಕು ಎಂದರೆ ನಮ್ಮ ಅಂಗಾಂಗಗಳನ್ನು ದಾನ ಮಾಡುವುದಷ್ಟೆ ನಮಗೆ ದಾರಿ. ನಾವು ಸ.ತ್ತ ಮೇಲೆ ಅಂಗಾಂಗಗಳನ್ನು ಮಣ್ಣಿಗೆ ಹಾಕುವ ಬದಲು ಪರರಿಗೆ ಬಳಸಿದರೇ ನಮ್ಮ ದೇಹಕ್ಕೂ ಒಂದು ಅರ್ಥ ಸಿಗುತ್ತದೆ. ಹಾಗಾದರೆ ಅಂಗಾಂಗ ದಾನವೆಂದರೇನು, ಅಂಗಾಂಗ ದಾನವು ಒಬ್ಬ ವ್ಯಕ್ತಿಯು ತನ್ನ ಸ್ವಂತ ಅಂಗವನ್ನು ತೆಗೆದುಹಾಕಲು ಮತ್ತು ಇನ್ನೊಬ್ಬ ವ್ಯಕ್ತಿಗೆ ಕಸಿ ಮಾಡಲು ಕಾನೂನುಬದ್ಧವಾಗಿ ಅನುಮತಿಸುವ ಪ್ರಕ್ರಿಯೆಯಾಗಿದ್ದು.
ದಾನಿ ಜೀವಂತವಾಗಿರುವಾಗ ಅಥವಾ ಸ.ತ್ತಿರುವಾಗ ಒಪ್ಪಿಗೆಯ ಮೂಲಕ ಮುಂದಿನ ಸಂಬಂಧಿಕರ ಒಪ್ಪಿಗೆಯೊಂದಿಗೆ. ದಾನವು ಸಂಶೋಧನೆಗಾಗಿ ಇರಬಹುದು ಅಥವಾ ಸಾಮಾನ್ಯವಾಗಿ, ಆರೋಗ್ಯಕರ ಕಸಿ ಮಾಡಬಹುದಾದ ಅಂಗಗಳು ಮತ್ತು ಅಂಗಾಂಶಗಳನ್ನು ಇನ್ನೊಬ್ಬ ವ್ಯಕ್ತಿಗೆ ಕಸಿ ಮಾಡಲು ದಾನ ಮಾಡಬಹುದು. ಸಾಮಾನ್ಯ ಕಸಿಗಳಲ್ಲಿ ಮೂತ್ರ ಪಿಂಡಗಳು, ಹೃದಯ, ಯಕೃತ್ತು, ಮೇದೋಜೀರಕ ಗ್ರಂಥಿ, ಕರುಳುಗಳು, ಶ್ವಾಸಕೋಶಗಳು, ಮೂಳೆಗಳು, ಮೂಳೆ ಮಜ್ಜೆ, ಚರ್ಮ ಮತ್ತು ಕಾರ್ನಿಯಾಗಳು ಸೇರಿವೆ.
ಕೆಲವು ಅಂಗಗಳು ಮತ್ತು ಅಂಗಾಂಶಗಳನ್ನು ಜೀವಂತ ದಾನಿಗಳಿಂದ ದಾನ ಮಾಡಬಹುದು. ನಾವು ಸಾಮಾನ್ಯವಾಗಿ ಡಾಕ್ಟರ್ ರಾಜಕುಮಾರ್ ಅವರು ನೇತ್ರದಾನವನ್ನು ಹೆಚ್ಚು ಮಾಡುವಂತೆ ಜನರಿಗೆ ಸಲಹೆ ನೀಡಿದರು. ಇದು ಎಷ್ಟು ಜನರಿಗೂ ಕೂಡ ನೇತ್ರದಾನ ಮಾಡುವಂತೆ ಮಾಡಿದೆ. ಇನ್ನೂ ಅವರ ಕುಟುಂಬದ ಪುನೀತ್ ರಾಜಕುಮಾರ್ ಅವರು ಕೂಡ ಇದಕ್ಕೆ ಉದಾಹರಣೆಯಾಗಿದ್ದಾರೆ ಇತ್ತೀಚಿಗೆ ಸಂಚಾರಿ ವಿಜಯ್ ಅವರು ಕೂಡ ಅಂಗಾಂಗ ದಾನಗಳಿಗೆ ಮಾದರಿಯಾಗಿದ್ದು ಇದೇ ರೀತಿ ವಿಜಯದೇವರಕೊಂಡ ಅವರು ಕೂಡ ಅಂಗಾಂಗ ದಾನ ಮಾಡಲು ಸಹಿ ಹಾಕಿದ್ದಾರೆ.
