ಸಾಮಾನ್ಯವಾಗಿ ಹೇರ್ ಕಟ್ ಮಾಡಿಸುವುದಕ್ಕೆ ಎಲ್ಲರೂ ರಜಾದಿನವನ್ನೇ ನೋಡುತ್ತಾರೆ. ಈಗಿನ ಬ್ಯುಸಿ ಲೈಫ್ ಶೆಡ್ಯೂಲ್ ಅಲ್ಲಿ ರಜಾದಿನಗಳು ಮಾತ್ರ ಅವರ ವೈಯಕ್ತಿಕ ಕೆಲಸಗಳಿಗೆ ಸಮಯ ಸಿಗುವುದು ಅಥವಾ ಯಾವುದಾದರೂ ಇಂಟರ್ವ್ಯೂಗೆ ಹೋಗಬೇಕು ಅಥವಾ ಹೊಸ ಜಾಗಗಳಿಗೆ ಹೋಗಬೇಕು ಅಥವಾ ಸಮಾರಂಭಗಳಿಗೆ ಹೋಗಬೇಕು ಎನ್ನುವಾಗ ಮಾತ್ರ ಈ ಬಗ್ಗೆ ಗಮನ ಹೋಗುತ್ತದೆ.
ಆದರೆ ಇದೇ ದಿನದಂದು ಹೇರ್ ಕಟ್ ಮಾಡಿಸಬೇಕು ಎನ್ನುವ ನಿಯಮ ನಮ್ಮ ಹಿಂದೂ ಧರ್ಮದಲ್ಲಿ ಪಾಲನೆಯಾಗಿ ಬಂದಿದೆ. ನಮ್ಮಲ್ಲಿ ಹಿರಿಯರು ಮಕ್ಕಳು ಯಾವ ದಿನ ಹುಟ್ಟಿರುತ್ತಾರೋ ಆ ದಿನ ಅವರ ಹೇರ್ ಕಟ್ ಮಾಡಿಸಬಾರದು ಎನ್ನುವುದನ್ನು ಪಾಲಿಸಿಕೊಂಡು ಬಂದಿದ್ದಾರೆ. ಅದರ ಜೊತೆಗೆ ಇನ್ನೂ ಕೆಲವು ದಿನಗಳು ಮತ್ತು ವಾರಗಳು ಕೂಡ ಹೇರ್ ಕಟ್ ಮಾಡಿಸುವುದಕ್ಕೆ ನಿಷಿದ್ಧ, ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
● ಸೋಮವಾರ ಹೇರ್ ಕಟ್ ಮಾಡಿಸುವವರಿಗೆ ಏಳು ತಿಂಗಳು ಆಯಸ್ಸು ವೃದ್ಧಿ ಆಗುತ್ತದೆ. ಶಾಸ್ತ್ರಗಳ ಪ್ರಕಾರ ಈ ದಿನ ಕ್ಷೌರಕ್ಕೆ ಉತ್ತಮವಲ್ಲ, ಈ ದಿನ ಕ್ಷೌರವು ಮಾನಸಿಕ ಕ್ಷೀಣತೆಯನ್ನು ತರುತ್ತದೆ, ಅಲ್ಲದೆ ಇದು ಮಕ್ಕಳಿಗೆ ಒಳ್ಳೆಯದು ಅಲ್ಲ. ಆದ್ದರಿಂದ ನೀವೇನಾದರೂ ಸೋಮವಾರ ಕ್ಷೌರ ಮಾಡಿಸುತ್ತಿದ್ದರೆ ಅದನ್ನು ತಪ್ಪಿಸಿ.
● ಮಂಗಳವಾರ ಹೇರ್ ಕಟ್ ಮಾಡಿಸಿದರೆ 11 ತಿಂಗಳು ಅವರ ಆಯುಷ್ಯ ಕಡಿಮೆ ಆಗುತ್ತದೆ. ಧರ್ಮ ಗ್ರಂಥಗಳು ಹೇಳುವ ಪ್ರಕಾರ ಮಂಗಳವಾರ ಕ್ಷೌರಕ್ಕೆ ಯೋಗ್ಯವಲ್ಲ, ಮಂಗಳವಾರ ಕ್ಷೌರ ಮಾಡಿಸುವವರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಎನ್ನುವ ಮಾತಿದೆ.
