ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್ ರಾಜಕುಮಾರ್ ಕುಟುಂಬ ಅಂದರೆ ತುಂಬಾನೇ ಹೆಗ್ಗಳಿಕೆ ಅಷ್ಟೇ ಅಲ್ಲದೆ ಇಡೀ ಚಿತ್ರರಂಗಕ್ಕೆ ಇದು ಒಂದು ಆಲದಮರ ಅಂತನೇ ಹೇಳಬಹುದು. ಈಗಲಾದರೂ ವಾಣಿಜ್ಯ ಮಂಡಳಿ ಅಥವಾ ಫಿಲಂ ಚೇಂಬರ್ ಎಂಬ ಆಫೀಸ್ ಇದೆ ಆದರೆ ಹಿಂದಿನ ಕಾಲದಲ್ಲಿ ಸಿನಿಮಾಗೆ ಸಂಬಂಧಪಟ್ಟಂತಹ ಹಾಗೂ ಹೋಗುಗಳು ಚರ್ಚೆಯಾಗುತ್ತಿದ್ದ ಸ್ಥಳ ಅಂದರೆ ಅದು ದೊಡ್ಮನೆ ಅಂತನೇ ಹೇಳಬಹುದು. ಬಹುತೇಕ ಎಲ್ಲಾ ಕಲಾವಿದರಿಗೆ ಜೀವನವನ್ನು ರೂಪಿಸಿಕೊಟ್ಟಂತಹ ಸ್ಥಳ ಅಂದರೆ ಅದು ದೊಡ್ಮನೆ. ಹೌದು ಡಾಕ್ಟರ್ ರಾಜಕುಮಾರ್ ಕುಟುಂಬ ಅಂದರೆ ಇಡೀ ಸಿನಿಮಾ ರಂಗಕ್ಕೆ ಒಂದು ಪೂಜ್ಯನೀಯ ಭಾವನೆ ಮತ್ತು ಗೌರವ ಇತ್ತು ಅಷ್ಟು ಸಹಾಯವನ್ನು ಕೂಡ ದೊಡ್ಮನೆ ಅವರು ಕಲಾವಿದರಿಗೆ ಮಾಡಿಕೊಟ್ಟಿದ್ದರು. ಈ ಒಂದು ಕಾರಣಕ್ಕಾಗಿ ಈಗಲೂ ಕೂಡ ಸ್ಯಾಂಡಲ್ ವುಡ್ ನಲ್ಲಿ ಇರುವಂತಹ ಪ್ರತಿಯೊಬ್ಬ ಕಲಾವಿದರೂ ಕೂಡ ದೊಡ್ಡಮನೆಯನ್ನು ನೆನಪಿಸಿಕೊಳ್ಳುತ್ತಾರೆ.
ಇನ್ನು ವಿಚಾರಕ್ಕೆ ಬರುವುದಾದರೆ ದೊಡ್ಮನೆಯಲ್ಲಿ ಡಾಕ್ಟರ್ ರಾಜಕುಮಾರ್ ಅವರು ಅಗಲಿದ ನಂತರ ಶಿವಣ್ಣ ಪುನೀತ್ ರಾಜಕುಮಾರ್ ಮತ್ತು ರಾಘಣ್ಣ ಇವರೆಲ್ಲರೂ ಕೂಡ ರಾಜಕುಮಾರ್ ಅವರ ಸ್ಥಾನವನ್ನು ತುಂಬುತ್ತಾರೆ. ಅಂದರೆ ರಾಜಕುಮಾರ್ ಅವರು ನಡೆಸುತ್ತಿದ್ದಂತಹ ಕೆಲವೊಂದಷ್ಟು ಸಿನಿಮಾ ಕಾರ್ಯಕ್ರಮ ಆಗಿರಬಹುದು, ಚರ್ಚೆಗಳು ಆಗಿರಬಹುದು ಅಥವಾ ರಂಗದಲ್ಲಿ ಏನಾದರೂ ತೊಡಕುಗಳು ಉಂಟಾದರೆ ಅದಕ್ಕೆ ಪರಿಹರಿಸುವ ಕಾರ್ಯವನ್ನು ಆಗಿರಬಹುದು ಹೀಗೆ ಬಹುತೇಕ ಎಲ್ಲವನ್ನೂ ಕೂಡ ಇವರೇ ನೋಡಿ ಕೊಳ್ಳುತ್ತಿದ್ದರು. ಆದರೆ ಈಗ ದೊಡ್ಮನೆಗೆ ವಿರುದ್ಧವಾದಂತಹ ವೈರಿಗಳು ಬೆಳೆದು ನಿಂತಿರುವುದನ್ನು ನೋಡಿದರೆ ನಿಜಕ್ಕೂ ಕೂಡ ಶೋಚನೀಯ ಅಂತಾನೇ ಹೇಳಬಹುದು. ಹೌದು ಒಂದು ಕಾಲದಲ್ಲಿ ಎಲ್ಲಾ ಕಲಾವಿದರಿಗೂ ಕೂಡ ಸಹಾಯ ಹಸ್ತವನ್ನು ತೋರುತ್ತಿದ್ದಂತಹ ಮನೆಗೆ ಇಂದು ಕಿಡಿಗೇಡಿಗಳು ಮಾಡುತ್ತಿರುವಂತಹ ಈ ಕೆಲಸವನ್ನು ನೋಡಿದರೆ ಎಂಥವರಿಗಾದರೂ ಕೂಡ ಬೇಸರವಾಗುತ್ತದೆ.
ಎಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ಅಗಲಿದ ನಂತರ ಅವರ ಸ್ಥಾನವನ್ನು ತುಂಬಾ ಬಲ್ಲ ಏಕೈಕ ನಟ ಅಂದರೆ ಅದು ಯುವರಾಜ್ ಕುಮಾರ ಎಂಬ ಹೆಸರೂ ಕೇಳಿಬರುತ್ತಿತ್ತು. ಅಷ್ಟೇ ಅಲ್ಲದೆ ಅಪ್ಪು ಅವರು ವಿ’ಧಿ’ವ’ಶರಾದ ಯುವರಾಜ್ ಕುಮಾರ್ ಅವರು ಮುಂದೆ ನಿಂತು ಎಲ್ಲಾ ವಿಧಿವಿಧಾನ ಕಾರ್ಯಗಳನ್ನು ನಡೆಸಿಕೊಟ್ಟರು. ಅಷ್ಟೇ ಅಲ್ಲದೆ ಅಶ್ವಿನಿ ಅವರಿಗೆ ಮತ್ತು ಅವರ ಮಕ್ಕಳಿಗೆ ಬೆನ್ನೆಲುಬಾಗಿ ನಿಂತರು ಈಗಲೂ ಕೂಡ ಅವರ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಇರುವಂತಹ ವ್ಯಕ್ತಿಯೆಂದರೆ ಅದು ಯುವರಾಜ್ ಕುಮಾರ ಅಂತಾನೆ ಹೇಳಬಹುದು. ವ್ಯಕ್ತಿತ್ವದಲ್ಲಿ ಆಗಿರಬಹುದು, ನಟನೆಯಲ್ಲಿ ಆಗಿರಬಹುದು ಅಥವಾ ಸರಳತೆಯಲ್ಲಿ ಆಗಿರಬಹುದು ಮತ್ತೊಬ್ಬರನ್ನು ನೋಡಿದರೆ ಗೌರವ ಕೊಡುವುದರಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ಪುನೀತ್ ರಾಜಕುಮಾರ್ ಅವರಿಗೆ ಹೊಂದಾಣಿಕೆ ಆಗುವಂತಹ ಗುಣ ಹೊಂದಿರುವ ವ್ಯಕ್ತಿ ಅಂದರೆ ಅದು ಯುವರಾಜ್ ಕುಮಾರ್.
