ನಮ್ಮ ಭಾರತೀಯ ಸಂಸ್ಕೃತಿ ಪ್ರಕಾರ ಆಗುವ ಮದುವೆಗಳನ್ನು ನೋಡಿದಾಗ ಸಾಮಾನ್ಯವಾಗಿ ಹೆಣ್ಣಿನ ವಯಸ್ಸಿಗಿಂತ ಗಂಡಿನ ವಯಸ್ಸು ಹೆಚ್ಚಿಗೆ ಇರುತ್ತದೆ. ಮದುವೆಯಾಗಲು ಗಂಡಿನ ಕನಿಷ್ಠ ವಯಸ್ಸು ಗಂಡು ಮಕ್ಕಳಿಗೆ 21 ವರ್ಷಗಳಿದ್ದರೆ ಹೆಣ್ಣು ಮಕ್ಕಳಿಗೆ 18 ವರ್ಷವನ್ನು ನಿಗಧಿಪಡಿಸಲಾಗಿದೆ.
ಪುರಾತನ ಕಾಲದಿಂದಲೂ ಕೂಡ ಮದುವೆ ಸಂದರ್ಭದಲ್ಲಿ ಹೆಣ್ಣುಗಂಡಿಗಿಂತ ಚಿಕ್ಕವನಾಗಿರುವ ಉದಾಹರಣೆಗಳನ್ನೇ ನಾವು ಹೆಚ್ಚಾಗಿ ಕೇಳಿದ್ದೇವೆ ನೋಡಿದ್ದೇವೆ. ಯಾವಾಗಲೂ ಯಾಕೆ ಗಂಡು ಮಕ್ಕಳು ಹೆಣ್ಣುಮಕ್ಕಳಿಗಿಂತ ದೊಡ್ಡವರಾಗಿರಬೇಕು ಎನ್ನುವ ಪ್ರಶ್ನೆ ಮೂಡದೆ ಇರದು ಇದಕ್ಕೆ ವಿರುದ್ಧವಾಗಿ ಹೆಣ್ಣು ಮಕ್ಕಳು 2 ರಿಂದ 5 ವರ್ಷ ದೊಡ್ಡವರಾಗಿ ಕೂಡ ಮದುವೆ ಆಗಿರುವ ಉದಾಹರಣೆಗಳು ಕೂಡ ಇವೆ.
ಆದರೆ ಶೇಕಡವಾರು ತೆಗೆದುಕೊಂಡಾಗ ಯಾವಾಗಲೂ ಮದುವೆಗಳಲ್ಲಿ ಗಂಡು ಮಕ್ಕಳೇ ಹೆಣ್ಣುಮಕ್ಕಳಿಗಿಂತ ದೊಡ್ಡವರಾಗಿರುತ್ತಾರೆ. ಇವರಿಬ್ಬರ ನಡುವೆ ಅತಿ ಹೆಚ್ಚು ಅಂತರವಿರುವ ಉದಾಹರಣೆಗಳು ಇವೆ. ವೈಜ್ಞಾನಿಕ ಹಾಗೂ ಸಾಮಾಜಿಕವಾಗಿ ಇದರ ಹಿಂದಿನ ಕಾರಣ ಏನಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ಅಂಕಣವನ್ನು ಕೊನೆಯವರೆಗೂ ಓದಿ.
ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಬಹಳ ಬೇಗ ಮೆಚ್ರುರ್ಡ್ ಆಗುತ್ತಾರೆ. ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕೂಡ ತಮ್ಮ ವಯಸ್ಸಿನ ಗಂಡು ಮಕ್ಕಳಿಗಿಂತ 3-4 ವರ್ಷ ದೊಡ್ಡವರಂತೆ ಹೆಣ್ಣು ಮಕ್ಕಳು ಯಾವಾಗಲೂ ವರ್ತಿಸುತ್ತಾರೆ ಹಾಗೂ ನಡೆದುಕೊಳ್ಳುತ್ತಾರೆ.
ಪ್ರಾಕೃತಿಕವಾಗಿ ಈ ರೀತಿ ಅವರು ಸ್ಪಂದಿಸುವುದರಿಂದ ಅವರಿಗಿಂತ 2 ರಿಂದ 7 ವರ್ಷ ಹಿರಿಯರೊಂದಿಗೆ ಮದುವೆ ಮಾಡಿದಾಗ ಅವರ ಮನಸ್ಥಿತಿಗಳು ಸರಿಯಾಗಿ ಹೊಂದಿಕೊಳ್ಳುತ್ತದೆ, ಇಬ್ಬರಲ್ಲೂ ಹೊಂದಾಣಿಕೆ ಇರುತ್ತದೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ like mind peoples ರೀತಿ ಆಗದೆ right mind peoples ರೀತಿ ಸ್ಪಂದಿಸುತ್ತಾರೆ ಎನ್ನುವ ದೃಷ್ಟಿಕೋನದಿಂದ ಯೋಚಿಸಿ ಈ ರೀತಿಯಾಗಿ ಮದುವೆಗಳನ್ನು ಮಾಡುತ್ತಿದ್ದರು ಎಂದು ಒಪ್ಪಿಕೊಳ್ಳ ಬಹುದು.
