ಇಂದಿನ ಯುವ ಜನತೆ ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟ ಪಡುವುದಿಲ್ಲ 18 ವರ್ಷ ದಾಟಿತು ಎಂದರೆ ಸಾಕು ಸ್ವಾಭಿಮಾನ ಬಂದುಬಿಡುತ್ತದೆ. ತಾನು ತಂದೆ ತಾಯಿಯ ಮೇಲೆ ಕೂಡ ಡಿಪೆಂಡ್ ಆಗದೆ ಸ್ವಂತವಾಗಿ ದುಡಿಯಬೇಕು ಎಂದು ಆಲೋಚಿಸುತ್ತಾರೆ.
ಆದರೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಸಾಕಷ್ಟು ಜನರು ತಾವು ಪ್ರಭುದ್ಧಮಾನಕ್ಕೆ ಬಂದ ನಂತರ ಸ್ವಂತ ಬಿಜಿನೆಸ್ ಒಂದನ್ನು ಆರಂಭಿಸಬೇಕು ಎಂದುಕೊಂಡಿರುತ್ತಾರೆ ಶೇಕಡ 90 ರಷ್ಟು ಯುವಜನತೆ ಇದೇ ರೀತಿ ಆಲೋಚಿಸುತ್ತಾರೆ. ಬನ್ನಿ ಗೆಳೆಯರೇ ಈ ಲೇಖನದಲ್ಲಿ ಕಡಿಮೆ ಬಂಡವಾಳ ಹೂಡಿ ಹೆಚ್ಚು ಲಾಭಗಳಿಸುವ ಐಡಿಯಾ ಒಂದನ್ನು ಕೊಡುತ್ತೇವೆ
ಬಿಸಿನೆಸ್ ಏನೋ ಶುರು ಮಾಡಬೇಕು ಎಂದು ಎಲ್ಲರೂ ಆಲೋಚಿಸುತ್ತಾರೆ ಆದರೆ ಅದಕ್ಕೆ ಬಂಡವಾಳವನ್ನು ಹೇಗೆ ಹೊಂದಿಸುವುದು ಎಂಬುದೇ ಎಲ್ಲರ ಚಿಂತೆ , ಒಮ್ಮೆಲೇ ದೊಡ್ಡ ಮೊತ್ತವನ್ನು ಕೂಡಿ ಹಾಕುವುದು ಎಂದರೆ, ಸುಲಭದ ಮಾತಲ್ಲ ಹಾಗಾಗಿ ಎಷ್ಟೋ ಯುವ ಪೀಳಿಗೆ ತಂದ ಬಿಸಿನೆಸ್ ಐಡಿಯಾದಿಂದ ಹೊರ ಬರುತ್ತಾರೆ.
ಆದರೆ ನಾವು ನಿಮ್ಮ ಜೊತೆ ಹೊಸ ಬಿಜಿನೆಸ್ ಐಡಿಯಾ ಬಗ್ಗೆ ಮಾತನಾಡುತ್ತಿದ್ದೇವೆ ಬಿಜಿನೆಸ್ ನಲ್ಲಿ ಕೇವಲ ಹತ್ತು ಸಾವಿರ ರೂಪಾಯಿ ಹೂಡಿಕೆಯನ್ನು ಮಾಡಿ ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದಾಗಿದೆ ಇದನ್ನು ಕಡಿಮೆ ಬಜೆಟ್ ಬಿಜಿನೆಸ್ ಆಗಿದ್ದರೂ ಸಹ ಹೆಚ್ಚು ಲಾಭದಾಯಕ
ಯುವ ಜನತೆ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ತನ್ನ ಅರ್ಧ ಆಯಸ್ಸನ್ನು ಕಳೆಯುತ್ತದೆ. ನಿನ್ನ ಫ್ರೆಂಡ್ ಗಳನ್ನು ಫಾಲೋ ಮಾಡುತ್ತಾ ಇರುತ್ತಾರೆ. ಅದರಿಂದಲೂ ಕೂಡ ಹಣವನ್ನು ಸಂಪಾದಿಸಬಹುದಾಗಿದೆ ನೀವು ಸೋಶಿಯಲ್ ಮೀಡಿಯಾ ಬಳಸುವುದು ಮಾತ್ರವಲ್ಲದೆ ಬೇರೆಯವರ ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡುವುದನ್ನು ಕಲಿಯಬಹುದು.
ಸೆಲೆಬ್ರಿಟಿಗಳು ಮತ್ತೆ ತರಲು ತಮ್ಮ ಸೋಶಿಯಲ್ ಮೀಡಿಯ ಖಾತೆಯನ್ನು ಹ್ಯಾಂಡಲ್ ಮಾಡುವುದಕ್ಕಾಗಿ ಕೆಲವು ಜನರನ್ನು ಇಟ್ಟುಕೊಂಡಿರುತ್ತಾರೆ. ನೀವು ಕೂಡ ಸೋಶಿಯಲ್ ಮೀಡಿಯಾ ಹ್ಯಾಂಡಲಿಂಗ್ ಕಲಿತರೆ ನಿಮಗೆ ಅದರಿಂದ ಹಣ ಗಳಿಸಲು ಅನುಕೂಲವಾಗುತ್ತದೆ.
