ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ಮಹಿಳೆಯರಲ್ಲಿ ದೇಹದ ಹಲವಾರು ಭಾಗಗಳಲ್ಲಿ ನೋವು ಕಾಣಿಸಿ ಕೊಳ್ಳುತ್ತಿರುತ್ತದೆ. ಕೆಲವೊಂದಷ್ಟು ಜನರಿಗೆ ಎದೆಯಲ್ಲಿ ನೋವು ಕಾಣಿಸಿ ಕೊಂಡರೆ ಕೆಲವೊಂದಷ್ಟು ಮಹಿಳೆಯರ ಕೈ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಮಹಿಳೆಯರಲ್ಲಿ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ.
ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವಂತಹ ಮಹಿಳೆಯರು ಈ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಯಾರ ಬಳಿ ಹೋಗಿ ಇದಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಈ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಕಾರಣ ಏನು ಎಂದು ಯೋಚನೆ ಮಾಡುತ್ತಿರುತ್ತಾರೆ.
ಆದರೆ ಈ ದಿನ ಈ ಸ್ತನಗಳಲ್ಲಿ ಕಾಣಿಸಿಕೊಳ್ಳುವಂತಹ ನೋವು ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಹಾಗೂ ಈ ಸಮಸ್ಯೆ ಇದ್ದವರು ಯಾರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿಯೋಣ.
* ಕೆಲವೊಂದಷ್ಟು ಮಹಿಳೆಯರು ತಮ್ಮ ಋತುಚಕ್ರದ ಸಮಯ ಹತ್ತಿರ ಬಂದಂತಹ ಸಮಯದಲ್ಲಿ ಅವರಿಗೆ ಸ್ತನದಲ್ಲಿ ನೋವು ಕಾಣಿಸಿಕೊಳ್ಳು ವುದು ಸರ್ವೇಸಾಮಾನ್ಯ. ಆನಂತರ ಅವರು ತಿಂಗಳಿನ ಮುಟ್ಟಾದ ಸಮಯದಲ್ಲಿ ತಕ್ಷಣವೇ ಆ ಸಮಸ್ಯೆ ದೂರವಾಗುತ್ತದೆ ಇಂತಹ ಸಮಯ ದಲ್ಲಿ ನೀವು ಜನರಲ್ ಡಾಕ್ಟರ್ ಬಳಿ ಹೋಗಿ ನೀವು ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.
* ಸಾಮಾನ್ಯವಾಗಿ 45 ವರ್ಷದ ಒಳಗಿನ ಮಹಿಳೆಯರಲ್ಲಿ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುವಂತಹ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುತ್ತದೆ ಕೆಲವೊಂದಷ್ಟು ಜನರಿಗೆ ತಿಂಗಳಿನ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಪ್ರತಿ ಬಾರಿ ಈ ನೋವು ಯಾವಾಗಲೂ ಕಾಣಿಸಿ ಕೊಳ್ಳುತ್ತಿರುತ್ತದೆ. ಈ ರೀತಿ ಇಂಥಹ ನೋವು ಕಾಣಿಸಿಕೊಳ್ಳುವುದಕ್ಕೆ ಪ್ರಧಾನವಾಗಿರುವ ಕಾರಣ ಏನು ಎಂದರೆ
* ಸ್ತನಗಳಲ್ಲಿ ಹಲವಾರು ರೀತಿಯ ಹಾರ್ಮೋನ್ ಗಳು ಇರುತ್ತದೆ ಅವು ಎಲ್ಲವೂ ಸಹ ಸರಿಯಾದ ರೀತಿಯಲ್ಲಿ ಇದ್ದರೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಹಾಗೇನಾದರೂ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾದರೆ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ.
* ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಈ ಸಮಸ್ಯೆ ಏನಾದರೂ ಕ್ಯಾನ್ಸರ್ ಗೆ ತಿರುಗುತ್ತದೆ ಎಂದು ಆಲೋಚನೆ ಮಾಡುತ್ತಿರುತ್ತಾರೆ ಆದರೆ ತಪ್ಪು ಸ್ತನಗಳಲ್ಲಿ ಯಾವುದಾದರು ಗೆಡ್ಡೆ ಇದ್ದು ಅದು ನೋವು ಕೊಡುತ್ತಿದ್ದರೆ ಅದನ್ನು ನೀವು ಕ್ಯಾನ್ಸರ್ ಗೆ ಸಂಬಂಧಿಸಿದ ವೈದ್ಯರ ಬಳಿ ಹೋಗಿ ತೋರಿಸಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಯಾವುದೇ ರೀತಿಯ ಗಂಟು ಇಲ್ಲ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಎಂದರೆ ನೀವು ಕ್ಯಾನ್ಸರ್ ಗೆ ಸಂಬಂಧಿಸಿದ ವೈದ್ಯರ ಭೇಟಿಯಾಗುವುದು ಅವಶ್ಯಕಥೆ ಇಲ್ಲ.
ಹಾಗೇನಾದರೂ ನಿಮ್ಮ ಬ್ರೆಸ್ಟ್ ನಲ್ಲಿ ಯಾವುದೇ ಬಣ್ಣದ ನೀರಿನ ಅಂಶ ಹಾಗೂ ರಕ್ತ ಕಾಣಿಸಿಕೊಳ್ಳುತ್ತಿದ್ದಾರೆ ಇದು ಬ್ರೆಸ್ಟ್ ಕ್ಯಾನ್ಸರ್ ಇರುವಂತಹ ಲಕ್ಷಣ ಹಾಗಾಗಿ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
* ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಈ ಸಮಸ್ಯೆ ಇದ್ದರೂ ಯಾವುದೇ ರೀತಿಯ ನೋವು ಕಾಣಿಸಿಕೊಳ್ಳುವುದಿಲ್ಲ ಹಾಗೆಂದ ಮಾತ್ರಕ್ಕೆ ನೋವು ಇಲ್ಲ ಎಂದು ನಿರ್ಲಕ್ಷಿಸುವುದು ಕೂಡ ತಪ್ಪು.
* ಕೆಲವೊಮ್ಮೆ ಕೆಲವೊಂದಷ್ಟು ಜನರ ಕಂಕಳಿನ ಭಾಗದ ಕೆಳಗೆ ಗಂಟು ಗಳು ಕಾಣಿಸಿ ಕೊಳ್ಳುತ್ತದೆ ಇದನ್ನು ಸಹ ನೀವು ತೋರಿಸಿಕೊಳ್ಳುವುದು ಉತ್ತಮ ಇದು ಕೂಡ ಕ್ಯಾನ್ಸರ್ ಗೆ ತಿರುಗುವ ಸಾಧ್ಯತೆ ಇದೆ.
* ಕೆಲವೊಂದಷ್ಟು ಜನ ಮಹಿಳೆಯರಲ್ಲಿ ತಮ್ಮ ತಿಂಗಳಿನ ಮುಟ್ಟು ನಿಂತು ಹೋಗಿ ಆರು ತಿಂಗಳು ಒಂದು ವರ್ಷ ಕಳೆದ ನಂತರ ಬ್ಲೀಡಿಂಗ್ ಕಾಣಿಸಿ ಕೊಳ್ಳುತ್ತಿದ್ದರೆ ಇದು ಗರ್ಭಕೋಶದ ಕ್ಯಾನ್ಸರ್ ಇರುವ ಲಕ್ಷಣ ವಾಗಿದೆ. ಆದ್ದರಿಂದ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ನೀವು ಕ್ಯಾನ್ಸರ್ ವೈದ್ಯರ ಬಳಿ ಹೋಗಿ ತೋರಿಸಿಕೊಳ್ಳುವುದು ಉತ್ತಮ.