ಇನ್ನು ಯುವರಾಜ್ ಕುಮಾರ್ ದೊಡ್ಡಮನೆಯ ಮೂರನೇ ತಲೆಮಾರು ಅಂತನೇ ಹೇಳಬಹುದು ಇವರ ಅಣ್ಣ ವಿನಯ್ ರಾಜಕುಮಾರ್ ಅವರು ಚಿತ್ರರಂಗಕ್ಕೆ ಬಂದು 4-5 ವರ್ಷಗಳಾಯ್ತು ಹಲವಾರು ಸಿನಿಮಾಗಳನ್ನು ಕೂಡ ಮಾಡಿದರು ಆದರೆ ಯಾವ ಸಿನಿಮಾ ಕೂಡ ಅವರ ಅದೃಷ್ಟವನ್ನು ಬದಲಾಯಿಸಲಿಲ್ಲ. ಈಗಲೂ ನಿರಂತರವಾದ ಪ್ರಯತ್ನವನ್ನು ಪಡುತ್ತಿದ್ದಾರೆ ಆದರೂ ಕೂಡ ಅವರಿಗೆ ಯಶಸ್ಸು ಎಂಬುದು ದೊರೆಯಲಿಲ್ಲ ಇದರಿಂದ ಬಹಳನೇ ನಿರಾಸೆಗೊಂಡಿದ್ದರು. ಅವರ ತಮ್ಮ ಆದಂತಹ ಯುವರಾಜ್ ಕುಮಾರ ಕೂಡ ಇದೀಗ ಸಿನಿಮಾರಂಗಕ್ಕೆ ಎಂಟ್ರಿ ನೀಡುತ್ತಿದ್ದು. “ಯುವ ರಣಧೀರ ಕಂಠೀರವ” ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಗುರುತಿಸಿಕೊಳ್ಳುವುದರ ಮೂಲಕ ಸ್ವಲ್ಪ ಚಾಲನೆಗೆ ಬಂದಿದ್ದರೂ. ಈ ಒಂದು ಸಿನಿಮಾ ಬಹಳ ಅದ್ಭುತವಾಗಿ ಮೂಡಿ ಬರುತ್ತದೆ ಎಂದು ಈ ಚಿತ್ರದ ಟೀಸರ್ ನೋಡಿದಂತಹ ಪ್ರತಿಯೊಬ್ಬರು ಕೂಡ ಹೇಳಿದ್ದರು. ಪೌರಾಣಿಕ ಹಿನ್ನೆಲೆಯನ್ನು ಹೊಂದಿದಂತಹ ಈ ಕಥೆಯಲ್ಲಿ ಯುವರಾಜ್ ಕುಮಾರ ಅವರು ಬಹಳ ಅದ್ಭುತವಾಗಿ ನಟನೆ ಮಾಡಲು ಎಲ್ಲಾ ರೀತಿಯಾದಂತಹ ತಯಾರಿಯನ್ನು ಮಾಡಿಕೊಂಡಿದ್ದರು ಅಷ್ಟೇ ಅಲ್ಲದೆ ಈ ಸಿನಿಮಾದ ಟೀಸರ್ ಅನ್ನು ಕೂಡ ಆಫೀಸಿಯಲ್ ಆಗಿ ಬಿಡುಗಡೆ ಮಾಡಿದ್ದರು.
ಇದನ್ನು ನೋಡಿದಂತಹ ಪುನೀತ್ ರಾಜಕುಮಾರ್ ಅವರು ನಿಜಕ್ಕೂ ಬಹಳನೇ ಸಂತಸ ವ್ಯಕ್ತಪಡಿಸುತ್ತಾರೆ ಅಷ್ಟೇ ಅಲ್ಲದೆ ನಮ್ಮ ಕುಟುಂಬಕ್ಕೆ ಇಂತಹದೊಂದು ಸಿನಿಮಾ ಬೇಕಿತ್ತು ಮೊದಲಿನಿಂದಲೂ ಕೂಡ ನಾವು ಇಂತಹ ಸಿನಿಮಾವನ್ನು ಮಾಡಬೇಕು ಅಂತ ಅಂದುಕೊಂಡಿದ್ದೆವು ಆದರೆ ಅದಕ್ಕೆ ಸರಿಯಾದ ಅವಕಾಶಗಳು ದೊರೆಯಲಿಲ್ಲ. ಇದೀಗ ಯುವರಾಜ್ ಕುಮಾರ್ ಈ ಸಿನಿಮಾದಲ್ಲಿ ನಟನೆ ಮಾಡುತ್ತಿರುವುದು ನಿಜಕ್ಕೂ ಕೂಡ ನಮಗೆ ತುಂಬಾನೇ ಹೆಮ್ಮೆಪಡುವಂತಹ ವಿಚಾರವಾಗಿದೆ. ಅಷ್ಟೇ ಅಲ್ಲದೆ ಯುವರಾಜ್ ಕುಮಾರ್ ಅನ್ನು ನೋಡಿದರೆ ಅಪ್ಪಾಜಿ ಅವರನ್ನು ನೋಡಿದಂತೆ ಆಗುತ್ತದೆ ಹಾಗಾಗಿ ಅಪ್ಪಾಜಿ ಅವರ ಸ್ಥಾನದಲ್ಲಿ ಯುವರಾಜ್ ಕುಮಾರ್ ನಿಂತು ಈಗ ಸಿನಿಮಾ ಮಾಡುತ್ತಿರುವುದು ನಿಜಕ್ಕೂ ಕೂಡ ನಮ್ಮ ದೊಡ್ಡ ಮನೆಗೆ ಒಂದು ಹೆಗ್ಗಳಿಕೆ ಅಂತನೇ ಹೇಳಬಹುದು ಅಂತ ಹೇಳಿಕೊಂಡಿದ್ದರು.
