ನಮ್ಮ ಹಿಂದು ಸಂಪ್ರದಾಯದ ಪ್ರಕಾರ ಗಣಪತಿಯನ್ನು ಪ್ರಥಮ ಪೂಜೆ ವಂದಿತ ಎನ್ನುತ್ತೇವೆ. ಯಾಕೆಂದರೆ ಯಾವುದೇ ಪೂಜೆ, ವ್ರತಾಚರಣೆ ಆಗಿದ್ದರು, ಯಜ್ಞ ಯಾಗ ಆಗಿದ್ದರು ಮೊದಲು ಗಣಪತಿಗೆ ಪೂಜೆ ಸಲ್ಲಿಸಿ ನಂತರ ಆರಂಭ ಮಾಡಬೇಕು. ಯಾಕೆಂದರೆ ವಿಘ್ನ ವಿನಾಶಕ ಸಂಕಷ್ಟಹರ ಗಣಪತಿಯನ್ನು ನೆನೆದು ಈ ರೀತಿ ಪೂಜೆ ಶುರು ಮಾಡುವುದರಿಂದ ನಿರ್ವಿಘ್ನವಾಗಿ ಕಾರ್ಯ ಸಾಗುತ್ತದೆ ಎನ್ನುವ ನಂಬಿಕೆ.
ಹಾಗಾಗಿ ಈ ಆಚರಣೆ ರೂಢಿಯಲ್ಲಿ ಇದೆ. ನಮ್ಮಲ್ಲಿ ಪ್ರತಿಯೊಂದು ಮನೆಗಳಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಹೀಗೆ ಎಲ್ಲಾ ಕಡೆ ಕೂಡ ಗಣಪತಿಯ ವಿಗ್ರಹ ಹಾಗೂ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತೇವೆ. ಗಣೇಶ ಎಂದರೆ ನಮ್ಮಲ್ಲಿ ಎಲ್ಲರಿಗೂ ಕೂಡ ಒಂದು ವಿಶೇಷ ಒಲವು. ತಮ್ಮ ಪರ್ಸ್ ಇಂದ ಹಿಡಿದು ಮಲಗುವ ಕೋಣೆ ಹೀಗೆ ಎಲ್ಲಾ ಕಡೆ ಗಣೇಶನ ಫೋಟೋವನ್ನು ಇಟ್ಟುಕೊಳ್ಳುತ್ತಾರೆ.
ಮಹಿಳೆಯರಿಗೆ ಈ ಲಕ್ಷಣಗಳು ಇದ್ದರೆ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ.!
ಆದರೆ ನಾವು ಎಲ್ಲಿಯೂ ಕೂಡ ಗಣಪತಿಯ ಫೋಟೋದಲ್ಲಿರುವ ಸೂಕ್ಷ್ಮ ವಿಷಯಗಳನ್ನು ಗಮನವಿಟ್ಟು ನೋಡುವುದಕ್ಕೆ ಹೋಗಿರುವುದಿಲ್ಲ. ಅಂತಹದಲ್ಲಿ ಒಂದು ಪ್ರಮುಖ ವಿಷಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಏನೆಂದರೆ ನೀವು ಗಣಪತಿ ಫೋಟೋ ಅಥವಾ ವಿಗ್ರಹ ನೋಡುವಾಗ ಸೊಂಡಿಲನ್ನು ಗಮನಿಸಿ. ಒಂದೊಂದರಲ್ಲಿ ಅದು ಬಲಗಡೆಗೆ ಇರುತ್ತದೆ, ಒಂದೊಂದು ಕಡೆ ಅದು ಎಡಗಡೆ ಇರುತ್ತದೆ.
ಬಲಗಡೆಗೆ ಗಣೇಶನ ಸೊಂಡಿಲು ಇದ್ದರೆ ಅದನ್ನು ಬಲಮುರಿ ಗಣೇಶ ಎನ್ನುತ್ತಾರೆ ಎಡಗಡೆಗೆ ಗಣಪತಿ ಸೊಂಡಿಲು ಇದ್ದರೆ ಅದನ್ನು ಎಡಮುರಿ ಗಣೇಶ ಎನ್ನುತ್ತಾರೆ. ಅದರಿಂದ ಏನೆಲ್ಲಾ ಫಲಾನುಫಲಗಳು ಎಂದು ತಿಳಿದುಕೊಳ್ಳುವ ಉತ್ಸಾಹ ಇದ್ದರೆ ಈ ಅಂಕಣವನ್ನು ಕೊನೆಯವರೆಗೂ ಓದಿ. ಬಲಮುರಿ ಗಣೇಶನನ್ನು ಹೆಚ್ಚಾಗಿ ನಾವು ದೇವಸ್ಥಾನಗಳಲ್ಲಿ ಮಾತ್ರ ಕಾಣುತ್ತೇವೆ, ಈ ಗಣಪನನ್ನು ಜಾಗೃತ ಗಣಪತಿ ಎಂದು ಸಹ ಹೇಳಲಾಗುತ್ತದೆ.
ಹುಟ್ಟಿದ ವಾರದ ಆಧಾರದ ಮೇಲೆ ನಿಮ್ಮ ಗುಣಲಕ್ಷಣಗಳು ಹೇಗಿರುತ್ತದೆ ನೋಡಿ..!