ಹೌದು ಸ್ನೇಹಿತರೆ ತೆಲುಗು ನಟ ವಿಜಯ ದೇವರಕೊಂಡ ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಬರೀ ತೆಲುಗು ಪ್ರೇಕ್ಷರಿಗಷ್ಟೇ ಅಲ್ಲ, ಕನ್ನಡಿಗರು ಸೇರಿದಂತೆ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ವಿಜಯ್, ಸ.ತ್ತ ನಂತರವೂ ಬದುಕಲು ನಾನು ಇಷ್ಟ ಪಡುತ್ತೇನೆ. ಅದಕ್ಕಾಗಿ ಅಂಗಾಂಗ ದಾನ ಮಾಡಲಿದ್ದೇನೆ. ಆರ್ಗನ್ ಡೊನೇಟ್ ದಾಖಲೆಗಳಿಗೆ ಸಹಿ ಹಾಕುವ ಕೆಲಸ ಈಗಾಗಲೇ ಮುಗಿದಿದೆ ಎಂದು ತಿಳಿಸಿದರು.
ವಿಜಯ್ ದೇವರಕೊಂಡವರಿಗೆ ಅಂಗಾಂಗ ದಾನ ಮಾಡಲು ಯೋಚನೆ ಆದರೂ ಹೇಗೆ ಬಂದಿರುವುದು ಎಂದು ವಿಚಾರಿಸಿದಾಗ ವಿಜಯ್ ಅವರಿಗೆ ವೈದ್ಯ ವಿದ್ಯಾರ್ಥಿಗಳನ್ನು ನೋಡಿ ಅವರ ಜೊತೆ ಮಾತನಾಡುವಾಗ ಇಂತಹದೊಂದು ಯೋಚನೆ ಬಂದಿದೆ ಎಂದು ತಿಳಿಸಿದ್ದಾರೆ. ವಿಜಯ್ ದೇವರಕೊಂಡ ರವರ ಈ ಮಹಾ ನಿರ್ಧಾರವು ಎಷ್ಟು ನಟ ನಟಿಯರಿಗೆ ಮಾದರಿಯಾಗಿದೆ ಅದಲ್ಲದೆ ವಿಜಯ್ ದೇವರಕೊಂಡ ಅಭಿಮಾನಿಗಳಿಗೂ ಕೂಡ ದೊಡ್ಡ ಪ್ರೇರಣೆಯಾಗಿದ್ದಾರೆ.
ಇನ್ನು ವಿಜಯ್ ದೇವರಕೊಂಡ ರವರ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ʼಲೈಗರ್ʼ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದೆ. ವಿಜಯ್ ಚಿತ್ರಕ್ಕಾಗಿ ಬಹಳಷ್ಟು ಶ್ರಮಿಸಿದ್ದರು ಅದ್ರೆ, ಸಿನಿಮಾದ ಕಥೆ ಜನರಿಗೆ ಇಷ್ಟವಾಗಲಿಲ್ಲ ಅನಿಸುತ್ತೆ. ಪ್ರಸ್ತುತ, ವಿಜಯ್ ದೇವರಕೊಂಡ ಸಮಂತಾ ಅವರೊಂದಿಗೆ ಮುಂಬರುವ ಖುಷಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಅಂಗಾಂಗ ದಾನ ಮಾಡುವುದು ನಿಮ್ಮ ಪ್ರಕಾರ ಸರಿ ಅನಿಸಿದರೆ ಈ ಒಂದು ಲೇಖನಕ್ಕೆ ಲೈಕ್ ಕೊಟ್ಟು ಶೇರ್ ಮಾಡಿ.