ಇನ್ನು ಈ ಒಂದು ಸಿನಿಮಾ ಬಿಗ್ ಬಜೆಟ್ ಸಿನಿಮಾ ಆಗಿತ್ತು ಪ್ರಾರಂಭದಲ್ಲಿ ಎಲ್ಲವೂ ಕೂಡ ಚೆನ್ನಾಗಿಯೇ ಇತ್ತು ಎಲ್ಲರೂ ಕೂಡ ಈ ಒಂದು ಸಿನಿಮಾಗೆ ಬಂಡವಾಳವನ್ನು ಹಾಕುವುದಕ್ಕೆ ಮುಂದಾಗುತ್ತಾರೆ. ಎಂದು ಕಾರಣದಿಂದಲೇ ಯುವರಾಜ್ ಕುಮಾರ್ ಹಾಗೂ ಅವರ ಸ್ನೇಹಿತರು ಮತ್ತು ಸಿನಿಮಾಗರ ಸಂಬಂಧಪಟ್ಟಂತಹ ನಿರ್ದೇಶಕರು ಕೂಡ ಹಗಲು-ರಾತ್ರಿಯೆನ್ನದೇ ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಈ ಸಿನಿಮಾಗಾಗಿ ತಲೆ ಕೆಡಿಸಿಕೊಳ್ಳುತ್ತಾರೆ. ಅಂದುಕೊಂಡಂತೆ ಟೀಸರ್ ಅನ್ನು ಕೂಡ ಬಿಡುಗಡೆ ಮಾಡುತ್ತಾರೆ ಆದರೆ ಇದನ್ನು ನೋಡಿ ಪ್ರಶಂಸೆಯನ್ನು ವ್ಯಕ್ತಪಡಿಸುವುದರ ಬದಲಾಗಿ ಕೆಲವು ಕಿಡಿಗೇಡಿಗಳು ಈ ಸಿನಿಮಾವನ್ನು ಮುಂದುವರಿಯದೆ ಇರುವಂತೆ ತಡೆಡಲು ಪ್ರಯತ್ನವನ್ನು ಮಾಡುತ್ತಾರೆ. ಹೌದು ಈ ಸಿನಿಮಾದ ವಿಚಾರವಾಗಿ ಯಾವುದೇ ಕೆಲಸ ಕಾರ್ಯಗಳಿಗೂ ಕೂಡ ಚಿತ್ರತಂಡ ಕೈಹಾಕಿದರು ಕೂಡ ಅವುಗಳಲ್ಲಿ ಅಡೆತಡೆಗಳು ಉಂಟಾಗುವಂತೆ ಮಾಡುತ್ತಿದ್ದರು.
ಅಷ್ಟೇ ಅಲ್ಲದೆ ಈ ಸಿನಿಮಾ ಮುಂದೆ ಹೋಗಬಾರದು ಅಂತ ಕಿರುಕುಳವನ್ನು ನೀಡಲು ಪ್ರಾರಂಭ ಮಾಡುತ್ತಾರೆ ಈ ವಿಚಾರವನ್ನು ತಿಳಿದಂತಹ ಪುನೀತ್ ರಾಜಕುಮಾರ್ ಯಾವುದೇ ಕಾರಣಕ್ಕೂ ಕೂಡ ನೀವು ಭಯ ಪಡಬೇಡಿ ಅದೇನೇ ಆಗಲಿ ನಾನು ಮುಂದೆ ನಿಂತುಕೊಂಡು ಈ ಸಿನಿಮಾವನ್ನು ಹಾಗೂ ಈ ಸಿನಿಮಾದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ನೀವು ಧೈರ್ಯದಿಂದ ಮುನ್ನುಗ್ಗಿ ಅಂತ ಹೇಳುತ್ತಾರೆ. ಪುನೀತ್ ರಾಜಕುಮಾರ್ ಅವರ ಈ ಮಾತನ್ನು ಕೇಳಿದಂತಹ ಯುವರಾಜ್ ಕುಮಾರ್ ಮತ್ತು ನಿರ್ಮಾಪಕರು ನಿರ್ದೇಶಕರು ಹಾಗೂ ಚಿತ್ರತಂಡದ ಎಲ್ಲರೂ ಕೂಡ ಅಪ್ಪು ಅವರು ನಮಗೆ ಬೆನ್ನೆಲುಬು ಇದ್ದಂತೆ ಇವರು ಇದ್ದರೆ ನಮಗೆ ಆನೆಬಲ ಸಿಕ್ಕಂತೆ ಎಂದು ಮುನ್ನುಗ್ಗುತ್ತಾರೆ. ಆದರೆ ಅಷ್ಟೊತ್ತಿಗಾಗಲೇ ವಿಧಿ ಆಟ ಹೇಗಿದೆ ನೋಡಿ ಅಪ್ಪು ಅವರು ಕೂಡ ನಮ್ಮೆಲ್ಲರನ್ನು ಬಿಟ್ಟು ಆಗಲಿ ಹೋಗುತ್ತಾರೆ.