ಸಿದ್ದಿ ಗಣಪತಿಯ ಸೊಂಡಿಲು ಬಲಗಡೆ ಇರುವುದರಿಂದ ಬಲಗಡೆ ದಕ್ಷಿಣ ದಿಕ್ಕನ್ನು ತೋರಿಸುತ್ತದೆ. ಇದು ಭೂಮಿಯಿಂದ ಋಣ ಮುಕ್ತವಾಗಿ ಯುಮಲೋಕದ ಕಡೆಗೆ ಹೋಗುವ ದಿಕ್ಕನ್ನು ಹೇಳುವುದರಿಂದ ಯಾರು ಕೂಡ ಮನೆಗಳಲ್ಲಿ ಬಲಮುರಿ ಗಣೇಶನ ವಿಗ್ರಹ ಅಥವಾ ಫೋಟೋ ಇಟ್ಟು ಪೂಜೆ ಮಾಡುವುದಿಲ್ಲ. ಸಾಂಸಾರಿಕ ಜವಾಬ್ದಾರಿಗಳು ಮತ್ತು ಆಸಕ್ತಿಯನ್ನು ಹೊಂದಿರುವವರು ಹೀಗೆ ಮಾಡಲು ಹೋಗುವುದಿಲ್ಲ.
ಅಲ್ಲದೆ ಬಲಮುರಿ ಗಣೇಶನನ್ನು ಮನೆಯಲ್ಲಿ ಪೂಜೆ ಮಾಡಬೇಕು ಎಂದರೆ ಗಣೇಶನ ಪೂಜಾ ಪದ್ಧತಿಯಲ್ಲಿ ಒಂದು ಚೂರು ಲೋಪ ಆಗದಂತೆ ಮಾಡಬೇಕು. ಇಲ್ಲವಾದಲ್ಲಿ ಕಷ್ಟ ಎದುರಿಸಬೇಕಾಗುತ್ತದೆ, ದೋಷ ಉಂಟಾಗುತ್ತದೆ. ಹಾಗಾಗಿ ಎಲ್ಲರೂ ಎಡಮುರಿ ಗಣಪತಿಯನ್ನು ಮನೆಗಳಲ್ಲಿ ಪೂಜಿಸುತ್ತಾರೆ. ಎಡಮುರಿ ಗಣಪನ ಸೊಂಡಿಲು ಎಡಭಾಗ ಎಂದರೆ ಉತ್ತರ ದಿಕ್ಕನ್ನು ತೋರಿಸುವುದರಿಂದ ಇದು ಆಧ್ಯಾತ್ಮವನ್ನು ಜಾಗೃತಗೊಳಿಸುತ್ತದೆ.
ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!
ಜೊತೆಗೆ ಸುಖ, ಶಾಂತಿ, ನೆಮ್ಮದಿಯನ್ನು ಕೂಡ ಸೂಚಿಸುವುದಾಗಿದೆ. ಹಾಗಾಗಿ ಎಡಗಡೆ ಸೊಂಡಿಲು ಇರುವ ಎಡಮುರಿ ಗಣಪತಿಯನ್ನು ತಮ್ಮ ಶಕ್ತಿಯನುಸಾರ ಮನೆಗಳಲ್ಲಿ ಪೂಜಿಸುತ್ತಾರೆ. ಎಡಮುರಿ ಗಣಪತಿಗೆ ಪೂಜೆ ಮಾಡುವಾಗ ಭಕ್ತಿಯಿಂದ ಗರಿಕೆ ಹಾಗೂ ಕಡಲೆಕಾಳು ಅರ್ಪಿಸಿದರು ಸಾಕು, ಗಣಪತಿ ತೃಪ್ತನಾಗುತ್ತಾರೆ ಮತ್ತು ಆಶೀರ್ವದಿಸುತ್ತಾರೆ.
ಎಡಮುರಿ ಗಣಪತಿಯನ್ನು ಮನೆಯಲ್ಲಿ ಪೂಜೆ ಮಾಡುವುದರಿಂದ ವಾಸ್ತುದೋಷಗಳು ನಿವಾರಣೆ ಆಗುತ್ತದೆ. ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ ಮತ್ತೊಂದು ಕಥೆ ಏನು ಹೇಳುತ್ತದೆ ಎಂದರೆ ಗಣೇಶನ ಎಡ ಹಾಗೂ ಬಲ ಭಾಗದಲ್ಲಿ ಅವರ ಪತ್ನಿಯರು ಇರುತ್ತಾರೆ. ಬಲ ಭಾಗದಲ್ಲಿ ಸಿದ್ದಿ ಇರುವುದರಿಂದ ಬಲಮುರಿ ಗಣಪನನ್ನು ಸಿದ್ಧಿ ವಿನಾಯಕ ಎಂದು ಸಹಾ ಕರೆಯುತ್ತಾರೆ. ಎಡಭಾಗದಲ್ಲಿ ಗಣೇಶನ ಮತ್ತೊಬ್ಬ ಪತ್ನಿ ಬುದ್ದಿ ಇರುತ್ತಾರೆ ಎಂದು ಹೇಳುತ್ತಾರೆ.