ಜನವರಿ 22, 2024 ಪ್ರತಿಯೊಬ್ಬ ಭಾರತೀಯನ ಜೀವನದಲ್ಲಿಯೂ ಸಹ ಮಹತ್ವವಾದ ದಿನವಾಗಿದೆ. ಯಾಕೆ ಎಂದರೆ ಸರಿ ಸುಮಾರು ಐದು ಶತಮಾನಗಳಿಂದ ನಿರೀಕ್ಷೆಯಲ್ಲಿದ್ದಂತಹ ಶುಭ ಸಮಾರಂಭ ಒಂದು ಈ ದಿನ ನೆರವೇರಲಿದೆ ಅದುವೇ ಶ್ರೀರಾಮ ಮಂದಿರದ ಉದ್ಘಾಟನೆ. ರಾಮ ಮಂದಿರದ ಗರ್ಭಗುಡಿಯ ಕೆಲಸ ಇನ್ನೇನು ಮುಕ್ತಾಯದ ಹಂತದಲ್ಲಿ ಇದ್ದು ಜನವರಿ 22ರ ಮೇಶ ಲಗ್ನದಲ್ಲಿ ಅದರ ಪ್ರತಿಷ್ಠಾಪನೆಯನ್ನು ನೆರವೇರಿಸುವುದಾಗಿ ಆ ದಿನವನ್ನು ನಿಗದಿ ಪಡಿಸಿದ್ದಾರೆ.
ದೇವನೊಬ್ಬ ನಾಮ ಹಲವು ಎನ್ನುವಂತೆ ಶ್ರೀರಾಮ ಮಂದಿರವು ಪ್ರತಿಯೊಬ್ಬ ವ್ಯಕ್ತಿಗೂ ಸಹ ಸಂಬಂಧಪಟ್ಟದ್ದಾಗಿದೆ. ಆದಕಾರಣ ಸರಿಸುಮಾರು 3 ಕ್ವಿಂಟಾಲ್ ಅಕ್ಕಿಗೆ ಒಂದು ಕ್ವಿಂಟಲ್ ಅರಿಶಿಣ ಹಾಗೂ ದೇಸಿ ಹಸುವಿನ ತುಪ್ಪವನ್ನು ಬೆರೆಸಿ ಮಂತ್ರಾಕ್ಷತೆಯನ್ನು ತಯಾರಿಸಿ ಅದನ್ನು ಹಿತ್ತಾಳೆಯ ಕಳಶದಲ್ಲಿ ಇರಿಸಿ ಅಕ್ಷತೆ ಪೂಜೆಯನ್ನು ನೆರವೇರಿಸಿ ಮಂತ್ರಾಕ್ಷತೆಯನ್ನು ತಯಾರಿಸಿದ್ದಾರೆ.
ಸರಿಸುಮಾರು ಎರಡು ಕೋಟಿಗೂ ಹೆಚ್ಚಿನ ಜನರಿಗೆ ಈ ಒಂದು ಮಂತ್ರಾಕ್ಷತೆ ತಲುಪಬೇಕು ಎನ್ನುವಂತೆ ಒಂದು ಕರ ಪತ್ರವನ್ನು ತಯಾರಿಸಿದ್ದಾರೆ. ಹೌದು ಪ್ರತಿಯೊಬ್ಬರ ಮನೆ ಬಾಗಿಲು ಸಹ ಶ್ರೀರಾಮನ ಮಂತ್ರಾಕ್ಷತೆ ಹಾಗೂ ಶ್ರೀ ರಾಮನ ಒಂದು ಭಾವಚಿತ್ರ ಹಾಗು ಒಂದು ಕರ ಪತ್ರ ಇವೆಲ್ಲವನ್ನು ಸಹ ತಲುಪಿಸುವಂತಹ ಒಂದು ಕೆಲಸವನ್ನು ಮಾಡುತ್ತಿದ್ದಾರೆ.
A ಅಕ್ಷರದ ಹೆಸರಿನವರೇ ಇಂತಹವರ ಸಹವಾಸ ಮಾಡಬೇಡಿ.!
ಹೌದು ಈ ಒಂದು ಸಂದರ್ಭ ಪ್ರತಿಯೊಬ್ಬ ಭಾರತೀಯನಿಗೂ ಕೂಡ ಬಹಳ ಉತ್ತಮವಾದಂತಹ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತಹ ಸಂಗತಿಯಾಗಿದ್ದು ಇಂತಹ ಒಂದು ಪತ್ರವನ್ನು ಮಂತ್ರಾಕ್ಷತೆಯನ್ನು ಪಡೆದುಕೊಳ್ಳುವಂತಹ ಸಮಯದಲ್ಲಿ ಸಾಮಾನ್ಯವಾಗಿ ಪ್ರತಿದಿನ ಇದ್ದಹಾಗೆ ಅದನ್ನು ಸ್ವೀಕರಿಸಬಾರದು.
