ರಾಕಿಂಗ್ ಸ್ಟಾರ್ ಆಗಿ ಮಿಂಚಿ ರಾಕೀಬಾಯ್ ಆಗಿರುವ ಯಶ್ ಅವರು ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿಯೇ ಹೆಸರು ಗಳಿಸಿದ್ದಾರೆ. ಕಿರಾತಕ, ರಾಮಾಚಾರಿ ಡ್ರಾಮಾ ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಮನ ಸೆಳೆದು ಕೆಜಿಎಫ್ ಚಿತ್ರದ ಮೂಲಕ ಇಡೀ ಭಾರತವೇ ಯಶ್ ಅವರ ಕಡೆಗೆ ತಿರುಗಿ ನೋಡುವಂತೆ ಮಾಡಿ ಇಂದು ರಾಕೀಬಾಯ್ ಆಗಿ ದೇಶದ ಮೂಲೆ ಮೂಲೆಗಳಲ್ಲೂ ಸದ್ದು ಮಾಡುತ್ತಿದ್ದಾರೆ. ತಮ್ಮ ನಟನ ಕೌಶಲ್ಯ ಹಾಗೂ ಖಡಕ್ ಲುಕ್ ನಿಂದಲೇ ಹೆಚ್ಚು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಇಂಡಸ್ಟ್ರಿ ಸ್ಯಾಂಡಲ್ವುಡ್ ಅನ್ನು ಎತ್ತರಕ್ಕೆ ಕೊಂಡೋಯ್ಯುವ ನಿಟ್ಟಿನಲ್ಲಿ ಗಮನ ಸೆಳೆದು ಪ್ರಸಿದ್ದಿಯಾಗಿದ್ದಾರೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಅಷ್ಟೇ ಅಲ್ಲದೇ ಈ ಬಾರಿಯ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿಯೂ ಕೂಡ ಯಶ್ ಅವರಿಗೆ ಉನ್ನತ ಸ್ಥಾನವನ್ನು ನೀಡಿ ಗೌರವಿಸಲಾಗಿತ್ತು. ಕೆ ಜಿ ಎಫ್ 2 ಚಿತ್ರದಲ್ಲಿಯೂ ಸಹ ಉತ್ತಮ ನಟನೆಯ ಜೊತೆಗೆ ಚಿತ್ರದ ಇನ್ನೊಂದು ಭಾಗವನ್ನು ಉಳಿಸಿಕೊಂಡು ಅಭಿಮಾನಿಗಳಲ್ಲಿ ಹೆಚ್ಚು ಹುರುಪನ್ನು ಮೂಡಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಕೆ ಜಿ ಎಫ್ ಚಿತ್ರ ಬಿಟ್ಟರೆ ಸದ್ಯದಲ್ಲಿ ಯಾವುದೇ ಸಿನಿಮಾ ಮುಹೂರ್ತವನ್ನು ನಿಗಧಿ ಪಡಿಸಿಲ್ಲ ಆದರೆ ಇದೇ ದಸರಾ ಸಮಯದಲ್ಲಿ ತಮ್ಮ ಮುಂದಿನ ಚಿತ್ರದ ನಿಲುವನ್ನು ತೋರ್ಪಡಿಸುವುದಾಗಿ ಸುದ್ದಿಯೊಂದು ಹೊರ ಬಿದ್ದಿದೆ.