ವೃದ್ಯಾಪದಲ್ಲಿ ಆರೈಕೆ ಹಾಗೂ ಅವಲಂಬನೆಯ ದೃಷ್ಟಿಕೋನದಿಂದ ಕೂಡ ಗಂಡು ಮಕ್ಕಳ ವಯಸ್ಸಿಗಿಂತ ಹೆಣ್ಣು ಮಕ್ಕಳ ವಯಸ್ಸು ಕಡಿಮೆ ಇರುವಂತೆ ಮದುವೆ ಮಾಡಲಾಗುತ್ತದೆ. ವೃದ್ಯಾಪದಲ್ಲಿ ಅನಾರೋಗ್ಯಗಳು ಆದಾಗ ಅಥವಾ ವಯಸ್ಸಾದ ಸಂದರ್ಭದಲ್ಲಿ ಅವರ ಶುಶ್ರೂಷೆ ಮಾಡಲು ಹೆಂಡತಿ ಅವರಿಗಿಂತ ಕಿರಿಯ ವಯಸ್ಸಿನವರಿಗಿದ್ದಾಗ ಅನುಕೂಲವಾಗುತ್ತದೆ.
ಇಬ್ಬರು ಸಮಾನ ವಯಸ್ಕರಾಗಿದ್ದಾಗ ಇಬ್ಬರು ಒಟ್ಟಿಗೆ ವೃದ್ಯಾಪಕ್ಕೆ ಹೋದರೆ ಇಬ್ಬರಿಗೂ ಮತ್ತೊಬ್ಬರ ಮೇಲೆ ಅವಲಂಬನೆಯಾಗುವ ಅಥವಾ ಯಾರು ಇಲ್ಲದೆ ಇಬ್ಬರೇ ಕ’ಷ್ಟ ಪಡುವ ಸಂದರ್ಭ ಬರಬಹುದು ಎನ್ನುವ ಉದ್ದೇಶದಿಂದಲೂ ಈ ರೀತಿ ಮಾಡುತ್ತಿದ್ದರು. ಇನ್ನು ವೈಜ್ಞಾನಿಕವಾದ ಕಾರಣಗಳನ್ನು ಹೇಳುವುದಾದರೆ ಹೆಣ್ಣು ಮಕ್ಕಳಲ್ಲಿ ಬಹಳಷ್ಟು ಹಾರ್ಮೋನ್ಸ್ ವೇರಿಯೇಷನ್ ಆಗುತ್ತಿರುತ್ತದೆ.
ಆದರೆ ಹೆಣ್ಣು ಮಕ್ಕಳ ವಯಸ್ಸಿನಲ್ಲಿ ಅದೇ ವಯಸ್ಸಿನ ಗಂಡು ಮಕ್ಕಳಲ್ಲಿ ಆ ರೀತಿಯ ಬೆಳವಣಿಗೆ ಆಗಿರುವುದಿಲ್ಲ. ಅವರಿಗಿಂತ ಮೂರ್ನಾಲ್ಕು ವರ್ಷಗಳಾದ ನಂತರ ಗಂಡು ಮಕ್ಕಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಈ ಉದ್ದೇಶದಿಂದ ಕೂಡ ಇಬ್ಬರಿಗೂ ಸರಿಹೊಂದುತ್ತದೆ ಎಂದು ವಯಸ್ಸಿಗಿಂತ ಹಿರಿಯರ ಜೊತೆಗೆ ಮದುವೆ ಮಾಡಲಾಗುತ್ತಿದೆ.
ಇಬ್ಬರು ಸಮಾನ ವಯಸ್ಕರಾಗಿದ್ದಾಗ ಇಬ್ಬರ ಮನಸ್ಥಿತಿ ಒಂದೇ ರೀತಿ ಇದ್ದು ಒಬ್ಬರ ನಿರ್ಧಾರ ಮತ್ತೊಬ್ಬರಿಗೆ ಆಕ್ಷೇಪಣೆ ಇಲ್ಲದೆ ಹೋಗಬಹುದು ಆಗ ತಪ್ಪು ನಿರ್ಧಾರಗಳಾಗುವ ಸಾಧ್ಯತೆ ಇರುತ್ತದೆ ಅಥವಾ ಇಬ್ಬರು ಒಂದೇ ವಯಸ್ಸಿನವರು ಆಗಿರುವುದರಿಂದ ಅತಿಯಾದ ಸಲಿಗೆ ಮುಂದಿನ ದಿನಗಳಲ್ಲಿ ಸಂಬಂಧ ಹಾಳಾಗುವ ಹಂತಕ್ಕೆ ತಲುಪುವ ಅ’ಪಾ’ಯಗಳು ಕೂಡ ಇರುತ್ತವೆ. ಈ ಎಲ್ಲಾ ಉದ್ದೇಶದಿಂದ ಹಿರಿಯರು ಈ ರೀತಿ ನಿರ್ಧಾರ ಮಾಡಿ ಲೆಕ್ಕಚಾರ ಹಾಕಿ ಮದುವೆಗಳನ್ನು ಏರ್ಪಡಿಸುತ್ತಿದ್ದರು.