ಮತದಾರರ ಗುರುತಿನ ಚೀಟಿ ಭಾರತದ ಚುನಾವಣಾ ಆಯೋಗವು ನೀಡುವ ಒಂದು ಪುರಾವೆ ಆಗಿದೆ. ಈ ಫೋಟೋ ಗುರುತಿನ ಚೀಟಿಯನ್ನು 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕರು ಪಡೆಯಲೇಬೇಕು. ಮತದಾನ ಮಾಡುವ ಸಮಯದಲ್ಲಿ ಒಂದು ಪ್ರಮುಖ ದಾಖಲೆಯಾಗಿ ಇದನ್ನು ತೋರಿಸಬಹುದು. ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿ ಪಡೆದ ನಂತರವಷ್ಟೇ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಣಿ ಆಗಲು ಸಾಧ್ಯ.
ಆದರೆ ಕೆಲವೊಮ್ಮೆ ತಂತ್ರಾಂಶದ ದೋಷದಿಂದಲೂ ಅಥವಾ ಹೊಸದಾಗಿ ಮತದಾರರ ಚೀಟಿ ಪಡೆದಾಗ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಅಚಾನಕ್ಕಾಗೆ ಬಿಟ್ಟು ಹೋಗಿರುತ್ತದೆ. ಅಂತಹ ಸಮಯದಲ್ಲಿ ಮತದಾನ ಮಾಡಲು ಹೋದಾಗ ತೊಂದರೆಗಳು ಆಗಬಾರದು ಎನ್ನುವ ಕಾರಣಕ್ಕಾಗಿ ಮುಂಚಿತವಾಗಿ ಆನ್ಲೈನ್ ನಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಿಕೊಳ್ಳಲು ಕೆಲವು ವಿಧಾನಗಳನ್ನು ಚುನಾವಣಾ ಆಯೋಗ ಸೂಚಿಸಿದೆ.
ಮತದಾರರ ಗುರುತಿನ ಚೀಟಿ ಪಡೆದವರಿಗೆ ಸ್ಥಳೀಯ ಚುನಾವಣೆಗಳಿಂದ ಹಿಡಿದು ರಾಷ್ಟ್ರಮಟ್ಟದ ಲೋಕಸಭಾ ಎಲೆಕ್ಷನ್ ತನಕ ವೋಟಿಂಗ್ ಮಾಡುವ ಅಧಿಕಾರ ಇರುತ್ತದೆ. ಆದರೆ ಈ ರೀತಿ ಮತದಾನ ಮಾಡಲು ಓಟಿಂಗ್ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇರುವುದು ಕೂಡ ಮುಖ್ಯ. ಆ ಪ್ರಕಾರವಾಗಿ ಈ ಕೆಳಗಿನ ವಿಧಾನಗಳು ಅನುಸರಿಸುವುದರಿಂದ ನೀವು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದಿಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು. ನಂತರ ನೀವು ಯಾವ ಮತಗಟ್ಟೆಯಲ್ಲಿ ಮತದಾನ ಮಾಡಲು ಸಾಧ್ಯ ಎನ್ನುವುದರ ವಿವರವೂ ಸಹ ಬರುತ್ತದೆ. ಅದಕ್ಕಾಗಿ ನೀವು ಈ ಕ್ರಮಗಳನ್ನು ಅನುಸರಿಸಿ.
1. SMS ಮೂಲಕ:-
● EPIC ಎಂದು ಟೈಪ್ ಮಾಡಿ ನಿಮ್ಮ ಮತದಾರರ ಗುರುತಿನ ಸಂಖ್ಯೆಯನ್ನು ಹಾಕಿ 9211728082 ಅಥವಾ 1950 ಗೆ ಸಂದೇಶ ಕಳುಹಿಸಿ.
● ನೀವು ಸಂದೇಶ ಕಳುಹಿಸಿದ ಸ್ವಲ್ಪ ಸಮಯದಲ್ಲಿ ನಿಮ್ಮ ಮತಗಟ್ಟೆ ಸಂಖ್ಯೆ ಮತ್ತು ಹೆಸರು ಪ್ರತ್ಯುತ್ತರವಾಗಿ ನಿಮಗೆ ಸಂದೇಶದ ಮೂಲಕ ಬರುತ್ತದೆ. ಒಂದುವೇಳೆ ನಿಮಗೆ ಮರಳಿ ಸಂದೇಶ ಬಂದಿಲ್ಲ ಎಂದರೆ ವೋಟರ್ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇಲ್ಲ ಎಂದು ಅರ್ಥ.
2. ಆನ್ಲೈನ್ ಮೂಲಕ:-
● ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ NVSP ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ
● ಮೇನ್ ಪೇಜ್ ಅಲ್ಲಿ ಎಲೆಕ್ಟ್ರೋಲ್ ರೋಲ್ ಸರ್ಚ್ ಆಯ್ಕೆ ಇರುತ್ತದೆ, ಅದನ್ನು ಕ್ಲಿಕ್ ಮಾಡಿದರೆ ಹೊಸ ಪೇಜ್ ತೆಗೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮ್ಮ ಮಾಹಿತಿಯನ್ನು ನಮೂದಿಸಬೇಕು.
● ಆ ಹೊಸ ಪೇಜ್ ಅಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ತೋರಿಸಲು ಎರಡು ಆಯ್ಕೆಗಳನ್ನು ಕೇಳುತ್ತದೆ. ಆ ಪ್ರಕಾರವಾಗಿ ಮುಂದುವರೆಯಿರಿ.
● ಮೊದಲ ಆಯ್ಕೆಯಾಗಿ ನೀವು ನಿಮ್ಮ ಹೆಸರು, ನಿಮ್ಮ ಗಂಡ ಅಥವಾ ತಂದೆ ಹೆಸರು, ನಿಮ್ಮ ಹುಟ್ಟಿದ ದಿನಾಂಕ, ನಿಮ್ಮ ವಿಳಾಸ, ಲಿಂಗ ಇವುಗಳನ್ನು ನಮೂದಿಸಬೇಕು. ಇದಾದ ಬಳಿಕ ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ನಮೂದಿಸುವ ಮೂಲಕ ಬರುವ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು.
● ಎರಡನೇ ಸುಲಭದ ಆಯ್ಕೆ ಎಂದರೆ ನೀವು ಇವುಗಳ ಬದಲು ನಿಮ್ಮ EIPC ಸಂಖ್ಯೆ ಮೂಲಕ ಹುಡುಕುವುದು. EIPC ಸಂಖ್ಯೆ ಮತ್ತು ಸ್ಟೇಟಸ್ ನಮೂದಿಸಿ ನಂತರ ಬರುವ ಕ್ಯಾಪ್ಚಾ ಕೋಡನ್ನು ಹಾಕಿ ವೆಬ್ಸೈಟ್ ನಲ್ಲಿ ಮಾಹಿತಿಯನ್ನು ಅಧಿಕೃತಗೊಳಿಸಬೇಕು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವೆಬ್ ಪೇಜ್ ನಿಮಗೆ ಮತದಾರರ ನೋಂದಣಿ ವಿವರಗಳನ್ನು ತೋರಿಸುತ್ತದೆ.