ಯಶ್ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ನಟ ಅಲ್ಲದೆ ಒಬ್ಬ ಅದ್ಭುತ ಸ್ನೇಹ ಜೀವಿ. ಪ್ರತಿಭೆ ಇರುವವರಿಗೆ ಕನ್ನಡ ಚಿತ್ರರಂಗದಲ್ಲಿ ಇರಲು ಅವಕಾಶ ಮಾಡಿಕೊಡುವ ಯಶ್ ಅವರು ಹೊಸದಾಗಿ ಯಾರೇ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು ಕೂಡ ಅಣ್ಣನಂತೆ ನಿಂತು ಸ್ವಾಗತಿಸುತ್ತಾರೆ. ಎಷ್ಟೋ ಹೀರೋಗಳ ಮೊದಲ ಸಿನಿಮಾಗೆ ಕ್ಲಾಪ್ಸ್ ಮಾಡಿ ಮನಪೂರ್ವಕವಾಗಿ ಶುಭ ಹಾರೈಸಿರುವ ಇವರು ಬನಾರಸ್ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡುತ್ತಿರುವ ಝೈದ್ ಖಾನ್ ಕೂಡ ಇಂಡಸ್ಟ್ರಿಯಲ್ ಉಳಿದುಕೊಳ್ಳಲು ಪಾಲಿಸಬೇಕಾದ ಕೆಲವು ವಿಷಯಗಳ ಬಗ್ಗೆ ಸಲಹೆ ನೀಡಿದ್ದರಂತೆ.
ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ರಾಜ್ಯದಾದ್ಯಂತ ನವೆಂಬರ್ 4ರಂದು ಕನ್ನಡದ ಬಹು ನಿರೀಕ್ಷಿತ ಸಿನಿಮಾ ಬನಾರಸ್ ರಿಲೀಸ್ ಆಗಿದೆ. ಸಿನಿಮಾ ಟೈಟಲ್ ಹಾಗೂ ಝೈಂದ್ ಖಾನ್ ನಟನೆ ಎನ್ನುವುದು ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವನ್ನು ಕ್ರಿಯೇಟ್ ಮಾಡಿತ್ತು. ಸಿನಿಮಾ ನಾಯಕದ ಝೈಂದ್ ಖಾನ್ ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಅವರ ಪುತ್ರ. ಹೀಗಾಗಿ ಇವರು ಶೋಕಿಗಾಗಿ ಸಿನಿಮಾ ಮಾಡಿದ್ದಾರಾ ಎನ್ನುವ ಮಾತುಗಳು ಹಲವಡೆ ಕೇಳಿ ಬರುತ್ತಿದ್ದವು.
ಸಿನಿಮಾ ಬಿಡುಗಡೆ ಮುನ್ನವೇ ಸಿನಿಮಾವನ್ನು ಬಾಯ್ ಕಟ್ ಮಾಡಬೇಕು ಎನ್ನುವ ಕೂಗು ಕರ್ನಾಟಕದಲ್ಲಿ ಜೋರಾಗಿ ಕೇಳಿ ಬಂದಿತ್ತು, ಆದರೆ ಅರ್ಥ ಇಲ್ಲ ಎನ್ನುವುದನ್ನು ಅರಿತ ಮೇಲೆ ಸಿನಿಮಾ ಬಿಡುಗಡೆ ಮಾಡಲಾಗಿದೆ. ಬನಾರಸ್ ಟೈಮ್ ಟ್ರಾವೆಲಿಂಗ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಬದುಕಿನ ಫಿಲಾಸಫಿ ಕೂಡ ಹೇಳುವ ಒಂದು ನವಿರಾದ ಪ್ರೇಮ ಕಾವ್ಯ ವಾಗಿ ಹೊರಹೊಮ್ಮಿದ್ದು ಇವೆಲ್ಲವನ್ನು ನೋಡಿ ನಿರ್ಧಾರ ಮಾಡಲು ಬನಾರಸ್ ಸಿನಿಮಾ ವನ್ನು ನೋಡಲೇಬೇಕಾಗಿದೆ.