ಹೌದು ಯಶ್ ಅವರ ಮುಂದಿನ ಚಿತ್ರವು ಕಾಲಿವುಡ್ ನ ಖ್ಯಾತ ನಿರ್ದೇಶಕ ಶಂಕರ್ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಸುದ್ದಿ ಹರಿದಾಡುತ್ತಿದ್ದು ಈ ಚಿತ್ರ ಇತಿಹಾಸ ಪ್ರಧಾನ ಚಿತ್ರವಾಗಿರಲಿದೆ ಎಂಬ ಸುದ್ದಿ ಇದೆ. ಈ ಸುದ್ದಿಯಿಂದ ಯಶ್ ಅಭಿಮಾನಿಗಳಲ್ಲಿ ಸಂತಸದ ವಾತಾವರಣ ಮನೆ ಮಾಡಿದ್ದು ತಮ್ಮ ನೆಚ್ಚಿನ ನಟನನ್ನು ಇತಿಹಾಸ ಪ್ರಧಾನ ಚಿತ್ರದಲ್ಲಿ ಕಣ್ ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೂ ಮುಂಚೆ ಮಫ್ತಿ ನಿರ್ದೇಶಕ ನರ್ತನ್ ಅವರ ಕಥೆಗೆ ನಾಯಕರಾಗುವ ಸುದ್ದಿ ಇತ್ತು ಆದರೆ ಈಗ ತಮಿಳಿನ ನಿರ್ದೇಶಕ ಶಂಕರ್ ಅವರ ಕಥೆಗೆ ನಾಯಕರಾಗಲು ತಯಾರಿ ನಡೆಸುತ್ತಿದ್ದಾರೆ.
ಎಸ್ ವೆಂಕಟೇಶನ್ ಅವರ ಸ್ವರಚಿತ ಇತಿಹಾಸ ಪ್ರಸಿದ್ದ ಕಾದಂಬರಿಯಾದ ವೇಲ್ ಪರಿ ಎಂಬ ಕಥೆಗೆ ಯಶ್ ಅವರು ನಟಿಸಲು ಸಜ್ಜಾಗಿದ್ದು ಯಶ್ ನಟನೆ ಹಾಗೂ ಶಂಕರ್ ನಿರ್ದೇಶನಕ್ಕೆ ಕರಣ್ ಜೋಹಾರ್ ಅವರು ಬಂಡವಾಳ ಹೂಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ವೇಲ್ ಪರಿ ಎನ್ನುವ ಹಿಸ್ಟರಿ ಕಾದಂಬರಿಯನ್ನು ಸಿನಿಮಾ ರೂಪಕ್ಕೆ ತರಲು ಸುಮಾರು 1000 ಕೋಟಿಯ ಬಜೆಟ್ ಬಂಡವಾಳ ಹಾಕುವ ತಯಾರಿಯಲ್ಲಿ ಇದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದೇ ಸಿನಿಮಾ ವಿಷಯವನ್ನು ದಸರಾ ವಿಶೇಷ ಸಂದರ್ಭದಲ್ಲಿ ಯಶ್ ಅವರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಇದ್ದು ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸಾಮಾನ್ಯವಾಗಿ ಯಾವುದೇ ಜನಪ್ರಿಯತೆ ಗಳಿಸಿದ ನಟರು ಯಾರೇ ಆದರೂ ಸರಿಯೇ ಅತ್ಯುತ್ತಮ ಹಿಟ್ ಸಿನಿಮಾ ನೀಡಿದ ಮೇಲೆ ಮುಂದಿನ ಚಿತ್ರ ದೊಡ್ಡ ಮಟ್ಟದ ಬಜೆಟ್ ಸಿನಿಮಾ ಆಗಿರಲೇ ಬೇಕು. ಇಲ್ಲದೆ ಇದ್ದರೆ ಅವರ ಮೇಲೆ ಸಿನಿ ಪ್ರಿಯರು ಇಟ್ಟಿರುವ ನಂಬಿಕೆ ಹುಸಿಯಾಗುವ ಸಂಭವ ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ ಯಶ್ ಅವರ ಚಿಂತನೆ ಕೂಡ ಇದ್ದು ತಮ್ಮ ಮುಂದಿನ ಸಿನಿಮಾವನ್ನು ಅತ್ಯುತ್ತಮವಾಗಿ ಪ್ರೇಕ್ಷಕ ಬಂಧುಗಳಿಗೆ ನೀಡಲು ಇದೇ ದಸರಾ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಲಿದ್ದಾರೆ.