ಅವರು ಓದದೆ ಹೋದದ್ದು ಕಿಡಿಗೇಡಿಗಳಿಗೆ ಇನ್ನು ಕೂಡ ಅನುಕೂಲವಾಗುತ್ತದೆ ಈ ಸಿನಿಮಾ ಯಾವುದೇ ಕಾರಣಕ್ಕೂ ಕೂಡ ತೆರೆಮೇಲೆ ಕಾಣಬಾರದು ಅಂತ ಮತ್ತಷ್ಟು ಕಿರುಕುಳವನ್ನು ನೀಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ನಮಗೆ ಅಪ್ಪು ಅವರು ಒಂದು ದೊಡ್ಡ ಬಲ ಆದರೆ ಇಂದು ಅವರು ಇಲ್ಲದ ಮೇಲೆ ನಮಗೆ ಯಾರು ಬೆಂಬಲ ನೀಡುವುದಕ್ಕೆ ಸಾಧ್ಯ ಅಂತ ಹೇಳಿ ನಿರ್ಮಾಪಕರು ಮತ್ತು ನಿರ್ದೇಶಕರು ಯುವರಾಜ್ ಕುಮಾರ ಎಲ್ಲರೂ ಕೂಡ ಹಳ ನಿರಾಸೆಯಿಂದ ಈ ಒಂದು ಸಿನಿಮಾ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ. ಈ ವಿಚಾರವನ್ನು ನಿರ್ದೇಶಕ ಆದಂತಹ ಪುನೀತ್ ರುದ್ರನಾಗ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಳ್ಳುತ್ತಾರೆ. ಒಂದು ವೇಳೆ ಅಪ್ಪು ಅವರು ಇದ್ದಿದ್ದರೆ ಖಂಡಿತವಾಗಿಯೂ ಕೂಡ ಈ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಲು ಬಿಡುತ್ತ ಇರಲಿಲ್ಲ. ಯುವರಾಜ್ ಕುಮಾರ್ ಗೆ ಇಂತಹ ಮೋಸ ಆಗುವುದಕ್ಕೂ ಕೂಡ ಬಿಡುತ್ತಿರಲಿಲ್ಲ ಆದರೆ ವಿಧಿಯ ಆಟ ಹೇಗಿದೆ ನೋಡಿ ಅಪ್ಪು ಅವರು ಇಲ್ಲದೆ ಇರುವ ಕಾರಣ ಇಂದು ಯುವ ರಣಧೀರ ಕಂಠೀರವ ಸಿನಿಮಾ ಇದೀಗ ನಿಂತುಹೋಗಿದೆ.
ಈಗ ನಮಗೆ ತಿಳಿಯುತ್ತದೆ ಅಪ್ಪು ಅವರ ಬೆಲೆ ಹಾಗೂ ಅವರ ಸ್ಥಾನಮಾನ ಎಷ್ಟು ಇತ್ತು ಅಂತ ಆದರೆ ಈಗ ಯೋಚಿಸಿ ಪ್ರಯೋಜನವಿಲ್ಲ. ಏಕೆಂದರೆ ಅಪ್ಪು ಅವರು ನಮ್ಮನ್ನು ಅಗಲಿ ಶಾಶ್ವತವಾಗಿ ದೂರ ಆಗಿದ್ದರೆ ಈ ನೋ’ವನ್ನು ಬರಿಸುವಂತಹ ಶಕ್ತಿ ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿತಿಸಿಕೊಳ್ಳೊಣ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.