ಇಷ್ಟು ಮಾತ್ರವಲ್ಲದೆ ಬ್ಲಾಗಿಂಗ್ ಕೂಡ ಉತ್ತಮವಾದ ಹಣ ಗಳಿಸುವ ಮೂಲವಾಗಿದೆ ನಿಮಗೆ ಭಾಷೆಯ ಮೇಲೆ ಹಿಡಿತವಿದ್ದು ಅಲ್ಪಸ್ವಲ್ಪ ಕಂಪ್ಯೂಟರ್ ಜ್ಞಾನವಿದ್ದರೆ ಸಾಕು ಬ್ಲಾಗಿಂಗ್ ಶುರುಮಾಡಬಹುದು ಬ್ಲಾಗಿಂಗ್ ಮೂಲಕ ಸಾಕಷ್ಟು ಹಣವನ್ನು ಗಳಿಸಬಹುದು ಬ್ಲಾಗಿಂಗ್ ಎಂದರೆ ಲೇಖನಗಳನ್ನು ಬರೆದು ಪೋಸ್ಟ್ ಮಾಡುವುದು
ಇಂದಿನ ಜನರೆಲ್ಲರೂ ಟ್ರಾವೆಲಿಂಗ್ ಏಜೆನ್ಸಿಯ ಬಗ್ಗೆ ಸಾಕಷ್ಟು ಮಾತನಾಡುವುದನ್ನು ಕೇಳಿರುತ್ತೇವೆ ನೀವು ಕೂಡ ಟ್ರಾವೆಲಿಂಗ್ ಏಜೆನ್ಸಿ ಶುರು ಮಾಡಬಹುದು ಈ ಟ್ರಾವೆಲಿಂಗ್ ಏಜೆನ್ಸಿ ಮೂಲಕ ಪ್ರವಾಸ ಹೋಗಲು ಇಷ್ಟಪಡುವ ಜನರ ಟಿಕೆಟ್ ಬುಕ್ ಮಾಡಿಕೊಂಡು ಅವರಿಗೆ ಬೇಕಾದ ವ್ಯವಸ್ಥೆಗಳನ್ನೆಲ್ಲ ಮಾಡಿಕೊಡಬಹುದು ಹೋಟೆಲ್ ಅರೇಂಜ್ಮೆಂಟ್ ಮತ್ತೆ ತರ ಕೆಲಸಗಳನ್ನು ಅವರಿಗೆ ಸುಲಭವಾಗಿ ಮಾಡಿಕೊಡುವುದರಿಂದ ಕಷ್ಟಮರ್ಸ್ ಕೂಡ ನಿಮ್ಮ ಕಡೆ ಆಕರ್ಷಿತರಾಗುತ್ತಾರೆ. ಹಾಗೆ ಟ್ರಾವೆಲಿಂಗ್ ಏಜೆನ್ಸಿ ಮೂಲಕ ಲಾಭವನ್ನು ಗಳಿಸಬಹುದು
ಫೋಟೋಗ್ರಾಫಿ ಅಂತೂ ತುಂಬಾ ಫೇಮಸ್ ಆಗುತ್ತಿದೆ. ನೀವು ಅದ್ಭುತವಾಗಿ ಛಾಯಾಗ್ರಹಣ ಮಾಡುತ್ತಿದ್ದರೆ ಅದನ್ನು ಕೂಡ ನೀವು ಬಿಸಿನೆಸ್ ಆಯ್ಕೆ ಆಗಿ ತೆಗೆದುಕೊಳ್ಳಬಹುದು ವೆಡ್ಡಿಂಗ್ ಫೋಟೋಶೂಟ್ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮತ್ತೆ ತರ ಸಮಾರಂಭಗಳಿಗೆ ಜನರು ಫೋಟೋ ಶೂಟ್ ಮೊರೆ ಹೋಗುತ್ತಾರೆ. ಇದರಿಂದಲೂ ಕೂಡ ನೀವು ಲಾಭವನ್ನು ಗಳಿಸಬಹುದಾಗಿದೆ
ಟ್ಯೂಷನ್ ಹೇಳಿಕೊಡುವುದು ಕೂಡ ಒಂದು ಉತ್ತಮ ಬ್ಯುಸಿನೆಸ್ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ನೀವು ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡಬಹುದು ಟ್ಯೂಷನ್ ಟೀಚರ್ ಗೆ ತುಂಬಾ ಬೇಡಿಕೆ ಇದೆ ನೀವು ಗಂಟೆಗೆ ಇದ್ದಷ್ಟು ಹಣ ಎಂದು ನಿಗದಿಪಡಿಸಿ ಪಾಠವನ್ನು ಶುರು ಮಾಡಬಾರದು ಇದರಿಂದಲೂ ಕೂಡ ನೀವು ಲಾಭಗಳಿಸುತ್ತೀರಿ
ಮತ್ತೊಂದು ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿರುವ ಬಿಸಿನೆಸ್ ಎಂದರೆ ಅದು ಯುಟ್ಯೂಬ್, ಹೌದು ಯೂಟ್ಯೂಬ್ ಚಾನೆಲ್ ಶುರು ಮಾಡಿ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಬಹುದು ಮಾತನಾಡುವ ಕಲೆ, ಪ್ರವಾಸ, ಅಡುಗೆ ವಿಡಿಯೋಗಳು, ಕಾಮಿಡಿ ಮುಂತಾದ ವಿಡಿಯೋಗಳ ಮೂಲಕ ನೀವು ಜನರ ಮನಸ್ಸಿಗೆ ಹತ್ತಿರವಾದ ಹಾಗೂ ಹೆಚ್ಚು ವೀಕ್ಷಣೆ ಹಾಗೂ ಸಬ್ಸ್ಕ್ರೈಬ್ ಗಳನ್ನು ಪಡೆದುಕೊಂಡರೆ ಯೂಟ್ಯೂಬ್ ಕೂಡ ಲಾಭದಾಯಕ ಬಿಸಿನೆಸ್ ಆಗುತ್ತದೆ.