ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ಕೆಟ್ಟ ಸನ್ನಿವೇಶಗಳು ಅಂದರೆ ಕೆಟ್ಟ ಪರಿಸ್ಥಿತಿಗಳು ಎದುರಾಗುತ್ತಲೇ ಇರುತ್ತದೆ. ಆದರೆ ಆ ಸಮಯದಲ್ಲಿ ನಾವು ಕುಗ್ಗುವುದು ತಪ್ಪು ಸಮಸ್ಯೆ ಏನೇ ಇರಲಿ ನಾನು ಅದನ್ನು ಎದುರಿಸುತ್ತೇನೆ ನಾನು ಅವೆಲ್ಲವನ್ನು ದಾಟಿ ನಾನು ನನ್ನ ಗುರಿಯನ್ನು ತಲುಪುತ್ತೇನೆ ಎಂಬ ದೃಢ ನಿರ್ಧಾರವನ್ನು ಮಾಡುವುದು ಒಳ್ಳೆಯದು.
ಬದಲಿಗೆ ನನಗೆ ಸಮಸ್ಯೆ ಉಂಟಾಗಿದೆ ಎಂದು ಕೊರಗು ವುದು ಬಹಳ ತಪ್ಪು. ಉದಾಹರಣೆಗೆ ನೀವೆಲ್ಲರೂ ಕೂಡ ನೋಡಿರ ಬಹುದು ಯಾವುದೇ ವ್ಯಕ್ತಿ ಯಾವುದಾದರೂ ಒಂದು ಕೆಲಸದಲ್ಲಿ ವಿಫಲನಾದ ಎಂದರೆ ಉದಾಹರಣೆಗೆ ಒಬ್ಬ ವ್ಯಕ್ತಿ ಬೈಕ್ ಹೊಸದರಲ್ಲಿ ಕಲಿಯುತ್ತಿದ್ದಂತಹ ಸಮಯದಲ್ಲಿ ಅದರಿಂದ ಕೆಳಗೆ ಬೀಳುತ್ತಾನೆ ಆದರೆ ಬಿದ್ದ ತಕ್ಷಣ ನಾನು ಅದನ್ನು ಓಡಿಸುವುದಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ.
ಬದಲಿಗೆ ಮತ್ತೆ ಮತ್ತೆ ಪ್ರಯತ್ನಿಸುತ್ತಾ ಗಾಡಿ ಓಡಿಸುವುದನ್ನು ಕಲಿಯು ತ್ತಾನೆ. ಹೌದು ಹಾಗೆಯೇ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ವಿಚಾರದಲ್ಲಿ ಪ್ರಾರಂಭ ಹಂತದಲ್ಲಿ ಎಡವುತ್ತೇವೆ. ಆದರೆ ಅದನ್ನು ಕೊನೆಯ ಹಂತ ಎಂದು ಸುಮ್ಮನೆ ಬಿಡಬಾರದು. ಬದಲಿಗೆ ನಾನು ಇದರಲ್ಲಿ ಒಂದು ಯಶಸ್ಸನ್ನು ಸಾಧಿಸುತ್ತೇನೆ ಎನ್ನುವ ಆತ್ಮವಿಶ್ವಾಸವನ್ನು ಇಟ್ಟುಕೊಂಡು ಅದರ ಮುಂದೆ ಧೈರ್ಯವಾಗಿ ನಿಲ್ಲಬೇಕು.
ಆಗ ಮಾತ್ರ ನಾವು ಅದರಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಗಂಡಾಗಲಿ ಹೆಣ್ಣಾಗಲಿ ಕೆಲವೊಂದು ಸನ್ನಿವೇಶದಲ್ಲಿ ತನ್ನ ತೂಕದಲ್ಲಿ ತಾನು ಇರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಬೇರೆಯವರಿಗೆ ಹೊರೆಯಾಗುವಂತೆ ಬೇರೆಯವರು ನಮ್ಮ ಬಗ್ಗೆ ಇಲ್ಲಸಲ್ಲದ ಮಾತನ್ನು ಹೇಳುವ ಹಾಗೆ ನಾವು ನಡೆದುಕೊಳ್ಳಬಾರದು.