ಸದ್ಯಕ್ಕೆ ಮೊದಲ ದಿನ ಸಿನಿಮಾ ನೋಡಿದವರು ಸಿದ್ದಾರ್ಥ್ ಆಗಿ ನಟಿಸಿ ಪಟಪಟ ಎಂದು ಪಂಚಿಂಗ್ ಡೈಲಾಗ್ ಹೇಳುವ ಝೈಂದ್ ಖಾನ್ ನಟನೆ ಮೆಚ್ಚಿದ್ದಾರೆ. ಮೊದಲ ದಿನದ ಗೆಲುವಿನ ಖುಷಿಯಲ್ಲಿ ಇರುವ ಝೈಂದ್ ಖಾನ್ ಫಿಲ್ಮಾಗ್ರಫಿ ಎನ್ನುವ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿದ್ದು, ಈ ದಿನದ ಗೆಲುವಿಗೆ ಕಾರಣವಾಗಿದ್ದು ಏನು ಎನ್ನುವ ವಿಷಯದ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಹಲವಾರು ಜನರು ನನಗೆ ನಾನು ಹೀರೋ ಆಗಲು ಬೇಕಾದ ವಿಷಯಗಳ ಬಗ್ಗೆ ಸಲಹೆ ನೀಡಿದ್ದಾರೆ.
ಅದರಲ್ಲೂ ಮುಖ್ಯವಾಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ನಾನು ನೆನೆಸಿಕೊಳ್ಳುತ್ತೇನೆ. ನಾನು ಮೊದಲ ಬಾರಿ ಭೇಟಿಯಾಗಿ ಅವರಿಗೆ ಸಿನಿಮಾ ಬಗ್ಗೆ ಹೇಳಲು ಹೋದಾಗ ನನ್ನ ಕನ್ನಡ ಅಷ್ಟು ಅಚ್ಚುಕಟ್ಟಾಗಿ ಇರಲಿಲ್ಲ. ಕನ್ನಡ ಮಾತನಾಡುತ್ತಿದ್ದೆ, ಅರ್ಥವಾಗುತ್ತಿತ್ತು ಆದರೆ ಸರಿಯಾಗಿ ಭಾಷೆ ಬಳಕೆ ಮಾಡುತ್ತಿರಲಿಲ್ಲ ಮತ್ತು ವ್ಯಾಕರಣ ತಪ್ಪಾಗುತ್ತಿತ್ತು. ಇದು ಅವರಿಗೆ ತಿಳಿದು ಹೋಯ್ತು.
ಆ ಸಮಯದಲ್ಲಿ ಅವರು ನನಗೆ ಕೊಟ್ಟ ಸಲಹೆ ಇಂದು ನಾನು ಇಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡಲು ಸಹಾಯಕ ಆಗಿದೆ. ಅವರು ನನಗೆ ಹೇಳಿದ್ದು ಇಷ್ಟೇ. ಸಿನಿಮಾ ಮಾಡುವುದು ಎಂದರೆ ಆಟ ಅಲ್ಲ, ಸಿನಿಮಾ ಇಂಡಸ್ಟ್ರಿಯಲ್ ಉಳಿದುಕೊಳ್ಳಬೇಕು ಎಂದರೆ ಕಂಫರ್ಟ್ ಜೋನ್ ಇಂದ ಆಚೆ ಬಂದು ಕಷ್ಟ ಪಡಬೇಕು.
ನೀನೊಬ್ಬ ರಾಜಕಾರಣಿ ಮಗ ಲಕ್ಷೂರಿ ಲೈಫ್ ನೋಡಿದ್ದೀಯಾ ಆದರೆ ಸಿನಿಮಾದಲ್ಲಿ ಬಹಳ ಕಷ್ಟ ಪಡಬೇಕು ಹಾಗಿದ್ದರೆ ಮಾತ್ರ ಇಲ್ಲಿ ನೀನು ಉಳಿದುಕೊಳ್ಳಲು ಸಾಧ್ಯ. ಅಲ್ಲದೆ ನಿನ್ನ ಕನ್ನಡ ಬಹಳ ಇಂಪ್ರೂವ್ ಆಗಬೇಕು ಆಗ ಮಾತ್ರ ಕನ್ನಡಿಗರಿಗೆ ಮುಟ್ಟುತ್ತೀಯ ಎಂದು ಸಲಹೆ ನೀಡಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ನಾನು 9 ತಿಂಗಳ ಕಾಲ ಕನ್ನಡ ಕಲಿಕೆ ಕ್ಲಾಸಿಗೆ ಕೂಡ ಸೇರಿಕೊಂಡಿದ್ದೆ ಅವರ ಈ ಸಲಹೆಯಿಂದ ನನಗೆ ಬಹಳ ಒಳ್ಳೆಯದಾಯಿತು ಎನ್ನುವುದನ್ನು ಹೇಳಿಕೊಂಡಿದ್ದಾರೆ.