ಬದಲಿಗೆ ಅದನ್ನು ಪಡೆದುಕೊಳ್ಳುವಂತಹ ಸಮಯದಲ್ಲಿ ಪ್ರತಿಯೊಬ್ಬರು ಶುಚಿಯಾಗಿ ಸ್ನಾನ ಮಾಡಿ ಒಂದು ಮಡಿ ಬಟ್ಟೆಯನ್ನು ಧರಿಸಿಕೊಂಡು ಆನಂತರ ಅದನ್ನು ಸ್ವೀಕರಿಸಬೇಕು ಹಾಗೂ ಅದನ್ನು ಸ್ವೀಕರಿಸಿದ ನಂತರ ನೀವು ಅದನ್ನು ಎಲ್ಲೆಂದರಲ್ಲಿ ಇಡಬಾರದು ಬದಲಿಗೆ ಅದನ್ನು ತಕ್ಷಣವೇ ದೇವರ ಮನೆಯಲ್ಲಿ ಇಟ್ಟು ದೀಪ ಕರ್ಪೂರಗಳನ್ನು ಬೆಳಗುವುದರ ಮೂಲಕ ಅದಕ್ಕೆ ಒಂದು ಗೌರವವನ್ನು ಕೊಡಬೇಕು.
ಹಾಗೂ ಆ ಒಂದು ಮಂತ್ರಾಕ್ಷತೆಯನ್ನು ನೀವು 22ನೇ ತಾರೀಖಿನ ಒಳಗಾಗಿ ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು ಬದಲಿಗೆ 22 ನೇ ತಾರೀಖಿನ ನಂತರ ನೀವು ಅದನ್ನು ಉಪಯೋಗಿಸುವುದು ಉತ್ತಮ ಏಕೆಂದರೆ 22ನೇ ತಾರೀಕು ಶ್ರೀ ರಾಮನ ಪ್ರತಿಷ್ಠಾಪನೆ ನೆರವೇರಲಿದ್ದು ಆ ಸಂದರ್ಭದಲ್ಲಿ ಹಾಗೂ ಮೇಲೆ ತಿಳಿಸಿದ ಸಮಯದ ಅನುಸಾರವಾಗಿ ಆನಂತರ ನೀವು ಆ ಅಕ್ಷತೆಯನ್ನು ಉಪಯೋಗಿಸುವುದರಿಂದ ಆ ಅಕ್ಷತೆಯಲ್ಲಿ ಒಂದು ದಿವ್ಯಶಕ್ತಿ ಮೂಡುತ್ತದೆ ಆದ್ದರಿಂದ ಆ ಸಮಯದಲ್ಲಿ ಉಪಯೋಗಿಸು ವುದು ಒಳಿತು.
ಕಿಡ್ನಿ ಸ್ಟೋನ್ ಕರಗಿಸಿಕೊಳ್ಳಬೇಕಾ ? ಹಾಗಾದರೆ ಇದನ್ನು ಬೆಳಗ್ಗೆ ರಾತ್ರಿ ತಿನ್ನಿ.!
ಹಾಗೂ ಮಂತ್ರಾಕ್ಷತೆಯನ್ನು ಸ್ವೀಕರಿಸಿದಾಗ ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ದೇವಸ್ಥಾನದ ವತಿಯಿಂದ ಸ್ವಲ್ಪ ಪ್ರಮಾಣದ ಮಂತ್ರಾಕ್ಷತೆ ಬರುತ್ತದೆ ಅದಕ್ಕೆ ನೀವು ಒಂದು ಬೊಗಸೆಯಷ್ಟು ಅಕ್ಕಿಯನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ ದೇವಸ್ಥಾನದಿಂದ ಬಂದಂತಹ ಅಕ್ಷತೆಗಳನ್ನು ಅದಕ್ಕೆ ಮಿಶ್ರಣ ಮಾಡಿ ದೇವರ ಮನೆಯಲ್ಲಿ ಇಡಬೇಕು.
ತದನಂತರ ನೀವು ಯಾವುದೇ ರೀತಿಯ ಶುಭ ಸಮಾರಂಭಗಳಿಗೆ ನಿಮ್ಮ ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದರೆ ಅಂತಹ ಸಮಯದಲ್ಲಿ ಎರಡು ಕಾಳು ಅಕ್ಷತೆಯನ್ನು ತಲೆಯ ಮೇಲೆ ಹಾಗೂ ಎರಡು ಕಾಳು ಅಕ್ಷತೆಯನ್ನು ಬಾಯಿಗೆ ಹಾಕಿಕೊಂಡು ಆನಂತರ ಹೊರಡಬೇಕು.
ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲ ಕೆಲಸ ಕಾರ್ಯದಲ್ಲಿಯೂ ಕೂಡ ಯಶಸ್ಸು ಎನ್ನುವುದು ಸಿಗುತ್ತಾ ಹೋಗುತ್ತದೆ ಜೊತೆಗೆ ಆ ಸಮಯದಲ್ಲಿ ಶ್ರೀರಾಮನನ್ನು ನೆನೆದು ಮುಂದೆ ನಡೆದರೆ ನಿಮಗೆ ಎಲ್ಲದರಲ್ಲಿಯೂ ಕೂಡ ಯಶಸ್ಸು ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.