ಬದಲಿಗೆ ಅವರಾಗಿ ಅವರೇ ನಮ್ಮನ್ನು ಬನ್ನಿ ಎಂದು ಕರೆಯುವ ತನಕ ನಾವು ಅವರ ಬಳಿ ಹೋಗಬಾರದು. ಅಂತಹ ರೀತಿಯಲ್ಲಿ ನಾವು ಬದುಕಬೇಕೆ ಹೊರತು ಇವರು ಯಾಕಾದರೂ ನಮ್ಮ ಮನೆಗೆ ಬಂದರೋ ಎನ್ನುವಂತಹ ಮಾತನ್ನು ಕೇಳಬಾರದು. ಬದಲಿಗೆ ಎಲ್ಲರೂ ನಮ್ಮನ್ನು ಬನ್ನಿ ಎಂದು ಕರೆಯುವ ಮಟ್ಟಕ್ಕೆ ನಾವು ಬೆಳೆದು ನಮ್ಮ ಜೀವನದಲ್ಲಿ ಒಂದು ಸಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಈ ದಿನ ಒಬ್ಬ ಹೆಣ್ಣಾಗಲಿ ಗಂಡಾಗಲಿ ಯಾವ ಕೆಲವೊಂದು ಸಂದರ್ಭದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
* ಭಾರವಾದ ಸಂಬಂಧಗಳ ಹತ್ತಿರ ಏನನ್ನು ಹೇಳಿಕೊಳ್ಳಬೇಡ ಅದು ಸ್ನೇಹವಾದರೂ ಸರಿ ಪ್ರೀತಿ ಆದರೂ ಸರಿ.
* ಪ್ರೀತಿ ಇರದ ಜಾಗದಲ್ಲಿ ಯಾವುದಕ್ಕೂ ಆಸೆ ಪಡಬೇಡ.
* ಸ್ವಾಭಿಮಾನ ಬಿಟ್ಟು ಯಾರನ್ನು ಇಷ್ಟ ಪಡಬೇಡ ಒಂದುವೇಳೆ ಇಷ್ಟ ಪಟ್ಟರೆ ಕೀಳಾಗಿ ನೋಡುತ್ತಾರೆ.
* ನಿಯತ್ತು ಇಲ್ಲದ ಕಡೆ ಒಂದು ನಿಮಿಷ ಕೂಡ ಇರಬೇಡ.
* ಕೆಟ್ಟ ಸಂಬಂಧಿಕರ ಮನೆಗೆ ಹೋಗಬೇಡ ನೀನು ಯಾರು ಅಂತ ಗೊತ್ತೇ ಇಲ್ಲವೇನೋ ಅನ್ನೋ ಹಾಗೆ ಕೀಳಾಗಿ ನೋಡುತ್ತಾರೆ.
* ಗೌರವ ಇಲ್ಲದೆ ಇರೋ ಜಾಗದಲ್ಲಿ ಇರಬೇಡ.
* ನಿನಗೆ ಇಷ್ಟವಾಗದ ವಿಷಯಕ್ಕೆ ಜನರಿಗೆ ಕ್ಷಮೆ ಕೇಳಬೇಡ
* ನಿನ್ನನ್ನು ದೂರ ತಳ್ಳೋರಿಗೆ ಹತ್ತಿರವಾಗಬೇಕು ಅನ್ನೋ ಯೋಚನೆ ಮಾಡಬೇಡ.
* ಬಂದರೆ ಬಾ ಬಿಟ್ಟರೆ ಬಿಡು ಅಂತ ಹೇಳೋ ಜನಗಳ ಹತ್ತಿರ ಕರೆದರೂ ಹೋಗಬೇಡ ಬಿಡಿ ಗಾಸು ಕೇಳಬೇಡ.
* ನಿನಗೆ ಬೆಲೆ ಕೊಡದ ಜಾಗದಲ್ಲಿ ಮಾತನಾಡಬೇಡ.
* ಬೇಕಾಬಿಟ್ಟಿ ಮಾತಾಡೋರನ್ನ ಆಗ ಮಾತನಾಡಿಸುತ್ತಾರೆ. ಈಗ ಮಾತನಾಡಿಸುತ್ತಾರೆ ಅಂತ ಕಾಯಬೇಡ.
* ಗಂಜಿ ಕುಡಿದರೂ ನೆಮ್ಮದಿಯಾಗಿರಬಹುದು ಆದರೆ ನಿನ್ನದಲ್ಲದಕ್ಕೆ ಯಾವತ್ತೂ ಆಸೆ ಪಡಬೇಡ ಅದು ವ್ಯಕ್ತಿಯಾಗಲಿ ಅಥವಾ ವಸ್ತುಗಳಾಗಲಿ.
* ನಿನಗೆ ನಿನ್ನವರೆ ಶತ್ರು ಆಗೋದು, ನಿನ್ನ ಬಗ್ಗೆ ಎಲ್ಲಾ ತಿಳಿದವರೇ ನಿನಗೆ ಮೋಸ ಮಾಡುವವರು.