● ಬುಧವಾರ ಹೇರ್ ಕಟ್ ಮಾಡಿಸಿದರೆ 5 ತಿಂಗಳು ಅವರ ಆಯುಷ್ಯ ಹೆಚ್ಚಾಗುತ್ತದೆ. ಕೂದಲು ಮತ್ತು ಉಗುರುಗಳನ್ನು ಕತ್ತರಿಸಲು ಬುಧವಾರ ಉತ್ತಮವಾದ ದಿನವಾಗಿರುತ್ತದೆ. ಇದು ಸಂಪತ್ತನ್ನು ಹೆಚ್ಚಿಸುತ್ತದೆ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳುತ್ತದೆ.
● ಗುರುವಾರ ಹೇರ್ ಕಟ್ ಮಾಡಿಸಿದರೆ ಮೂರು ತಿಂಗಳು ಅವರ ಆಯುಷ್ಯ ಹೆಚ್ಚಾಗುತ್ತದೆ. ಆದರೆ ಶಾಸ್ತ್ರಗಳ ಪ್ರಕಾರ ಈ ದಿನ ಕ್ಷೌರಕ್ಕೆ ಯೋಗ್ಯವಲ್ಲ. ಈ ದಿನ ಕ್ಷೌರ ಮಾಡಿಸುವವರಿಗೆ ಹಣದ ನಷ್ಟ ಉಂಟಾಗುತ್ತದೆ. ಇದರ ಜೊತೆಗೆ ಅವರ ಘನತೆ ಗೌರವಕ್ಕೂ ಧಕ್ಕೆ ತರುವಂತಹ ಘಟನೆಗಳು ಸೃಷ್ಟಿ ಆಗುತ್ತವೆ.
● ಶುಕ್ರವಾರ ಹೇರ್ ಕಟ್ ಮಾಡಿಸಿದರೆ 11 ತಿಂಗಳು ಅವರ ಆಯುಷ್ಯ ಜಾಸ್ತಿ ಆಗುತ್ತದೆ. ಶುಕ್ರವಾರ ಇವುಗಳಿಗೆ ಉತ್ತಮವಾದ ದಿನ ಯಾಕೆಂದರೆ ಶುಕ್ರ ಗ್ರಹದ ಸ್ವಭಾವವೇ ಸೌಂದರ್ಯ ಆಗಿರುವುದರಿಂದ ಸೌಂದರ್ಯವನ್ನು ವೃದ್ದಿ ಮಾಡುವಂತಹ ಕೆಲಸಗಳಿಗೆ ಇದು ಸೂಕ್ತ ದಿನ. ಶುಕ್ರವಾರ ಕೂದಲು ಕಟ್ ಮಾಡಿಸುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ ಬದಲಾಗಿ ಲಾಭವು ಹೆಚ್ಚಾಗುತ್ತದೆ ಮತ್ತು ನಿಮ್ಮ ಖ್ಯಾತಿಯೂ ಹೆಚ್ಚಾಗುತ್ತದೆ.
● ಶನಿವಾರ ಹೇರ್ ಕಟ್ ಮಾಡಿಸುವವರಿಗೆ ಎರಡು ತಿಂಗಳು ಅವರ ಆಯುಷ್ಯ ಕಡಿಮೆ ಆಗುತ್ತದೆ. ಮಂಗಳವಾರದಂತೆ ಶನಿವಾರ ಕ್ಷೌರ ಮಾಡಿಸುವವರಿಗೂ ಕೂಡ ಆಕಾಲಿಕ ಮೃತ್ಯು ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ದಿನಗಳ ಕ್ಷೌರ ಮಾಡಿಸುವುದನ್ನು ಮತ್ತು ಹೇರ್ ಕಟ್ ಮಾಡಿಸುವುದನ್ನು ತಪ್ಪಿಸಿ.
● ಭಾನುವಾರ ಹೇರ್ ಕಟ್ ಮಾಡಿಸಿದರೆ ಒಂದು ತಿಂಗಳು ಅವರ ಆಯುಷ್ಯ ಕಡಿಮೆ ಆಗುತ್ತದೆ. ಭಾನುವಾರ ಆದಿತ್ಯನ ವಾರವೆಂದು ಪರಿಗಣಿಸಲಾಗಿದೆ ಸೂರ್ಯನ ವಾರವಾದ ಈ ದಿನದಂದು ಕ್ಷೌರ ಮಾಡಿಸುವುದರಿಂದ ನಿಮ್ಮ ಸಂಪತ್ತು, ಬುದ್ಧಿವಂತಿಕೆ ಮತ್ತು ಧರ್ಮ ನಶಿಸುತ್ತದೆ. ಆದ್ದರಿಂದ ಭಾನುವಾರದ ದಿನ ಹೇರ್ ಕಟ್ ಮತ್ತು ಕ್ಷೌರ ನಿಷಿದ್ಧ.